Asianet Suvarna News Asianet Suvarna News

ಜಗತ್ತಿನ ಅತ್ಯಂತ ಹಳೆಯ ಲಾಂಗ್ ಡಿಸ್ಟೆನ್ಸ್ ರಿಲೇಶನ್‌ಶಿಪ್ ತ್ರೇತಾಯುಗದಲ್ಲೇ ಇತ್ತು!

ಉದ್ಯೋಗ, ಓದು ಇನ್ಯಾವುದೋ ಕಾರಣಕ್ಕೆ ಜೋಡಿಗಳು ದೂರ ದೂರ ಇರೋದು ಕಾಮನ್. ವೀಡಿಯೋ ಕಾಲ್, ಫೋನ್ ಕಾಲ್ಸ್ ಅವರ ಪ್ರೀತಿಯೆನ್ನು ಬೆಸೆದಿರುತ್ತದೆ. ಆದರೆ, ಇಂಥ ಪ್ರೀತಿ ಆ ಆಧುನಿಕ ಜಗತ್ತಿನ ಅನಿವಾರ್ಯತೆಯಾ? ಇಲ್ಲವೆನ್ನುತ್ತೆ ನಮ್ಮ ಪೌರಾಣಿಕ ಕಥೆಗಳು...

most long dstance relationship was in ramayana mahabharata time
Author
First Published Jun 24, 2023, 3:01 PM IST

-ಮಹಾಬಲ ಸೀತಾಳಭಾವಿ

ನಾನೊಂದು ತೀರ ನೀನೊಂದು ತೀರ ಎನ್ನುವಂತಹ ಸಂಬಂಧಗಳು ಈಗ ಸರ್ವೇಸಾಮಾನ್ಯ. ಗಂಡ ಒಂದೆಡೆ, ಹೆಂಡತಿ ಇನ್ನೊಂದು ಕಡೆ. ನಡುವೆ ಮೊಬೈಲು ಅವರ ದಾಂಪತ್ಯವನ್ನು ಜೀವಂತವಾಗಿಟ್ಟಿರುತ್ತದೆ. ಹಾಗೇತ ಇದು ಆಧುನಿಕತೆಯ ಅನಿವಾರ್ಯತೆಯಿಂದ ಅಥವಾ ಅಭಿವೃದ್ಧಿ ಹೊಂದಿದ ಜಗತ್ತಿನಲ್ಲಿ ಹುಟ್ಟಿಕೊಂಡ ವ್ಯವಸ್ಥೆಯೇನೂ ಅಲ್ಲ. ಹಳೆಯ ಕಾಲದಲ್ಲಿ ವಣಿಜರು ವ್ಯಾಪಾರಕ್ಕೆಂದು ವರ್ಷಗಟ್ಟಲೆ ದೂರದ ಊರುಗಳಿಗೆ ಹೋಗುತ್ತಿದ್ದರು. ಆಗ ಅವರ ಪತ್ನಿಯರು ಊರಿನಲ್ಲೇ ಕುಳಿತು ಮಳೆಗಾಲ ಬರುವುದಕ್ಕಾಗಿ ಕಾಯುತ್ತಿದ್ದರು. ಮಳೆಗಾಲ ಶುರುವಾಗುವ ಹೊತ್ತಿಗೆ ಸರಿಯಾಗಿ ವ್ಯಾಪಾರಕ್ಕೆ ಹೋದವರು ಮರಳಿ ಬರುತ್ತಿದ್ದರು. ಎಸ್.ಎಲ್.ಭೈರಪ್ಪನವರ ಸಾರ್ಥ ಕಾದಂಬರಿ ಓದಿದ್ದರೆ, ನಿಮಗಿದರ ಅನುಭವ ಇನ್ನಷ್ಟು ಸಿಗುತ್ತದೆ.

ಹಾಗಿದ್ದರೆ ಜಗತ್ತಿನ ಅತ್ಯಂತ ಹಳೆಯ ಲಾಂಗ್ ಡಿಸ್ಟೆನ್ಸ್ ರಿಲೇಶನ್‌ಶಿಪ್‌ಗಳು ಆ ವ್ಯಾಪಾರಿಗಳಿದ್ದೇ ಇರಬಹುದಾ? ಅಲ್ಲ. ನೀವು ಕಾಳಿದಾಸನ ಮೇಘದೂತ ಕಾವ್ಯ ಓದಿದ್ದರೆ ಅಲ್ಲಿ ಬರುವ ಶಾಪಗ್ರಸ್ತ ಗಂಧರ್ವ ಮತ್ತು ಅವನ ಪತ್ನಿಯ ಸುದೀರ್ಘ ವಿರಹದ ರಸವತ್ತಾದ ಚಿತ್ರಣ ಸಿಗುತ್ತದೆ. ಯಕ್ಷ ಯಾವುದೋ ದಕ್ಷಿಣ ಭಾರತದ ಕಾಡಿನಲ್ಲಿದ್ದರೆ, ಅವನ ಹೆಂಡತಿ ಹಿಮಾಲಯ ಪರ್ವತದಲ್ಲಿ ವಾಸಿಸುತ್ತಿರುತ್ತಾಳೆ. ಫೋನು, ಪತ್ರಗಳಿಲ್ಲದ ಜಮಾನದಲ್ಲಿ ಯಕ್ಷ ಮೋಡದ ಮೂಲಕ ಅವಳಿಗೆ ಸಂದೇಶ ಕಳಿಸುತ್ತಾನೆ.

ಅವಳಲ್ಲಿ, ಇವನಿಲ್ಲಿ, ಆದರೂ ಪ್ರೀತಿ ಉಳಿಸಿಕೊಳ್ಳೋದು ಹೇಗೆ?

ಶ್ರೀಕೃಷ್ಣ-ರಾಧೆ ಸಂಬಂಧ:
ಹಾಗಿದ್ದರೆ ಅದೇ ನಮಗೆ ಗೊತ್ತಿರುವ ಅತಿ ಪುರಾತನ `ದೂರದ ಸಂಬಂಧ’ ಇರಬಹುದಾ? ಅದೂ ಅಲ್ಲ. ಅದಕ್ಕಿಂತ ಮೊದಲು ದ್ವಾಪರ ಯುಗದಲ್ಲಿ ಶ್ರೀಕೃಷ್ಣ ಹಾಗೂ ರಾಧೆಯ ನಡುವೆ ಈ ಜಗತ್ತಿನ ಅತ್ಯಂತ ಸೆಲೆಬ್ರೇಟೆಡ್ ಲಾಂಗ್ ಡಿಸ್ಟೆನ್ಸ್ ರಿಲೇಶನ್‌ಶಿಪ್ ಇತ್ತು. ಕೃಷ್ಣ ಮತ್ತು ರಾಧೆ ಮದುವೆಯಾದವರಲ್ಲ. ಆದರೆ ಅವರodog ಅತ್ಯಂತ ಪವಿತ್ರ ಪ್ರೇಮ ಸಂಬxಧ. ಬಾಲ್ಯ ಹಾಗೂ ಆರಂಭಿಕ ಯೌವನದಲ್ಲಿ ಅವರಿಬ್ಬರೂ ಗೋಕುಲ ಮತ್ತು ಬರ್ಸಾನಾದಲ್ಲಿ ಒಂದೇ ಕಡೆ ಇದ್ದರೂ, ಬಳಿಕ ಅವರ ವಾಸಸ್ಥಾನಗಳು ಬೇರೆಯಾದವು. ರಾಧೆ ಗೋಕುಲದಲ್ಲಿ ಉಳಿದರೆ, ಕೃಷ್ಣ ದ್ವಾರಕೆಗೆ ಹೋಗಿ ನೆಲೆಸಿದ್ದ. ಅಲ್ಲಿ ಅವನಿಗೆ ರುಕ್ಮಿಣಿ, ಸತ್ಯಭಾಮೆ ಜೊತೆಗೆ ಇನ್ನೂ ಏಳೆಂಟು ಪತ್ನಿಯರಿದ್ದರು. ನಂತರ ಅವನು ಮಹಾಭಾರತದ ಯುದ್ಧದಲ್ಲಿ ಬ್ಯುಸಿಯಾಗಿಬಿಟ್ಟ. ಗೋಕುಲ ಇರುವುದು ಉತ್ತರ ಪ್ರದೇಶದಲ್ಲಿ. ದ್ವಾರಕೆಯಿರುವುದು ಗುಜರಾತಿನಲ್ಲಿ. ಆ ಕಾಲದಲ್ಲಿ `ಹೇಗಿದ್ದೀಯಾ, ಚೆನ್ನಾಗಿದ್ದೀಯಾ...’ ಎಂಬ ವಿಷಯಗಳಿಗೆಲ್ಲ ಪತ್ರ ವ್ಯವಹಾರ  ಇರಲಿಲ್ಲ. ಆದರೂ ಅವರ ನಡುವೆ ಕೊನೆಯವರೆಗೂ ಬಹಳ ಗಾಢ ಪ್ರೇಮ ಸಂಬಂಧವಿತ್ತು.

ಹಾಗಿದ್ದರೆ ಕೃಷ್ಣ ಹಾಗೂ ರಾಧೆಯ ಸಂಬಂಧವನ್ನೇ ನಾವು ಜಗತ್ತಿನ ಮೊಟ್ಟ ಮೊದಲ ಲಾಂಗ್ ಡಿಸ್ಟೆನ್ಸ್ ರಿಲೇಶನ್‌ಶಿಪ್ ಎನ್ನಬಹುದಾ? ಊಹುಂ, ಇನ್ನೂ ಹಳೆಯ ಸಂಬಂಧವೊಂದಿದೆ. ಅದು ಲಕ್ಷ್ಮಣ ಮತ್ತು ಮತ್ತು ಊರ್ಮಿಳೆಯದು. ಇತಿಹಾಸ ತಜ್ಞರ ಪ್ರಕಾರ ಮಹಾಭಾರತಕ್ಕಿಂತ ರಾಮಾಯಣ ಹಳೆಯದು. ಹೀಗಾಗಿ ಕೃಷ್ಣನ ಕತೆಗಿಂತ ರಾಮನ ಕತೆ ಹಳೆಯದು. ರಾಮಾವತಾರ ಆದಮೇಲೆ ಕೃಷ್ಣಾವತಾರ. ಆದ್ದರಿಂದ ರಾಮನ ತಮ್ಮ ಲಕ್ಷ್ಮಣ ಮತ್ತು ಅವನ ಧರ್ಮಪತ್ನಿ ಊರ್ಮಿಳೆಯ ಸಂಬಂಧವನ್ನು ನಾವು ಅತಿ ಹಳೆಯ ದೂರದ ಸಂಬಂಧವೆಂದು ಹೇಳಬಹುದು.

Long distance Relationship ನಲ್ಲಿ ಪ್ರೀತಿನೇ ಇರಲ್ಲ ಅನ್ನೋರು ಇದನ್ನ ಓದಿ

ಲಕ್ಷ್ಮಣನಿಗೆ ಮದುವೆಯಾಗಿ ಕೆಲವೇ ಸಮಯದ ಬಳಿಕ ಕೈಕೇಯಿ ಆಸೆಯಂತೆ ರಾಮನನ್ನು ದಶರಥ ವನವಾಸಕ್ಕೆ ಕಳುಹಿಸಿದ. ಆಗ ಸೀತೆ ಹಾಗೂ ಲಕ್ಷ್ಮಣ ಕೂಡ ಅವನ ಜೊತೆ ಹೊರಟು ನಿಂತರು. ಹದಿನಾಲ್ಕು ವರ್ಷಗಳ ವನವಾಸ ಹಾಗೂ ಒಂದು ವರ್ಷದ ಅಜ್ಞಾತವಾಸ. ಒಟ್ಟು ಹದಿನೈದು ವರ್ಷಗಳ ಸುದೀರ್ಘ ದೂರವಾಸ. ಉತ್ತರ ಪ್ರದೇಶದ ಅಯೋಧ್ಯೆಯಲ್ಲಿರುವ ದಶರಥನ ಅರಮನೆಯಲ್ಲಿ ಊರ್ಮಿಳೆ ವಾಸಿಸುತ್ತಿದ್ದರೆ, ಅವಳ ಗಂಡ ಲಕ್ಷ್ಮಣ ವನವಾಸದ ಹೆಸರಿನಲ್ಲಿ ಇಡೀ ಭರತಖಂಡವನ್ನೇ ಸುತ್ತಿದ್ದ. ಅಷ್ಟೂ ವರ್ಷಗಳಲ್ಲಿ ಅವರ ನಡುವೆ ಒಂದೇ ಒಂದು ಸಂದೇಶ ವಿನಿಮಯವೂ ಇಲ್ಲ. ಬಹುಶಃ ಆ ವನವಾಸ ರಾಮ-ಸೀತೆಗಿಂತ ಹೆಚ್ಚು ಕಷ್ಟವನ್ನು ಲಕ್ಷ್ಣಣ-ಊರ್ಮಿಳೆಗೆ ಕೊಟ್ಟಿತ್ತು!

ಆ ಕಾಲದಲ್ಲಿ ಅಪರೂಪವಾಗಿದ್ದ. ಇಂಥ ಲಾಂಗ್ ಡಿಸ್ಟೆನ್ಸ್ ರಿಲೇಶನ್‌ಶಿಪ್‌ಗಳು ಇಂದು ನಾನಾ ಕಾರಣಗಳಿಂದ ಬಹಳ ಕಾಮನ್ ಆಗಿವೆ. ಆದರೂ ಆ ತೀರದಿಂದ ಈ ತೀರದವರೆಗೆ ಪ್ರೀತಿಯ ನದಿ ಹರಿಯುತ್ತಲೇ ಇದೆ. ಬಹಳ ಜನರಿಗೆ ಗಂಡ ಒಂದೆಡೆ, ಹೆಂಡತಿ ಇನ್ನೊಂದೆಡೆ ಇರುವ ಈ ಸಂಬಂಧಗಳು ಹೇಗೆ ಜೀವಂತವಾಗಿ ಉಳಿಯುತ್ತವೆ ಎಂಬುವುದೇ ಅಚ್ಚರಿ. ಆದರೆ ಪ್ರೀತಿಯೊಂದಿದ್ದರೆ ದೂರ ಯಾವ ಲೆಕ್ಕ ಅಲ್ಲವೇ?
 
ಲಾಂಗ್ ಡಿಸ್ಟೆನ್ಸ್ ರಿಲೇಶನ್‌ಶಿಪ್‌ಗಳನ್ನು ಉಳಿಸುವ ಏಕೈಕ ದ್ರವ್ಯ ಪ್ರೀತಿ. ಅದು ಇರುವವರೆಗೂ ಇಂತಹ ಸಂಬಂಧಗಳು ಗಟ್ಟಿಯಾಗಿ ಉಳಿಯುತ್ತವೆ. 

ಲಾಂಗ್ ಡಿಸ್ಟೆನ್ಸ್ ರಿಲೇಶನ್‌ಶಿಪ್ ನಿಭಾಯಿಸೋದ್ರಲ್ಲಿ ಈ ರಾಶಿಗಳು ನಿಸ್ಸೀಮರು!

Follow Us:
Download App:
  • android
  • ios