ಲಾಂಗ್ ಡಿಸ್ಟೆನ್ಸ್ ರಿಲೇಶನ್‌ಶಿಪ್ ನಿಭಾಯಿಸೋದ್ರಲ್ಲಿ ಈ ರಾಶಿಗಳು ನಿಸ್ಸೀಮರು!

ಪ್ರೀತಿ ಹತ್ತಿರವಿದ್ದಾಗ ಸುಲಭ. ಕೆಲವೊಮ್ಮೆ ಕಾರಣಾಂತರಗಳಿಂದ ಪ್ರೇಮಿಗಳು ಬೇರೆ ಬೇರೆ ಇರಬೇಕಾಗುತ್ತದೆ, ಅಥವಾ ವಿವಾಹಿತ ಜೋಡಿಯೇ ಪ್ರತ್ಯೇಕ ನೆಲೆಸುವ ಸ್ಥಿತಿ ಬರುತ್ತದೆ. ಇಂಥ ಸಂದರ್ಭದಲ್ಲೂ ಎಂದಿನ ಪ್ರೀತಿಯನ್ನೇ ವರ್ಷಗಟ್ಟಲೆ ಉಳಿಸಿಕೊಂಡು ಹೋಗಬಲ್ಲ ಛಾತಿ ಕೆಲವರಿಗೆ ಮಾತ್ರ ಸಾಧ್ಯ. ಅಂಥ ರಾಶಿಗಳಿವು. 

These zodiac signs can perfectly handle a long-distance relationship skr

ದೂರದಲ್ಲಿರುವ ಸಂಬಂಧ(long-distance relationship)ವನ್ನು ಹೆಚ್ಚು ಸಮಯ ಉಳಿಸಿಕೊಳ್ಳೋದು ಕಷ್ಟ. ಸಂಗಾತಿಗಳಿಬ್ಬರು ಕೆಲಸದ ಕಾರಣಕ್ಕೋ, ಶಿಕ್ಷಣದ ಕಾರಣಕ್ಕೋ ಒಬ್ಬೊಬ್ಬರು ಒಂದೊಂದು ಊರಿನಲ್ಲಿರಬೇಕಾಗಿ ಬಂದಾಗ ಅಥವಾ ದೇಶ ದೇಶಗಳಷ್ಟು ಅಂತರದಲ್ಲಿರಬೇಕಾಗಿ ಬಂದಾಗ ಅವರಿಬ್ಬರಿಗೂ ಅದೊಂತರಾ ಪರೀಕ್ಷೆಯ ಸಮಯ. ಒಬ್ಬರಿಗೆ ಬೇಕಾದಾಗಲೆಲ್ಲ ಮತ್ತೊಬ್ಬರು ಸಿಗುವುದಿಲ್ಲ. ಅಳುವಾಗ ಹೆಗಲು ಸಿಗೋಲ್ಲ, ಮಲಗಲು ಮಡಿಲು ಸಿಗೋಲ್ಲ. ಕಾಯುವಿಕೆಯೊಂದೇ ತಮ್ಮ ಪಾಲಿಗೆ ಎಂಬಂತಾಗಿರುತ್ತದೆ. ಅದಕ್ಕೇ ಈ ರೀತಿಯ ಸಂಬಂಧ(relationship)ವನ್ನು ನಿಭಾಯಿಸಲು ಸಾಕಷ್ಟು ಬದ್ಧತೆ ಮತ್ತು ತ್ಯಾಗದ ಅಗತ್ಯವಿರುತ್ತದೆ. ಅದಷ್ಟು ಸುಲಭವಲ್ಲ. ಇಬ್ಬರೂ ಒಬ್ಬರು ಮತ್ತೊಬ್ಬರ ಕನಸು, ಗುರಿಗಳನ್ನು ಗೌರವಿಸುವುದರಿಂದ, ಅಗಾಧ ಪ್ರೀತಿ(love)ಯಿಟ್ಟುಕೊಂಡು ಅರ್ಥ ಮಾಡಿಕೊಳ್ಳುವುದರಿಂದ ಮಾತ್ರ ಇದು ಸಾಧ್ಯವಾಗುತ್ತದೆ. ಸಂವಹನ ಚೆನ್ನಾಗಿಟ್ಟುಕೊಳ್ಳುವ ಕಲೆ ಗೊತ್ತಿರಬೇಕು. ಹೀಗೆ ದೂರದಲ್ಲಿರುವ ಪ್ರೀತಿಯನ್ನು, ಸಂಗಾತಿಯನ್ನು ಸಂಪೂರ್ಣವಾಗಿ ನಿಭಾಯಿಸಬಲ್ಲ ಕೆಲವು ರಾಶಿಚಕ್ರ ಚಿಹ್ನೆ(zodiac sign)ಗಳನ್ನು ಇಲ್ಲಿ ಪಟ್ಟಿ ಮಾಡಲಾಗಿದೆ.

ಮಿಥುನ ರಾಶಿ(Gemini)
ಮಿಥುನ ರಾಶಿಯವರು ಉತ್ತಮ ಸಂವಹನಕಾರರು, ಅವರು ತಮ್ಮ ಸಂಗಾತಿಯ ಭಾವನೆಯನ್ನು ನಿಖರವಾಗಿ ತಿಳಿದುಕೊಳ್ಳುತ್ತಾರೆ. ಅವರು ನಿಜವಾಗಿಯೂ ತಮ್ಮ ಸಂಗಾತಿಯೊಂದಿಗೆ ಮಾತನಾಡಲು ಇಷ್ಟಪಡುತ್ತಾರೆ ಮತ್ತು ಅದು ಅವರ ಸಂಬಂಧವನ್ನು ಜೀವಂತವಾಗಿರಿಸುತ್ತದೆ. ಅವರು ತಮ್ಮ ಸಂಗಾತಿಯ ಮಾತನ್ನು ಗಮನವಿಟ್ಟು ಕೇಳುತ್ತಾರೆ, ಹಾಗೂ ಪೂರ್ಣ ನಂಬಿಕೆಯಿಂದ ಸಂಗಾತಿ ಬರುವವರೆಗೂ ಕಾಯಲು ಸಿದ್ಧರಿರುತ್ತಾರೆ. 

ಈ ನಾಲ್ಕು ರಾಶಿಯ ಗಂಡೈಕ್ಳಿಗೆ ಹೆಣ್ಮಕ್ಳು ಬೇಗ ಆಕರ್ಷಿತರಾಗ್ತಾರೆ!

ಕನ್ಯಾ ರಾಶಿ(Virgo)
ಕನ್ಯಾ ರಾಶಿಯವರು ನಿಷ್ಠಾವಂತರು, ಪ್ರಾಮಾಣಿಕ(honest)ರು ಮತ್ತು ಇತರ ಎಲ್ಲ ವಿಷಯಗಳೊಂದಿಗೆ ತಮ್ಮ ಸಂಬಂಧಕ್ಕೆ ತುಂಬಾ ಆದ್ಯತೆ ನೀಡುತ್ತಾರೆ. ಅವರು ತಮ್ಮ ಜೀವನವನ್ನು ನಿಯಮಿತವಾಗಿ ಹೇಗೆ ಸಮತೋಲನಗೊಳಿಸಬೇಕೆಂದು ತಿಳಿದಿದ್ದಾರೆ ಮತ್ತು ಲಾಂಗ್ ಡಿಸ್ಟೆನ್ಸ್ ರಿಲೇಶನ್‌ಶಿಪ್‌ನಲ್ಲಿ ತಮ್ಮ ಸಂಗಾತಿಗಾಗಿ ಸಾಕಷ್ಟು ಸಮಯವನ್ನು ಕಾಯುತ್ತಾರೆ. ಭಾವನೆಗಳನ್ನು ಹಂಚಿಕೊಳ್ಳುವುದರಲ್ಲೇ ಸುಖ ಕಾಣುತ್ತಾರೆ. ಕನ್ಯಾ ರಾಶಿ ಬಹುತೇಕ, ಲಾಂಗ್ ಡಿಸ್ಟೆನ್ಸ್ ರಿಲೇಶನ್‌ಶಿಪ್‌ಗಳಲ್ಲಿ ಎಂದಿಗೂ ವಿಫಲವಾಗುವುದಿಲ್ಲ. 

ಮಕರ ರಾಶಿ(Capricorn)
ತಮ್ಮ ಸಂಗಾತಿಯೊಂದಿಗಿನ ವಾದದ ಸಮಯದಲ್ಲಿ ಅವರು ಎಂದಿಗೂ ತಮ್ಮ ತಾಳ್ಮೆ(Patience) ಕಳೆದುಕೊಳ್ಳುವುದಿಲ್ಲ, ಕೋಪ ತೋರುವುದಿಲ್ಲ. ಇದು ಲಾಂಗ್ ಡಿಸ್ಟೆನ್ಸ್ ರಿಲೇಶನ್‌ಶಿಪ್‌ ಉಳಿಸಿಕೊಳ್ಳುವ ಮುಖ್ಯ ಮಾರ್ಗಗಳಲ್ಲಿ ಒಂದಾಗಿದೆ. ಸಾಮಾನ್ಯವಾಗಿ ಜಗಳದ ಸಮಯದಲ್ಲಿ, ನೋವುಂಟು ಮಾಡುವ ವಿಷಯಗಳನ್ನು ಮತ್ತಷ್ಟು ಚುಚ್ಚಿ ಹೇಳಲಾಗುತ್ತದೆ. ಆದರೆ, ಮಕರದವರು ಹೀಗೆ ಮಾಡುವುದಿಲ್ಲ. ಅಲ್ಲದೆ, ಇವರು ಒಬ್ಬರನ್ನು ನೆಚ್ಚಿಕೊಂಡರೆ ಮುಗಿಯಿತು, ಜೀವನಪೂರ್ತಿ ಅವರನ್ನು ಪ್ರೀತಿಸಬಲ್ಲರು. ಜೊತೆಗೆ, ತಮ್ಮ ಮನಸ್ಸನ್ನು ಕೆಲಸದತ್ತ ಹರಿಸುತ್ತಾರೆ. ಸದಾ ಒಂದಿಲ್ಲೊಂದು ಕೆಲಸದಲ್ಲಿ ಮುಳುಗುವ ಮೂಲಕ ತಮ್ಮನ್ನು ಬ್ಯುಸಿಯಾಗಿಟ್ಟುಕೊಳ್ಳುತ್ತಾರೆ.

ಕುಂಭ ರಾಶಿ(Aquarius)
ತಮ್ಮ ಏಕಾಂಗಿ ಸಮಯವನ್ನು ಇವರು ಎಂಜಾಯ್ ಮಾಡುತ್ತಾರೆ. ತಮ್ಮ ಸಂಗಾತಿಯ ಬಗ್ಗೆ ಎಲ್ಲ ಸಮಯದಲ್ಲೂ ಯೋಚಿಸದೆ ಜೀವನದಲ್ಲಿ ಬೇರೆ ವಿಷಯಗಳಿಗೂ ಪ್ರಾಮುಖ್ಯತೆ ಕೊಡುವವರು ಇವರು. ಸಂಬಂಧ, ಹವ್ಯಾಸ, ವೃತ್ತಿ ಎಂದು ತಮ್ಮ ಜೀವನವನ್ನು ಸಮತೋಲನಗೊಳಿಸುವ ರೀತಿ ಇವರಿಗೆ ತಿಳಿದಿದೆ. ಕುಂಭ ರಾಶಿಯವರು ಸ್ವತಂತ್ರ ಪ್ರವೃತ್ತಿಯವರು ಮತ್ತು ಪ್ರಬುದ್ಧತೆ ಹೊಂದಿದವರು. ಹಾಗಾಗಿ ಮತ್ತು ತಮ್ಮದೇ ಆದ ಜೀವನವನ್ನು ಆನಂದಿಸುವ ವ್ಯಕ್ತಿಯೊಂದಿಗೆ ಸಂಬಂಧವನ್ನು ಹೊಂದಲು ಬಯಸುತ್ತಾರೆ ಮತ್ತು ಅವರ ಪಾಲುದಾರರಲ್ಲಿ ತಮ್ಮ ಮೇಲೆ ಪ್ರೀತಿ ಇದೆ ಎಂದರೆ ಸಾಕು, ಇವರು ಎಷ್ಟಾದರೂ ಸಮಯ ಕಾಯುತ್ತಾರೆ. 

ಚಿರಂಜೀವಿಯಾಗುವ ಶಾಪ ಪಡೆದ ಅಶ್ವತ್ಥಾಮ ಮಾಡಿದ ತಪ್ಪೇನು?

ದಿನ ಭವಿಷ್ಯ, ವಾರ ಭವಿಷ್ಯ, ಸಂಖ್ಯಾ ಶಾಸ್ತ್ರ, ನಿಮ್ಮ ರಾಶಿ ವಿಶೇಷ, ದಿನ ವಿಶೇಷ, ಹಬ್ಬ ಹರಿದಿನಗಳು, ಸಂಪ್ರದಾಯ ಆಚರಣೆಗಳು, ಅವುಗಳ ವೈಜ್ಞಾನಿಕ ಹಿನ್ನೆಲೆ, ಪುರಾಣ ಪುಣ್ಯ ಕತೆಗಳು, ವಾಸ್ತು ಕುರಿತು ಹೆಚ್ಚಿನ ಮಾಹಿತಿ ಪಡೆಯಲು ಸುವರ್ಣ ನ್ಯೂಸ್ ಜ್ಯೋತಿಷ್ಯ ವಿಭಾಗವನ್ನು ತಪ್ಪದೇ ನೋಡುತ್ತಿರಿ.

Latest Videos
Follow Us:
Download App:
  • android
  • ios