Asianet Suvarna News Asianet Suvarna News

ಕೊಲೆ ಅಪರಾಧಿಯೊಟ್ಟಿಗೆ ಡೇಟಿಂಗ್, ಅವನನ್ನು ಸಸ್ಯಾಹಾರಿ ಬೇರೆ ಮಾಡ್ತಾಳಂತೆ ಈ ಮಾಡೆಲ್!

ಪ್ರೇಮಿಯೊಬ್ಬ ಕೊಲೆಗಾರ ಎಂಬುದು ತಿಳಿದ್ರೆ ಆತನ ಬಳಿ ಹೋಗೋದಿರಲಿ, ಆತನ ಬಗ್ಗೆ ಮಾತನಾಡೋಕೂ ಜನರು ಮನಸ್ಸು ಮಾಡೋದಿಲ್ಲ. ಆದ್ರೆ ಈ ಹುಡುಗಿ ಭಿನ್ನವಾಗಿದ್ದಾಳೆ. ಕೊಲೆಗೆಡುವ ಪ್ರೇಮಿಯನ್ನು ಮತ್ತೆ ಒಪ್ಪಿಕೊಳ್ಳಲು ಸಾಧ್ಯವಿಲ್ಲವೆಂದ್ರೂ ಆತನ ಭೇಟಿಗೆ ಮುಂದಾಗಿದ್ದಾಳೆ. ಅದ್ಯಾಕೆ ಗೊತ್ತಾ?
 

Model Dated Most Wanted Murderer While He Was On Run Now Want To Make Him Vegan roo
Author
First Published Oct 9, 2023, 1:34 PM IST

ನಮ್ಮ ಜೊತೆ ವರ್ಷಗಟ್ಟಲೆ ವಾಸವಾಗಿರುವ ವ್ಯಕ್ತಿ ಬಗ್ಗೆ ಕೆಲವೊಮ್ಮೆ ನಮಗೇನೂ ತಿಳಿದೇ ಇರೋದಿಲ್ಲ.  ಅವರ ಜೊತೆ ಮಾತನಾಡಿರ್ತೀವಿ, ಜೊತೆ ಕುಳಿತು ಊಟ ಮಾಡಿರ್ತೀವಿ, ಜೊತೆಗೆ ಮಲಗ್ತೀವಿ. ಆದ್ರೂ ಅವರ ಸ್ವಭಾವ, ಅವರ ಹಿನ್ನಲೆ ಬಗ್ಗೆ ಸಂಪೂರ್ಣ ತಿಳಿದುಕೊಳ್ಳುವ ಪ್ರಯತ್ನ ನಡೆಸಿರೋದಿಲ್ಲ. ನಮ್ಮ ಮುಂದೆ ಅವರು ಹೇಗಿರ್ತಾರೋ ಅದನ್ನೇ ನಾವು ಸತ್ಯವೆಂದು ನಂಬಿ ಜೀವನ ನಡೆಸ್ತೇವೆ. ವರ್ಷಗಳವರೆಗೆ ಜೊತೆಗಿದ್ದು ನಂತ್ರ ನಾವು ಜೊತೆಗಿದ್ದ ವ್ಯಕ್ತಿ ಒಳ್ಳೆಯವನಲ್ಲ, ಪಾಪಿ, ಕೊಲೆಗೆಡುವ ಎಂಬುದು ಗೊತ್ತಾದ್ರೆ ಹೇಗಾಗಬೇಡ? ಈ ಮಹಿಳೆ ಸ್ಥಿತಿಯೂ ಹಾಗೆ ಆಗಿದೆ. ಕಣ್ಮುಚ್ಚಿ ತನ್ನ ಪ್ರೇಮಿಯನ್ನು ನಂಬಿದ್ದವಳಿಗೆ ಆಘಾತವಾಗಿದೆ. ಆತನೊಬ್ಬ ಕೊಲೆಗೆಡುವ ಎಂಬ ಸತ್ಯಗೊತ್ತಾಗಿದೆ. ಆದ್ರೆ ಈ ಎಲ್ಲವನ್ನೂ ಅರಗಿಸಿಕೊಳ್ಳುವ ಪ್ರಯತ್ನ ನಡೆಸುತ್ತಿರುವ ಮಹಿಳೆ, ಜೈಲಿಗೆ ಹೋಗಿ ತನ್ನ ಮಾಜಿ ಪ್ರೇಮಿ ಭೇಟಿ ಆಗೋದಲ್ಲದೆ ಆತನನ್ನು ಸಸ್ಯಹಾರಿ ಮಾಡುವ ಪ್ರಯತ್ನ ನಡೆಸಲಿದ್ದಾಳೆಂತೆ.

ಈಕೆ ಯುಕೆ ನಿವಾಸಿ. ಹೆಸರು ಸ್ಟೆಲ್ಲಾ. ವಯಸ್ಸು 35 ವರ್ಷ. ಮಾಡೆಲ್ (Model) ವೃತ್ತಿಯನ್ನು ಆಯ್ಕೆ ಮಾಡಿಕೊಂಡಿರುವ ಸ್ಟೆಲ್ಲಾ, ಸಂಶೋಧಕ ಕ್ರಿಸ್ಟೋಫರ್ ಗೆಸ್ಟ್ ಮೋರಿ ಜೊತೆ ಡೇಟಿಂಗ್ ನಲ್ಲಿದ್ದಳು. ಒಂದು ವರ್ಷಕ್ಕಿಂತಲೂ ಹೆಚ್ಚು ಸಮಯ ಕ್ರಿಸ್ಟೋಫರ್ (Christopher) ಜೊತೆ ವಾಸವಾಗಿದ್ದ ಸ್ಟೆಲ್ಲಾಗೆ ಆತ ಕೊಲೆಗಾರ ಎಂಬುದು ತಿಳಿದಿರಲಿಲ್ಲ. ಅನೇಕ ವರ್ಷ ಪೊಲೀಸರ ಕಣ್ಣುತಪ್ಪಿಸಿ ಓಡಾಡ್ತಿದ್ದ ಕ್ರಿಸ್ಟೋಫರ್ ಕೊನೆಗೂ ಜೈಲು (Jail) ಸೇರಿದ್ದಾನೆ. ಪೊಲೀಸ್ ಬಂಧಿಯಾದ್ಮೇಲೆ ಕ್ರಿಸ್ಟೋಫರ್ ನನ್ನ ಭೇಟಿಯಾಗಲು ನಿರ್ಧರಿಸಿರು ಸ್ಟೆಲ್ಲಾ, ಆತನನ್ನು ಸಸ್ಯಹಾರಿ ಮಾಡುವುದು ತನ್ನ ಗುರಿ ಎಂದಿದ್ದಾಳೆ.

ಒಂದು ಸಣ್ಣ ಆಸೆ ಬದುಕ ನುಂಗಿತೆ... ಪ್ರೀತಿ ಬಯಸಿ ಹೃದಯ ತಪ್ಪು ಮಾಡಿತೆ.. ಹುಡುಗಿ ಕೈಕೊಟ್ಲಂತ ಆತ್ಮಹತ್ಯೆ ಮಾಡ್ಕೊಂಡ

ವರ್ಷಗಳು ಕಳೆದ ಮೇಲೆ ಒಂದು ದಿನ ಸ್ಟೆಲ್ಲಾಗೆ ನನ್ನ ಜೊತೆ ಆಂಡ್ರ್ಯೂ ಲ್ಯಾಂಬ್ ಹೆಸರಿನಲ್ಲಿ ವಾಸವಾಗಿರುವ ಕ್ರಿಸ್ಟೋಫರ್ 2003ರಲ್ಲಿ ನಾಲ್ಕು ಸ್ನೇಹಿತರ ಜೊತೆ ಸೇರಿ ಇನ್ನೊಬ್ಬ ಸ್ನೇಹಿತನನ್ನು ಹತ್ಯೆ ಮಾಡಿದ್ದಾನೆ ಎಂಬ ಆಘಾತಕಾರಿ ಸಂಗತಿ ತಿಳಿದಿದೆ. ಈತ 44 ವರ್ಷದ ಬ್ರಿಯಾನ್ ನನ್ನು, ಆತನ ಮಕ್ಕಳ ಮುಂದೆಯೇ ಹತ್ಯೆ ಮಾಡಿದ್ದ. ಮೊದಲು ಬ್ರಿಯಾನ್ ನನ್ನು ಉಲ್ಟಾ ನೇತುಹಾಕಿ ಹೊಡೆದಿದ್ದ. ನಂತ್ರ ಆತನನ್ನು ಸುಟ್ಟು ಹಾಕಿದ್ದ. 

ಕ್ರಿಸ್ಟೋಫರ್ ಹಾಗೂ ಆತನ ಸ್ನೇಹಿತರು, ಬ್ರಿಯಾನ್ ನ್ ಡ್ರಗ್ಸ್ ಹಣ, ಸುಮಾರು 20 ಲಕ್ಷ ಸಾಲವನ್ನು ತೀರಿಸಿಲ್ಲ ಎನ್ನುವ ಕಾರಣಕ್ಕೆ ಹತ್ಯೆ ಮಾಡಿದ್ದರು.  ಮೆದುಳಿನಲ್ಲಿ ರಕ್ತಸ್ರಾವ, ಹೃದಯದ ಗಾಯ ಮತ್ತು ಪಕ್ಕೆಲುಬುಗಳ ಮುರಿತ ಸೇರಿದಂತೆ ಅನೇಕ ಗಾಯಗಳಿಂದ ಬ್ರಿಯಾನ್ ಸಾವನ್ನಪ್ಪಿದ್ದ.

27/12ರ ನಿಗೂಢ ಮಹಿಳೆ ಯಾರು? ಫೋಟೋ ಶೇರ್​ ಮಾಡಿ ಫ್ಯಾನ್ಸ್​ ತಲೆಗೆ ಹುಳು ಬಿಟ್ಟ ನಟ ಸಲ್ಮಾನ್!

ಹತ್ಯೆ ಮಾಡಿ ಓಡಿ ಹೋಗಿದ್ದ ಕ್ರಿಸ್ಟೋಫರ್ ನನ್ನು ಪೊಲೀಸರು ಬಂಧಿಸಲು ಸಾಧ್ಯವಾಗಿರಲಿಲ್ಲ.  ಈ ಮಧ್ಯೆ 2012ರಲ್ಲಿ ಕ್ರಿಸ್ಟೋಫರ, ಸ್ಟೆಲ್ಲಾ ಭೇಟಿಯಾಗಿದ್ದ. ಇಬ್ಬರು ಡೇಟಿಂಗ್ ಶುರು ಮಾಡಿದ್ದರು. ಆದ್ರೆ ಸ್ಟೆಲ್ಲಾಗೆ, ಕ್ರಿಸ್ಟೋಫರ್ ನ ಯಾವುದೇ ವಿಷ್ಯ ಗೊತ್ತಿರಲಿಲ್ಲ. 2019ರಲ್ಲಿ ಕ್ರಿಸ್ಟೋಫರ್ ನನ್ನು ಪೊಲೀಸರು ಬಂಧಿಸಿದ್ರು. 2021ರಲ್ಲಿ ಆತನಿಗೆ ಜೀವಾವಧಿ ಶಿಕ್ಷೆಯನ್ನು ಕೋರ್ಟ್ ನೀಡಿದೆ. ಕ್ರಿಸ್ಟೋಫೋರ್ ಜೊತೆ ನಾನು ಕಳೆದ ಸಮಯ, ತನ್ನ ಅನುಭವವನ್ನು ಸ್ಟೆಲ್ಲಾ, ಮಾಧ್ಯಮದ ಮುಂದೆ ಹಂಚಿಕೊಂಡಿದ್ದಾಳೆ. 

ಸಸ್ಯಾಹಾರಿ ಕಾರ್ಯಕರ್ತೆ ಸ್ಟೆಲ್ಲಾ, ಕ್ರಿಸ್ಟೋಫರ್ ಬಗ್ಗೆ ಮತ್ತೆ ಮಾತನಾಡಿದ್ದಾಳೆ. ನಾನು ಆತನನ್ನು ಭೇಟಿಯಾಗಲು ಜೈಲಿಗೆ ಹೋಗಲು ನಿರ್ಧರಿಸಿದ್ದೇನೆ. ಆತ ಸಸ್ಯಹಾರಿ ಆಗ್ಲಿ ಎನ್ನುವುದು ನನ್ನ ಬಯಕೆ. ಈ ನನ್ನ ಕೆಲಸದಿಂದ ನಾನು ಕೆಲ ಪ್ರಾಣಿಗಳನ್ನು ರಕ್ಷಿಸಿದ ಖುಷಿ ಸಿಗುತ್ತದೆ. ನಾನು ಕೊಲೆಗಾರನ ಜೊತೆ ವಾಸವಾಗಿದ್ದೆ ಎಂಬುದನ್ನು ನಂಬಲು ನನಗೆ ಕಷ್ಟವಾಗ್ತಿದೆ. ಇದ್ರಿಂದಾಗಿ ಜನರ ಮೇಲೆ ಭರವಸೆ ಹೋಗಿದೆ ಎನ್ನುತ್ತಾಳೆ ಸ್ಟೆಲ್ಲಾ. ನನ್ನ ಬಗ್ಗೆ ಕ್ರಿಸ್ಟೋಫರ್ ತಮಾಷೆ ಮಾಡಿದ್ರೂ ಚಿಂತೆಯಿಲ್ಲ ಆತನನ್ನು ಸಸ್ಯಹಾರಿ ಮಾಡುವ ಪ್ರಯತ್ನಪಡ್ತೇನೆ ಎನ್ನುತ್ತಿದ್ದಾಳೆ ಸ್ಟೆಲ್ಲಾ. 
 

Follow Us:
Download App:
  • android
  • ios