ಒಂದು ಸಣ್ಣ ಆಸೆ ಬದುಕ ನುಂಗಿತೆ... ಪ್ರೀತಿ ಬಯಸಿ ಹೃದಯ ತಪ್ಪು ಮಾಡಿತೆ.. ಹುಡುಗಿ ಕೈಕೊಟ್ಲಂತ ಆತ್ಮಹತ್ಯೆ ಮಾಡ್ಕೊಂಡ
ನಾಲ್ಕು ವರ್ಷದ ಪ್ರೀತಿ ಮಾಡಿದ ಯುವತಿ ತನ್ನನ್ನು ಮದುವೆಯಾಗಲು ಒಪ್ಪಲಿಲ್ಲವೆಂದು ಪ್ರೇಮವೈಫಲ್ಯಕ್ಕೆ ಮನನೊಂದ ಯುವಕ ಆತ್ಮಹತ್ಯೆಗೆ ಶರಣಾಗಿದ್ದಾರೆ.
ಬೆಂಗಳೂರು (ಅ.08): ಒಂದು ಸಣ್ಣ ಆಸೆ ಬದುಕ ನುಂಗಿತೆ... ಪ್ರೀತಿ ಬಯಸಿ ಹೃದಯ ತಪ್ಪು ಮಾಡಿತೆ... ಎಂದು ಹಲವು ಸಿನಿಮಾದ ಗೀತೆಗಳಲ್ಲಿ ಪ್ರೀತಿ-ಪ್ರೇಮ ವೈಫಲ್ಯದ ಬಗ್ಗೆ ನೋಡಿದ್ದೇವೆ. ಇನ್ನು ಹಲವು ಪ್ರೇಮ ವೈಫಲ್ಯ ಘಟನೆಗಳಲ್ಲಿ ಹೋರಾಟ ಮಾಡಿ ಪ್ರೀತಿ ಪಡೆದುಕೊಂಡ ಸಿನಿಮಾಗಳನ್ನೂ ನೋಡಿದ್ದೇವೆ. ಆದರೆ, ಇಲ್ಲೊಬ್ಬ ಯುವಕ ಕಳೆದ ನಾಲ್ಕು ವರ್ಷಗಳಿಂದ ಪರಸ್ಪರ ಪ್ರೀತಿ ಮಾಡಿದ ಹುಡುಗಿ ತನಗೆ ಕೈಕೊಟ್ಟು ಹೋಗಿದ್ದಕ್ಕೆ ಬೇಸರಗೊಂಡು ಡೆತ್‌ನೋಟ್ ಬರೆದಿಟ್ಟು ಆತ್ಮಹತ್ಯೆ ಮಾಡಿಕೊಂಡಿರುವ ದುರ್ಘಟನೆ ಬೆಂಗಳೂರಿನ ಕುರುಬರಹಳ್ಳಿಯಲ್ಲಿ ನಡೆದಿದೆ.
ಪ್ರೇಮ ವೈಫಲ್ಯವಾಗಿದೆ ಎಂದು ಮನನೊಂದ ಯುವಕ ಆತ್ಮಹತ್ಯೆಗೆ ಶರಣಾಗಿದ್ದಾರೆ. ಮೃತ ಯುವಕ ಯೋಗೇಶ್ (25) ಎಂಬಾತನಾಗಿದ್ದಾನೆ. ಮೂಲತಃ ನಾಗಮಂಗಲದ ಆಡೇನಹಳ್ಳಿ ಗ್ರಾಮದ ಯೋಗೇಶ್ ಕಳೆದ ಕೆಲವು ವರ್ಷಗಳಿಂದ ಬೆಂಗಳೂರಿನ ಕುರುಬರಹಳ್ಳಿಯ ಜೆ.ಸಿ. ನಗರದಲ್ಲಿ ವಾಸವಾಗಿದ್ದನು. ನಗರದಲ್ಲಿ ಆಟೋ ಓಡಿಸಿಕೊಂಡು ಜೀವನ ನಡೆಸುತ್ತಿದ್ದ ಯುವಕ, ನಾಗಮಂಗಲ ಮೂಲದ ಯುವತಿಯನ್ನ ಪ್ರೀತಿಸುತ್ತಿದ್ದನು. ಕಳೆದ ನಾಲ್ಕು ವರ್ಷಗಳಿಂದ ಯುವಕ-ಯುವತಿ ಪರಸ್ಪರ ಪ್ರೀತಿಸುತ್ತಿದ್ದರು. ಇತ್ತೀಚಿಗೆ ಯುವತಿ ಯೋಗೇಶ್ ನಿಂದ ದೂರವಾಗಿದ್ದ ಹಿನ್ನೆಲೆಯಲ್ಲಿ ಪ್ರೇಮ ವೈಫಲ್ಯ ಸಹಿಸಲಾಗದೇ ಆತ್ಮಹತ್ಯೆಯ ದಾರಿ ಹಿಡಿದಿದ್ದಾನೆ.
Bengaluru Namma Metro: ನಾಳೆಯಿಂದ ಬೈಯಪ್ಪನಹಳ್ಳಿ-ಕೆಆರ್‌ಪುರ, ಕೆಂಗೇರಿ-ಚಲ್ಲಘಟ್ಟ ಮೆಟ್ರೋ ಸಂಚಾರ ಆರಂಭ
ಐದು ಪುಟಗಳ ಡೆತ್‌ನೋಟ್ ಬರೆದಿಟ್ಟ ಯುವಕ: ಕಳೆದ ಮೂರು ದಿನಗಳ ಹಿಂದೆ (ಅಕ್ಟೋಬರ್ 5ರಂದು) ವಿಷ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ ಯುವಕನನ್ನು, ಪೋಷಕರು ಅಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸುತ್ತಿದ್ದರು. ಆದರೆ, ವಿಷದ ಪ್ರಮಾಣ ದೇಹವನ್ನು ಹೆಚ್ಚಾಗಿ ಸೇರಿಕೊಂಡಿದ್ದರಿಂದ ಚಿಕಿತ್ಸೆ ಫಲಿಸದೇ ಭಾನುವಾರ ಬೆಳಗ್ಗೆ ಸಾವನ್ನಪ್ಪಿದ್ದಾನೆ ಎಂದು ಪೋಷಕರು ತಿಳಿಸಿದ್ದಾರೆ. ಒಟ್ಟು 5 ಪುಟಗಳ ಡೆತ್ ನೋಟ್ ಬರೆದಿಟ್ಟ ಯುವಕ ತಮ್ಮ ಪ್ರೀತಿಯ ಬಗ್ಗೆ ಹೇಳಿಕೊಂಡಿದ್ದಾನೆ.
ಮಾಲ್ಡೀವ್ಸ್‌ನಲ್ಲಿ ಸೋನುಗೌಡಗೆ ರೇಷ್ಮೆ ಬಟ್ಟೇಲಿ ಚಪ್ಲಿ ಸುತ್ಗೊಂಡ್ ಹೊಡೆದ್ರಂತೆ ಗಿಚ್ಚಿಗಿಲಿ ಗಿಲಿ ಧನ್‌ರಾಜ್!
ಫೋನ್ ನಂಬರ್ ಬ್ಲಾಕ್ ಮಾಡಿದ ಪ್ರೇಯಸಿ: ಯುವಕ ಬರೆದ ಡೆತ್‌ನೋಟ್‌ನಲ್ಲಿ ತಾನು ಇಷ್ಟು ವರ್ಷ ಪ್ರೀತಿಸಿದರೂ ನನ್ನನ್ನು ಬಿಟ್ಟು ಹೋಗಲು ಒಂದೇ ಒಂದು ಕಾರಣವನ್ನೂ ಹೇಳದೇ ಬೇರೆಯವರನ್ನು ಮದುವೆ ಆಗಲು ಸಿದ್ಧಳಾಗಿದ್ದಾಳೆ. ಅವಳನ್ನು ತಾನು ಮದುವೆ ಆಗುವುದಾಗಿ ಹೇಳಿದರೂ ಕೇಳದೇ, ಎಲ್ಲ ಫೋನ್ ನಂಬರ್‌ಗಳನ್ನು ಬ್ಲಾಕ್ ಮಾಡಿದ್ದಾಳೆ. ಫೋನ್ ಕಾಲ್ ಮಾಡದೇ, ಭೇಟಿಗೂ ಸಿಗದೇ ತನ್ನಿಂದ ದೂರಾಗಿರುವುದಕ್ಕೆ ನಾನು ಯಾರಿಗೂ ಸಿಗದೇ ದೂರ ಹೋಗುತ್ತಿದ್ದೇನೆ. ನನ್ನ ಸಾವಿಗೆ ಅವಳೇ ಕಾರಣ ಎಂದು ಬರೆದಿಟ್ಟು ಆತ್ಮಹತ್ಯೆಗೆ ಶರಣಾಗಿದ್ದಾನೆ. ಇನ್ನು ಈ ಘಟನೆ ಮಹಾಲಕ್ಷ್ಮಿ ಲೇಔಟ್ ಪೊಲೀಸ್ ಠಾಣೆಯಲ್ಲಿ ನಡೆದಿದ್ದು, ಮೃತ ದೇಹವನ್ನು ಪೋಷಕರಿಗೆ ಒಪ್ಪಿಸಿದ್ದಾರೆ.