Asianet Suvarna News Asianet Suvarna News

27/12ರ ನಿಗೂಢ ಮಹಿಳೆ ಯಾರು? ಫೋಟೋ ಶೇರ್​ ಮಾಡಿ ಫ್ಯಾನ್ಸ್​ ತಲೆಗೆ ಹುಳು ಬಿಟ್ಟ ನಟ ಸಲ್ಮಾನ್!

ನಿಗೂಢ ಮಹಿಳೆಯ ಜೊತೆ ನಟ ಸಲ್ಮಾನ್​ ಖಾನ್​ ಫೋಟೋ ಶೇರ್​ ಮಾಡಿದ್ದು, ಇದರ ಬಗ್ಗೆ ತೀವ್ರ ಗುಸುಗುಸು ಶುರುವಾಗಿದೆ.
 

Salman Khan Teases Fans With Special Announcement Bhabhi Reveal suc
Author
First Published Oct 8, 2023, 6:15 PM IST

ಸಲ್ಮಾನ್​ ಖಾನ್​ ಅವರ ‘ಟೈಗರ್ 3’ ಸಿನಿಮಾಗಾಗಿ ಅಭಿಮಾನಿಗಳು ಕಾಯುತ್ತಿದ್ದಾರೆ.  ಸಲ್ಲು ಸಿನಿಮಾ ಬಗ್ಗೆ ಭಾರೀ ನಿರೀಕ್ಷೆ ಇದೆ. ಆದರೆ ಇದರ ನಡುವೆಯೇ ಮೊನ್ನೆಯಷ್ಟೇ ನಟನ  ಆರೋಗ್ಯ ಹದಗೆಟ್ಟಿದ್ಯಾ ಎನ್ನುವ ಪ್ರಶ್ನೆ ಮೂಡಿತ್ತು. ಸಲ್ಮಾನ್ ವಿಡಿಯೋ ಒಂದು ವೈರಲ್ ಆಗಿತ್ತು. ಅದರಲ್ಲಿ  ಸನ್ಮಾನ್ ಖಾನ್ ಡ್ಯಾನ್ಸ್ ವಿಡಿಯೋ ನೋಡಿದ ಫ್ಯಾನ್ಸ್, ಬ್ಯಾಡ್ ಬಾಯ್ ಆರೋಗ್ಯದಲ್ಲಿ ಏರುಪೇರಾಗಿದೆ ಎನ್ನುತ್ತಿದ್ದಾರೆ. ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿರುವ ವಿಡಿಯೋ ಒಂದು ಸಲ್ಲು ಆರೋಗ್ಯದ ಬಗ್ಗೆ ಅನುಮಾನ ಮೂಡಿಸುವಂತೆ ಮಾಡಿದೆ. ಇದೀಗ ಸಲ್ಮಾನ್​ ಖಾನ್​ ಕುರಿತು ಇಂಟರೆಸ್ಟಿಂಗ್​ ಫೋಟೋ ವೈರಲ್​ ಆಗಿದೆ. ಇದರಲ್ಲಿ ಸಲ್ಮಾನ್​ ಖಾನ್​ ಮಹಿಳೆಯೊಬ್ಬರ ಜೊತೆ ಕಾಣಿಸಿಕೊಂಡಿದ್ದಾರೆ. ಆದರೆ ಆಕೆಯ ಬೆನ್ನು ಮಾಡಿದ ಫೋಟೋ ಶೇರ್​ ಮಾಡಲಾಗಿದೆ. 

ಇಬ್ಬರೂ ಒಂದೇ ತೆರನಾದ ಡ್ರೆಸ್​ ಹಾಕಿದ್ದಾರೆ. ಮಹಿಳೆಯ ಹಿಂಭಾಗದಲ್ಲಿ “27/12” ದಿನಾಂಕವನ್ನು ನಾವು ನೋಡಬಹುದು. ಇಬ್ಬರ ಡ್ರೆಸ್​ ಮೇಲೆ ನನ್ನ ಹೃದಯದ ಒಂದು ಸಣ್ಣ ತುಣುಕನ್ನು ನಾಳೆ ಹಂಚಿಕೊಳ್ಳುತ್ತಿದ್ದೇನೆ ಎಂದು ಬರೆಯಲಾಗಿದೆ. ಈ ಮಹಿಳೆ ಯಾರು ಎಂಬ ಬಗ್ಗೆ ತೀವ್ರ ಚರ್ಚೆ ಶುರುವಾಗಿದೆ. ವಯಸ್ಸು 58 ಆದರೂ ಸಲ್ಮಾನ್​ ಖಾನ್​ ಇಂದಿಗೂ ಅವಿವಾಹಿತರೇ. ಇವರ ಹೆಸರು ಹಲವು ನಟಿಯರ ಜೊತೆ ಕೇಳಿಬಂದಿದ್ದಿದೆ. ಇನ್ನು ಕೆಲವರು ಇವರ ವಿರುದ್ಧ ಲೈಂಗಿಕ ಆರೋಪವನ್ನೂ ಮಾಡಿದ್ದಿದೆ. ಅದೇನೇ ಇದ್ದರೂ ನಟಿ ಐಶ್ವರ್ಯ ರೈ ಮತ್ತು ಸಲ್ಮಾನ್​ ಖಾನ್​ ಅವರ ಸಂಬಂಧ ಮಾತ್ರ ಎಲ್ಲರಿಗೂ ತಿಳಿದದ್ದೇ. ಆದರೆ ಐಶ್ವರ್ಯ ರೈ, ಅಭಿಷೇಕ್​ ಅವರನ್ನು ಮದುವೆಯಾದ ಬಳಿಕ ಸಲ್ಮಾನ್​ ಖಾನ್​ ಖಿನ್ನತೆಗೂ ಜಾರಿದ್ದರು.

'ಮೇರಾ ಪಿಯಾ ಆಯಾ' ಹಾಡು ಮರು ಸೃಷ್ಟಿಸಿ, ಮಾಧುರಿಗೆ ಸನ್ನಿ ಲಿಯೋನ್​ ಗೌರವ: ಫ್ಯಾನ್ಸ್​ ಗರಂ

ಅದೇನೆ ಇರಲಿ, ಇದೀಗ ಸಲ್ಮಾನ್​ ಖಾನ್​ ಪಕ್ಕ ಇರುವ ಮಹಿಳೆ ಯಾರು ಎಂಬ ಪ್ರಶ್ನೆಗೆ ಎದ್ದಿದೆ. ಆಕೆಯ ಷರ್ಟ್​ ಮೇಲೆ ಇರುವ 27/12 ಏನನ್ನು ಸೂಚಿಸುತ್ತದೆ ಎಂದು ಹಲವರುಪ್ರಶ್ನಿಸುತ್ತಿದ್ದಾರೆ. ಸಲ್ಲು ಮಿಯಾ ಸದ್ದಿಲ್ಲದೇ ಮದ್ವೆಯಾಗ್ತಿದ್ದಾರಾ ಎಂದು ಕೆಲವರು ಪ್ರಶ್ನಿಸುತ್ತಿದ್ದಾರೆ. ನಟಿ ಸಂಗೀತಾ ಬಿಜಲಾನಿ, ಬಿಗ್ ಬಾಸ್ ಸೆನ್ಸೇಷನ್, ಗಾಯಕ ಅಬ್ದು ರೋಜಿಕ್ ಸೇರಿದಂತೆ ಕೆಲವು ತಾರೆಯರು ವಿಷಸ್​ ಮಾಡಿದ್ದಾರೆ. 

ಅಷ್ಟಕ್ಕೂ ಫೋಟೋದಲ್ಲಿ ಕಾಣಿಸುವಾಕೆ  ಸಲ್ಮಾನ್ ಅವರ ಸೋದರ ಸೊಸೆ ಅಲಿಜೆ ಅಗ್ನಿಹೋತ್ರಿ ಎಂದು ಹಲವರು ಹೇಳುತ್ತಿದ್ದಾರೆ.  ಅವರು ನಟ-ನಿರ್ಮಾಪಕ ಅತುಲ್ ಅಗ್ನಿಹೋತ್ರಿ ಮತ್ತು ಸಲ್ಮಾನ್ ಸಹೋದರಿ ಅಲ್ವಿರಾ ಖಾನ್ ಅಗ್ನಿಹೋತ್ರಿ ಅವರ ಪುತ್ರಿ ಎನ್ನಲಾಗಿದೆ. ಅಲಿಜೆ ಅಗ್ನಿಹೋತ್ರಿ ಅವರು ರಾಷ್ಟ್ರಪ್ರಶಸ್ತಿ ವಿಜೇತ ಚಿತ್ರನಿರ್ಮಾಪಕ ಸೌಮೇಂದ್ರ ಪಾಧಿ ಅವರ ಫಾರೆ ಚಿತ್ರದ ಮೂಲಕ ಬಾಲಿವುಡ್‌ಗೆ ಪದಾರ್ಪಣೆ ಮಾಡಲು ಸಿದ್ಧರಾಗಿದ್ದಾರೆ. ಚಿತ್ರ ನವೆಂಬರ್ 24 ರಂದು ಬಿಡುಗಡೆಯಾಗಲಿದೆ. ಟೀಸರ್ ಅನ್ನು ಸಲ್ಮಾನ್ ಖಾನ್ ಅವರು ಇನ್ಸ್ಟಾಗ್ರಾಮ್ನಲ್ಲಿ ಹಂಚಿಕೊಂಡಿದ್ದಾರೆ. ಇದರ ಬಗ್ಗೆ ನಾಳೆ ತಿಳಿಯಬೇಕಿದೆ. 

Viral Video: ಇಸ್ರೇಲ್​ನಲ್ಲಿ ಗುಂಡಿನ ದಾಳಿಯಿಂದ ತಪ್ಪಿಸಿಕೊಂಡರೂ ಮಾಧ್ಯಮಗಳ 'ದಾಳಿ'ಗೆ ಬೆಚ್ಚಿಬಿದ್ದ ನಟಿ ನುಶ್ರತ್​!

Follow Us:
Download App:
  • android
  • ios