ತಾಜ್ ಮಹಲ್ ಪ್ರೇಮಕಥೆಯಿಂದ ಪ್ರೇರಿತ; ಆಗ್ರಾದಲ್ಲಿ ಮದುವೆಯಾದ ಮೆಕ್ಸಿಕನ್ ಜೋಡಿ
ಆಗ್ರಾದಲ್ಲಿರುವ ಶಿವ ದೇವಾಲಯದಲ್ಲಿ ಮೆಕ್ಸಿಕನ್ ಜೋಡಿಯೊಂದು ಹಿಂದೂ ಸಂಪ್ರದಾಯದ ಪ್ರಕಾರ ವಿವಾಹವಾದರು. ತಾಜ್ ಮಹಲ್ ಪ್ರೇಮಕಥೆಯಿಂದ ಪ್ರೇರಿತರಾಗಿ ತಾವು ಹಿಂದೂ ಪದ್ಧತಿಯಂತೆ ಮದ್ವೆಯಾಗಿರುವುದಾಗಿ ಅವರು ಹೇಳಿಕೊಂಡಿದ್ದಾರೆ. ಆ ಬಗ್ಗೆ ಹೆಚ್ಚಿನ ಮಾಹಿತಿ ಇಲ್ಲಿದೆ.
ಭಾರತೀಯ ಸಂಸ್ಕೃತಿಯನ್ನು ವಿಶ್ವಾದ್ಯಂತ ಜನರು ಕೊಂಡಾಡುತ್ತಾರೆ. ಅದರಲ್ಲೂ ಹಿಂದೂ ಸಂಪ್ರದಾಯಕ್ಕೆ ವಿದೇಶಗಳಲ್ಲೂ ಹೆಚ್ಚಿನ ಮನ್ನಣೆಯಿದೆ. ಇಲ್ಲಿ ಆಚಾರ-ವಿಚಾರ, ಪದ್ಧತಿಗಳನ್ನು ಜನರು ಅನುಸರಿಸುತ್ತಾರೆ. ಇಲ್ಲಿನ ಸಂಸ್ಕೃತಿಯ ಶ್ರೀಮಂತಿಕೆಗೆ ತಲೆಬಾಗುತ್ತಾರೆ. ಹೀಗಾಗಿಯೇ ಇತ್ತೀಚಿನ ವರ್ಷಗಳಲ್ಲಿ ಅದೆಷ್ಟೋ ಮಂದಿ ವಿದೇಶಿಗರು ಹಿಂದೂ ಸಂಪ್ರದಾಯದಂತೆ ಮದುವೆಯಾಗುವುದನ್ನು ನಾವು ನೋಡಬಹುದು. ಹಾಗಯೇ ಇತ್ತೀಚಿಗೆ ಮೆಕ್ಸಿಕನ್ ಜೋಡಿಯೊಂದು ಆಗ್ರಾದಲ್ಲಿ ಹಿಂದೂ ಸಂಪ್ರದಾಯದ ಪ್ರಕಾರ ವಿವಾಹವಾದರು.
ತಾಜ್ ಮಹಲ್ ಪ್ರೇಮಕಥೆಯಿಂದ ಪ್ರಭಾವಿತರಾದ ಜೋಡಿ
ತಾಜ್ ಮಹಲ್‌ಗೆ ಭೇಟಿ ನೀಡಿದ ಮೆಕ್ಸಿಕನ್ ಜೋಡಿ (Mexican couple) ಆಗ್ರಾದಲ್ಲಿ ಹಿಂದೂ ಸಂಪ್ರದಾಯದ ಪ್ರಕಾರ ವಿವಾಹ (Marriage)ವಾದರು. ತಾಜ್ ನಗರಿಯಲ್ಲಿರುವ ಶಿವ ದೇವಾಲಯದಲ್ಲಿ ಸಾಂಪ್ರದಾಯಿಕ ಹಿಂದೂ ವಿವಾಹದ ಉಡುಪಿನಲ್ಲಿ ದಂಪತಿಗಳು ವಿವಾಹವಾದರು. ಮದುವೆಯಲ್ಲಿ ದಂಪತಿಯ ಕೆಲವು ಸ್ಥಳೀಯ ಸ್ನೇಹಿತರು ಭಾಗವಹಿಸಿದ್ದರು. ಮದುವೆಯ ನಂತರ ಎಲ್ಲರೂ ಒಟ್ಟಿಗೆ ರೆಸ್ಟೋರೆಂಟ್‌ನಲ್ಲಿ ಊಟ ಮಾಡಿದರು ಮತ್ತು ಸ್ಥಳೀಯ ಟೂರ್ ಆಪರೇಟರ್‌ಗಳು, ಗೈಡ್‌ಗಳು, ಡ್ರೈವರ್‌ಗಳು ಮತ್ತು ಹೋಟೆಲ್‌ನವರು ಈ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು. ವಿದೇಶಿ ಜೋಡಿಯ (foreign couple) ವಿವಾಹ ಸಮಾರಂಭವನ್ನು ಏರ್ಪಡಿಸುವ ಜವಾಬ್ದಾರಿಯನ್ನು ಸ್ಥಳೀಯ ಹೋಟೆಲ್ ಉದ್ಯಮಿ ಗೌರವ್ ಗುಪ್ತಾ ವಹಿಸಿಕೊಂಡಿದ್ದರು.
ಕ್ರಿಕೆಟ್ ಆಡಲು ಚಾನ್ಸ್ ಕೊಡುವಂತೆ ಕಾಂಟ್ರ್ಯಾಕ್ಟ್, ವರನ ಸ್ನೇಹಿತರ ಷರತ್ತಿಗೆ ವಧು ಕಕ್ಕಾಬಿಕ್ಕಿ !
ದಂಪತಿಗಳ ಹೆಸರುಗಳು ಕ್ಲೌಡಿಯಾ ಮತ್ತು ಸೆರಾಮಿಕೊ. 'ನಾವು ತಾಜ್ ಮಹಲ್ ಕಥೆಯನ್ನು ಕೇಳಿದಾಗ, ನಾವು ಷಹಜಹಾನ್ ಮತ್ತು ಮುಮ್ತಾಜ್ ಅವರ ಪ್ರೇಮಕಥೆಯಿಂದ (Love story) ಪ್ರಭಾವಿತರಾದೆವು. ನಮ್ಮ ಪ್ರೀತಿಯನ್ನು ಶಾಶ್ವತವಾಗಿ ಮತ್ತು ಸ್ಮರಣೀಯವಾಗಿ ಇರಿಸಲು ಬಯಸಿದೆವು. ಅದನ್ನು ಮನಸ್ಸಿನಲ್ಲಿಟ್ಟುಕೊಂಡು ನಾವು ಭಾರತಕ್ಕೆ ಭೇಟಿ ನೀಡುವ ಯೋಜನೆಯನ್ನು ಮಾಡಿದ್ದು, ಆ ಬಳಿಕ ಹಿಂದೂ ಸಂಪ್ರದಾಯಗಳ (Hindu tradition) ಪ್ರಕಾರ ಮದುವೆಯ ವಿಧಿವಿಧಾನಗಳನ್ನು ಪೂರ್ಣಗೊಳಿಸಲು ನಿರ್ಧರಿಸಿದೆವು' ಎಂದು ಕ್ಲೌಡಿಯಾ ತಿಳಿಸಿದ್ದಾರೆ.
ಕ್ಲೌಡಿಯಾ ಮತ್ತು ಸೆರಾಮಿಕೊ ಅವರ ವಿವಾಹ
ನೀವು ಆಗ್ರಾಕ್ಕೆ ಬಂದು ಮದುವೆಯಾಗಲು ಏಕೆ ನಿರ್ಧರಿಸಿದ್ದೀರಿ ಎಂದು ಕೇಳಿದಾಗ, ದಂಪತಿಗಳು ತಾವು ಭಾರತದ ಸಂಸ್ಕೃತಿಗೆ (Culture) ಹೆಚ್ಚು ಆಕರ್ಷಿತರಾಗಿದ್ದೇವೆ ಮತ್ತು ಹಿಂದೂ ಸಂಪ್ರದಾಯದ ಪ್ರಕಾರ ಭಾರತದಲ್ಲಿ ಮದುವೆಯಾಗಲು ಬಹಳ ಹಿಂದೆಯೇ ನಿರ್ಧರಿಸಿದ್ದೇವೆ ಎಂದು ಹೇಳಿದರು. ತಮ್ಮ ಪ್ರೀತಿ ಶಾಶ್ವತವಾಗಿ ಉಳಿಯುತ್ತದೆ ಎಂದು ಖಚಿತಪಡಿಸಿಕೊಳ್ಳಲು, ಅವರು ತಮ್ಮ ಮದುವೆಗೆ ಪ್ರೀತಿಯ ನಗರವಾದ ಆಗ್ರಾವನ್ನು ಆಯ್ಕೆ ಮಾಡಿಕೊಂಡರು.
ಮೆಕ್ಸಿಕನ್ ದಂಪತಿಗಳು ಬೆಳಿಗ್ಗೆ ಸೂರ್ಯೋದಯದ ಸಮಯದಲ್ಲಿ ತಾಜ್ ಮಹಲ್‌ಗೆ ಭೇಟಿ ನೀಡಿದರು ಮತ್ತು ನಂತರ ಮಧ್ಯಾಹ್ನ ವಿವಾಹ ಕ್ರಮವನ್ನು ಪೂರ್ತಿಗೊಳಿಸಿರು. ಸಂಜೆ, ದಂಪತಿಗಳು ತಮ್ಮ ಗುಂಪಿನ ಉಳಿದ ಸದಸ್ಯರೊಂದಿಗೆ ರೆಸ್ಟೋರೆಂಟ್‌ನಲ್ಲಿ ನೃತ್ಯ ಮಾಡಿದರು ಮತ್ತು ಅವರ ಮದುವೆಯ ಭೋಜನಕ್ಕೆ ಎಲ್ಲರನ್ನು ಆಹ್ವಾನಿಸಿದರು. ಮದುವೆಯ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಟ್ರೆಂಡ್ ಆಗಿದೆ. ಸಾಂಪ್ರದಾಯಿಕ ಹಿಂದೂ ವಿವಾಹದ ಉಡುಪಿನಲ್ಲಿ ಕ್ಲೌಡಿಯಾ ಮತ್ತು ಸೆರಾಮಿಕೊ ಏಳು ಬಾರಿ ಪ್ರದಕ್ಷಿಣೆ ಹಾಕಿದ್ದಾರೆ.
Weird Wedding: ಇಲ್ಲಿ ವರನಲ್ಲ, ಅವನ ಸಹೋದರಿ ಜೊತೆ ವಧು ಸಪ್ತಪದಿ ತುಳಿಯುತ್ತಾಳೆ !
ವಿದೇಶಿ ಜೋಡಿ ಆಗ್ರಾದಲ್ಲಿ ಬಂದು ಮದುವೆ ಮಾಡುತ್ತಿರುವುದು ಇದೇ ಮೊದಲಲ್ಲ. ಈ ಹಿಂದೆಯೂ, ಪ್ರಪಂಚದಾದ್ಯಂತದಿಂದ ಬಂದು ಆಗ್ರಾದಲ್ಲಿ ಹಿಂದೂ ಸಂಪ್ರದಾಯದ ಪ್ರಕಾರ ವಿವಾಹವಾದ ಅನೇಕ ಜೋಡಿಗಳು ಇವೆ. 2019 ಲ್ಲೂ ಮೆಕ್ಸಿಕೋದ 4 ಜೋಡಿಗಳು ಹಿಂದೂ ಸಂಪ್ರದಾಯದ ಪ್ರಕಾರ ವಿವಾಹವಾದರು. ಮೆಕ್ಸಿಕೋದ ಜನರು ಹಿಂದೂ ಸಂಪ್ರದಾಯಗಳ ಜೊತೆಗೆ ಭಾರತೀಯ ಸಂಸ್ಕೃತಿಯನ್ನು ಇಷ್ಟಪಡುತ್ತಾರೆ, ಅದಕ್ಕಾಗಿಯೇ ಅವರು ಭಾರತಕ್ಕೆ ಬಂದು ಹಿಂದೂ ಸಂಪ್ರದಾಯಗಳ ಪ್ರಕಾರ ಮರುಮದುವೆಯಾಗುತ್ತಾರೆ. ಮದುವೆಯ ವೆಚ್ಚ ಸುಮಾರು 30 ರಿಂದ 35 ಸಾವಿರ ರೂಪಾಯಿಗಳು ಎಂದು ವಿದೇಶಿ ಜೋಡಿಯ ವಿವಾಹ ಸಮಾರಂಭವನ್ನು ಏರ್ಪಡಿಸುವ ಜವಾಬ್ದಾರಿಯನ್ನು ಸ್ಥಳೀಯ ಹೋಟೆಲ್ ಉದ್ಯಮಿ ಗೌರವ್ ಗುಪ್ತಾ ತಿಳಿಸಿದ್ದಾರೆ