ವೀರ್ಯದ ಬಗ್ಗೆ ಡಾಕ್ಟರ್ ನೀಡಿದ ಶಾಕಿಂಗ್ ಸುದ್ದಿಯನ್ನು ಬಚ್ಚಿಟ್ಟ ಪತಿ
ಮಕ್ಕಳನ್ನು ಪಡೆಯಬೇಕೆಂಬ ಬಯಕೆ ಮಹಿಳೆ ಹಾಗೂ ಪುರುಷ ಇಬ್ಬರಿಗೂ ಇರುತ್ತದೆ. ಮಕ್ಕಳಾಗಿಲ್ಲ ಎಂದಾಗ ಎಲ್ಲರೂ ಬೆರಳು ಮಾಡೋದು ಮಹಿಳೆಯನ್ನು. ಆದ್ರೆ ಇತ್ತೀಚಿಗೆ ಪುರುಷ ಬಂಜೆತನ ಹೆಚ್ಚಾಗ್ತಿದೆ. ಅದನ್ನು ಪುರುಷರು ಒಪ್ಪಿಕೊಳ್ಳಲು ಹಿಂದೇಟು ಹಾಕ್ತಿದ್ದಾರೆ.
ಅಮ್ಮನಾಗುವುದು ಹೇಗೆ ಮಹಿಳೆಯರಿಗೆ ಜೀವನದ ಅತ್ಯಂತ ದೊಡ್ಡ ಖುಷಿಯೋ ಅದೇ ರೀತಿ ಅಪ್ಪನಾಗುವುದು ಪುರುಷರಿಗೆ ಅಷ್ಟೇ ಸಂತೋಷದ ಸಂಗತಿ. ತಂದೆಯಾಗೋದನ್ನು ಸಮಾಜದಲ್ಲಿ ಗೌರವದ, ಘನತೆಯ ವಿಷ್ಯವೆಂದು ಪರಿಗಣಿಸಲಾಗುತ್ತದೆ. ತಂದೆಯಾಗೋದು ಪುರುಷರಿಗೆ ಹೆಮ್ಮೆಯ ಸಂಗತಿಯೂ ಹೌದು. ಮಹಿಳೆ ತಾಯಿಯಾಗುವ ಭಾಗ್ಯ ಕಳೆದುಕೊಂಡ್ರೆ ಅನೇಕರ ಕೆಟ್ಟ ಮಾತುಗಳನ್ನು ಆಕೆ ಕೇಳಬೇಕಾಗುತ್ತದೆ. ಆದ್ರೆ ಪುರುಷನೊಬ್ಬ ತಂದೆಯಾಗಲು ಅಸಮರ್ಥ ಎಂದಾಗ ಆತನನ್ನು ನೋಡುವ ದೃಷ್ಟಿಯೇ ಬೇರೆ. ಮಹಿಳೆಗಿಂತ ನಾಲ್ಕು ಪಟ್ಟು ಹೆಚ್ಚು ಭಯಾನಕ ಹಿಂಸೆಯನ್ನು ಪುರುಷ ಅನುಭವಿಸಬೇಕಾಗುತ್ತದೆ. ಆತನನ್ನು ಕೆಲಸಕ್ಕೆ ಬಾರದ ವ್ಯಕ್ತಿ ಎನ್ನುವ ರೀತಿಯಲ್ಲಿಯೇ ಸಮಾಜ ನೋಡುತ್ತದೆ. ತನ್ನಿಂದ ತನ್ನ ಪತ್ನಿಗೆ ಮಕ್ಕಳ ಭಾಗ್ಯ ಸಿಗ್ತಿಲ್ಲ ಎಂಬ ವಿಷ್ಯ ಗೊತ್ತಾದಾಗ ಪುರುಷ ಅನುಭವಿಸುವ ನೋವು ಅಷ್ಟಿಷ್ಟಲ್ಲ. ಈ ವ್ಯಕ್ತಿ ಕೂಡ ಅದೇ ಸಂಕಷ್ಟ ಎದುರಿಸಿದ್ದಾನೆ. ಅದನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾನೆ.
ಆತ ಆಸ್ಟ್ರೇಲಿಯಾ (Australia ) ದ ನ್ಯೂ ಸೌತ್ ವೇಲ್ಸ್ ನಿವಾಸಿ. ಆತನ ಹೆಸರು ಡೇವಿಡ್ ಹಾಡ್ಜ್. ತಂದೆಯಾಗುವ ಕನಸು ಕಂಡಿದ್ದ ಡೇವಿಡ್ ಹಾಡ್ಜ್ ಗೆ ವೈದ್ಯರು ಹೇಳಿದ ಮಾತು ಆಘಾತ ತಂದಿತ್ತು. ಮಕ್ಕಳನ್ನು ಪಡೆಯಲು ಡೇವಿಡ್ ಹಾಡ್ಜ್ ವೀರ್ಯ (Sperm) ಯೋಗ್ಯವಾಗಿಲ್ಲ ಎಂದಿದ್ದರಂತೆ. ಇದ್ರಿಂದ ನೊಂದಿದ್ದ ಹಾಗೂ ನಾಚಿಕೆಗೊಳಗಾಗಿದ್ದ ಹೆಡ್ಜ್ ಮೂರು ವರ್ಷದವರೆಗೆ ಈ ವಿಷ್ಯವನ್ನು ಮುಚ್ಚಿಟ್ಟಿದ್ದನಂತೆ. ಮಾನಸಿಕ ಒತ್ತಡ (Mental Stress) ಹಾಗೂ ಒತ್ತಾಯ ಹೇರಿದ ನಂತ್ರ ಹೆಡ್ಜ್, ತನಗೆ ಮಕ್ಕಳಾಗಲ್ಲ ಎಂಬ ಸಂಗತಿಯನ್ನು ಒಪ್ಪಿಕೊಂಡನಂತೆ. ಅಷ್ಟೇ ಅಲ್ಲ ಜೀವನದ ಬಗ್ಗೆ ತನಗಿದ್ದ ಅಭಿಪ್ರಾಯವನ್ನು ಬದಲಿಸಿಕೊಂಡನಂತೆ.
Health Tips: ಟೈಟ್ ಅಂಡರ್ ವೆರ್ ಹಾಕ್ತೀರಾ? ಬಂಜೆತನ ಕಾಡಬಹುದಂತೆ !
ಹೆಡ್ಜ್ ವೀರ್ಯಾಣು ಹೊಂದಿದ್ದ. ಆದ್ರೆ ವೀರ್ಯಾಣುವನ್ನು ಮೂತ್ರನಾಳಕ್ಕೆ ಕೊಂಡೊಯ್ಯುವ ನಾಳವಿರಲಿಲ್ಲ. ಈ ನಾಳ, ವೀರ್ಯವನ್ನು ಮೂತ್ರನಾಳಕ್ಕೆ ತಲುಪಿಸುವ ಕೆಲಸ ಮಾಡುತ್ತದೆ. ಸಂಭೋಗದ ನಂತ್ರ ವೀರ್ಯ ಮಹಿಳೆ ದೇಹ ಸೇರಲು ಇದ್ರಿಂದ ಸಹಾಯವಾಗುತ್ತದೆ. ಆದ್ರೆ ಈ ನಾಳವಿರದ ಕಾರಣ ಹೆಡ್ಜ್ ಗೆ ಮಕ್ಕಳಾಗಲು ಸಾಧ್ಯವಿರಲಿಲ್ಲ. ಆದ್ರೆ ಶಸ್ತ್ರಚಿಕಿತ್ಸೆ ಮೂಲಕ ಮಕ್ಕಳನ್ನು ಪಡೆಯಬಹುದಾಗಿತ್ತು.ಈ ವಿಷ್ಯವನ್ನು ಕುಟುಂಬದ ಆಪ್ತರನ್ನು ಬಿಟ್ಟರೆ ಬೇರೆ ಯಾರಿಗೂ ಹೆಡ್ಜ್ ಹೇಳಿರಲಿಲ್ಲ. ಹೆಡ್ಜ್ ಇದೇ ಮೊದಲ ಬಾರಿ ಇಂಥ ಸಮಸ್ಯೆ ಬಗ್ಗೆ ಕೇಳಿದ್ದ.
2015ರಲ್ಲಿ ನಡೆದ ಘಟನೆ ಇದು. ಅಂದು ನಾನು ಮತ್ತೆ ನನ್ನ ಪತ್ನಿ ಮಗುವಿಗಾಗಿ ಹಂಬಲಿಸುತ್ತಿದ್ವಿ. ನನಗೆ ಮಕ್ಕಳ ಮೇಲೆ ಅಪಾರ ಪ್ರೀತಿಯಿತ್ತು. ಆದ್ರೆ ಪರೀಕ್ಷೆ ನಡೆಸಿದ ವೈದ್ಯರು ಜಗತ್ತು ಅಲುಗಾಡುವ ವಿಷ್ಯ ಹೇಳಿದ್ದರು. ನಾನು ಅಲ್ಲಿಯೇ ಕುಸಿದು ಬಿದ್ದಿದ್ದೆ. ನನ್ನ ಪತ್ನಿಗೆ ಮಕ್ಕಳನ್ನು ಪಡೆಯಬೇಕೆಂಬ ಆಸೆ ಅಪಾರವಾಗಿತ್ತು. ಆಕೆ ಆಸೆ ಈಡೇರಿಸಲು ಸಾಧ್ಯವಾಗ್ತಿಲ್ಲ ಎಂಬ ನೋವು ನನ್ನನ್ನು ಕಿತ್ತು ತಿನ್ನುತ್ತಿತ್ತು. ಪ್ರತಿ ದಿನ ಪತ್ನಿ ಮುಂದೆ ಬಿಕ್ಕಿ ಬಿಕ್ಕಿ ಅಳ್ತಿದ್ದೆ ಎನ್ನುತ್ತಾರೆ ಹೆಡ್ಜ್.
ಬರೀ ಹೆಡ್ಜ್ ಮಾತ್ರವಲ್ಲ ಪ್ರಪಂಚದಾದ್ಯಂತ ಅನೇಕರು ಈ ಸಮಸ್ಯೆ ಎದುರಿಸುತ್ತಿದ್ದಾರೆ. ಪ್ರಪಂಚದಾದ್ಯಂತ ಆರು ದಂಪತಿಯಲ್ಲಿ ಒಬ್ಬರಿಗೆ ಈ ಸಮಸ್ಯೆಯಾಗ್ತಿದೆ ಎನ್ನುತ್ತಾರೆ ವೈದ್ಯರು.ಆಸ್ಟ್ರೇಲಿಯಾದಲ್ಲಿ ಶೇಕಡಾ 40 ರಷ್ಟು ಐವಿಎಫ್ ಪ್ರಕರಣಗಳು ಪುರುಷ ಬಂಜೆತನದೊಂದಿಗೆ ಸಂಬಂಧ ಹೊಂದಿವೆ. ಶೇಕಡಾ 40 ರಷ್ಟು ಸ್ತ್ರೀ ಬಂಜೆತನದೊಂದಿಗೆ ಸಂಬಂಧಿಸಿವೆ. ಆದರೆ ಶೇಕಡಾ 20 ರಷ್ಟು ಬಂಜೆತನಕ್ಕೆ ಕಾರಣವೇ ತಿಳಿದುಬಂದಿಲ್ಲ.
ಹಿಂದೆ ಮಕ್ಕಳಾಗಿಲ್ಲ ಅಂದ್ರೆ ಬರೀ ಮಹಿಳೆಯರನ್ನು ಮಾತ್ರ ದೋಷಿಸಲಾಗ್ತಾ ಇತ್ತು. ಆದರೀಗ ಪುರುಷರು ಇದನ್ನು ಒಪ್ಪಿಕೊಳ್ತಿದ್ದಾರೆ. ತಮ್ಮಿಂದ ಮಕ್ಕಳನ್ನು ನೀಡಲು ಸಾಧ್ಯವಿಲ್ಲ ಎಂಬ ಸತ್ಯವನ್ನು ಪುರುಷರಿಗೆ ಅರಗಿಸಿಕೊಳ್ಳುವುದು ಕಷ್ಟ. ಹಾಗೆ ಅವರು ಚಿಕಿತ್ಸೆಗೆ ಹಿಂದೇಟು ಹಾಕ್ತಾರೆ. ಮಹಿಳೆಯರ ಹಾಗೆ ಸಮಸ್ಯೆ ಕಾಡಿದ್ರೆ ಅದನ್ನು ಹೇಳಿಕೊಳ್ಳುವುದಿಲ್ಲ. ಹಾಗಾಗಿ ಅವರು ಅನೇಕ ಬಾರಿ ಒಂಟಿತನ ಅನುಭವಿಸ್ತಾರೆ. ಹಾಗೆ ವೀರ್ಯದ ವಿಷ್ಯವನ್ನು ಅವರು ಸ್ನೇಹಿತರ ಬಳಿಯೂ ಹೇಳಿಕೊಳ್ಳೋದಿಲ್ಲ. ಹಾಗೆ ಡೋನರ್ ಸ್ಪರ್ಮ್ ಪಡೆಯಲು ಹೆಚ್ಚಿನ ಪುರುಷರು ಇಚ್ಛಿಸುವುದಿಲ್ಲ. ಪುರುಷರು ಯಾವುದೇ ಕಾರಣಕ್ಕೂ ಇದನ್ನು ಪ್ರತ್ಯೇಕವಾಗಿ ಪರಿಗಣಿಸದೆ ಸಮಸ್ಯೆ ಎದುರಿಸಬೇಕು ಎನ್ನುತ್ತಾರೆ ತಜ್ಞರು.
ಹಣೆ ಮೇಲೆ ಮುತ್ತಿಡುವ ಮುನ್ನ ಅರ್ಥ ತಿಳಿದ್ಕೊಳ್ಳಿ