Health Tips: ಟೈಟ್ ಅಂಡರ್ ವೆರ್ ಹಾಕ್ತೀರಾ? ಬಂಜೆತನ ಕಾಡಬಹುದಂತೆ !
ಕಳಪೆ ಜೀವನಶೈಲಿ, ದೈಹಿಕ ಮತ್ತು ಮಾನಸಿಕ ಸಮಸ್ಯೆಗಳಿಂದಾಗಿ, ಇತ್ತೀಚಿನ ದಿನಗಳಲ್ಲಿ ಪುರುಷರ ಸ್ಪರ್ಮ್ ಸಂಖ್ಯೆ ಕಡಿಮೆಯಾಗುತ್ತಿದೆ, ಇದು ಬಂಜೆತನದ ಸಮಸ್ಯೆಯನ್ನು ಹೆಚ್ಚಿಸುತ್ತೆ. ಸಾಮಾನ್ಯವಾಗಿ ಜನರು ಇದನ್ನು ಡಯಟ್ ಮತ್ತು ಲೈಫ್ ಸ್ಟೈಲ್ ಜೊತೆ ಕನೆಕ್ಟ್ ಮಾಡ್ತಾರೆ. ಆದರೆ ಇಲ್ಲಿ ಕೆಲವು ವಿಷಯಗಳ ಬಗ್ಗೆ ಹೇಳುತ್ತಿದ್ದೇವೆ, ಇದರಿಂದ ಪುರುಷರು ಮಕ್ಕಳನ್ನು ಪಡೆಯುವ ಕನಸಿನಿಂದ ವಂಚಿತರಾಗ್ತಾರೆ. ಅದಕ್ಕಾಗಿ ನೀವು, ಈ ವಿಷಯಗಳನ್ನು ಅವಾಯ್ಡ್ ಮಾಡುವ ಮೂಲಕ ವೀರ್ಯಾಣುಗಳ ಸಂಖ್ಯೆಯನ್ನು ಬೇಗ ಹೆಚ್ಚಿಸಿಕೊಳ್ಳಬಹುದು...
ಕೇವಲ ಮಹಿಳೆಯರಲ್ಲಿ ಮಾತ್ರವಲ್ಲ, ಪುರುಷರಲ್ಲೂ ಬಂಜೆತನ(Infertility) ಸಮಸ್ಯೆ ಕಂಡುಬರುತ್ತದೆ. ಪುರುಷರಲ್ಲಿ ಕಡಿಮೆ ವೀರ್ಯಾಣುಗಳ ಸಂಖ್ಯೆಗೆ ಅನೇಕ ಕಾರಣಗಳಿರಬಹುದು. ಆದರೆ ಪುರುಷರ ಬಂಜೆತನವನ್ನು ಹೆಚ್ಚಿಸುವ ಮತ್ತು ವೀರ್ಯಾಣುಗಳ ಸಂಖ್ಯೆಯನ್ನು ಕಡಿಮೆ ಮಾಡುವ ಅಂತಹ ವಿಷಯಗಳನ್ನು ಬಗ್ಗೆ ತಿಳಿದುಕೊಳ್ಳೋಣ.
ಬಿಗಿಯಾದ ಒಳ ಉಡುಪುಗಳನ್ನು(Under wear) ಧರಿಸುವುದು
ಬಿಗಿಯಾದ ಒಳ ಉಡುಪುಗಳನ್ನು ಧರಿಸೋದರಿಂದ ಪುರುಷರಲ್ಲಿ ಕಡಿಮೆ ಸ್ಪರ್ಮ್ ಕೌಂಟ್ ಸಮಸ್ಯೆಗಳನ್ನು ಉಂಟುಮಾಡಬಹುದು. ಪುರುಷರ ಫರ್ಟಿಲಿಟಿ ಬಗ್ಗೆ ನಡೆಸಿದ ಸಂಶೋಧನೆಯ ಪ್ರಕಾರ, ಟೈಟ್ ಬಾಟಮ್ ವೆರ್ ಅಥವಾ ಬ್ರೀಫ್ ಗಳನ್ನು ಧರಿಸುವ ಪುರುಷರು ಕಡಿಮೆ ವೀರ್ಯಾಣುಗಳ ಸಂಖ್ಯೆಯನ್ನು ಹೊಂದಿರುತ್ತಾರೆ.
ಬ್ರೀಫ್ಸ್ ಬದಲಿಗೆ ಬಾಕ್ಸರ್ಗಳನ್ನು ಧರಿಸುವ ಜನರು 25% ರಷ್ಟು ಹೆಚ್ಚಿನ ವೀರ್ಯಾಣು ಸಂಖ್ಯೆಯನ್ನು(Sperm count) ಹೊಂದಿರೋದು ಕಂಡುಬಂದಿದೆ.ಆದ್ದರಿಂದ ಪುರುಷರು ಹೆಚ್ಚು ಟೈಟ್ ಒಳ ಉಡುಪು ಧರಿಸೋದನ್ನು ಸಾಧ್ಯವಾದಷ್ಟು ತಪ್ಪಿಸಿ. ನಿಮ್ಮ ಆರೋಗ್ಯಕ್ಕೆ ಉತ್ತಮವಾದ ಆರಾಮದಾಯಕ ಒಳಉಡುಪು ಧರಿಸಿ.
ಒಬೆಸಿಟಿ (Obesity)
ಹೌದು, ವೀರ್ಯಾಣುಗಳ ಸಂಖ್ಯೆಯನ್ನು ಕಡಿಮೆ ಮಾಡಲು ಬೊಜ್ಜು ಒಂದು ಪ್ರಮುಖ ಕಾರಣವಾಗಬಹುದು. ನಿಮ್ಮ ದೇಹದಲ್ಲಿ ಕೊಬ್ಬು ಸಂಗ್ರಹವಾದಾಗ, ಮಾಸ್ ಇಂಡೆಕ್ಸ್ ಹೆಚ್ಚಾಗುತ್ತೆ. ಈ ಕಾರಣದಿಂದಾಗಿ ಟೆಸ್ಟೋಸ್ಟೆರಾನ್ ಮಟ್ಟವು ಕಡಿಮೆಯಾಗುತ್ತೆ ಮತ್ತು ವೀರ್ಯಾಣುಗಳ ಸಂಖ್ಯೆಯೂ ಕಡಿಮೆಯಾಗಲು ಪ್ರಾರಂಭಿಸುತ್ತೆ.
ಬಾತ್ ಟಬ್ನಲ್ಲಿ (Nath tab)ಗಂಟೆಗಟ್ಟಲೆ ಸ್ನಾನ ಮಾಡೋದು
ನೀವು ಬಿಸಿನೀರಿನ ಟಬ್ ಅಥವಾ ಬಾತ್ ಟಬ್ನಲ್ಲಿ ಗಂಟೆಗಟ್ಟಲೆ ಸ್ನಾನ ಮಾಡುತ್ತಿದ್ದರೆ, ಹುಷಾರ್, ಯಾಕಂದ್ರೆ ನಿಯಮಿತವಾಗಿ ಬಿಸಿನೀರು ಅಥವಾ ಬಾತ್ ಟಬ್ನಲ್ಲಿ ಸ್ನಾನ ಮಾಡೋದರಿಂದ ವೀರ್ಯಾಣುಗಳ ಸಂಖ್ಯೆ ಕಡಿಮೆಯಾಗುತ್ತೆ. ಆದುದರಿಂದ ನಾರ್ಮಲ್ ಸ್ನಾನ ಮಾಡೋದು ಉತ್ತಮ ಎನ್ನಲಾಗಿದೆ.
ವೀರ್ಯವನ್ನು (Sperm) ತಯಾರಿಸುವ ಕೆಲಸವು ವೃಷಣಗಳಿಂದ ಮಾಡಲ್ಪಟ್ಟಿದೆ, ಇದು ದೇಹದ ಉಳಿದ ಭಾಗಗಳಿಗಿಂತ ತಂಪಾಗಿರುತ್ತೆ, ಹಾಗಾಗಿ ಅದು ಉತ್ತಮವಾಗಿ ಕಾರ್ಯನಿರ್ವಹಿಸುತ್ತೆ. ಆದರೆ ಪುರುಷರು ದೀರ್ಘಕಾಲದವರೆಗೆ ಬಿಸಿ ನೀರಿನಿಂದ ಸ್ನಾನ ಮಾಡಿದಾಗ, ಅದು ವೃಷಣಗಳು ಬಿಸಿಯಾಗಲು ಕಾರಣವಾಗುತ್ತೆ ಮತ್ತು ಸ್ಫರ್ಮ್ಸ್ ಸರಿಯಾಗಿ ಉತ್ಪಾದಿಸಲು ಸಾಧ್ಯವಾಗೋದಿಲ್ಲ.
ಅತಿಯಾದ ಮೆಡಿಸಿನ್ಸ್ (Medicines)
ಹೌದು, ನೀವು ಪೈನ್ ಕಿಲ್ಲರ್ಸ್, ಆಕ್ಸಿಕಾಪ್ಟ್ ಮತ್ತು ಫೆಂಟಾನಿಲ್ ನಂತಹ ಔಷಧಿಗಳನ್ನು ಅತಿಯಾಗಿ ಸೇವಿಸಿದರೆ, ಈ ಮೆಡಿಸಿನ್ಸ್ ಗಳು ಪುರುಷರಲ್ಲಿ ಫಲವತ್ತತೆಯ ಸಮಸ್ಯೆಗಳನ್ನು ಉಂಟುಮಾಡಬಹುದು. ಎಲ್ಲಾ ಸಮಸ್ಯೆಗಳಿಗೂ ಔಷಧಿಗಳ ಮೊರೆ ಹೋಗೋದನ್ನು ತಪ್ಪಿಸಿ. ಸಾಧ್ಯವಾದಷ್ಟು ನ್ಯಾಚುರಲ್ ಔಷಧಿಗಳನ್ನು ಸೇವಿಸಿ.
ಅತಿಯಾದ ಮೆಡಿಸಿನ್ ಸೇವನೆ ವೀರ್ಯಾಣುಗಳ ಸಂಖ್ಯೆಯನ್ನು ಸಹ ಕಡಿಮೆ ಮಾಡುತ್ತೆ. ಇಷ್ಟೇ ಅಲ್ಲ, ಸ್ನಾಯು ಬಲ ಮತ್ತು ಸಾಮರ್ಥ್ಯವನ್ನು ಹೆಚ್ಚಿಸಲು ಅನಾಬೊಲಿಕ್ ಸ್ಟೀರಾಯ್ಡ್ಗಳು ಸೇವಿಸೋದ್ರಿಂದ ವೃಷಣಗಳನ್ನು ಕುಗ್ಗಿಸಬಹುದು ಮತ್ತು ವೀರ್ಯಾಣು ಉತ್ಪಾದನೆಯನ್ನು ಕಡಿಮೆ ಮಾಡಬಹುದು.
ಎಕ್ಸ್-ರೇ(X ray)
ರೇಡಿಯೇಶನ್ ಅಥವಾ ಎಕ್ಸ್-ರೇಗಳಿಗೆ ಅತಿಯಾಗಿ ಒಡ್ಡಿಕೊಳ್ಳೋದು ವೀರ್ಯಾಣುಗಳ ಉತ್ಪಾದನೆಯನ್ನು ಕಡಿಮೆ ಮಾಡುತ್ತೆ. ವೀರ್ಯಾಣು ಉತ್ಪಾದನೆಯು ಸಾಮಾನ್ಯ ಸ್ಥಿತಿಗೆ ಮರಳಲು ಇದು ಹಲವಾರು ವರ್ಷಗಳನ್ನು ತೆಗೆದುಕೊಳ್ಳಬಹುದು.ಎಕ್ಸ್-ರೇಗಳ ತೀಕ್ಷ್ಣ ಕಿರಣಗಳು ವೀರ್ಯಾಣುಗಳ ಉತ್ಪಾದನೆಯನ್ನು ಶಾಶ್ವತವಾಗಿ ಕಡಿಮೆ ಮಾಡಬಲ್ಲವು.