ಹಣೆ ಮೇಲೆ ಮುತ್ತಿಡುವ ಮುನ್ನ ಅರ್ಥ ತಿಳಿದ್ಕೊಳ್ಳಿ
ಮುತ್ತು ಪ್ರೀತಿ ವ್ಯಕ್ತಪಡಿಸುವ ಒಂದು ಮಾರ್ಗ. ನಾನಾ ರೀತಿಯ ಮುತ್ತಿದೆ. ಹಾಗೆ ಮುತ್ತಿಡುವ ವ್ಯಕ್ತಿ ಮೇಲೆ ಮುತ್ತಿನ ಅರ್ಥ ನಿಂತಿದೆ. ಸಂದರ್ಭ, ಸಂಬಂಧಗಳು ಇಲ್ಲಿ ಅರ್ಥ ಬದಲಿಸುತ್ತವೆ.
ಪ್ರೀತಿ ಒಂದು ಅದ್ಭುತ ಅನುಭವ. ಪ್ರೀತಿ ಇಲ್ಲದೆ ಹೋದ್ರೆ ಕುಟುಂಬ, ಸಂಸಾರ, ಜಗತ್ತು ಇರಲು ಸಾಧ್ಯವಿಲ್ಲ. ಪ್ರೀತಿ ಬರೀ ಸಂಗಾತಿ ಜೊತೆ ಆಗ್ಬೇಕೆಂದೇನೂ ಇಲ್ಲ. ಮಕ್ಕಳ ಮೇಲೆ, ತಾಯಿ ತಂದೆಗಳ ಮೇಲೆ, ಸ್ನೇಹಿತರ ಮೇಲೆ ಹೀಗೆ ಪ್ರೀತಿಗೆ ನಾನಾ ಮುಖವಿದೆ. ಪ್ರೀತಿಯನ್ನು ವ್ಯಕ್ತಪಡಿಸಲು ಕೂಡ ನಾನಾ ಬಗೆಯಿದೆ. ಉಡಗೊರೆ ಮೂಲಕ, ಮಾತಿನ ಮೂಲಕ, ಅಕ್ಷರಗಳ ಮೂಲಕ, ಅಪ್ಪುಗೆ ಮೂಲಕ, ಮುತ್ತಿನ ಮೂಲಕ ಹೀಗೆ ಇಷ್ಟವಾಗುವ ವಿಧಾನದಲ್ಲಿ ಜನರು ತಮ್ಮ ಪ್ರೀತಿ ವ್ಯಕ್ತಪಡಿಸುತ್ತಾರೆ. ಮುತ್ತಿನ ವಿಷ್ಯ ಬಂದಾಗ ಅದ್ರಲ್ಲೂ ಭಾಗ ಮಾಡಬಹುದು. ಕೆನ್ನೆಗೆ, ತುಟಿಗೆ, ಕೈಗೆ, ಹಣೆಗೆ ಹೀಗೆ ಬೇರೆ ಬೇರೆ ಭಾಗಕ್ಕೆ ಮುತ್ತಿಟ್ಟು ಪ್ರೀತಿ ವ್ಯಕ್ತಪಡಿಸಬಹುದು. ಅನೇಕರು ಹಣೆಗೆ ಮುತ್ತಿಡುತ್ತಾರೆ. ಹಣೆಗೆ ಸಂಗಾತಿ ಮಾತ್ರ ಮುತ್ತಿಡಬೇಕಾಗಿಲ್ಲ. ಆಪ್ತರಾದವರು ಹಣೆಗೆ ಮುತ್ತಿಡುವ ಸ್ವಾತಂತ್ರ್ಯ ಪಡೆದಿದ್ದಾರೆ. ಮನಃಶಾಸ್ತ್ರದ ಪ್ರಕಾರ, ಹಣೆಯ ಮೇಲೆ ಮುತ್ತಿಡುವುದು ಯಾವ ಭಾವನೆಯನ್ನು ವ್ಯಕ್ತಪಡಿಸುತ್ತದೆ ಎಂಬುದನ್ನು ನಾವಿಂದು ಹೇಳ್ತೇವೆ.
ಮನೋವಿಜ್ಞಾನಕ್ಕೆ (Psychology) ಸಂಬಂಧಿಸಿದ ಅನೇಕ ವರದಿಗಳ ಪ್ರಕಾರ, ಹಣೆಗೆ ಮುತ್ತಿಡುವುದು ಹೆಚ್ಚು ಭಾವನಾತ್ಮಕವಾಗಿರುತ್ತದೆ. ಹಣೆ ಮೇಲೆ ನೀಡುವ ಚುಂಬನ ಅನೇಕ ಅರ್ಥಗಳನ್ನು ಹೊಂದಿದೆ.
ನಿಕಟ ಸಂಬಂಧ : ಹಣೆ (Forehead) ಯ ಮೇಲೆ ಮುತ್ತಿ (Kiss) ಡುವುದು ನಿಕಟ ಸಂಬಂಧದ ಆರಂಭವನ್ನು ಸೂಚಿಸುತ್ತದೆ. ನಿಕಟ ಸಂಬಂಧ ಹೊಂದಿರುವ ವ್ಯಕ್ತಿಗಳು ನಿಮ್ಮ ಹಣೆ ಮೇಲೆ ಮುತ್ತಿಡುತ್ತಾರೆ. ನಿಕಟ ಸಂಬಂಧ ಆಳವಾಗ್ತಿದ್ದಂತೆ ತುಟಿ ಮೇಲೆ ಮುತ್ತಿಡುವ ಮೊದಲು ಸಂಗಾತಿ ತಮ್ಮ ಪ್ರೀತಿ (Love) ಯನ್ನು ವ್ಯಕ್ತಪಡಿಸಲು ಹಣೆ ಮೇಲೆ ಮುತ್ತಿಡುತ್ತಾರೆ.
ಮಕ್ಕಳು ಮುದ್ದು ಅಂತ ಹೆಚ್ಚು ಮುತ್ತು ಕೊಡೋದು ಸರೀನಾ ?
ಒತ್ತಡ (Stress) ಕಡಿಮೆ ಮಾಡುತ್ತೆ ಹಣೆ ಮೇಲಿನ ಮುತ್ತು : ಒಬ್ಬ ವ್ಯಕ್ತಿ ನೋವಿನಲ್ಲಿದ್ದಾಗ ಆತನನ್ನು ತಬ್ಬಿಕೊಂಡು ಹಣೆ ಮೇಲೆ ಮುತ್ತಿಡುವುದನ್ನು ನೀವು ನೋಡಿರುತ್ತೀರಿ. ಹಣೆ ಮೇಲೆ ಮುತ್ತಿಟ್ಟಾಗ ಖುಷಿಯ ಕೆಮಿಕಲ್ ಬಿಡುಗಡೆಯಾಗುತ್ತದೆ. ಇದು ಮನಸ್ಸಿಗೆ ನೆಮ್ಮದಿ ನೀಡಿ, ಒತ್ತಡವನ್ನು ಕಡಿಮೆ ಮಾಡುತ್ತದೆ.
ಸಂತೋಷ, ಹೆಮ್ಮೆಯ ಸೂಚಕ : ತಂದೆ – ತಾಯಿ ಕೂಡ ಮಕ್ಕಳ ಹಣೆಯ ಮೇಲೆ ಮುತ್ತಿಡುತ್ತಾರೆ. ಮಕ್ಕಳು ಮನೆ ಬಿಟ್ಟು ದೂರ ಹೊರಟಿದ್ದರೆ ಅಥವಾ ತುಂಬಾ ದಿನಗಳ ನಂತ್ರ ಮನೆಗೆ ವಾಪಸ್ ಬಂದಿದ್ದರೆ ಪಾಲಕರು ಅವರ ಹಣೆ ಮೇಲೆ ಮುತ್ತಿಡುವುದು ಹೆಚ್ಚು. ಇದು ಒಂದು ರೀತಿ ಸಂತೋಷ ಸೂಚಕವಾಗಿದೆ. ಮಕ್ಕಳು ಹೆಮ್ಮೆ ಪಡುವಂತ ಕೆಲಸ ಮಾಡಿದ್ರೆ, ದೊಡ್ಡ ಸಾಧನೆ ಮಾಡಿದ್ರೆ ಅದ್ರ ಖುಷಿಯನ್ನು ಕೂಡ ಪಾಲಕರು ಹಣೆ ಮೇಲೆ ಮುತ್ತಿಟ್ಟು ವ್ಯಕ್ತಪಡಿಸುತ್ತಾರೆ. ಇದನ್ನು ಒಂದು ರೀತಿಯಲ್ಲಿ ಪಾಲಕರ ಆಶೀರ್ವಾದ ಎಂದೂ ನೀವು ಭಾವಿಸಬಹುದು.
ಪ್ರೀತಿ ವ್ಯಕ್ತಪಡಿಸುವ ದಾರಿ : ಸಂಗಾತಿ, ಪಾಲಕರನ್ನು ಹೊರತುಪಡಿಸಿ ನಿಮ್ಮ ಆಪ್ತರು ನಿಮ್ಮನ್ನು ಪ್ರೀತಿ ಮಾಡ್ತಿದ್ದರೆ ಅದನ್ನು ವ್ಯಕ್ತಪಡಿಸಲು ಅವರು ಹಣೆ ಮೇಲೆ ಮುತ್ತಿಡುತ್ತಾರೆ. ಇದು ಉತ್ತಮ ಭಾವನೆಯನ್ನುಂಟು ಮಾಡುತ್ತದೆ. ಇಬ್ಬರ ಮಧ್ಯೆ ಬಾಂಧವ್ಯ ಹೆಚ್ಚಿಸುತ್ತದೆ. ನಿಮ್ಮ ಮೇಲೆ ಹೆಚ್ಚು ಕಾಳಜಿವಹಿಸುವ ವ್ಯಕ್ತಿಗಳು ಹಣೆ ಮೇಲೆ ಮುತ್ತಿಡುವ ಸ್ವಾತಂತ್ರ್ಯ ಹೊಂದಿರುತ್ತಾರೆ. ನಿಮ್ಮ ಜೊತೆ ನಾವಿದ್ದೇವೆ, ನಿಮ್ಮ ಸಾಧನೆಗೆ ಹೆಮ್ಮೆ ಪಡುತ್ತೇವೆ ಎಂಬೆಲ್ಲ ಭಾವನೆಯನ್ನು ಹಣೆ ಮೇಲೆ ಮುತ್ತಿಟ್ಟು ಹೇಳಬಹುದಾಗಿದೆ.
ವಿಷ್ಣು ಮಂಚು ಜೊತೆ ಲಿಪ್‌ಲಾಕ್ ಮಾಡಿದ ಸನ್ನಿ ಲಿಯೋನ್; ಅಸಲಿ ಕಥೆ ಏನು?
ಲಿಪ್ ಗೆ ಬದಲಾಗಿ ಹಣೆ ಮೇಲೆ ಮುತ್ತಿಟ್ಟಾಗ : ನೀವು ಸಂಗಾತಿಗೆ ಲಿಪ್ ಕಿಸ್ ನೀಡಿದ್ದು ಅವರು ಅದಕ್ಕೆ ಪ್ರತಿಯಾಗಿ ಹಣೆ ಮೇಲೆ ಮುತ್ತಿಡುತ್ತಿದ್ದರೆ ಇದು ಒಳ್ಳೆಯದಲ್ಲ. ಪದೇ ಪದೇ ಇದು ನಡೆಯುತ್ತಿದ್ದರೆ ನೀವು ಎಚ್ಚೆತ್ತುಕೊಳ್ಳಬೇಕು. ಸಂಗಾತಿಗೆ ನಿಮ್ಮ ಮೇಲೆ ಆಸಕ್ತಿಯಲ್ಲ ಎಂಬುದನ್ನು ಇದು ತೋರಿಸುತ್ತದೆ. ಈ ಬಗ್ಗೆ ಸಂಗಾತಿ ಜೊತೆ ಮಾತನಾಡುವುದು ಸೂಕ್ತ.