ಇತ್ತೀಚಿನ ದಿನಗಳಲ್ಲಿ ಪ್ರೀತಿಗೆ ಬೆಲೆ ಇಲ್ಲದಂತಾಗಿದೆ. ಅನೇಕ ಬಾರಿ ನಮ್ಮವರನ್ನು ನಂಬಿ ಮೋಸ ಹೋಗ್ತೇವೆ. ಯುವಕನೊಬ್ಬ ಈಗ ನಂಬಿ ಪಾತಾಳಕ್ಕೆ ಬಿದ್ದಿದ್ದಾನೆ. ವಿವಾಹಿತ ಮಹಿಳೆ ಜೊತೆ ಸಂಬಂಧ ಬೆಳೆಸಿದ್ದಾನೆ. ಆದ್ರೆ ಅದ್ರ ನಂತ್ರ ಗೊತ್ತಾದ ಸತ್ಯ ದಂಗುಬಡಿಸಿದೆ. 

ಅನೇಕ ಬಾರಿ ಸಂಬಂಧ (Relationship) ಗಳು ಕುತ್ತಿಗೆಗೆ ಬಂದು ನಿಲ್ತವೆ. ನಮಗೆ ಮನಸ್ಸಿಲ್ಲವೆಂದ್ರೂ ನಾವು ಸಂಬಂಧ ಮುಂದುವರೆಸುವ ಅನಿವಾರ್ಯತೆಗೆ ಒಳಗಾಗ್ತೇವೆ. ಆದ್ರೆ ಉಸಿರುಗಟ್ಟಿಸುವ ಸಂಬಂಧದಲ್ಲಿ ಇರುವು ಬದಲು ಕಷ್ಟವಾದ್ರೂ ಅದರಿಂದ ಹೊರಗೆ ಬರುವುದು ಸೂಕ್ತ. ಸದ್ಯ ವ್ಯಕ್ತಿಯೊಬ್ಬ ಇದೇ ಸಮಸ್ಯೆಯಲ್ಲಿದ್ದಾನೆ. ಇಷ್ಟವಿಲ್ಲವೆಂದ್ರೂ ಮಹಿಳೆ (woman) ಯೊಬ್ಬಳು ಈತನ ಬೆನ್ನು ಹತ್ತಿದ್ದಾಳೆ. ಆಕೆಗೆ ಮದುವೆಯಾಗಿದೆ. ಮೂವರು ಮಕ್ಕಳಿದ್ದಾರೆ. ಅಷ್ಟೇ ಅಲ್ಲ ಪತಿ ಜೊತೆ ಮತ್ತಿಬ್ಬರು ಬಾಯ್ ಫ್ರೆಂಡ್ ಕೂಡ ಇದ್ದಾರೆ. ಮೂವರ ಜೊತೆ ಸಂಬಂಧ ಹೊಂದಿರುವ ಮಹಿಳೆ ಈಗ ಈತನನ್ನೂ ಬಿಡ್ತಿಲ್ಲ. ಸಾಕಪ್ಪ ಈಕೆ ಸಹವಾಸ ಎನ್ನುತ್ತಿರುವ ಹುಡುಗ, ಬಿಡುಗಡೆ ಹೇಗೆ ಎಂದು ತಜ್ಞ (experts) ರ ಸಲಹೆ ಕೇಳಿದ್ದಾನೆ. ಅಷ್ಟಕ್ಕೂ ಆತನ ಸಂಪೂರ್ಣ ಕಥೆ ಏನು ಅನ್ನೋದನ್ನು ನಾವು ಹೇಳ್ತೇವೆ.

ಆತ ಅವಿವಾಹಿತ ಯುವಕ. ಮಹಾರಾಷ್ಟ್ರದ ನಿವಾಸಿ. ಆತನ ಜೀವನ ಸರಳ ಹಾಗೂ ಸುಂದರವಾಗಿ ಸಾಗ್ತಾಯಿತ್ತು. ಆದ್ರೆ ಎರಡು ವರ್ಷಗಳಿಂದ ಜೀವನ ನರಕವಾಗಿದೆ. ಎರಡು ವರ್ಷಗಳ ಹಿಂದೆ ಮಹಿಳೆಯೊಬ್ಬಳು ಈತನ ಸಂಪರ್ಕಕ್ಕೆ ಬಂದಿದ್ದಾಳೆ. ಆಕೆಗೆ ಈಗಾಗಲೇ ಮದುವೆಯಾಗಿದೆ. ಮೂವರು ಮಕ್ಕಳಿದ್ದಾರೆ. ಆ ಮಹಿಳೆ ಈತನಿಗೆ ಮೊದಲೇ ಪರಿಚಯ. ಬಾಲ್ಯದ ಸ್ನೇಹಿತರು. ಇಬ್ಬರೂ ಹಿಂದೆ ಡೇಟ್ ಕೂಡ ಮಾಡಿದ್ದರಂತೆ. ಆದ್ರೆ ಕೆಲ ಕಾರಣಕ್ಕೆ ಇಬ್ಬರು ಬೇರೆಯಾಗಿದ್ದರಂತೆ. ಆ ನಂತ್ರ ಆಕೆಗೆ ಮದುವೆಯಾಗಿದೆ. ಹಾಗಾಗಿ ಅದ್ರ ಸುದ್ದಿಗೆ ಈತ ಹೋಗಿರಲಿಲ್ಲ. ತಾನಾಗಿಯೇ ಹುಡುಕಿಕೊಂಡು ಬಂದ ಮಹಿಳೆ ಗಂಟೆಗಟ್ಟಲೆ ಮಾತನಾಡ್ತಾಳೆ. ಆಕೆ ಜೊತೆ ಮಾತನಾಡುವುದು ಈತನಿಗೂ ಇಷ್ಟವಾಗ್ತಿತ್ತು. ಆದ್ರೆ ಒಂದು ವರ್ಷದ ಹಿಂದೆ ಮಹಿಳೆಯ ಇನ್ನೊಂದು ಸತ್ಯ ಗೊತ್ತಾಗಿದೆ. ಆಕೆಗೆ ಗಂಡನೊಬ್ಬನೇ ಅಲ್ಲ ಇಬ್ಬರು ಬಾಯ್ ಫ್ರೆಂಡ್ಸ್ ಇದ್ದಾರೆ. ಈತನ ಜೊತೆ ಬರೀ ಟೈಂ ಪಾಸ್ ಗೆ ಆಕೆ ಮಾತನಾಡ್ತಾಳೆ. ಬಾಯ್ ಫ್ರೆಂಡ್ಸ್ ಇರೋ ವಿಷ್ಯವನ್ನು ಆಕೆ ಎಂದೂ ಹೇಳಿರಲಿಲ್ಲವಂತೆ. ಈ ಸುದ್ದಿ ಗೊತ್ತಾಗ್ತಿದ್ದಂತೆ ಹುಡುಗ ಶಾಕ್ ಆಗಿದ್ದಾನೆ. ತನಗೂ ಈಕೆ ಮೋಸ ಮಾಡ್ತಾಳೆ ಎಂಬ ಕಾರಣಕ್ಕೆ ದೂರವಿರಲು ಶುರು ಮಾಡಿದ್ದಾನೆ.

RELATIONSHIP TIPS : ಕಲವೊಂದು ಲಕ್ಷಣಗಳು ಪ್ರೀತಿ ಅಭದ್ರತೆಯನ್ನು ತೋರಿಸತ್ತೆ, ಯಾವುದವು?

ಒಂದು ತಿಂಗಳು ಸುಮ್ಮನಿದ್ದ ಆಕೆ ಮತ್ತೆ ಕರೆ ಮಾಡಲು ಶುರು ಮಾಡಿದ್ದಾಳೆ. ತನ್ನೊಂದಿಗೆ ಸಂಬಂಧ ಬೆಳೆಸುವಂತೆ ಒತ್ತಾಯ ಮಾಡ್ತಿದ್ದಾಳೆ. ನಿನ್ನಷ್ಟು ಪ್ರೀತಿ ನೀಡೋರು ಯಾರೂ ಇಲ್ಲ ಎನ್ನುತ್ತಿದ್ದಾಳೆ. ಆದ್ರೆ ಆಕೆ ಮಾತು ಈತನಿಗೆ ಹಿಂಸೆಯಾಗ್ತಿದೆ. ಹೇಗಾದ್ರೂ ಆಕೆಯಿಂದ ತಪ್ಪಿಸಿಕೊಳ್ಳಬೇಕೆಂಬ ಪ್ರಯತ್ನ ಮುಂದುವರೆದಿದೆ. ಏನು ಮಾಡ್ಲಿ ಎಂದು ಆತ ತಜ್ಞರನ್ನು ಕೇಳಿದ್ದಾನೆ.

ತಜ್ಞರ ಸಲಹೆ : ಸಂಗಾತಿಗೆ ಮೋಸ ಮಾಡುವವರ ಸಂಖ್ಯೆ ಇತ್ತೀಚಿನ ದಿನಗಳಲ್ಲಿ ಹೆಚ್ಚಾಗ್ತಿದೆ. ಇದಕ್ಕೆ ಅನೇಕ ಕಾರಣಗಳಿರುತ್ತವೆ. ಕೆಲವರು ಸಂಗಾತಿಯ ಪ್ರೀತಿಯಿಂದ ವಂಚಿತರಾಗಿ ಬೇರೆ ಮಾರ್ಗ ಹಿಡಿಯುತ್ತಾರೆ. ಮತ್ತೆ ಕೆಲವರ ಸ್ವಭಾವವೇ ಹಾಗಿರುತ್ತದೆ. ಪದೇ ಪದೇ ಸಂಗಾತಿ ಬದಲಾಯಿಸುವ ಗುಣ ಅವರಿಗೆ ಅಂಟಿಕೊಂಡಿರುತ್ತದೆ. ಇದ್ರಲ್ಲಿ ನಿಮ್ಮ ಸಂಗಾತಿ ಯಾವುದಕ್ಕೆ ಸೇರಿದವರು ಎಂಬುದನ್ನು ನೀವೇ ನೋಡಿ. ಇಬ್ಬರು ಬಾಯ್ ಫ್ರೆಂಡ್ಸ್ ಇರೋದನ್ನು ಮುಚ್ಚಿಟ್ಟು ಆಕೆ ನಿಮಗೆ ಮೋಸ ಮಾಡ್ತಿದ್ದಾಳೆ. ನೀವಿನ್ನು ಅವಿವಾಹಿತರು. ಮುಂದೆ ಸುಂದರ ಸಂಸಾರ ಕಟ್ಟಿಕೊಳ್ಳಬಹುದು. ಹಾಗಾಗಿ ಆಕೆಯಿಂದ ದೂರವಿರುವುದು ಒಳ್ಳೆಯದು. ಆಕೆ ನಿಮ್ಮನ್ನು ಸಂಪರ್ಕಿಸುವ ಎಲ್ಲ ಮಾರ್ಗವನ್ನು ಕಟ್ ಮಾಡಿ ಎನ್ನುತ್ತಾರೆ ತಜ್ಞರು. 

ಗಂಡಸು ಯಾಕೆ ಸೆಕ್ಸ್ ಬಯಸುತ್ತಾನೆ? ಸದ್ಗುರು ಹೇಳ್ತಾರೆ ಕೇಳಿ!

ಆಕೆ ಪತಿ ಜೊತೆ ಇನ್ನಿಬ್ಬರು ಬಾಯ್ ಫ್ರೆಂಡ್ ಹೊಂದಿದ್ದಾಳೆ ಹೌದು. ಆದ್ರೆ ಅದು ಆಕೆಯ ಆಯ್ಕೆ. ಆಕೆ ಏನು ಬೇಕಾದ್ರೂ ಮಾಡ್ಬಹುದು. ಅದನ್ನು ಕೇಳುವ ಹಕ್ಕು ನಿಮಗಿಲ್ಲ. ಅದು ಆಕೆಯ ಜೀವನ. ಆದ್ರೆ ಅದಕ್ಕಾಗಿ ನಿಮ್ಮ ಬಾಳು ಹಾಳು ಮಾಡಿಕೊಳ್ಳಬೇಡಿ. ನಿಮಗೆ ಮುಂದೆ ಅವಕಾಶವಿದೆ. ನೀವು ಅಲ್ಪಕಾಲಿಕ ಸಂಬಂಧದಲ್ಲಿ ಸಿಕ್ಕಿ ಒದ್ದಾಡಬೇಡಿ. ಆದಷ್ಟು ಬೇಗ ಸಂಬಂಧದಿಂದ ಹೊರಗೆ ಬನ್ನಿ. ಆಕೆ ಪಟ್ಟು ಬಿಡದೆ ಹೋದ್ರೆ ಪತಿಗೆ ಹೇಳ್ತೇನೆಂದು ಬೆದರಿಸಿ. ನಿಮ್ಮ ಈ ಬೆದರಿಕೆ ಯಾರ ಜೀವಕ್ಕೂ ಹಾನಿ ಮಾಡ್ಬಾರದು ಎಂಬುದು ನೆನಪಿರಲಿ ಎಂದಿದ್ದಾರೆ ತಜ್ಞರು.