ಟಿಂಡರ್ ಆ್ಯಪ್‌ನಲ್ಲಿ ಪ್ರತಿ ದಿನ 500 ಪ್ರೊಫೈಲ್ ಸ್ವೈಪ್ ಮಾಡ್ತಿದ್ದವನಿಗೆ ಅನಿವಾರ್ಯವಾಯ್ತು ಥೆರಪಿ!
ಸಾಮಾಜಿಕ ಜಾಲತಾಣ, ಡೇಟಿಂಗ್ ಅಪ್ಲಿಕೇಷನ್, ಗೇಮ್ ಆ ಕ್ಷಣ ಸಂತೋಷ ನೀಡಿದ್ರೂ ನಮ್ಮ ಅರಿವಿಲ್ಲದೆ ನಮ್ಮ ಆರೋಗ್ಯ ಹಾಳು ಮಾಡ್ತಿದೆ. ಗಂಟೆಗಟ್ಟಲೆ ಒಂದೇ ಕಡೆ ಕುಳಿತು ಮೊಬೈಲ್ ನೋಡುವ ಜನರು ದೈಹಿಕವಾಗಿ ಮಾತ್ರವಲ್ಲ ಮಾನಸಿಕ ರೋಗಕ್ಕೆ ಬಲಿಯಾಗ್ತಾರೆ.
ಮೊಬೈಲ್ ಹೊಸದಾಗಿ ಬಂದ ಸಮಯದಲ್ಲಿ ಜನರು ಅದನ್ನು ಕಲಿಯುವ ಆತುರದಲ್ಲಿದ್ದರು. ಆದ್ರೀಗ ಮೊಬೈಲ್ ಬಳಕೆ ಬಗ್ಗೆ ಜನರಿಗೆ ತಿಳಿಸುವ ಅಗತ್ಯವಿಲ್ಲ. ಇಡೀ ದಿನ ಮೊಬೈಲ್ ಬಳಸುವ ಜನರು ಸಾಮಾಜಿಕ ಜಾಲತಾಣಗಳನ್ನ ನಿರಂತರ ನೋಡ್ತಿದ್ದಾರೆ. ಬರೀ ಸಾಮಾಜಿಕ ಜಾಲತಾಣ ಮಾತ್ರವಲ್ಲ ಯುವಜನತೆ ಡೇಟಿಂಗ್ ಅಪ್ಲಿಕೇಷನ್ ಗಳಿಗೆ ಅತಿ ಹೆಚ್ಚಿನ ಸಮಯ ಮೀಸಲಿಡುತ್ತಿದ್ದಾರೆ. ಡೇಟಿಂಗ್ ಅಪ್ಲಿಕೇಷನ್ ನಲ್ಲಿ ಖಾತೆ ತೆರೆದು ಅದ್ರಲ್ಲಿ ಮ್ಯಾಚಿಂಗ್ ಆಗುವ ಸಂಗಾತಿ ಜೊತೆ ಡೇಟ್ ಗೆ ಹೋಗೋದು ಈಗ ಮಾಮೂಲಿ ಆಗಿದೆ. ಡೇಟಿಂಗ್ ಅಪ್ಲಿಕೇಷನ್ ನಲ್ಲಿ ಟಿಂಡರ್ ಹೆಚ್ಚು ಪ್ರಸಿದ್ಧಿ ಪಡೆದಿದೆ. ಪ್ರಪಂಚದಾದ್ಯಂತ ಟಿಂಡರ್ ಅಪ್ಲಿಕೇಷನ್ ಬಳಸುವವರ ಸಂಖ್ಯೆ ಸಾಕಷ್ಟಿದೆ.
ಸಾಮಾಜಿಕ ಜಾಲತಾಣ (Social Networks ) ಗಳು, ಮೊಬೈಲ್ ಗೇಮ್ ಗಳು ಮಕ್ಕಳನ್ನು, ಯುವಜನತೆಯನ್ನು ಹಾಳು ಮಾಡ್ತಿದೆ. ಇದೊಂದು ಚಟವಾಗಿ ಮಾರ್ಪಡುತ್ತಿದ್ದೆ. ಅನೇಕ ಮಕ್ಕಳು ರಾತ್ರಿ ನಿದ್ದೆಗಣ್ಣಿನಲ್ಲಿ ಮೊಬೈಲ್ ಕೇಳುವಷ್ಟು ಚಟಕ್ಕೆ ಬಲಿಯಾಗಿದ್ದಾರೆ. ಇದು ಮಾನಸಿಕ ಹಾಗೂ ದೈಹಿಕ ಆರೋಗ್ಯ (Health) ದ ಮೇಲೆ ಪರಿಣಾಮ ಬೀರುತ್ತದೆ. ಬರೀ ಸಾಮಾಜಿಕ ಜಾಲತಾಣ, ಗೇಮ್ ಮಾತ್ರವಲ್ಲ ಡೇಟಿಂಗ್ ಅಪ್ಲಿಕೇಷನ್ (Dating App) ಕೂಡ ಚಟವಾಗಿ ಕಾಡುತ್ತೆ ಎಂಬುದಕ್ಕೆ ಈಗೊಂದು ಸಾಕ್ಷ್ಯ ಸಿಕ್ಕಿದೆ.
ವಯಸ್ಕರಾಗುವ ಮುನ್ನ ಪೋರ್ನ್ ನೋಡುವ ಗೀಳು ಬೆಳೆಸಿಕೊಂಡರೆ ಸೆಕ್ಸ್ ಲೈಫ್‌ಗೆ ಅಪಾಯ!
ಬ್ರಿಟನ್ ನಿವಾಸಿ, ಟಿಂಡರ್ ನಲ್ಲಿ ಖಾತೆ ತೆರೆದಿರುವ ವ್ಯಕ್ತಿಯೊಬ್ಬ ಟಿಂಡರ್ ಅಪ್ಲಿಕೇಷನ್ ಹೇಗೆ ಚಟವಾಯ್ತು ಎಂಬುದನ್ನು ಹೇಳಿದ್ದಾನೆ. ಆತ ಯಾವುದೇ ಹುಡುಗಿ ಜೊತೆ ಡೇಟ್ ಮಾಡಲು ಟಿಂಡರ್ ನಲ್ಲಿ ಖಾತೆ ತೆರೆದಿರಲಿಲ್ಲ. ಆದ್ರೆ ಟಿಂಡರ್ ನಲ್ಲಿ ಪ್ರತಿ ದಿನ ಎಷ್ಟು ಹುಡುಗಿಯರು ತನ್ನ ಖಾತೆ ನೋಡ್ತಾರೆ ಎಂಬುದನ್ನು ಚೆಕ್ ಮಾಡೋದು ಆತನ ಚಟವಾಗಿತ್ತು. ಪ್ರತಿ ದಿನ 500 ಟಿಂಡರ್ ಪ್ರೊಫೈಲ್‌ಗಳನ್ನು ಸ್ವೈಪ್ ಮಾಡುತ್ತಿದ್ದೆ ಎಂದು ಆತ ಹೇಳಿದ್ದಾನೆ. ತಾನು ಇಷ್ಟಪಟ್ಟ ಹಾಗೂ ತನಗೆ ಆಕರ್ಷಣೆಯಾಗಿ ಕಾಣುವ ಹುಡುಗಿಯರ ಪ್ರೊಫೈಲ್ ಮ್ಯಾಚಿಂಗ್ ಆದ್ರೆ ಈತನಿಗೆ ಎಲ್ಲಿಲ್ಲದ ಖುಷಿ ಆಗ್ತಿತ್ತು. ಆದ್ರೆ ಇದ್ಯಾವ ಸಂಬಂಧವೂ ಆತನಿಗೆ ಹೊಂದಾಣಿಕೆಯಾಗುತ್ತೆ ಎನ್ನಿಸುತ್ತಿರಲಿಲ್ಲ. ಯಾವುದೇ ಮಹಿಳೆ ಜೊತೆ ಸಂಬಂಧ ಬೆಳೆಸುವ ಅಥವಾ ಭೇಟಿ ಮಾಡುವ ಉದ್ದೇಶವನ್ನು ಈತ ಹೊಂದಿರಲಿಲ್ಲ.
ಈ ವ್ಯಕ್ತಿ ಬರೀ ಟಿಂಡರ್ ನಲ್ಲಿ ಮಾತ್ರವಲ್ಲ ಹಿಂಜ್ ಮತ್ತು ಬಂಬಲ್‌ನಲ್ಲಿ ಖಾತೆ ತೆರೆದಿದ್ದ. ಪ್ರತಿ ದಿನ ಪ್ರೊಫೈಲ್ ಸ್ವೈಪ್ ಮಾಡೋದು ಈತನ ಕೆಲಸವಾಗಿತ್ತು. ಆತ ಎಷ್ಟು ಟಿಂಡರ್ ನಲ್ಲಿ ಮುಳುಗಿ ಹೋಗಿದ್ದ ಅಂದ್ರೆ ಪ್ರಪಂಚದಲ್ಲಿ ನಡೆಯುವ ಯಾವುದೇ ವಿಷ್ಯದ ಬಗ್ಗೆ ಆತನಿಗೆ ಅರಿವಿರುತ್ತಿರಲಿಲ್ಲ. ಒಂದೇ ಬಾರಿ ಹತ್ತು ಮಹಿಳೆಯರಿಗೆ ಸಂದೇಶ ಕಳುಹಿಸುತ್ತಿದ್ದ ವ್ಯಕ್ತಿ, ಅವರಿಂದ ಬರುವ ಪ್ರತಿಕ್ರಿಯೆಗೆ ತಿಂಗಳುಗಟ್ಟಲೆ ಕಾಯ್ತಿದ್ದ.
ವಸ್ತುಗಳನ್ನು ಒಂದು ಕಡೆ ಇಟ್ಟು ಮರೆತು ಬಿಡ್ತೀರಾ? ಇದಕ್ಕೆ ಕಾರಣ ಏನು ಗೊತ್ತಾ?
ಟಿಂಡರ್ ಅಪ್ಲಿಕೇಷನ್ ಮೂಲಕವೇ ಆತನಿಗೆ ಮಹಿಳೆಯೊಬ್ಬಳ ಪರಿಚಯವಾಗಿತ್ತು. ಇಬ್ಬರು ಸಂಬಂಧದಲ್ಲಿದ್ದರು. ಆದ್ರೆ ಆತನಿಗೆ ಇದ್ರಿಂದ ನೆಮ್ಮದಿ ಸಿಗ್ತಿರಲಿಲ್ಲ. ಹಾಗಾಗಿ ಮತ್ತೆ ಟಿಂಡರ್ ಅಪ್ಲಿಕೇಷನ್ ನಲ್ಲಿ ಮ್ಯಾಚಿಂಗ್ (Matching) ಹುಡುಕಲು ಶುರು ಮಾಡಿದ್ದ. ಇದ್ರಿಂದ ಪ್ರೀತಿ ಸಂಬಂಧ (Relatinship) ಮುರಿದುಹೋಗಿತ್ತು. ಕೆಲ ದಿನಗಳ ಹಿಂದೆ ಏನೋ ಸರಿ ಇಲ್ಲ ಎಂಬುದು ಈತನ ಅರಿವಿಗೆ ಬಂದಿದೆ. ಥೆರಪಿ ಪಡೆಯಲು ನಿರ್ಧರಿಸಿದ್ದಾನೆ. ಥೆರಪಿಗಾಗಿ ವೈದ್ಯರನ್ನು ಸಂಪರ್ಕಿಸಿದ ವೇಳೆ ತಾನು ಖಿನ್ನತೆಗೆ (Depression) ಒಳಗಾಗಿದ್ದೇನೆ ಎಂಬುದು ಆತನಿಗೆ ಗೊತ್ತಾಗಿದೆ. ಆಂತರಿಕ ವ್ಯಕ್ತಿತ್ವ ಅಸ್ವಸ್ಥತೆ (Borderline Personality Disorder) ಸಮಸ್ಯೆ ತನ್ನನ್ನು ಕಾಡ್ತಿದೆ ಎಂಬುದು ತಿಳಿದಿದೆ. ಈಗ ತನ್ನನ್ನು ತಾನು ಸುಧಾರಿಸಿಕೊಂಡಿರುವ ವ್ಯಕ್ತಿ, ಟಿಂಡರ್ ಅಪ್ಲಿಕೇಷನ್ ಬಳಕೆಯನ್ನು ಸಂಪೂರ್ಣ ತೊರೆದಿದ್ದಾನೆ.