ವಸ್ತುಗಳನ್ನು ಒಂದು ಕಡೆ ಇಟ್ಟು ಮರೆತು ಬಿಡ್ತೀರಾ? ಇದಕ್ಕೆ ಕಾರಣ ಏನು ಗೊತ್ತಾ?
ಸಣ್ಣ ಪುಟ್ಟ ವಸ್ತುಗಳನ್ನು ಇಟ್ಡು ಮರೆತು ಹೋಗಬಿಡ್ತೀರಾ? ಇದಕ್ಕೆ ಕಾರಣ ಏನು ಗೊತ್ತಾ? ಇವುಗಳ ಬಗ್ಗೆ ತಿಳಿಯಲು ಈ ಲೇಖನ ಸಂಪೂರ್ಣವಾಗಿ ಓದಿ.
ಇತ್ತೀಚಿನ ದಿನಗಳಲ್ಲಿ ಹೆಚ್ಚಿನ ಜನರು ಅನುಭವಿಸುತ್ತಿರುವ ಒಂದು ಸಮಸ್ಯೆ ಅಂದ್ರೆ ಅದು ನೆನಪಿನ ಶಕ್ತಿಯ(memory power) ಸಮಸ್ಯೆ. ಜನರು ಸಣ್ಣ ಪುಟ್ಟ ವಸ್ತುಗಳನ್ನು ಎಲ್ಲೋ ಇಟ್ಡು ಮರೆತು ಬಿಡುತ್ತಾರೆ. ೫ ನಿಮಿಷದ ಹಿಂದೆ ಏನು ಯೋಚಿಸುತ್ತಿದ್ದೆ ಅನ್ನೋದನ್ನು ಮರೆತು ಬಿಡುತ್ತಾರೆ
ಜನರು ತಾವೆ ಇಟ್ಟ ವಸ್ತುಗಳನ್ನು ಏಕೆ ಮರೆಯುತ್ತಾರೆ? ಇಲ್ಲಿದೆ ನೋಡಿ ಅದಕ್ಕೆ ಕಾರಣಗಳು…
ಹೆಚ್ಚುತ್ತಿರುವ ವಯಸ್ಸು ಇದಕ್ಕೆ ಕಾರಣವಾಗಬಹುದು
ಕಳೆದ ಕೆಲವು ವರ್ಷಗಳಲ್ಲಿ, ವಿಜ್ಞಾನಿಗಳು ನೆನಪಿನ ಶಕ್ತಿಯ ಬಗ್ಗೆ ಸಾಕಷ್ಟು ಹೊಸ ವಿಷಯಗಳನ್ನು ಪರಿಚಯಿಸಿದ್ದಾರೆ ಮತ್ತು ಕೆಲವು ನೆನಪಿನ ಶಕ್ತಿಯ ಸಮಸ್ಯೆಗಳು (memory loss problem) ಏಕೆ ಗಂಭೀರವಾಗಿವೆ ಎಂಬುದನ್ನು ಸಹ ತಿಳಿಸಿದ್ದಾರೆ ತಜ್ಞರು. ವಯಸ್ಸಾದಂತೆ, ಮೆದುಳು ಸೇರಿದಂತೆ ದೇಹದಾದ್ಯಂತ ಬದಲಾವಣೆಗಳು ಉಂಟಾಗುತ್ತೆ. ಇದರಿಂದಾಗಿ, ಹೊಸ ವಿಷಯಗಳನ್ನು ಕಲಿಯಲು ಹೆಚ್ಚು ಸಮಯ ತೆಗೆದುಕೊಳ್ಳುತ್ತದೆ. ಇದರಿಂದಾಗಿ ನೀವೇ ಇಟ್ಟ ವಸ್ತುಗಳನ್ನು ನೀವು ಮರೆಯಬಹುದು.
ಮೊದಲಿನಂತೆ ನೆನಪಿಟ್ಟುಕೊಳ್ಳಲು ಸಾಧ್ಯವಿಲ್ಲ
ನೀವು ಮೊದಲಿನಂತೆ ಮಾಹಿತಿಯನ್ನು ನೆನಪಿಟ್ಟುಕೊಳ್ಳಲು ಸಾಧ್ಯವಿಲ್ಲ, ಯಾಕೆಂದರೆ ವಯಸ್ಸಾದಂತೆ ನನಪಿನ ಶಕ್ತಿ ಕುಂದುತ್ತದೆ. ಜ್ಞಾಪಕ ಶಕ್ತಿ ನಷ್ಟವು ಸಾಮಾನ್ಯವಾಗಿ ವಯಸ್ಸಾದ ಸಂಕೇತವಾಗಿರಬಹುದು. ಆದರೆ ಹೆಚ್ಚುತ್ತಿರುವ ಮರೆಗುಳಿತನವು ನಿಮ್ಮನ್ನು ಚಿಂತೆಗೀಡು ಮಾಡಲು ಪ್ರಾರಂಭಿಸಿದರೆ, ನಿಮ್ಮ ವೈದ್ಯರನ್ನು ಸಂಪರ್ಕಿಸುವುದು ಒಳ್ಳೆಯದು. ಯಾವುದೇ ವೈದ್ಯಕೀಯ ಸಮಸ್ಯೆಗಳು (medical problem) ಇದ್ದರೆ, ತಕ್ಷಣ ಚಿಕಿತ್ಸೆ ಪಡೆಯಿರಿ.
ಜೀವನಶೈಲಿ ಸರಿಯಾಗಿರದೇ ಇರೋದು
ನಿಮ್ಮ ವಯಸ್ಸು ಏನೇ ಇರಲಿ, ವಯಸ್ಸು ಮಾತ್ರವಲ್ಲದೇ ನಿಮ್ಮ ಜೀವನ ಶೈಲಿ ಸಹ ಮರೆವಿನ ಸಮಸ್ಯೆಗೆ ಕಾರಣವಾಗಬಹುದು. ಮರೆಗುಳಿತನವು ಒತ್ತಡ (Stress), ಖಿನ್ನತೆ (Depression), ನಿದ್ರೆಯ ಕೊರತೆ (Sleeplessness) ಅಥವಾ ಥೈರಾಯ್ಡ್ (Thyroid) ಸಮಸ್ಯೆಗಳಿಂದ ಉಂಟಾಗಬಹುದು. ಇದಲ್ಲದೇ ಕೆಲವು ಔಷಧಿಗಳ ಅಡ್ಡಪರಿಣಾಮಗಳು, ಅನಾರೋಗ್ಯಕರ ಆಹಾರ (Unhealthy Food) ಅಥವಾ ನಿಮ್ಮ ದೇಹದಲ್ಲಿ ಸಾಕಷ್ಟು ದ್ರವವಿಲ್ಲದಿರುವುದು (dehydration) ಈ ಕಾರಣಗಳಿಂದಲೂ ನೆನಪಿನ ಶಕ್ತಿಯ ಸಮಸ್ಯೆಗಳು ಕಾಣಿಸಿಕೊಳ್ಳುತ್ತವೆ. ಇನ್ನು ಕೆಲವರಲ್ಲಿ ಬುದ್ಧಿಮಾಂದ್ಯತೆ ಸಮಸ್ಯೆ ಉಂಟಾಗಿ ಇಟ್ಟವಸ್ತುಗಳನ್ನು ಮರೆತು ಬಿಡುತ್ತಾರೆ.
ಅಲ್ಝೈಮರ್
ಅಲ್ಝೈಮರ್ (Alzamaire) ಕಾಯಿಲೆಯಲ್ಲಿ, ಸ್ಮರಣೆ ನಷ್ಟವು ನಿಧಾನವಾಗಿ ಪ್ರಾರಂಭವಾಗುತ್ತದೆ ಮತ್ತು ಹಲವು ಸಮಯದ ನಂತರ ಸಮಸ್ಯೆ ಹದಗೆಡುತ್ತದೆ. ಅಲ್ಝೈಮರ್ ಕಾಯಿಲೆಯಿಂದ ಬಳಲುತ್ತಿರುವ ಜನರು ಸ್ಪಷ್ಟವಾಗಿ ಯೋಚಿಸಲು ತೊಂದರೆ ಅನುಭವಿಸುತ್ತಾರೆ. ಶಾಪಿಂಗ್, ಡ್ರೈವಿಂಗ್, ಅಡುಗೆ ಅಥವಾ ದೈನಂದಿನ ಕಾರ್ಯಗಳನ್ನು ನಿರ್ವಹಿಸಲು ಅವರಿಗೆ ಕಷ್ಟವಾಗಬಹುದು. ಆರಂಭಿಕ ಹಂತದಲ್ಲಿ ಸಮಸ್ಯೆಗೆ ಚಿಕಿತ್ಸೆ ನೀಡಬಹುದು. ಆದರೆ ಸಮಸ್ಯೆ ಹೆಚ್ಚಾದರೆ ಆಸ್ಪತ್ರೆಯೇ ಗತಿ.
ವಸ್ಕ್ಯುಲರ್ ಡಿಮೆಂಶಿಯಾ
ನಾಳೀಯ ಬುದ್ಧಿಮಾಂದ್ಯತೆಯು ಮೆಮೊರಿ-ಸಂಬಂಧಿತ ಸಮಸ್ಯೆಗಳಿಗೆ ಪ್ರಮುಖ ಕಾರಣವಾಗಿದೆ. ಆದರೆ ಅಲ್ಝೈಮರ್ನ ಕಾಯಿಲೆಗಿಂತ ಭಿನ್ನವಾಗಿ, ವಸ್ಕ್ಯುಲರ್ ಡಿಮೆಂಶಿಯಾ ರೋಗಲಕ್ಷಣಗಳು ಇದ್ದಕ್ಕಿದ್ದಂತೆ ಕಾಣಿಸಿಕೊಳ್ಳಬಹುದು. ಸಣ್ಣ ಪಾರ್ಶ್ವವಾಯು ಅಥವಾ ಮೆದುಳಿಗೆ ರಕ್ತ ಪೂರೈಕೆಯಲ್ಲಿನ ಬದಲಾವಣೆಗಳಿಂದ ಮೆಮೊರಿ ಲಾಸ್ ಉಂಟಾಗುತ್ತದೆ.
ಜ್ಞಾಪಕ ಶಕ್ತಿಯನ್ನು ಹೆಚ್ಚಿಸಲು ಏನು ಮಾಡಬೇಕು?
ಒತ್ತಡ ನಿರ್ವಹಣೆ ಮುಖ್ಯ (Stress Management)
ಒತ್ತಡ, ಖಿನ್ನತೆಯಂತಹ ಪರಿಸ್ಥಿತಿಗಳು ಸ್ಮರಣೆ ನಷ್ಟಕ್ಕೆ ದೊಡ್ಡ ಕಾರಣಗಳಲ್ಲಿ ಒಂದಾಗಿದೆ. ಅಂತಹ ಪರಿಸ್ಥಿತಿಯಲ್ಲಿ, ಒತ್ತಡ, ಖಿನ್ನತೆಯನ್ನು ನಿಯಂತ್ರಿಸುವತ್ತ ಗಮನ ಹರಿಸುವುದು ಬಹಳ ಮುಖ್ಯ. ಯೋಗ, ಧ್ಯಾನ ಮತ್ತು ಮೆಮೊರಿ ಗೇಮ್ ನಂತಹ ಚಟುವಟಿಕೆಗಳಲ್ಲಿ ಭಾಗವಹಿಸಿ. ಒತ್ತಡದ ಸಂದರ್ಭಗಳಲ್ಲಿ ಇವೆಲ್ಲವೂ ತುಂಬಾ ಪರಿಣಾಮಕಾರಿ ಮತ್ತು ನಿಮ್ಮ ಮಾನಸಿಕ ಆರೋಗ್ಯವನ್ನು ಸಮತೋಲನಗೊಳಿಸುತ್ತದೆ, ಇದರಿಂದ ನೆನಪಿನ ಸಮಸ್ಯೆಗಳು ನಿಮ್ಮನ್ನು ಕಾಡುವುದಿಲ್ಲ.
ಮಾನಸಿಕವಾಗಿ ಸಕ್ರಿಯವಾಗಿರಲು ಪ್ರಯತ್ನಿಸಿ
ಮಾನಸಿಕ ಆರೋಗ್ಯವನ್ನು (mental health) ಕಾಪಾಡಿಕೊಳ್ಳಲು ಮತ್ತು ಜ್ಞಾಪಕ ಶಕ್ತಿಯನ್ನು ಹೆಚ್ಚಿಸಲು ನಿಮ್ಮನ್ನು ಮಾನಸಿಕವಾಗಿ ಸಕ್ರಿಯವಾಗಿಡಲು ಪ್ರಯತ್ನಿಸಿ. ಕ್ರಾಸ್ ವರ್ಡ್ ಗಳು, ಒಗಟುಗಳು, ಚೆಸ್ ಮುಂತಾದ ಮೆದುಳಿನ ಸಕ್ರಿಯ ಆಟಗಳ ಸಹಾಯವನ್ನು ತೆಗೆದುಕೊಳ್ಳಿ. ಇದಲ್ಲದೆ, ನಿಮ್ಮನ್ನು ಮಾನಸಿಕವಾಗಿ ಸಕ್ರಿಯವಾಗಿಡಲು, ಸಂಗೀತ ವಾದ್ಯಗಳನ್ನು ನುಡಿಸಲು, ಹಾಡುಗಳನ್ನು ಹಾಡಲು ಮತ್ತು ಹಾಡುಗಳನ್ನು ಕೇಳಲು ಆರಂಭಿಸಿ. ಇವೆಲ್ಲವೂ ಮಾನಸಿಕವಾಗಿ ಸಕ್ರಿಯವಾಗಿರಲು ನಿಮಗೆ ಸಹಾಯ ಮಾಡುತ್ತದೆ.
ಸೋಶಿಯಲ್ ಆಗಿರಲು ಪ್ರಯತ್ನಿಸಿ
ಜನರನ್ನು ಭೇಟಿ ಮಾಡಿ, ಸ್ನೇಹಿತರನ್ನು ಮಾಡಿಕೊಳ್ಳಿ ಮತ್ತು ನಿಮ್ಮ ಕುಟುಂಬದೊಂದಿಗೆ ಸಮಯ ಕಳೆಯಿರಿ. ಸೋಶಿಯಲ್ ಆಗೋದರಿಂದ ನಿಮ್ಮ ಮಾನಸಿಕ ಆರೋಗ್ಯವನ್ನು ಸಮತೋಲನದಲ್ಲಿಡಲು ಸಹಾಯವಾಗುತ್ತದೆ ಮತ್ತು ಜ್ಞಾಪಕ ಶಕ್ತಿಯ ಸಮಸ್ಯೆಗಳು ಸಹ ಇರುವುದಿಲ್ಲ. ನೀವು ನಿಮ್ಮ ಭಾವನೆಗಳನ್ನು ವ್ಯಕ್ತಪಡಿಸಿದಾಗ ಮತ್ತು ಜನರಿಂದ ಹೊಸ ವಿಷಯಗಳನ್ನು ಕಲಿತಾಗ, ನಿಮ್ಮ ಮನಸ್ಸು ಶಾಂತವಾಗಿರುತ್ತದೆ ಮತ್ತು ನಿಮ್ಮ ಮೆದುಳು ಸಕ್ರಿಯವಾಗಿರುತ್ತದೆ.