ವಯಸ್ಕರಾಗುವ ಮುನ್ನ ಪೋರ್ನ್ ನೋಡುವ ಗೀಳು ಬೆಳೆಸಿಕೊಂಡರೆ ಸೆಕ್ಸ್ ಲೈಫ್‌ಗೆ ಅಪಾಯ!
ವಯಸ್ಕರಾಗುವ ಮುನ್ನವೇ ಪೋರ್ನ್ ಫಿಲ್ಮ್‌ಗಳನ್ನು ನೋಡುವ ಅಭ್ಯಾಸ ದೊಡ್ಡ ಮಟ್ಟದ ಲೈಂಗಿಕ ಆರೋಗ್ಯ ಸಮಸ್ಯೆಗಳಿಗೆ ಕಾರಣವಾಗುತ್ತದೆ ಎಂದು ತಜ್ಞರು ಹೇಳಿದ್ದಾರೆ. ಈ ವಿಚಾರವೀಗ ಸಂಪೂರ್ಣವಾಗಿ ಅರ್ಥವಾಗಲು ಪ್ರಾರಂಭವಾಗಿದೆ ಎಂದು ವೈದ್ಯರು ಇಳಿಸಿದ್ದಾರೆ.
ನಟ ರಣವೀರ್ ಸಿಂಗ್ ಇತ್ತೀಚೆಗೆ ಸೆಕ್ಸುವಲ್ ವೆಲ್‌ನೆಸ್ ಬ್ರ್ಯಾಂಡ್‌ನ ಜಾಹೀರಾತಿನಲ್ಲಿ ಅಮೆರಿಕದ ಅಡಲ್ಟ್ ಫಿಲ್ಮ್ ತಾರೆ ಜಾನಿ ಸಿನ್ಸ್ ಜೊತೆ ನಟಿಸಿದ್ದು ಸಾಕಷ್ಟು ಟೀಕೆಗೆ ಗುರಿಯಾಗಿದ್ದರೂ, ಕೆಲವು ಆರೋಗ್ಯ ತಜ್ಞರು ಪುರುಷರ ಸೆಕ್ಸುವಲ್ ಹೆಲ್ತ್ ಪ್ರಮೋಟ್ ಮಾಡಿದ್ದಕ್ಕೆ ಅವರನ್ನು ಮೆಚ್ಚಿಸಿದ್ದಾರೆ.
ಈಗ ಸೆಕ್ಸುವಲ್ ಹೆಲ್ತ್ ಬಗ್ಗೆ ಇನ್ನೊಂದು ಆತಂಕ ಶುರುವಾಗಿದೆ. ಇನ್ನೂ ವಯಸ್ಸಿಗೆ ಬರದ ಗಂಡು ಮಕ್ಕಳು ಪೋರ್ನ್ ಫಿಲ್ಮ್ ನೋಡುವುದರಿಂದ ಆಗುವ ಲೈಂಗಿಕ ಸಮಸ್ಯೆಗಳ ಬಗ್ಗೆ ಆತಂಕ ಎದುರಾಗುತ್ತಿದೆ.
ಆಂಡ್ರೊಲಾಜಿಸ್ಟ್‌ಗಳು, ಮನೋವೈದ್ಯರು ಮತ್ತು ಹದಿಹರೆಯದ ಯುವಕರ ಸಲಹೆಗಾರರು ಇದು ಲೈಂಗಿಕ ಆರೋಗ್ಯ ಸಮಸ್ಯೆಗಳ ಸರಣಿಗೆ ಕಾರಣವಾಗುತ್ತದೆ ಎಂದಿದ್ದಾರೆ. ಈ ಸಮಸ್ಯೆಗಳ ಬಗ್ಗೆ ತಜ್ಞರು ಈಗ ಸಂಪೂರ್ಣವಾಗಿ ಅರ್ಥಮಾಡಿಕೊಳ್ಳಲು ಪ್ರಾರಂಭ ಮಾಡಿದ್ದಾರೆ.
ನಿಮಿರುವಿಕೆಯ ಅಪಸಾಮಾನ್ಯ ಕ್ರಿಯೆ, ಸೆಕ್ಸ್‌ನ ವೇಳೆ ಅನಿರೀಕ್ಷಿತ ಬಯಕೆಗಳು, ಅನ್ಯೋನ್ಯತೆ ಹಾಗೂ ಒಪ್ಪಿಗೆ ಇಲ್ಲದೆ ಆಗುವಂಥ ಸೆಕ್ಸ್ ಯುವಕರಲ್ಲಿ ಹೆಚ್ಚಾಗುತ್ತಿದೆ ಎಂದು ತಜ್ಞರು ಎಚ್ಚರಿಕೆ ನೀಡಿದ್ದಾರೆ.
ಇಂತಹ ಯುವ ರೋಗಿಗಳಲ್ಲಿ ಮಾನಸಿಕ ಸಮಸ್ಯೆಗಳು ಮಾತ್ರವಲ್ಲದೆ ವೈವಾಹಿಕ ಸಮಸ್ಯೆಗಳು ಮತ್ತು ದೈಹಿಕ ಸಮಸ್ಯೆಗಳಿಗೂ ಕಾರಣವಾಗುತ್ತಿದೆ ಎಂದು ತಜ್ಞರು ಹೇಳಿದ್ದಾರೆ.
ಸಾಮಾನ್ಯವಾಗಿ ಈ ಸಮಸ್ಯೆಗಳು ಹಿರಿಯ ಜೀವಗಳಲ್ಲಿ ಮಾತ್ರವೇ ಕಾಣಿಸಿಕೊಳ್ಳುತ್ತಿದ್ದವು. ಆದರೆ, ಈಗ ಯುವಕರಲ್ಲೂ ಕಾಣಿಸಿಕೊಳ್ಳುತ್ತಿದೆ. ವಯಸ್ಕರಾಗಿ ಕೆಲವೇ ವರ್ಷಗಳು ಕಳೆದಿರುವ ಯುವಕರಲ್ಲಿಯೇ ನಿಮಿರುವಿಕೆಯ ಸಮಸ್ಯೆ ಕಾಣಿಸಿಕೊಳ್ಳುತ್ತಿದೆ ಎಂದಿದ್ದಾರೆ.
ಚೆನ್ನೈನಲ್ಲಿರುವ ಏಷ್ಯನ್ ಇನ್‌ಸ್ಟಿಟ್ಯೂಟ್ ಆಫ್ ನೆಫ್ರಾಲಜಿ ಮತ್ತು ಯುರಾಲಜಿ (ಎಐಎನ್‌ಯು) ನಲ್ಲಿ ಆಂಡ್ರಾಲಜಿಯ ಕ್ಲಿನಿಕಲ್ ಲೀಡ್ ಡಾ ಸಂಜಯ್ ಪ್ರಕಾಶ್ ಜೆ ಈ ಬಗ್ಗೆ ಮಾತನಾಡಿದ್ದು, ಪೋರ್ನ್ ಫಿಲ್ಮ್‌ಗಳನ್ನು ನೋಡಿದ್ದರಿಂದಲೇ ಸೆಕ್ಸ್ ಮೇಲೆ ಹೆಚ್ಚು ಪ್ರಭಾವಿತರಾಗಿರುವ ಯುವಕರ ಪೀಳಿಗೆಯನ್ನು ನಾವು ನೋಡುತ್ತಿದ್ದೇವೆ ಎಂದಿದ್ದಾರೆ.
ಮೈಕ್ರೋಸರ್ಜಿಕಲ್ ಆಂಡ್ರೊಲೊಜಿಸ್ಟ್ ಮತ್ತು ಮೂತ್ರಶಾಸ್ತ್ರಜ್ಞರಾದ ಸಂಜಯ್ ಕೂಡ ಈ ಬಗ್ಗೆ ಮಾತನಾಡಿದ್ದಾರೆ. ಇದು ಸಾಕಷ್ಟು ಸಮಸ್ಯೆಗಳಿಗೆ ಕಾರಣವಾಗುತ್ತದೆ. ನಿಜ ಜೀವನದ ಸೆಕ್ಸ್‌ನ ವೇಳೆ ಸಂಗಾತಿಗೆ ತೃಪ್ತಿ ನೀಡಲು ಅವರಿಗೆ ಸಾಧ್ಯವಾಗೋದಿಲ್ಲ, ಶೀಘ್ರ ಸ್ಖಲನದಂಥ ಸಮಸ್ಯೆ ಎದುರಿಸುತ್ತಾರೆ ಎಂದಿದ್ದಾರೆ.
ಅಶ್ಲೀಲ ಸೈಟ್‌ಗಳನ್ನು ನಿಷೇಧಿಸಲು ಸರ್ಕಾರವು ಹಲವಾರು ಪ್ರಯತ್ನಗಳನ್ನು ಮಾಡಿದರೂ, ಅವುಗಳನ್ನು ಪ್ರವೇಶಿಸುವುದು ಸುಲಭ ಎಂದು ವೈದ್ಯರು ಹೇಳುತ್ತಾರೆ. 12 ವರ್ಷ ವಯಸ್ಸಿನಲ್ಲೇ ಪೋರ್ನ್ ಫಿಲ್ಮ್‌ಗಳನ್ನು ನೋಡುವ ಸಾಕಷ್ಟು ಹುಡುಗರು ಸಿಗುತ್ತಾರೆ ಎಂದಿದ್ದಾರೆ.
"ಅತಿಯಾದ ಹಸ್ತಮೈಥುನ, ಅಧ್ಯಯನದಲ್ಲಿ ಏಕಾಗ್ರತೆಯ ನಷ್ಟ ಮತ್ತು ಅಪರಾಧಿ ಭಾವನೆಯಲ್ಲಿರುವ ಸಾಕಷ್ಟು ಹದಿಹರೆಯದವರನ್ನು ನಾನು ನೋಡುತ್ತೇನೆ. ಕೆಲವರು ಅಶ್ಲೀಲತೆಯನ್ನು ಸ್ಟ್ರೆಸ್‌ಬಸ್ಟರ್ ಆಗಿ ಬಳಸುತ್ತಾರೆ..' ಎಂದು ಬೆಂಗಳೂರಿನ ಮಕ್ಕಳ ತಜ್ಞೆ ಮತ್ತು ಹದಿಹರೆಯದವರ ಆರೋಗ್ಯ ಸಲಹೆಗಾರರಾದ ಡಾ.ಪ್ರೀತಿ ಗಲಗಲಿ ಹೇಳಿದ್ದಾರೆ.
porn video 2
ಅದಲ್ಲದೆ, ಅತಿಯಾದ ಫೋರ್ನ್ ವೀಕ್ಷಣೆ ಮಾಡುವುದರಿಂದ ಸೆಕ್ಸ್‌ನ ಬಗ್ಗೆ ಅಸಾಧ್ಯವಾದಂಥ ಯೋಚನೆಗಳು ಬರುತ್ತವೆ. ಇದರಿಂದಾಗಿ ಆರೋಗ್ಯಕರ ಸೆಕ್ಸ್ ರಿಲೇಷನ್‌ಷಿಪ್ ಹಾಳಾಗುತ್ತದೆ ಎಂದು ವೈದ್ಯರು ಎಚ್ಚರಿಸಿದ್ದಾರೆ.
Porn video
ಪೋರ್ನ್ ಸಿನಿಮಾಗಳಲ್ಲಿ ಅಸಾಧ್ಯವಾದ ಲೈಂಗಿಕ ಭಂಗಿಗಳನ್ನು ವೀಕ್ಷಕರ ತೃಪ್ತಿಗಾಗಿ ಮಾಡುತ್ತಾರೆ. ಆದರೆ, ಇದು ನಿಜ ಜೀವನದಲ್ಲಿ ಸಾಧ್ಯವಾಗೋದಿಲ್ಲ. ಇದು ಪೋರ್ನ್ ಅಭ್ಯಾಸವಿರಿಸಿಕೊಂಡ ಯುವಕನ ಆಸೆ ಭಗ್ನವಾಗಲು ಕಾರಣವಾಗುತ್ತದೆ ಎಂದು ಡಾ. ಸಂಜಯ್ ಹೇಳಿದ್ದಾರೆ.