ಶವದ ಜೊತೆ ಸಂಭೋಗ ನಡೆಸಿದ ವಿಕೃತ ಕಾಮಿ: ಇಂಥವರೂ ಇರ್ತಾರಾ?
ಮುಂಬಯಿಯಲ್ಲಿ ಒಬ್ಬ ಅಂಗಡಿಯಾತ ಒಬ್ಬಾಕೆ ಸ್ತ್ರೀಯನ್ನು ಕೊಂದು, ಹೆಣದ ಜೊತೆ ಸಂಭೋಗ ನಡೆಸಿ ಪೊಲೀಸರಿಗೆ ಸಿಕ್ಕಿಬಿದ್ದಿದ್ದಾನೆ. ಇದು ಎಂಥ ಮನಸ್ಥಿತಿ ನಿಮಗೆ ಗೊತ್ತಾ?
ಮುಂಬಯಿಯಲ್ಲಿ ಒಂದು ಘೋರ ಘಟನೆ ನಡೆದುಹೋಗಿದೆ. ನಲಸೋಪಾರ ಎಂಬಲ್ಲಿ ಮೂವತ್ತೆರಡು ವಷದ ಒಬ್ಬಾಕೆ ಮಹಿಳೆ ತನ್ನ ಮಗುವಿಗೆ ಆಟಿಕೆ ಖರೀದಿಸಲೆಂದು ಒಂದು ಆಟಿಕೆಗಳ ಅಂಗಡಿಗೆ ಹೋಗಿದ್ದಾಳೆ. ಅಲ್ಲಿ ಆಕೆಗೂ ಅಂಗಡಿಯಾತನಿಗೂ ಯಾವುದೋ ಕಾರಣಕ್ಕೆ ಜಗಳ ಆಗಿದೆ. ಅಂಗಡಿಯಾತ ಸಿಟ್ಟಿಗೆದ್ದು, ಆಕೆಯ ಕೂದಲು ಹಿಡಿದು ಆಕೆಯನ್ನು ಅಂಗಡಿಯ ಹಿಂದಿನ ಗ್ಯಾರೇಜಿಗೆ ದರದರನೆ ಎಳೆದೊಯ್ದು ಆಕೆಯ ಕುತ್ತಿಗೆ ಬಿಗಿದು, ಕುತ್ತಿಗೆ ಸೀಳಿಹಾಕಿ ಕೊಲೆ ಮಾಡಿದ್ದಾನೆ. ನಂತರ ಆಕೆಯ ಶವವನ್ನೇ ಸಂಭೋಗಿಸಿದ್ದಾನೆ. ನಂತರ ಆಕೆಯ ಶವವನ್ನು ಒಂದು ವ್ಯಾನ್‌ನಲ್ಲಿ ಹಾಕಿಕೊಂಡು ಹೋಗಿ, ಅದನ್ನು ದೂರ ಬಿಟ್ಟು ಬಂದಿದ್ದಾನೆ. ಎರಡು ದಿನ ಬಳಿಕ ಶವ ಕೊಳೆಯತೊಡಗಿದಾಗ ಪರಿಸರದವರು ಪೊಲೀಸರನ್ನು ಕರೆಸಿ ಪರಿಶೀಲಿಸಿದಾಗ ಹೆಣ ಪತ್ತೆಯಾಗಿದೆ. ಶವಪರೀಕ್ಷೆಯಲ್ಲಿ ಆಕೆಯ ಶವ ಸಂಭೋಗಕ್ಕೆ ಒಳಗಾಗಿರುವುದು ಕಂಡುಬಂತು. ಸಿಸಿ ಟಿವಿ ಕ್ಯಾಮರಾಗಳನ್ನು ಪರಿಶೀಲಿಸಿದಾಗ, ಈತನ ಅಂಗಡಿಗೆ ಆಕೆ ಹೋದುದು ಹಾಗೂ ಹೊರಬರದೆ ಇದ್ದುದು ಕಂಡುಬಂತು. ಹೆಚ್ಚಿನ ವಿಚಾರಣೆ ನಡೆಸಿದಾಗ ಈತ ನಡೆಸಿದ ಕೃತ್ಯವೆಲ್ಲ ಬಯಲಾಯಿತು.
ಈತ ನಡೆಸಿದ ಭೀಕರ ಕೃತ್ಯದಿಂದ ಸುತ್ತಮುತ್ತಲಿನ ಜನರೆಲ್ಲ ಬೆಚ್ಚಿ ಬಿದ್ದಿದ್ದಾರೆ. ಇಂಥವರೂ ಇರ್ತಾರಾ ಎಂದು ದಿಗಿಲು ಬಿದ್ದಿದ್ದಾರೆ. ಸುತ್ತಮುತ್ತಲಿನವರಿಗೆಲ್ಲ ಈತ ಪರಿಚಿತನೇ. ನೋಡಲಿಕ್ಕೆ ಸಜ್ಜನನ ಹಾಗೇ ಕಾಣತ್ತಿದ್ದ. ಅವನಲ್ಲಿ ಮೇಲ್ನೋಟಕ್ಕೆ ಕಾಣಬಹುದಾದ ಇಂಥ ವಿಕೃತಿಗಳು ಯಾವುದೂ ಇರಲಿಲ್ಲ. ಆದರೆ ಈ ಸ್ತ್ರೀ ಒಂಟಿಯಾಗಿ ಸಿಕ್ಕಿದಾಗ ಅವನಲ್ಲಿದ್ದ ರಾಕ್ಷಸ ಎಚ್ಚೆತ್ತಿದ್ದ. ಇಂಥವರೂ ಇರ್ತಾರೆ!
ಪತ್ನಿ ಜೊತೆ ಅನೈತಿಕ ಸಂಬಂಧ: ಆಟೋ ಚಾಲಕನ ಬರ್ಬರ ಹತ್ಯೆ ...
ಇವರನ್ನು ಕನ್ನಡದಲ್ಲಿ ಶವಸಂಭೋಗಿಗಳು ಎಂದು ಕರೆಯುತ್ತಾರೆ. ಇಂಗ್ಲಿಷ್‌ನಲ್ಲಿ ಇದಕ್ಕೆ ಹೆಸರು ನೆಕ್ರೋಫೀಲಿಯಾ. ಇವರಲ್ಲಿ ಹಲವು ಬಗೆಯವರು ಇರಬಹುದು. ಕೆಲವರು ನಿರಂತರವಾಗಿ ಶವಸಂಭೋಗವನ್ನೇ ರೂಢಿಯಾಗಿ ಮಾಡಿಕೊಂಡಿರಬಹುದು. ಇಂತವರು ಸಾಮಾನ್ಯವಾಗಿ ಸ್ಮಶಾನದಲ್ಲಿ, ಮಾರ್ಚುರಿಗಳಲ್ಲಿ ಇರುತ್ತಾರೆ. ಶವದ ಮನೆಯಲ್ಲಿ ಇರುವ ಹಲವರು ಯಾವಾಘಲೂ ಶವಗಳನ್ನು ನೋಡೀ ನೋಡಿ ಇಂಥ ಆಕರ್ಷಣೆ ಬೆಳೆಸಿಕೊಂಡಿರಬಹುದು. ಅವರು ಹೀಗೆ ಮಾಡಬಹುದು. ಇವರಿಗೆ ಸಾಮಾನ್ಯ ವ್ಯಕ್ತಿಗಳನ್ನು ಬೆತ್ತಲೆಯಾಗಿ ನೋಡಿದರೂ ಉದ್ರೇಕ ಉಂಟಾಗಲಾರದು. ಇನ್ನು ಕೆಲವರು ಸಿಟ್ಟಿನಿಂದ ರೊಚ್ಚಿಗೆದ್ದು ವ್ಯಕ್ತಿಯನ್ನು ಕೊಂದು ಶವಸಂಭೋಗ ನಡೆಸುವವರು. ಇವರಿಗೆ ಸೆಕ್ಸ್ ಹಾಗೂ ಅಪರಾಧ ಎರಡೂ ಸೇರಿದಾಗ ಉಂಟಾಗುವ ಒಂದು ಬಗೆಯ ಥ್ರಿಲ್‌ನಿಂಧ ಸುಖ ಸಿಗುತ್ತದೆ. ಮೇಲೆ ಹೇಳಿದ ಅಪರಾಧ ಮಾಡಿದಾತ ಇಂಥ ಜಾತಿಯವನು. ಇನ್ನು ಹಲವರು ತಂತ್ರ ಸಾಧನೆ ಮಾಡುವವರು. ಇಂಥವರು ಅಪರೂಪ. ಇವರಲ್ಲಿ ನಿಜವಾದ ಸಾಧಕರೂ ಇರುತ್ತಾರೆ, ಬೋಗಸ್ ವ್ಯಕ್ತಿಗಳೂ ಇರುತ್ತಾರೆ. ತಂತ್ರದಲ್ಲಿ, ಶವಕ್ಕೂ ನಿಜ ಜೀವಕ್ಕೂ ವ್ಯತ್ಯಾಸ ಹಾಗೂ ಜಿಗುಪ್ಸೆಯ ಭಾವನೆಯನ್ನು ಹೊಡೆದೋಡಿಸಲು ಹೀಗೆ ಮಾಡಲಾಗುತ್ತದೆ.
ಅಕ್ಕನಿಗೆ ಹೆಚ್ಚಿನ ಬೆಲೆಯ ಮೊಬೈಲ್ ಕೊಡಿಸಿದಕ್ಕೆ ತಮ್ಮ ಆತ್ಮಹತ್ಯೆ ...
ಶವಸಂಭೋಗದ ಮನಸ್ಥಿತಿಗೆ ಕಾರಣವಾಗುವುದು ಏನು? ಇದೊಂದು ಮನೋರೋಗ, ಮನೋವಿಕೃತಿ ಅಷ್ಟೇ. ಯಾವುದ್ಯಾವುದೋ ಕಾರಣಗಳಿಂದಾಗಿ ಇವರಿಗೆ ಶವವೇ ಜೀವತ ಮನುಷ್ಯರಿಗಿಂತ ಹೆಚ್ಚು ಉದ್ರೇಕಕಾರಿಯಾಗಿ ಕಾಣುತ್ತದೆ. ಇಂಥವರನ್ನು ಔಷಧ ಹಾಗೂ ಕೌನ್ಸೆಲಿಂಗ್‌ನಿಂಧ ಸರಿಪಡಿಸಬಹುದು. ಆದರೆ ಇವರು ಮನೋರೋಗದ ತುರೀಯ ಅವಸ್ಥೆಗೆ ಮುಟ್ಟಿರುವುದರಿಂದ ಗುಣಮುಖರಾಗುವುದು ಕಷ್ಟಸಾಧ್ಯ. ಕೆಲವರಿಗೆ ಶವದ ಬದಲು ನಿಶ್ಚೇತನ ಸೆಕ್ಸ್ ಗೊಂಬೆಯನ್ನು ನೀಡಿ ಸರಿಪಡಿಸುವ ಯತ್ನವನ್ನೂ ತಜ್ಞರು ನಡೆಸಿದ್ದಾರೆ. ಇವರೇನೂ ಅಷ್ಟು ಅಪಾಯಕಾರಿಗಳಲ್ಲ. ಆದರೆ, ಸಂಭೋಗಕ್ಕಾಗಿ ಶವವನ್ನು ಪಡೆಯಲೆಂದೇ ಕೊಲೆ ಮಾಡುವವರು ಮಾತ್ರ ತೀರಾ ಅಪಾಯಕಾರಿ. ಇವರು ಸಮಾಜಘಾತುಕರು. ಇಂತವರು ಯಾವುದೇ ಕ್ಷಮೆಯಿಲ್ಲದೆ ಜೈಲು ಸೇರಲು ಲಾಯಕ್ಕು.
'ಅಪ್ಪಾ ಆನ್ ಲೈನ್ ಕ್ಲಾಸ್‌ಗೆ ಮೊಬೈಲ್ ಬೇಕು' ತಂದುಕೊಡಲಾಗದ ರೈತ ಸುಸೈಡ್ ...