ಪತ್ನಿ ಜೊತೆ ಅನೈತಿಕ ಸಂಬಂಧ: ಆಟೋ ಚಾಲಕನ ಬರ್ಬರ ಹತ್ಯೆ

ಪತ್ನಿ ಜೊತೆ ಹೊಂದಿದವನ ಅಪಹರಿಸಿ ಹತ್ಯೆ| ನಾಲ್ವರ ಬಂಧನ, ಪ್ರಮುಖ ಆರೋಪಿ ನಾಪತ್ತೆ| ಬೆಂಗಳೂರಿನ ಕೆ.ಆರ್‌.ಪುರಂ ಪೊಲೀಸ್‌ ಠಾಣಾ ವ್ಯಾಪ್ತಿಯಲ್ಲಿ ನಡೆದ ಘಟನೆ|

Auto Driver Murder in Bengaluru

ಬೆಂಗಳೂರು(ಜು.03): ಅನೈತಿಕ ಸಂಬಂಧ ಪ್ರಕರಣಕ್ಕೆ ಸಂಬಂಧಿಸಿದಂತೆ ಆಟೋ ಚಾಲಕನೊಬ್ಬನನ್ನು ಹತ್ಯೆ ಮಾಡಿರುವ ಘಟನೆ ಕೆ.ಆರ್‌.ಪುರಂ ಪೊಲೀಸ್‌ ಠಾಣಾ ವ್ಯಾಪ್ತಿಯಲ್ಲಿ ನಡೆದಿದ್ದು, ತಡವಾಗಿ ಬೆಳಕಿಗೆ ಬಂದಿದೆ.

ಬೂದಿಕೆರೆ ನಿವಾಸಿ ಸುಬ್ರಮಣಿ (45) ಕೊಲೆಯಾದವ. ಆಟೋ ಚಾಲಕರಾದ ಸುಹೇಲ್‌ (45), ಮೋಹನ್‌ ಕುಮಾರ್‌ (28) ಹಾಗೂ ಕಾಮರಾಜ (28)ನನ್ನು ಬಂಧಿಸಲಾಗಿದೆ. ಪ್ರಮುಖ ಆರೋಪಿ ಶರವಣಕುಮಾರ್‌ ತಲೆಮರೆಸಿಕೊಂಡಿದ್ದಾನೆ ಎಂದು ಕೆ.ಆರ್‌.ಪುರಂ ಪೊಲೀಸರು ಹೇಳಿದ್ದಾರೆ.

ಶರವಣ ಕುಮಾರ್‌, ಜಿನ್ನಾಂಭಗೆ ಇಬ್ಬರು ಮಕ್ಕಳಿದ್ದಾರೆ. 12 ವರ್ಷಗಳ ಹಿಂದೆಯೇ ಪ್ರತ್ಯೇಕವಾಗಿದ್ದರು. ಜಿನ್ನಾಂಭ ಸುಬ್ರಮಣಿ ಜತೆ ಅನೈತಿಕ ಸಂಬಂಧವಿತ್ತು. ಇತ್ತೀಚೆಗೆ ಜಿನ್ನಾಂಭ ಮನೆಯಲ್ಲಿ ನಡೆಯಬೇಕಿದ್ದ ಕಾರ್ಯಕ್ರಮಕ್ಕೆ ಶರವಣ ಆಗಮಿಸಬಾರದು ಎಂದು ಜಿನ್ನಾಂಭಗೆ ಸುಬ್ರಮಣಿ ತಾಕೀತು ಮಾಡಿದ್ದ.

ಆಸ್ತಿಗಾಗಿ ಕಲಹ: ಹೊಲದಲ್ಲಿ ಕೆಲಸ ಮಾಡ್ತಿದ್ದ ಅಣ್ಣನನ್ನು ಕೊಂದ ತಮ್ಮ

ಈ ವಿಚಾರವನ್ನು ಪುತ್ರಿ ತಂದೆ ಶರವಣಗೆ ಕರೆ ಮಾಡಿ ಹೇಳಿ ಕಣ್ಣೀರಿಟ್ಟಿದ್ದಳು. ಅಲ್ಲದೆ, ಶರವಣಗೆ ಕೂಡ ಕರೆ ಮಾಡಿದ್ದ ಸುಬ್ರಮಣಿ ಧಮ್ಕಿ ಹಾಕಿದ್ದ. ಈ ನಡುವೆ ಜಿನ್ನಾಂಭ ವಿಚ್ಛೇದನಕ್ಕೆ ಪಟ್ಟು ಹಿಡಿದಿದ್ದಳು. ಇನ್ನು ಜಿನ್ನಾಂಭ ಸಹೋದರಿಯನ್ನು ಸುಹೇಲ್‌ ವಿವಾಹವಾಗಿದ್ದ. ಬೇರೆ ಧರ್ಮಕ್ಕೆ ಸೇರಿದ್ದವನನ್ನು ವಿವಾಹವಾಗಿದ್ದಕ್ಕೆ ಸುಬ್ರಮಣಿ ವಿರೋಧ ವ್ಯಕ್ತಪಡಿಸಿದ್ದ. ಶರವಣ, ಸುಹೇಲ್‌ ಎಲ್ಲರೂ ಸೇರಿ ಸುಬ್ರಮಣಿ ಹತ್ಯೆಗೆ ಯೋಜಿಸಿದ್ದರು.

ಜೂ.27ರಂದು ಮಧ್ಯಾಹ್ನ 3.30ರ ಸುಮಾರಿಗೆ ಕೊಡೇನಹಳ್ಳಿ ಗ್ರಾಮದ ಬಳಿ ಸುಬ್ರಮಣಿಯನ್ನು ಆಟೋದಲ್ಲಿ ಅಪಹರಿಸಿ ಇಂದಿರಾನಗರ ಬಸ್‌ ಡಿಪೋ ಬಳಿ ಕರೆದೊಯ್ದು ಮಾರಣಾಂತಿಕ ಹಲ್ಲೆ ನಡೆಸಿದ್ದರು. ಸುಬ್ರಮಣಿ ಮೃತಪಟ್ಟಿದ್ದು, ಕತ್ತಲಾದ ಬಳಿಕ ಅವಲಹಳ್ಳಿ ಸಮೀಪದ ನಿರ್ಜನ ಪ್ರದೇಶದಲ್ಲಿ ಮೃತದೇಹ ಎಸೆದು ಆರೋಪಿಗಳು ಪರಾರಿಯಾಗಿದ್ದರು. ಸಬ್‌ಇನ್‌ಸ್ಪೆಕ್ಟರ್‌ ಮಂಜುನಾಥ್‌ ನೇತೃತ್ವದ ತಂಡ ಆರೋಪಿಗಳನ್ನು ಬಂಧಿಸಿದೆ.

Latest Videos
Follow Us:
Download App:
  • android
  • ios