ಎಚ್‌.ಡಿ. ಕೋಟೆ(ಜೂ.23): ತನಗಿಂತ ಅಕ್ಕನಿಗೆ ಹೆಚ್ಚಿನ ಬೆಲೆಯ ಮೊಬೈಲ್‌ ಕೊಡಿಸಿದಕ್ಕೆ ತಮ್ಮ ವಿಷ ಕುಡಿದು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ತಾಲೂಕಿನ ಕಸಬಾ ಹೋಬಳಿ ಬೆಳಗನಹಳ್ಳಿ ಕಾವಲ್‌ ಗ್ರಾಮದಲ್ಲಿ ಸೋಮವಾರ ಜರುಗಿದೆ.

ಕಾಂತರಾಜು ಎಂಬವರ ಪುತ್ರ ಆದಿತ್ಯ(15) ಆತ್ಮಹತ್ಯೆ ಮಾಡಿಕೊಂಡವನು. ಕಾಂತರಾಜು ಅವರ ಪುತ್ರಿ ಪಿಯುಸಿಯಲ್ಲಿ ವ್ಯಾಸಂಗ ಮಾಡುತ್ತಿದ್ದು, ಆನ್‌ಲೈನ್‌ ಶಿಕ್ಷಣವನ್ನು ಪಡೆದುಕೊಳ್ಳುವುದಕ್ಕಾಗಿ ಕಳೆದ ಹಲವು ದಿನಗಳ ಹಿಂದೆ ಮೊಬೈಲ್‌ ಕೊಡಿಸಿದ್ದರು.

KSRTC ಕಂಡಕ್ಟರ್‌, ಡ್ರೈವರ್‌ ಭದ್ರತಾ ಕಾರ್ಯಕ್ಕೆ!

ಇದಾದ ಬಳಿಕ ಆದಿತ್ಯ ತಂದೆಯ ಬಳಿ ತನಗೂ ಮೊಬೈಲ್‌ ಕೊಡಿಸುವಂತೆ ಒತ್ತಾಯಿಸಿದ್ದ. ಕಾಂತರಾಜು ಅವರು ಆತನಿಗೆ ಮೊಬೈಲ್‌ ಕೊಡಿಸಿದ್ದು, ಅಕ್ಕನಿಗೆ ಕೊಡಿಸಿರುವ ಮೊಬೈಲ್‌ ಚೆನ್ನಾಗಿದ್ದು, ತನಗೆ ನೀಡಿರುವ ಮೊಬೈಲ್‌ ಕಡಿಮೆ ಬೆಲೆ ಇದೆ ಎಂದು ಮನೆಯಲ್ಲಿ ಜಗಳವಾಡಿಕೊಂಡು ಜೂ. 14ರಂದು ಮಧ್ಯಾಹ್ನ ಮಿಶ್ರಣ ಮಾಡಿದ ಕ್ರಿಮಿನಾಶಕವನ್ನು ಸೇವಿಸಿದ.

29 ದಿನಗಳ ನಂತರ ಕೊಡಗಿನಲ್ಲಿ ಕೊರೋನಾ ಸಕ್ರಿಯ..! ಮತ್ತೆ ಹೆಚ್ಚಿದ ಆತಂಕ

ಈ ವಿಚಾರ ತಂದೆಗೆ ತಿಳಿಯುತ್ತಿದ್ದಂತೆ ಪಟ್ಟಣದ ಸಾರ್ವಜನಿಕ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಿ, ಹೆಚ್ಚಿನ ಚಿಕಿತ್ಸೆಗಾಗಿ 17ರಂದು ಮೈಸೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಸೋಮವಾರ ಬಾಲಕ ಮೃತಪಟ್ಟನು. ಈ ಸಂಬಂಧ ಪಟ್ಟಣದ ಎಸ್‌ಐ ನಾಯಕ್‌ ಭೇಟಿ ನೀಡಿ ದೂರು ದಾಖಲಿಸಿಕೊಂಡಿದ್ದಾರೆ.

[ಸಮಸ್ಯೆಗಳು ಜೀವನದ ಅವಿಭಾಜ್ಯ ಅಂಗ. ಸಮಸ್ಯೆಯಿಲ್ಲದ ಮನುಷ್ಯನಿಲ್ಲ. ಯಾವುದೇ ಸಮಸ್ಯೆ ಜೀವನದ ಅಂತ್ಯವಲ್ಲ. ಆತ್ಮಹತ್ಯೆ ಆಲೋಚನೆ ಹೊಳೆದರೆ ಸರ್ಕಾರದ ಸಹಾಯವಾಣಿಗೆ ಕರೆ ಮಾಡಿ: 080 25497777 ಅಥವಾ ಆರೋಗ್ಯ ಸಹಾಯವಾಣಿ 104 ಗೆ ಕರೆ ಮಾಡಿ]