ಕೆಲವರು ಸೆಕ್ಸ್ ಸಂದರ್ಭದಲ್ಲಿ ಸುಖ ತಡೆಯಲಾಗದೆ ಚೀತ್ಕಾರ ಮಾಡುತ್ತಾರೆ, ನರಳುತ್ತಾರೆ. ಲಂಡನ್‌ನ ಅಂಥ ಒಬ್ಬಾಕೆಯ ಕತೆ ಮಜವಾಗಿದೆ.

ಸೆಕ್ಸ್ ಮಾಡುವಾಗ ಹಂದಿಯ ಥರಾ ಕಿರುಚಬೇಡ ಅಂತ ನೆರೆಕೆರೆಯವರು ಒಬ್ಬಾಕೆ ಮಹಿಳೆಗೆ ಮಾಡಿದ ಕಂಪ್ಲೇಂಟ್ ಮತ್ತು ಅದಕ್ಕೆ ಆ ಮಹಿಳೆ ಉತ್ತರಿಸಿದ ರೀತಿಯೂ ಸ್ವಾರಸ್ಯಕರವಾಗಿದೆ. 
ಇದು ನಡೆದುದು ಲಂಡನ್‌ನಲ್ಲಿ. ಅಲ್ಲಿ ಒಂದು ಅಪಾರ್ಟ್‌ಮೆಂಟ್‌ನಲ್ಲಿ ಒಬ್ಬಾಕೆ ಮಹಿಳೆ, ತನ್ನ ಬಾಯ್‌ಫ್ರೆಂಡ್ ಜೊತೆಗೆ ಲಿವ್‌ಇನ್‌ ರಿಲೇಶನ್‌ಶಿಪ್‌ನಲ್ಲಿದ್ದಾಳೆ. ಪ್ರತಿ ರಾತ್ರಿ ಅವರಿಬ್ಬರೂ ತಡವಾಗಿ ಸೆಕ್ಸ್‌ನಲ್ಲಿ ತೊಡಗಿಕೊಳ್ಳುತ್ತಾರೆ. ಸೆಕ್ಸ್ ಎಂದರೆ ಅಂತಿಂಥದ್ದಲ್ಲ. ಇಬ್ಬರೂ ಸೆಕ್ಸ್‌ನ ಉತ್ತುಂಗದಲ್ಲಿರುವಾಗ ಸಾಕಷ್ಟು ಶಬ್ದ ಮಾಡುತ್ತಾರೆ. ಅದರಲ್ಲೂ ಆಕೆಯಂತೂ ಜೋರಾಗಿ ಹಂದಿಯಂತೆಯೇ ಕಿರುಚುತ್ತಿದ್ದಳಂತೆ.

ನೆರೆಮನೆಯವರೆಲ್ಲಾ ನೋಡುವಷ್ಟು ನೋಡಿದ್ದಾರೆ. ನಂತರ ಒಂದು ದಿನ ದೊಡ್ಡದಾಗಿ ಚೀಟಿ ಬರೆದು ತಂದು ಆಕೆಯ ಮನೆಯ ಬಾಗಿಲಿಗೆ ಅಂಟಿಸಿದ್ದಾರೆ. ಅದರಲ್ಲಿ ''ಎಲಾ ಹೆಣ್ಣೇ, ಸೆಕ್ಸ್ ವೇಳೆ ಆ ಪರಿ ಹಂದಿಯ ಥರಾ ಕಿರುಚಬೇಡ, ನೀನೂ ತೋಮದರೆ ತಗೊಳ್ಳೋದಲ್ಲದೆ ನಮಗೂ ಉಪಟಳ ಕೊಡ್ತಿದೀಯಾ. ನಿನ್ನಿಂದಾಗಿ ನಮಗೆ ಸರಿಯಾಗಿ ನಿದ್ದೆ ಮಾಡೋಕೇ ಆಗ್ತಿಲ್ಲ. ಕೆಲವರು ತಿಂಗಳುಗಟ್ಟಲೆಯಿಂದ ನಿದ್ದೆ ಮಾಡದೆ ಹುಚ್ಚರ ಥರಾ ಆಗೋಗಿದಾರೆ. ಸುಮ್ಮನೇ ಸೆಕ್ಸ್ ಮಾಡೋಕೆ ಸಾಧ್ಯವಾದರೆ ಮಾಡು. ಇಲ್ಲವಾದರೆ ನಿನ್ನ ಫ್ರೆಂಡ್ ಜೊತೆ ಬೇರೆಲ್ಲಾದರೂ ಹಾಳಾಗಿ ಹೋಗು'' ಎಂದು ದಬಾಯಿಸಿದ್ದಾರೆ.
ಆ ಮಹಿಳೇಯೇನೂ ಸುಮ್ಮನಿರಲಿಲ್ಲ. ಆಕೆ ಆ ಚೀಟಿಯನ್ನು ತನ್ನ ಟ್ವಿಟ್ಟರ್‌ನಲ್ಲಿ ಅಪ್‌ಲೋಡ್‌ ಮಾಡಿಬಿಟ್ಟಳು! ತನ್ನ ನೆರೆಕೆರೆಯವರ ಕೆಲಸ ಇದು ಎಂದು ಜಗಜ್ಜಾಹೀರು ಮಾಡಿದಳು. ಈ ಚೀಟಿಗಿಂತಲೂ ಅದಕ್ಕೆ ಬಂದ ಪ್ರತಿಕ್ರಿಯೆಗಳೇ ಮಜವಾಗಿವೆ.

ಒಬ್ಬ- ''ನೀವು ನಿದ್ದೆ ಮಾಡುವಾಗ ಸೆಕ್ಸ್ ಮಾಡಿ ಕಿರುಚೋಕೆ ನೆರೆಮನೆಯವರಿಗೆ ಹೇಳು'' 
ಇನ್ನೊಬ್ಬಳು- ''ಇದು ನೀನು ಪಡೀತಾ ಇರುವ ಸೆಕ್ಸ್‌ನ ಸುಖದಿಂದ ವಂಚಿತವಾದ ನೆರೆಮನೆಯವರು ಅಸೂಯೆಪಟ್ಟುಕೊಂಡು ಮಾಡಿರೋ ಕೆಲಸ. ಅವರ ಜೆಲಸ್‌ಗೆ ನೀನು ಸೊಪ್ಪು ಹಾಕಬೇಡ'' ಎಂದಿದ್ದಾಳೆ. 

Add Asianetnews Kannada as a Preferred SourcegooglePreferred

ಲೈಂಗಿಕ ಸಾಮರ್ಥ್ಯ ಹೆಚ್ಚಬೇಕಾದರೆ ಹೇಗೆ ಮಲಗಬೇಕು? ...

ಇನ್ನೊಬ್ಬಾಕೆ- ''ಅಷ್ಟೊಂದು ಕಿರುಚೋ ಥರದ್ದು ನಿನ್ನ ಫ್ರೆಂಡ್‌ ನಿನಗೆ ಏನು ಮಾಡ್ತಾ ಇದ್ದ?'' ಎಂದು ಕುತೂಹಲ ತೋರಿಸಿದ್ದಾಳೆ. 
ಸಹಜವೇ. ಈ ಕುತೂಹಲ ಹಲವರಿಗೆ ಇರಬಹುದು. ಭಾರತದಂಥ ದೇಶಗಳಲ್ಲಿ ಸೆಕ್ಸ್ ವೇಳೆ ಕಿರುಚೋದೆಲ್ಲಾ ಕಮ್ಮಿ. ಆದರೆ ಲಂಡನ್, ಅಮೆರಿಕದಂಥ ಪ್ರದೇಶಗಳಲ್ಲಿ ಸೆಕ್ಸ್ ಬಗ್ಗೆ ನಮ್ಮ ದೇಶದಲ್ಲಿ ಇರುವಂಥ ಮಡಿವಂತಿಕೆ ಇಲ್ಲ. ಹೀಗಾಗಿ ಸೆಕ್ಸ್ ಕುರಿತು ಮುಕ್ತವಾಗಿ ಮಾತಾಡುವುದು ಕೂಡ ಸಹಜ. ಪ್ರೇಮಿಗಳು ಸಾರ್ವಜನಿಕ ಪ್ರದೇಶಗಳಲ್ಲಿ ಮುಕ್ತವಾಗಿ ಚುಂಬಿಸುವುದು ಕೂಡ ಸಾಮಾನ್ಯ. ಇದು ನಮಗೆ ಅಸಹಜ ಅನ್ನಿಸಬಹುದು. ಆದರೆ ಅವರಿಗೆ ಸಹಜ.

#Feelfree: ಕದ್ದು ನೋಡಿದರೇ ನನ್ನ ಗಂಡನಿಗೆ ಮಜಾ! ಯಾಕ್ಹಿಂಗಾಡ್ತಾರೆ? ...

ಸೆಕ್ಸ್ ವೇಳೆ ಕಿರುಚುವುದು, ನರಳುವುದು ಕೆಲವು ಪ್ರೇಮಿಗಳಲ್ಲಿ ಸಾಮಾನ್ಯ. ಇದು ಸಂಭೋಗದ ವೇಳೆ ಉಂಟಾಗುವ ಸುಖಾನುಭವಕ್ಕೆ ಗಂಡು ಅಥವಾ ಹೆಣ್ಣು ನೀಡುವ ಪ್ರತಿಕ್ರಿಯೆ. ಪ್ರಾಣಿಗಳು ಸೆಕ್ಸ್ ಸಂದರ್ಭದಲ್ಲಿ ಮೃಗೀಯ ರೀತಿಯಲ್ಲಿ ಶಬ್ದ ಮಾಡುವುದನ್ನು ಸಿಂಹಗಳಲ್ಲಿ, ಹುಲಿಗಳಲ್ಲಿ ಕಾಣಬಹುದು. ಹುಲಿಗಳು ಮೇಟಿಂಗ್ ಮಾಡುವುದು ಮೈಲುಗಳ ದೂರಕ್ಕೆ ಅವುಗಳ ಶಬ್ದವಿನೋದದಿಂದಲೇ ಗೊತ್ತಾಗುತ್ತದೆ. ಮನುಷ್ಯನೂ ಮೂಲತಃ ಮೃಗವೇ ಆದ್ದರಿಂದ ಸೆಕ್ಸ್ ವೇಳೆ ಆತ ಚೀತ್ಕಾರ ಮಾಡುವುದೂ ಸಹಜವೇ. ಆದರೆ ಈ ಚೀತ್ಕಾರ ಮಾಡುವವರಲ್ಲಿ ಗಂಡಸರ ಸಂಖ್ಯೆ ಹೆಚ್ಚು, ಹೆಣ್ಣುಗಳ ಸಂಖ್ಯೆ ಕಡಿಮೆ. ಆದರೆ ಹೆಣ್ಣು ಸೆಕ್ಸ್‌ನ ತುರೀಯಾವಸ್ಥೆ ಮುಟ್ಟಿದಾಗ, ಯಾವ ಹೊರಲೋಕದ ಅರಿವೂ ಇಲ್ಲದೆ ಚೀತ್ಕಾರ ಮಾಡುವ ಸಾಧ್ಯತೆ ಹೆಚ್ಚು. ಚೀತ್ಕಾರವು ಹಣ್ಣಿಗೂ ಗಂಡಿಗೂ ಸುಖಾನುಭವದ ಪ್ರಮಾಣವನ್ನು ಹೆಚ್ಚು ಮಾಡುತ್ತದೆ ಎಂದು ತಜ್ರು ಹೇಳುತ್ತಾರೆ. 

ಭಾರತದ ಕಾಮಸೂತ್ರ ಬರೆದ ಕಾಮಪಂಡಿತ ವಾತ್ಸಾಯನ ಕೂಡ ಇದನ್ನು ದಾಖಲಿಸುತ್ತಾನೆ. ಇದನ್ನು ಆತ 'ಸೀತ್ಕಾರ' ಎನ್ನುತ್ತಾನೆ. ಕೆಲವು ದೇಶಗಳ ಹೆಣ್ಣುಗಳು ದೊಡ್ಡ ದನಿಯ ಸೀತ್ಕಾರ ಮಾಡುವುದು ಕಂಡುಬರುತ್ತದೆ ಎಂದು ಆತ ದಾಖಲಿಸಿದ್ದಾನೆ. 

ಅಂದಹಾಗೆ ಲಂಡನ್‌ನ ಮಹಿಳೆ ಅಷ್ಟೊಂದು ದೊಡ್ಡದಾಗಿ ಸೀತ್ಕಾರ ಮಾಡುವಂತೆ ಏನು ಮಾಡುತ್ತಿದ್ದಳೋ ಗೊತ್ತಾಗಿಲ್ಲ. ಗೊತ್ತಾದರೆ ತಿಳಿಸ್ತೀವಿ. 

ಪಿರಿಯಡ್ಸ್ ವೇಳೆ ಸೆಕ್ಸ್: ತಪ್ಪು ಕಲ್ಪನೆಗಳೇನು? ಇಲ್ಲಿದೆ ಉತ್ತರ