ಲೈಂಗಿಕ ಸಾಮರ್ಥ್ಯ ಹೆಚ್ಚಬೇಕಾದರೆ ಹೇಗೆ ಮಲಗಬೇಕು?
ಮಲಗುವ ರೀತಿ, ನಿದ್ರೆ ಮಾಡುವ ರೀತಿ ಸರಿಯಾಗಿಲ್ಲದೆ ಹೋದರೆ ಲೈಂಗಿಕ ಸಾಮರ್ಥ್ಯ, ಸೆಕ್ಷಯುಲ್ ಎನರ್ಜಿ ಕಡಿಮೆಯಾಗುತ್ತಾ ಹೋಗಬಹುದು. ಸರಿಯಾದ ರೀತಿಯಲ್ಲಿ ಮಲಗಿದರೆ, ವಿಶ್ರಾಂತಿ ಪಡೆದರೆ ಸೆಕ್ಸಯುಲ್ ಎನರ್ಜಿ ಹೆಚ್ಚುತ್ತದೆ. ಅದು ಹೇಗೆ?
ನಾವು ಮಲಗುವ ರೀತಿ, ನಿದ್ರೆ ಮಾಡುವ ರೀತಿ ಸರಿಯಾಗಿಲ್ಲದೆ ಹೋದರೆ ನಿಮ್ಮ ಲೈಂಗಿಕ ಸಾಮರ್ಥ್ಯ, ಸೆಕ್ಷಯುಲ್ ಎನರ್ಜಿ ಕಡಿಮೆಯಾಗುತ್ತಾ ಹೋಗಬಹುದು. ಸರಿಯಾದ ರೀತಿಯಲ್ಲಿ ಮಲಗಿದರೆ, ವಿಶ್ರಾಂತಿ ಪಡೆದರೆ ಸೆಕ್ಸಯುಲ್ ಎನರ್ಜಿ ಹೆಚ್ಚುತ್ತದೆ. ಅದು ಹೇಗೆ?
ದಿನವಿಡೀ ಕಾರ್ಯನಿರತವಾಗಿರುವ ಶರೀರಕ್ಕೆ ವಿಶ್ರಾಂತಿ ಸಿಗಲೆಂದು ನಾವು ಮಲಗುತ್ತೇವೆ. ಆದುದರಿಂದ ‘ಯಾವ ರೀತಿಯಲ್ಲಿ ಅಥವಾ ಭಂಗಿಯಲ್ಲಿ ಮಲಗುವುದರಿಂದ ಶರೀರಕ್ಕೆ ಹೆಚ್ಚಿನ ವಿಶ್ರಾಂತಿ ಸಿಗುತ್ತದೆಯೋ, ಆ ಭಂಗಿಯು ಒಳ್ಳೆಯದು’ ಎಂಬುದು ಒಂದು ಸಾಮಾನ್ಯ ನಿಯಮ. ಪ್ರತಿಯೊಬ್ಬರ ಪ್ರಕೃತಿ ಮತ್ತು ಆ ಸಮಯದ ಸ್ಥಿತಿಗನುಗುಣವಾಗಿ ವಿಶ್ರಾಂತಿ ಸಿಗುವ ಭಂಗಿಯು ಬೇರೆ ಬೇರೆ ಆಗಿರಬಹುದು. ನಾವು ಯಾವ ಭಂಗಿಯಲ್ಲಿ ಮಲಗಬೇಕು ಎಂಬುವುದು ನಮಗೆ ನಿದ್ದೆ ಬರುವ ತನಕ ಮಾತ್ರ ನಾವು ನಿರ್ಧರಿಸಬಹುದು, ಏಕೆಂದರೆ ನಿದ್ದೆ ಬಂದ ನಂತರ ನಮ್ಮ ಶರೀರದ ಸ್ಥಿತಿಯು ನಮ್ಮ ನಿಯಂತ್ರಣದಲ್ಲಿರುವುದಿಲ್ಲ.
ಸಾಮಾನ್ಯವಾಗಿ ಮಲಗುವ ವಿವಿಧ ವಿಧಾನಗಳು
1. ಮಗುಚಿ (ಕೆಳಮುಖವಾಗಿ) ಮಲಗುವುದು
ನವಜಾತ ಶಿಶುಗಳನ್ನು ಮತ್ತು ಚಿಕ್ಕ ಮಕ್ಕಳನ್ನು ಈ ರೀತಿ ಮಲಗಿಸಿದರೆ ಅವರಿಗೆ ಶ್ವಾಸ ತೆಗೆದುಕೊಳ್ಳಲು ಅಡಚಣೆಯಾಗಬಹುದು. ಆದುದರಿಂದ ಮಕ್ಕಳನ್ನು ಈ ರೀತಿ ಮಲಗಿಸಬಾರದು. ಹಾಗೆಯೇ ಮಗುಚಿ ಮಲಗುವುದರಿಂದ ಇತರ ವಿಧಾನಗಳ ತುಲನೆಯಲ್ಲಿ ಬೆನ್ನೆಲುಬಿನ ಮೇಲೆ ಹೆಚ್ಚಿನ ಒತ್ತಡ ಬರುತ್ತದೆ. ಇದು ಲೈಂಗಿಕ ಸಾಮರ್ಥ್ಯಕ್ಕೂ ಪೂರಕವಾದುದಲ್ಲ. ಇದರಿಂದ ನಿಮ್ಮ ಸೊಂಟದ ಕೆಳಗಿನ ಸಾಮರ್ಥ್ಯ ಕಡಿಮೆಯಾಗಬಹುದು.
#Feelfree: ಮೊದಲ ರಾತ್ರಿಯೇ ಕೊನೆಯ ರಾತ್ರಿ ಅಗಬಾರದು ಎಂದಿದ್ದರೆ...! ...
2. ಅಂಗಾತ (ಬೆನ್ನಿನ ಮೇಲೆ) ಮಲಗುವುದು
ನಾವು ನಿಂತುಕೊಂಡಾಗ ನಮ್ಮ ಬೆನ್ನೆಲುಬಿನ ಮೇಲೆ ಶೇ. 100ರಷ್ಟು ಒತ್ತಡವಿರುತ್ತದೆ ಎಂದುಕೊಳ್ಳೋಣ, ನಾವು ಅಂಗಾತ ಮಲಗಿದಾಗ ಈ ಒತ್ತಡವು ಶೇ. 75 ರಷ್ಟು ಕಡಿಮೆಯಾಗಿ ಕೇವಲ ಶೇ.25ರಷ್ಟೇ ಉಳಿಯುತ್ತದೆ. ಈ ರೀತಿ ಮಲಗಿದಾಗ ಬೆನ್ನಿನ ಎಲುಬುಗಳ ಮೇಲಿನ ಒತ್ತಡವು ಇತರ ಭಂಗಿಗಳ ತುಲನೆಯಲ್ಲಿ ಅತ್ಯಂತ ಕಡಿಮೆಯಾಗಿರುತ್ತದೆ. ಆದುದರಿಂದ ಬೆನ್ನೆಲುಬಿನ ತೊಂದರೆಗಳಿರುವವರು ಈ ರೀತಿ ಮಲಗಿದರೆ ಅವರಿಗೆ ಸುಖಕರ ನಿದ್ದೆ ಸಿಗುತ್ತದೆ. ಅಂಗಾತ ಮಲಗುವಾಗ ಮಂಡಿಗಳ ಕೆಳಗೆ ಒಂದು ಚಿಕ್ಕ ದಿಂಬನ್ನು ಇಟ್ಟುಕೊಂಡರೆ ಬೆನ್ನೆಲುಬಿನ ಒತ್ತಡ ಇನ್ನಷ್ಟು ಕಡಿಮೆಯಾಗುತ್ತದೆ. ಇದು ಲೈಂಗಿಕ ಸಾಮರ್ಥ್ಯವನ್ನು ಉತ್ತೇಜಿಸುತ್ತದೆ.
3. ಎಡಬದಿ ಕೆಳಗಾಗಿ ಮಲಗುವುದು
ದೇಹದ ಪ್ರಮುಖ ಅಂಗಗಳೆಲ್ಲ ಎಡಬದಿಯಲ್ಲಿವೆ. ಹೃದಯ ಇತ್ಯಾದಿ. ಇವು ಕೆಳಗಡೆಯಿದ್ದರೆ ಒಳ್ಳೆಯದು.
4. ಬಲ ಮಗ್ಗುಲಾಗಿ ಮಲಗುವುದು
ದೇಹದ ಪ್ರಮುಖ ಅಂಗಗಳು ಈಗ ಎಡಭಾಗದ ಅಂಗಗಳ ಮೇಲೆ ಭಾರ ಹಾಕುತ್ತವೆ. ಇದು ಅಷ್ಟು ಒಳ್ಳೆಯದಲ್ಲ.
ಈ ಗಂಡಸರಿಗೇಕೆ ಪ್ರೀತಿಯನ್ನು ಎಕ್ಸ್‌ಪ್ರೆಸ್ ಮಾಡಲು ಬರೋಲ್ಲ? ...
ಯಾರಿಗಾದರೂ ಗೊರಕೆ ಹೊಡೆಯುವ ಅಭ್ಯಾಸವಿದ್ದರೆ, ಅವರು ಅಂಗಾತ ಮಲಗಿದರೆ ಅದು ಹೆಚ್ಚಾಗುತ್ತದೆ. ನಿದ್ದೆಯಲ್ಲಿದ್ದಾಗ ಅನೇಕ ಕಾರಣಗಳಿಂದ ಉಸಿರಾಟಕ್ಕೆ ತೊಂದರೆಯಾದಾಗ ಜನರು ಗೊರಕೆ ಹೊಡೆಯುತ್ತಾರೆ. ಅಂಗಾತ ಮಲಗಿದಾಗ ಶ್ವಾಸನಳಿಕೆಯಲ್ಲಿ ಅಡಚಣೆಗಳು ನಿರ್ಮಾಣವಾಗುವ ಸಾಧ್ಯತೆ ಹೆಚ್ಚಿರುತ್ತದೆ. ಯಾವುದಾದರೊಂದು ಮಗ್ಗುಲಿನಲ್ಲಿ ಮಲಗುವುದರಿಂದ ಶ್ವಾಸನಳಿಕೆಯಲ್ಲಿ ಅಡಚಣೆಯು (ಉದಾಹರಣೆಗೆ ಶಿಥಿಲವಾದ ಸ್ನಾಯುಗಳಿಂದಾಗಿ ಶ್ವಾಸ ನಳಿಕೆಯಲ್ಲಿ ಅಡ್ಡಿ ಬಂದು ಶ್ವಾಸೋಚ್ಛ್ವಾಸಕ್ಕೆ ಆಗುವ ತೊಂದರೆ) ದೂರವಾಗಿ ಗೊರಕೆ ಹೊಡೆಯುವುದನ್ನು ತಡೆಯಬಹುದು. ಈ ರೀತಿ ಮಗ್ಗುಲಿನಲ್ಲಿ ಮಲಗುವ ಅನೇಕರಿಗೆ ಶಾಂತ ನಿದ್ರೆಯ ಅನುಭವವು ಸಿಕ್ಕಿದೆ.
ಮಗ್ಗುಲಿನಲ್ಲಿ ಮಲಗುವುದರಿಂದ ಬೆನ್ನೆಲುಬಿನ ಮೇಲೆ ನಿಂತಿಕೊಂಡಿರುವ ಸ್ಥಿತಿಯ ಶೇ.೭೫ ರಷ್ಟು ಒತ್ತಡವಿರುತ್ತದೆ. ಬಲ ಮಗ್ಗುಲಿನಲ್ಲಿ ಮಲಗುವುದರಿಂದ ಚಂದ್ರನಾಡಿಯು, ಎಡ ಮಗ್ಗುಲಿನಲ್ಲಿ ಮಲಗುವುದರಿಂದ ಸೂರ್ಯನಾಡಿಯು ಸಕ್ರಿಯವಾಗಲು ಸಹಾಯವಾಗುತ್ತದೆ.
ಧರ್ಮಶಾಸ್ತ್ರಗಳಲ್ಲಿ ‘ಮಗ್ಗುಲಿನಲ್ಲಿ ಮಲಗಬೇಕು’ ಎಂದು ಹೇಳಿರುವುದರಿಂದ, ಬೇರೆ ಭಂಗಿಯಲ್ಲಿ ಮಲಗಲು ಯಾವುದೇ ವೈದ್ಯಕೀಯ ಕಾರಣವಿಲ್ಲದಿದ್ದರೆ, ಅಂತಹವರು ಮಗ್ಗುಲಿನಲ್ಲೇ ಮಲಗಲು ಪ್ರಯತ್ನಿಸಬೇಕು.
ಹಿಂಗಾದ್ರೆ ಬ್ರಾ ಬದಲಾಯಿಸಬೇಕೆಂದರ್ಥ, ಇಲ್ಲವಾದರೆ ಆಪತ್ತು ಖಂಡಿತಾ! ...
ನಾವು ಯಾವುದಾದರೊಂದು ಮಗ್ಗುಲಿನಲ್ಲಿ ಮಲಗುವುದರಿಂದ ಕೆಳಗಿನ ದಿಕ್ಕಿನಲ್ಲಿ ಇರುವ ಮೂಗಿನ ಹೊಳ್ಳೆಯು ನಿಧಾನವಾಗಿ ಮುಚ್ಚಿಕೊಳ್ಳುತ್ತದೆ. ಅದು ಸಾಧ್ಯವಾದಷ್ಟು ಮುಚ್ಚಿಕೊಂಡ ಮೇಲೆ ನಾವು ನಿದ್ದೆಯಲ್ಲಿಯೇ ಮಗ್ಗುಲನ್ನು ಬದಲಿಸುತ್ತೇವೆ. ಆಗ ಮೂಗಿನ ಆ ಹೊಳ್ಳೆಯು ನಿಧಾನವಾಗಿ ತೆರೆದು ಇನ್ನೊಂದು ಹೊಳ್ಳೆಯು ಮುಚ್ಚಿಕೊಳ್ಳುತ್ತದೆ. ಈ ರೀತಿ ಅದಲು-ಬದಲಾಗಿ ಮೂಗಿನ ಹೊಳ್ಳೆಗಳು ಮುಚ್ಚಿಕೊಳ್ಳುವುದರಿಂದ ನಾವು ನಿದ್ದೆಯಲ್ಲಿಯೇ ಸ್ವಲ್ಪ-ಸ್ವಲ್ಪ ಸಮಯದ ನಂತರ ಮಗ್ಗುಲು ಬದಲಿಸುತ್ತೇವೆ.