Asianet Suvarna News Asianet Suvarna News

2019ರಲ್ಲಿ ಬ್ರಿಟನ್ ಅರಮನೆಯಲ್ಲಿ ಚಿನ್ನದ ಟಾಯ್ಲೆಟ್ ಕದ್ದ ಕಳ್ಳ ಈಗ ಸಿಕ್ಕಿಬಿದ್ದಿದ್ದು ಹೇಗೆ?

ಟಾಯ್ಲೆಟ್ ಅನ್ನೂ ಕದಿಯುವ ಕಳ್ಳರಿದ್ದಾರೆ ಎಂದರೆ ಅಚ್ಚರಿಯಾಗಬಹುದು. ಆದರೆ, ಇದು ಅಂತಿಂಥ ಟಾಯ್ಲೆಟ್ ಅಲ್ಲ. ಚಿನ್ನದ ಟಾಯ್ಲೆಟ್. ಅದೂ ಸಹ ಐತಿಹಾಸಿಕ ಬ್ಲೆನ್ ಹೀಮ್ ಅರಮನೆಯಲ್ಲಿ ಪ್ರದರ್ಶನಕ್ಕೆ ಫಿಕ್ಸ್ ಮಾಡಲಾಗಿದ್ದ ಟಾಯ್ಲೆಟ್. ಇದನ್ನು ಕದ್ದಿದ್ದು 2019ರಲ್ಲಾದರೂ ಕಳ್ಳ  ಈಗ ದೊರೆತಿದ್ದಾನೆ.  
 

Man theft of gold toilet worth Rs 50 crore caught viral news
Author
First Published Apr 4, 2024, 12:26 PM IST

ಇದು ಅಂತಿಂಥ ಕಳ್ಳತನವಲ್ಲ. ಟಾಯ್ಲೆಟ್ ಕಳ್ಳತನ. ಛೇ, ಯಾರಾದ್ರೂ ಟಾಯ್ಲೆಟ್ ವಸ್ತುವನ್ನೆಲ್ಲ ಕಳ್ಳತನ ಮಾಡ್ತಾರಾ, ಟಾಯ್ಲೆಟ್ಟನ್ನೆಲ್ಲ ಕದಿಯೋ ಜನ ಇದ್ದಾರಾ ಎಂದು ಕೇಳಬಹುದು. ಆದರೆ, ಆ ಟಾಯ್ಲೆಟ್ ಚಿನ್ನದ್ದಾಗಿದ್ದರೆ ಕದಿಯಲು ಅಭ್ಯಂತರವಿಲ್ಲ ಅಲ್ಲವೇ? ಅಷ್ಟಕ್ಕೂ ಇದು ಅಂತಿಂಥ ಚಿನ್ನವೂ ಅಲ್ಲ. ಅರಮನೆಯಲ್ಲಿದ್ದ ಟಾಯ್ಲೆಟ್ .  ಇಂಥ ಐಷಾರಾಮಿ ವಸ್ತುವನ್ನೂ ಕಳ್ಳತನ ಮಾಡಲು ಸಾಧ್ಯ ಎಂದು ಚಾಲಾಕಿ ಕಳ್ಳನೊಬ್ಬ 2019ರಲ್ಲಿ ತೋರಿಸಿಕೊಟ್ಟಿದ್ದ. ಆದರೆ, ಇಷ್ಟು ವರ್ಷಗಳ ಬಳಿಕ ಈಗ ಕಳ್ಳತನ ಮಾಡಿರುವುದನ್ನು ಒಪ್ಪಿಕೊಂಡಿದ್ದಾನೆ. ಇದು ನಡೆದಿದ್ದು ಐತಿಹಾಸಿಕ ಬ್ಲೆನ್ ಹೀಮ್ ಅರಮನೆಯಲ್ಲಿ. ಕಳ್ಳನೊಬ್ಬ 2019ರಲ್ಲಿ  ಬ್ಲೆನ್ ಹೀಮ್ ಅರಮನೆಯಿಂದ ದುಬಾರಿ ಬೆಲೆಯ ಚಿನ್ನದ ಟಾಯ್ಲೆಟ್ ಅನ್ನು ಕದ್ದುಬಿಟ್ಟಿದ್ದ. ಇದೊಂದು ಅತ್ಯಂತ ಧೈರ್ಯಶಾಲಿ ಕಳ್ಳತನವೆಂದು ವಿಶ್ವಾದ್ಯಂತ ಸುದ್ದಿಯಾಗಿತ್ತು. 

2019ರಲ್ಲಿ ಐತಿಹಾಸಿಕ ಬ್ಲೆನ್ ಹೀಮ್ ಅರಮನೆಯಲ್ಲಿ (Blenheim Palace) ಕಲಾ ವಸ್ತು ಪ್ರದರ್ಶನವನ್ನು (Exhibition) ಏರ್ಪಡಿಸಲಾಗಿತ್ತು. ಅಂದು ಚಾಲಾಕಿ ಕಳ್ಳ ಈ ಟಾಯ್ಲೆಟ್ ಅನ್ನು ಕಳ್ಳತನ ಮಾಡಿದ್ದ. ಇಂಗ್ಲೆಂಡಿನ ಆಕ್ಸ್ ಫೋರ್ಡ್ ಶೈರ್ ನ ವುಡ್ ಸ್ಟಾಕ್ ನಲ್ಲಿರುವ ಬ್ಲೆನ್ ಹೀಮ್ ಅರಮನೆಯಿದೆ. ಈ ಅರಮನೆಗೆ 3 ಶತಮಾನಗಳ (Century) ಇತಿಹಾಸವಿದೆ. ಬ್ರಿಟಿಷ್ ಇತಿಹಾಸದ (History) ಪುಟಗಳಲ್ಲಿ ಪ್ರಮುಖ ಸ್ಥಾನ ಪಡೆದಿರುವ ವಿನ್ ಸ್ಟನ್ ಚರ್ಚಿಲ್ ಹುಟ್ಟಿದ್ದು ಇದೇ ಅರಮನೆಯಲ್ಲಿ ಎನ್ನುವುದು ವಿಶೇಷ. ಇದರಲ್ಲಿ ಭಾರೀ ಭದ್ರತೆಯೂ ಇರುತ್ತದೆ. ಆದರೂ ಅದು ಹೇಗೋ ಈ ಕಳ್ಳ ತನ್ನ ಚಾಣಾಕ್ಷತೆಯಿಂದ ಚಿನ್ನದ ಟಾಯ್ಲೆಟ್ (Gold Toilet) ಅನ್ನು ಕದ್ದು ಬಿಟ್ಟಿದ್ದ. ಇದುವರೆಗೂ ಕಳ್ಳ ಯಾರು, ಎಲ್ಲಿದ್ದಾನೆ ಎನ್ನುವ ಮಾಹಿತಿಯೇ ದೊರಕಿರಲಿಲ್ಲ ಎನ್ನುವುದು ವಿಚಿತ್ರವಾದರೂ ಸತ್ಯ.

ಜಿಮ್ಮಿ ಎನ್ನುವ ಹೆಸರಿನ 39 ವರ್ಷದ ಜೇಮ್ಸ್ ಶೀನ್ (James Sheen)  ಕೃತ್ಯವನ್ನು ಮಾಡಿದ್ದಾಗಿ ಇದೀಗ ಒಪ್ಪಿಕೊಂಡಿದ್ದಾನೆ. ಈತ ಅಮೆರಿಕಕ್ಕೆ ತೆರಳಿದ್ದ. ಈತ ವೆಲ್ಲಿಂಗ್ ಬೊರೊದವನಾಗಿದ್ದು, ಕದ್ದ ಮಾಲುಗಳನ್ನು ನಿರ್ವಹಿಸುವ ಕೆಲಸ ಮಾಡುತ್ತಾನೆ. ಈತ ಕಳ್ಳತನದ (Stolen) ಆರೋಪಿ ಎನ್ನುವುದು ಈಗ ಸಾಬೀತಾಗಿದ್ದು, ಆಕ್ಸ್ ಫರ್ಡ್ ಕ್ರೌನ್ ಕೋರ್ಟ್ ನಲ್ಲಿ ಪ್ರಕರಣ ದಾಖಲಾಗಿದೆ. 

ಬೆಡ್ ರೂಮ್ ನಿಂದ - ಟಾಯ್ಲೆಟ್ ವರೆಗೆ ಚಿನ್ನದಿಂದಲೇ ಮಾಡಿದ ವಿಶ್ವದ ಮೊದಲ ಹೋಟೆಲ್ ಇದು!

50 ಕೋಟಿ ರೂಪಾಯಿಯ ಟಾಯ್ಲೆಟ್
ಅಷ್ಟಕ್ಕೂ ಈ ಚಿನ್ನದ ಟಾಯ್ಲೆಟ್ ಕತೆಯೂ ವಿಶೇಷವಾಗಿದೆ. ಇದು 18 ಕ್ಯಾರೆಟ್ ಚಿನ್ನದಿಂದ ಕೂಡಿದ್ದು, ಕೆತ್ತನೆಯಲ್ಲಿ ಅದ್ಭುತವಾಗಿದೆ. ಇದರ ಬೆಲೆ 4.8 ಮಿಲಯನ್ ಡಾಲರ್ ಅಂದರೆ, ಸುಮಾರು 50 ಕೋಟಿ ರೂಪಾಯಿ. ಖ್ಯಾತ ಇಟಾಲಿಯನ್ (Italian) ಕಲಾವಿದ ಮೊರಿಜಿಯೊ ಕೆಟೆಲಾನ್ ವಿನ್ಯಾಸ ಮಾಡಿರುವ ಈ ಟಾಯ್ಲೆಟ್ ಕೇವಲ ಒಂದು ಕಲಾ ವಸ್ತುವಲ್ಲ, ಬದಲಿಗೆ ಸಂಪೂರ್ಣವಾಗಿ ಕಾರ್ಯನಿರ್ವಹಿಸಬಲ್ಲ ಟಾಯ್ಲೆಟ್ ಆಗಿದೆ ಎನ್ನುವುದು ವಿಶೇಷ. ಇದನ್ನು 2019ರಲ್ಲಿ ಪ್ರದರ್ಶನದ ಅಂಗವಾಗಿ ಅರಮನೆಯಲ್ಲಿ ಇನ್ ಸ್ಟಾಲ್ ಮಾಡಲಾಗಿತ್ತು. ಚಿನ್ನದ ಟಾಯ್ಲೆಟ್ ಅನ್ನು ಇನ್ ಸ್ಟಾಲ್ ಮಾಡಿದಾಗ ಊಹಿಸಲಾಗದ ಪರಿಣಾಮಗಳು ಉಂಟಾಗಿದ್ದವು. ಶತಮಾನಗಳ ಹಳೆಯ ಅರಮನೆಗೆ ಇದರಿಂದ ಡ್ಯಾಮೇಜ್ (Damage) ಆಗಿತ್ತು ಹಾಗೂ ನೀರು ಸೋರಿಕೆ ಆರಂಭವಾಗಿತ್ತು. 

ಈ ಜೇಮ್ಸ್ ಶೀನ್ ಕತೆಯೂ ವಿಶಿಷ್ಟವಾಗಿದೆ. ಪ್ರಸಿದ್ಧ ಸ್ಥಳಗಳಿಂದ ವಸ್ತುಗಳನ್ನು ಎಗರಿಸುವುದೆಂದರೆ ಈತನಿಗೆ ಪ್ರೀತಿ. ಕೇವಲ ಇದೊಂದೇ ಅಲ್ಲ, ನ್ಯಾಷನಲ್ ಹಾರ್ಸ್ ರೇಸಿಂಗ್ ಮ್ಯೂಸಿಯಂನಲ್ಲಿದ್ದ 400 ಸಾವಿರ ಡಾಲರ್ ಮೌಲ್ಯದ ಟ್ರ್ಯಾಕ್ಟರ್ ಮತ್ತು ಟ್ರೋಫಿಗಳನ್ನು ಈತ ಕದ್ದಿದ್ದ (Theft) ಎಂದರೆ ಅಚ್ಚರಿಯಾಗಬಹುದು. ಈ ಪ್ರಕರಣದಲ್ಲಿ ಈತನಿಗೆ 17 ವರ್ಷಗಳ ಸಜೆಯೂ ಆಗಿದೆ. ಶೀನ್ ಟಾಯ್ಲೆಟ್ ಕದ್ದಿದ್ದು ತಾನೇ ಎಂದು ಒಪ್ಪಿಕೊಂಡಿದ್ದರೂ  ಇತರ ಮೂವರು ಈ ಪ್ರಕರಣದಲ್ಲಿ (Case) ತಮ್ಮ ಭಾಗಿತ್ವವನ್ನು ಒಪ್ಪಿಕೊಂಡಿಲ್ಲ. ಪ್ರಕರಣ 2025ರ ಫೆಬ್ರವರಿಯಲ್ಲಿ  ವಿಚಾರಣೆಗೆ ಒಳಪಡಲಿದೆ. 

ಬ್ರಿಟನ್‌ ಅರಮನೆಯಿಂದ ಚಿನ್ನದ ಕಮೋಡ್ ಕಳ್ಳತನ!

ಚೀನಾದಲ್ಲೂ ಇದೆ ಚಿನ್ನದ ಟಾಯ್ಲೆಟ್ 
ವಿಶ್ವದ ಗಮನ ಸೆಳೆದ ಚಿನ್ನದ ಟಾಯ್ಲೆಟ್ ಕತೆ ಇದೊಂದೇ ಅಲ್ಲ. 2019ರಲ್ಲಿಯೇ ಹಾಂಗ್ ಕಾಂಗ್ ನ ಆಭರಣ ವರ್ತಕನೊಬ್ಬ ಡೈಮಂಡ್ ನಿಂದ ಕೂಡಿದ್ದ ಚಿನ್ನದ ಟಾಯ್ಲೆಟ್ ಅನ್ನು ಶಾಂಘೈನಲ್ಲಿ ನಡೆದ ಚೀನಾ (China) ಇಂಟರ್ ನ್ಯಾಷನಲ್ ಇಂಪೋರ್ಟ್ ಎಕ್ಸ್ ಪೋದಲ್ಲಿ ಪ್ರದರ್ಶನ ಮಾಡಿದ್ದ. ಇದರ ದರ ಬರೋಬ್ಬರಿ 1.3 ಮಿಲಿಯನ್ ಡಾಲರ್. ಈ ಟಾಯ್ಲೆಟ್ ಸೀಟ್ ಅನ್ನು ಬುಲೆಟ್ ಪ್ರೂಫ್ ಗ್ಲಾಸುಗಳಿಂದ ಮಾಡಲಾಗಿದ್ದು, 40 ಸಾವಿರಕ್ಕೂ ಅಧಿಕ ಸಣ್ಣ ಹರಳುಗಳನ್ನು ಕೂರಿಸಿ ವಿನ್ಯಾಸ ಮಾಡಲಾಗಿದೆ.  

Follow Us:
Download App:
  • android
  • ios