ಬೆಡ್ ರೂಮ್ ನಿಂದ - ಟಾಯ್ಲೆಟ್ ವರೆಗೆ ಚಿನ್ನದಿಂದಲೇ ಮಾಡಿದ ವಿಶ್ವದ ಮೊದಲ ಹೋಟೆಲ್ ಇದು!
ವಿಯೆಟ್ನಾಂನ ರಾಜಧಾನಿ ಹನೋಯ್ ನಲ್ಲಿ ಒಂದು ವಿಶಿಷ್ಟ ಹೋಟೆಲ್ ಇದೆ, ಇದನ್ನು ಸಂಪೂರ್ಣವಾಗಿ ಚಿನ್ನದ ಪದರದಿಂದ ತಯಾರಿಸಲಾಗಿದೆ. ಇಲ್ಲಿ ಮಲಗುವ ಕೋಣೆಯಿಂದ ಟಾಯ್ಲೆಟ್ ಸೀಟ್ ವರೆಗೆ, ಎಲ್ಲವೂ ಚಿನ್ನದಲ್ಲಿಯೇ ಎಲ್ಲವನ್ನೂ ಮಾಡಲಾಗಿದೆ.
ಜಗತ್ತಿನಲ್ಲಿ ಎಂಥೆಂಥದ್ದೋ ಹೊಟೇಲ್ಸ್ (hotel) ಇರೋದನ್ನು ನೀವು ನೋಡಿರಬಹುದು. ಆದರೆ ಸಂಪೂರ್ಣವಾಗಿ ಚಿನ್ನದಲ್ಲೇ ಮಾಡಿದ ಹೊಟೇಲ್ ನೋಡಿದ್ದೀರಾ? ಹೌದು ಚಿನ್ನದಿಂದ ಮಾಡಿದ ವಿಶ್ವದ ಮೊದಲ ಹೋಟೆಲ್ ವಿಯೆಟ್ನಾಂನಲ್ಲಿದೆ, ಇಲ್ಲಿ ಕೋಣೆಯಿಂದ ಟಾಯ್ಲೆಟ್ ಸೀಟ್‌ವರೆಗೆ ಎಲ್ಲವೂ ಚಿನ್ನವಾಗಿದೆ, ಇಲ್ಲಿನ ದರಗಳ ಬಗ್ಗೆ ಕೇಳಿದ್ರೆ ಶಾಕ್ ಆಗೋದು ಖಚಿತ.
ಜಗತ್ತಿನಲ್ಲಿ ಅನೇಕ ವಿಶಿಷ್ಟ ಹೋಟೆಲ್‌ಗಳಿವೆ, ಅವು ತಮ್ಮ ವಿಚಿತ್ರ ವಿನ್ಯಾಸಕ್ಕೆ ಹೆಸರುವಾಸಿ. ಅವುಗಳಲ್ಲಿ ವಿಯೆಟ್ನಾಂನ ರಾಜಧಾನಿ ಹನೋಯ್ನಲ್ಲಿರುವ ಹೋಟೆಲ್ ಕೂಡ ಒಂದು, ಇದರ ಬಗ್ಗೆ ತಿಳಿದರೆ ಆಶ್ಚರ್ಯವಾಗುತ್ತದೆ, ಯಾಕಂದ್ರೆ ಇಲ್ಲಿ ಎಲ್ಲವೂ ಚಿನ್ನದಿಂದ ಲೇಪಿತವಾಗಿದೆ. ಹೌದು, ಇಲ್ಲಿನ ಹೋಟೆಲ್ ಕೋಣೆಗಳು, ಟೈಲ್ಸ್ , ಶೌಚಾಲಯ ಮತ್ತು ಟಾಯ್ಲೆಟ್ ಸೀಟ್ ಎಲ್ಲವೂ ಇಲ್ಲಿ ಚಿನ್ನದಿಂದಲೇ ಮಾಡಲಾಗಿದೆ. ಇದು ಮಾತ್ರವಲ್ಲ, ಇಲ್ಲಿನ ತಿನ್ನುವ ಪಾತ್ರೆಗಳನ್ನು ಸಹ ಚಿನ್ನದಿಂದ (gold plated hotel)ತಯಾರಿಸಲಾಗುತ್ತದೆ.
ಎಷ್ಟು ಕೊಠಡಿಗಳಿವೆ?
ಹನೋಯ್ ನಲ್ಲಿರುವ ಈ ಹೋಟೆಲ್ ಹೆಸರು ಡೋಲ್ಸ್ ಹನೋಯ್ ಗೋಲ್ಡನ್ ಲೇಕ್ (Dols Hanoy Golden Lake). 25 ಮಹಡಿಗಳನ್ನು ಹೊಂದಿರುವ ಈ ಸುಂದರವಾದ ಪಂಚತಾರಾ ಹೋಟೆಲ್ ಅನ್ನು 400 ಕೊಠಡಿಗಳೊಂದಿಗೆ ನಿರ್ಮಿಸಲಾಗಿದೆ. ಈ ಹೋಟೆಲ್ ನ ಗೋಡೆಗಳು 54,000 ಚದರ ಅಡಿ ಚಿನ್ನದ ಲೇಪಿಸಲಾಗಿದೆ.
ಉದ್ಯೋಗಿಗಳ ಡ್ರೆಸ್ ಕೋಡ್ ಕೂಡ ವಿಶಿಷ್ಟವಾಗಿದೆ
ಇಲ್ಲಿನ ಸಿಬ್ಬಂದಿ ಡ್ರೆಸ್ ಕೋಡ್ (Dress Code) ಕೆಂಪು ಮತ್ತು ಚಿನ್ನದ ಬಣ್ಣ ಹೊಂದಿದೆ. ಇಲ್ಲಿನ ಕೋಣೆಗಳಲ್ಲಿನ ಪೀಠೋಪಕರಣಗಳು ಮತ್ತು ವಸ್ತುಗಳು ಸಹ ಚಿನ್ನದಿಂದ ಲೇಪಿತವಾಗಿವೆ. ಇಲ್ಲಿನ ಸ್ನಾನಗೃಹ, ಸಿಂಕ್, ಶವರ್ ಎಲ್ಲವೂ ಚಿನ್ನದಿಂದ ಮಾಡಲ್ಪಟ್ಟಿದೆ.
ಈಜುಕೊಳವನ್ನು ಸಹ ಚಿನ್ನದಿಂದ ನಿರ್ಮಿಸಲಾಗಿದೆ
ಈ ಹೋಟೆಲ್ ನ ಛಾವಣಿಯಲ್ಲಿ ಇನ್ ಫಿನಿಟಿ ಪೂಲ್ (infinity pool) ಇದೆ. ಈ ಕೊಳದ ಹೊರಗಿನ ಗೋಡೆಗಳ ಮೇಲಿನ ಇಟ್ಟಿಗೆಗಳು ಸಹ ಚಿನ್ನದಿಂದ ಲೇಪಿತವಾಗಿವೆ. ಈ ಚಿನ್ನದ ಹೋಟೆಲ್ ಅನ್ನು 2009 ರಲ್ಲಿ ನಿರ್ಮಿಸಲಾಯಿತು. ಚಿನ್ನವು ಮಾನಸಿಕ ಒತ್ತಡವನ್ನು (Mental Stress) ನಿವಾರಿಸುತ್ತದೆ ಎಂದು ನಂಬಲಾಗಿದೆ. ಅದಕ್ಕಾಗಿಯೇ ಈ ಹೊಟೇಲ್ ನ್ನು ಚಿನ್ನದಿಂದ ನಿರ್ಮಿಸಲಾಗಿದೆ ಎಂದು ಹೇಳಲಾಗುತ್ತದೆ.
ಬಾಡಿಗೆ ಎಷ್ಟು?
ಇಲ್ಲಿನ ಕೊಠಡಿಗಳು ಸುಮಾರು 20 ಸಾವಿರ ರೂಪಾಯಿಗಳಿಂದ ಪ್ರಾರಂಭವಾಗುತ್ತವೆ. ಡಬಲ್ ಬೆಡ್ ರೂಮ್ ಸೂಟ್ (double bedroom suit) ನಲ್ಲಿ ರಾತ್ರಿ ತಂಗಲು ಬಾಡಿಗೆ 75 ಸಾವಿರ ರೂ. ಈ ಹೋಟೆಲ್ 6 ರೀತಿಯ ಕೊಠಡಿಗಳು ಮತ್ತು 6 ಸೂಟ್ ಗಳನ್ನು ಹೊಂದಿದೆ. ಪ್ರೆಸಿಡೆನ್ಷಿಯಲ್ ಸೂಟ್ ಬೆಲೆ ಪ್ರತಿ ರಾತ್ರಿಗೆ 4.85 ಲಕ್ಷ ರೂ. ಬಲು ದುಬಾರಿ ಈ ಹೊಟೇಲ್.
ಇಲ್ಲಿ ಗೇಮಿಂಗ್ ಕ್ಲಬ್ ಕೂಡ ಇದೆ
ಹೋಟೆಲ್ ಗೇಮಿಂಗ್ ಕ್ಲಬ್ ಅನ್ನು (gaming club) ಸಹ ಹೊಂದಿದೆ, ಇದು ದಿನದ 24 ಗಂಟೆಗಳ ಕಾಲ ತೆರೆದಿರುತ್ತದೆ. ಕ್ಯಾಸಿನೊ ಮತ್ತು ಪೋಕರ್ ನಂತಹ ಆಟಗಳನ್ನು ಸಹ ಇಲ್ಲಿ ಆಡಲಾಗುತ್ತದೆ. ಇಲ್ಲಿ ನೀವು ಗೆಲ್ಲುವ ಮೂಲಕ ಹಣವನ್ನು ಗಳಿಸಬಹುದು.