ಹುಡುಗ ಪ್ರೀತಿಗೆ ಜಾರಲು 4 ವಾರ ಸಾಕು. ಆದರೆ ಹುಡುಗಿ ಪ್ರೀತಿಯಲ್ಲಿ ಬೀಳಲು ಎಷ್ಟು ದಿನ ಬೇಕು ಗೊತ್ತಾ? ಈ ಕುರಿತು ಕುತೂಹಲ ಮಾಹಿತಿಯೊಂದನ್ನು ಅಧ್ಯಯನ ವರದಿ ಬಹಿರಂಗಪಡಿಸಿದೆ.
ಪ್ರೀತಿ ಯಾವಾಗ ಶುರುವಾಗುತ್ತೆ? ಎಲ್ಲಿ ಹೇಗೆ ಅನ್ನೋದು ಹೇಳೋದಿಕ್ಕೆ ಆಗೋಲ್ಲ. ಹೀಗಾಗಿಯೇ ಪ್ರೀತಿ ಕುರುಡು ಅಂತಾರೆ. ಆದರೆ ಇದೇ ಪ್ರೀತಿ ಕುರಿತು ಅತ್ಯಂತ ಕುತೂಹಲದ ಅಧ್ಯಯನ ವರದಿಯೊಂದ ಪ್ರಕಟವಾಗಿದೆ. ಈ ವರದಿ ಪ್ರೀತಿಯಲ್ಲಿ ಬೀಳಲು ಸರಾಸರಿ ಎಷ್ಟು ದಿನ ಬೇಕು ಅನ್ನೋದು ಅಧ್ಯಯನದ ಮೂಲಕ ಬಹಿರಂಗಪಡಿಸಲಾಗಿದೆ. ಆಸ್ಟ್ರೇಲಿಯಾ ನ್ಯಾಷನಲ್ ಯೂನಿವರ್ಸಿಟಿ ಈ ಅಧ್ಯಯನ ನಡೆಸಿದೆ. ಈ ಅಧ್ಯಯನ ವರದಿ ಫಲಿತಾಂಶ ಇದೀಗ ತಾನೆ ಒನ್ ವೇ ಪ್ರೀತಿ ಆರಂಭಿಸಿದವರಿಗೆ ಮಾರ್ಗದರ್ಶಿಯಾಗಬಹುದು.
ಆಸ್ಟ್ರೇಲಿಯನ್ ನ್ಯಾಷನಲ್ ಯೂನಿವರ್ಸಿಟಿ ಬರೋಬ್ಬರಿ 33 ದೇಶದ 808 ಯುವಕ ಯುವತಿಯರನ್ನು ಮಾದರಿಗಳಾಗಿ ಪರಿಗಣಿಸಿ ಅಧ್ಯಯನ ನಡೆಸಲಾಗಿದೆ. 18 ರಿಂದ 25 ವರ್ಷದ ವಯಸ್ಸಿನವರನ್ನು ಈ ಅಧ್ಯಯನಕ್ಕೆ ಒಳಪಡಿಸಲಾಗಿದೆ. ಆ ಅಧ್ಯಯನದ ಪ್ರಕಾರ ಯುವಕರು ಪ್ರೀತಿಯಲ್ಲಿ ಬೀಳಲು ನಾಲ್ಕು ವಾರ ತೆಗೆದುಕೊಳ್ಳುತ್ತಾರೆ. ಇದು ಸರಾಸರಿ ಸಮಯ. ಆದರೆ ಯುವತಿಯರು 2 ತಿಂಗಳು ಅಂದರೆ ಪುರುಷರಿಗಿಂತ ಡಬಲ್ ಎಂದು ಆಸ್ಟ್ರೇಲಿಯನ್ ಯೂನಿವರ್ಸಿಟಿ ಅಧ್ಯಯನ ಹೇಳುತ್ತಿದೆ.
ಮಾಜಿ ಗರ್ಲ್‌ಫ್ರೆಂಡ್ ಮದುವೆಗೆ ಹಾಜರಾದ ಗೆಳೆಯನ ಭಾವುಕ ಮಾತಿಗೆ ಕಣ್ಣೀರಾದ ಜನ
ಈ ಅಧ್ಯಯನ ವರದಿ ಇಲ್ಲಿಗೆ ಮುಗಿದಿಲ್ಲ, ಇಂಟ್ರೆಸ್ಟಿಂಗ್ ಮಾಹಿತಿ ಇನ್ನೂ ಇದೆ. ಒಮ್ಮೆ ಲವ್‌ನಲ್ಲಿ ಬಿದ್ದ ಯುವಕ, ಪ್ರೀತಿಯಲ್ಲಿನ ಪ್ರಗತಿ, ರೊಮ್ಯಾಂಟಿಕ್ ಸಂಬಂಧ ಬೆಳೆಸಲು ಹೆಚ್ಚು ಸಮಯ ತೆಗೆದುಕೊಳ್ಳುವುದಿಲ್ಲ. ಯುವಕರಿಗೆ ಎಲ್ಲವೂ ಫಾಸ್ಟ್. ಪ್ರೀತಿಯಲ್ಲಿ ಬಿದ್ದ ಯುವಕ ರೊಮ್ಯಾಂಟಿಕ್ ರಿಲೇಶನ್‌ಶಿಪ್ ಬೆಳೆಸಲು 0.98 ತಿಂಗಳು ಮಾತ್ರ ತೆಗೆದುಕೊಳ್ಳುತ್ತಾನೆ. ಆದರೆ ಪ್ರೀತಿಯಲ್ಲಿ ಬಿದ್ದ ಯುವತಿ ರೊಮ್ಯಾಂಟಿಕ್ ರಿಲೇಶನ್‌ಶಿಪ್ ಬೆಳೆಸಲು 1.98 ತಿಂಗಳು ತೆಗೆದುಕೊಳ್ಳುತ್ತಾಳೆ ಎನ್ನುತ್ತಿದೆ ವರದಿ.
ಈ ವರದಿಯಲ್ಲಿ ಮತ್ತೊಂದು ಅಂಶ ಬಯಲಾಗಿದೆ. ಮೊದಲ ನೋಟಕ್ಕೆ ಲವ್ ಅಥವಾ ಲವ್ ಎಟ್ ಫಸ್ಟ್ ಸೈಟ್. ಹೀಗೆ ಮೊದಲ ನೋಟಕ್ಕೆ ಲವ್ ಆಗುವ ಪ್ರಮಾಣದಲ್ಲಿ ಯುವಕರೇ ಹೆಚ್ಚು. ಸುಂದರ ಯುವತಿಯರು ಕಂಡರೆ ಲವ್ ಆಗಿಬಿಡುತ್ತೆ. ಇಲ್ಲೂ ಕೂಡ ಹುಡುಗಿಯರು ಕೊಂಚ ನಿಧಾನ. ಪ್ರೀತಿಯಲ್ಲಿ ಯುವತಿಯರು ಹೆಚ್ಚು ಕಮಿಟ್‌ಮೆಂಟ್ ಬಯಸುತ್ತಾರೆ. ಇನ್ನು ಯುವಕರು ಹುಚ್ಚರಂತೆ ಪ್ರೀತಿಸುತ್ತಾರೆ. ಸರಾಸರಿ ಯುವತಿಯರು ಪ್ರೀತಿಯಲ್ಲಿ ಬೀಳುವ ಮೊದಲು ಪರಿಸ್ಥಿತಿ ಬಗ್ಗೆಯೂ ಆಲೋಚಿಸುತ್ತಾರೆ. ಕೆಲವೊಮ್ಮೆ ಈ ಪರಿಸ್ಥಿತಿ ಆಲೋಚಿ, ಇದಕ್ಕಿಂತ ಮಿಗಿಲಾದ ಪ್ರೀತಿಯಲ್ಲಿ ಬೀಳುತ್ತಾರೆ, ಆಯ್ಕೆ ಮಾಡಿಕೊಳ್ಳುತ್ತಾರೆ. ಆದರೆ ಯುವಕರು ಪರಿಸ್ಥಿತಿ, ಸುತ್ತ ಮುತ್ತಾ, ವಿರೋಧ, ಪ್ರತಿರೋಧಕ್ಕಿಂತ ಪ್ರೀತಿ ಮಾತ್ರ ನೋಡುತ್ತಾರೆ ಎಂದು ಅಧ್ಯಯನ ವರದಿ ಹೇಳುತ್ತಿದೆ.
ಈ ಅಧ್ಯಯನ ವರದಿ ಕೈಯಲ್ಲಿ ಹಿಡಿದು ಪ್ರೀತಿ ಮಾಡಲು ಸಾಧ್ಯವಿಲ್ಲ. ಆದರೆ ಒನ್ ವೇ ಪ್ರೀತಿ ಮಾಡುತ್ತಿರುವವರಿಗೆ ಈ ಅಧ್ಯಯ ವರದಿ ಕೊಂಚ ಮಟ್ಟಿಗೆ ಆತ್ಮವಿಶ್ವಾಸ ನೀಡಿದರೂ ಅಚ್ಚರಿಯಿಲ್ಲ. ಇದು ಆಸ್ಟ್ರೇಲಿಯನ್ ನ್ಯಾಷನಲ್ ಯೂನಿವರ್ಸಿಟಿ ಕೈಗೊಂಡ ಅಧ್ಯಯನ ವರದಿ. ಹೀಗಾಗಿ ಸಮೀಕ್ಷೆ, ವರದಿ ನಿಮ್ಮ ಪ್ರೀತಿಗೆ ಅನ್ವಯವಾಗದೇ ಇರಬಹುದು.
ಮದುವೆ ಆಮಂತ್ರಣ ಪತ್ರಿಕೆಯಲ್ಲಿ ಹೆಸರಿನ ಜೊತೆ ಜನ್ಮ ದಿನಾಂಕ ಕಡ್ಡಾಯ, ಸರ್ಕಾರ ಆದೇಶ
