8 ವರ್ಷದ ಪ್ರೀತಿಗೆ ಕೋವಿಡ್ ಅಡ್ಡ ಬಂದಿತ್ತು. ಪರಸ್ಪರ ಒಪ್ಪಿಗೆ ಮೇರೆಗೆ ಇಬ್ಬರು ದೂರವಾದರು. ಇದೀಗ ಮಾಜಿ ಗರ್ಲ್‌ಫ್ರೆಂಡ್ ಆಹ್ವಾನದ ಮೇರೆಗೆ ಆಕೆಯ ಮದುವೆಗೆ ಹಾಜರಾಗಿದ್ದ.ನೋವಿನಿಂದ ಮಾಜಿ ಪ್ರಿಯಕರ ಆಡಿದ ಮಾತಿಗೆ ಜನರು ಭಾವುಕರಾಗಿದ್ದಾರೆ. ಅಷ್ಟಕ್ಕೂ ಇವರ ಪ್ರೀತಿ ಅಂತ್ಯಗೊಂಡಿದ್ದೇಗೆ? ಆತ ಆಡಿದ ಮಾತುಗಳೇನು? 

ದೆಹಲಿ(ಮಾ.02) ಸಿನಿಮಾಗಳಲ್ಲಿ ಪ್ರೀತಿ ಮುರಿದು ಬಿದ್ದ ಬಳಿಕ ಹೀರೋ ಪಾಡು, ಪರಿಸ್ಥಿತಿ ಕುರಿತು ಹಲವು ದೃಶ್ಯಗಳಿವೆ. ಆದರೆ ನಿಜ ಜೀವನದಲ್ಲಿ ಹೀಗೆ ನಡದರೆ? ಇಲ್ಲೊಂದು ಘಟನೆ ಯಾವ ಕಣ್ಣೀರ ಸಿನಿಮಾಗೂ ಕಡಿಮೆ ಇಲ್ಲ. ಆದರೆ ಇದು ಸಿನಿಮಾ ಅಲ್ಲ, ನಡೆದ ಘಟನೆ. ದೆಹಲಿಯ ಯುವಕನ ಮುರಿದು ಬಿದ್ದ ಪ್ರೀತಿ, ಮಾಜಿ ಗರ್ಲ್‌ಫ್ರೆಂಡ್ ಮದುವೆ, ನೋವಿನ ಮಾತುಗಳಿಗೆ ಜನರು ಭಾವುಕರಾಗಿದ್ದಾರೆ. ಬರೋಬ್ಬರಿ 8 ವರ್ಷಗಳ ಪ್ರೀತಿ ಅನಿವಾರ್ಯವಾಗಿ ಅಂತ್ಯಗೊಂಡಿತ್ತು. ಇದಕ್ಕೆ ಕೋವಿಡ್ ಕಾರಣವಾಯಿತು. ಇದೀಗ ಮಾಜಿ ಗರ್ಲ್‌ಫ್ರೆಂಡ್ ಆಹ್ವಾನದ ಮೇರೆಗೆ ಮದುವೆಗೆ ಹಾಜರಾಗಿದ್ದಾನೆ. ಭಾರವಾದ ಮನಸ್ಸಿನಿಂದ ಮದುವೆಯಲ್ಲಿ ಮಾಜಿ ಗೆಳತಿಗೆ ಆಶೀರ್ವಾದ ಮಾಡಿದ ಈತ, ರೆಡ್ಡಿಟ್‌ನಲ್ಲಿ ತನ್ನ ನೋವನ್ನು ಹಂಚಿಕೊಂಡಿದ್ದಾನೆ. ಈತನ ಮಾತುಗಳು ಹಲವರ ಕಣ್ಣಾಲಿ ತೇವಗೊಳಿಸಿದೆ.

ಮಾಜಿ ಗೆಳತಿಯ ಮದುವೆಗೆ ಹಾಜರಾಗಿ ಬಂದ ಬಳಿಕ ಅತೀವ ನೋವಿನಿಂದ ಈತ ತನ್ನ ಭಾವನೆಗಳನ್ನು ಪೋಸ್ಟ್ ಮಾಡಿದ್ದಾನೆ. ಇದು ನನಗೆ ಹೃದಯ ಒಡೆದ, ಅತೀ ನೋವಿನ ಕ್ಷಣವಾಗಿತ್ತು. ನಮ್ಮದು 8 ವರ್ಷಗಳ ಸುಮಧುರ ಸಂಬಂಧವಾಗಿತ್ತು. ಆದರೆ ಕೋವಿಡ್ ವಕ್ಕರಿಸಿ ಎಲ್ಲಾ ಹಾಳು ಮಾಡಿತ್ತು. ಕೋವಿಡ್ ಕಾರಣದಿಂದ ನಾನು ಕೆಲಸ ಕಳೆದುಕೊಂಡೆ. ಮಾನಸಿಕವಾಗಿ ಕುಗ್ಗಿ ಹೋದೆ. ಎಲ್ಲವನ್ನು ಸರಿದೂಗಿಸಲು ಹೆಣಗಾಡಿದೆ. ಮರಳಿ ಉದ್ಯೋಗ ಗಿಟ್ಟಿಸಿಕೊಳ್ಳಲು ಪ್ರಯತ್ನಿಸಿದೆ. ಆದರೆ ನನಗೆ ಸುದೀರ್ಘ ದಿನ ಬೇಕಾಯಿತು. ಇದರ ನಡುವೆ ನನ್ನ ಪ್ರೀತಿಯ ಗೆಳತಿಯನ್ನು ಮದುವೆಯಾಗುವ ಯಾವುದೇ ಪರಿಸ್ಥಿತಿಯಲ್ಲಿ ನಾನಿರಲಿಲ್ಲ. ಒತ್ತಡ ಹೆಚ್ಚಾಯಿತು. ಪರಸ್ಪರ ಒಪ್ಪಿಗೆ ಮೇರೆಗೆ ನಾವು ಸಂಬಂಧ ಕಡಿದುಕೊಳ್ಳಬೇಕಾಯಿತು. ಕಾರಣ ನಾನು ಆಕೆಯನ್ನು ಮದುವೆಯಾಗುವ ಶಕ್ತಿ, ಜೊತೆಗೆ ಬಾಳುವ ಸಣ್ಣ ದಾರಿಯೂ ನನ್ನ ಮುಂದೆ ಇರಲಿಲ್ಲ. ಇಂದು ಕೊನೆಯದಾಗಿ ಆಕೆಯನ್ನು ನೋಡುವ ಮನಸ್ಸಾಯಿತು. ಆಕೆ ತುಂಬಾ ಸುಂದರವಾಗಿ ಕಾಣುತ್ತಿದ್ದಳು. ಆಕೆಗೆ ಸುಖ ಸಂತೋಷ ಎಲ್ಲವನ್ನು ದೇವರು ನೀಡಲಿ ಎಂದು ಪ್ರಾರ್ಥಿಸುತ್ತೇನೆ. ಇದು ತನ್ನ ಪ್ರೀತಿ ಕುರಿತು ನೋವಿನಿಂದ ಬರೆದುಕೊಂಡ ಮಾತುಗಳು. 

ಮದುವೆ ಆಮಂತ್ರಣ ಪತ್ರಿಕೆಯಲ್ಲಿ ಹೆಸರಿನ ಜೊತೆ ಜನ್ಮ ದಿನಾಂಕ ಕಡ್ಡಾಯ, ಸರ್ಕಾರ ಆದೇಶ

ಈ ಪೋಸ್ಟ್ ನೋಡಿದ ಹಲವರು ಭಾವುಕರಾಗಿದ್ದಾರೆ. ಇದು ನಿಜವಾದ ಪ್ರೀತಿಯಾಗಿತ್ತು. ಹೇಗಾದರೂ ಮಾಡಿ ನೀವು ಒಂದಾಗಬೇಕಿತ್ತು ಎಂದು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಈ ಮಾತುಗಳು ತುಂಬಾ ನೋವು ತರಿಸುತ್ತಿದೆ. ಇದನ್ನು ಅನುಭವಿಸಿದ ಈತನ ಪರಿಸ್ಥಿತಿ ಊಹಿಸಲು ಅಸಾಧ್ಯ. ಆದರೂ ನಗುತ್ತಾ ಮದುವೆಗೆ ಹಾಜರಾಗಿ ಆಶೀರ್ವದಿಸಿದ್ದಾನೆ. ಒಳ್ಳೆಯದಾಗಲಿ ಎಂದು ಹಲವರು ಕಮೆಂಟ್ ಮಾಡಿದ್ದಾರೆ.

ಹೌದು, ಇದು ಹೃದಯ ಒಡೆದ ಪ್ರೀತಿ. ಇಲ್ಲಿ ಇಬ್ಬರ ಹೃದಯವೂ ಒಡೆದಿದೆ. ಆಕೆ ಬೇರೆ ದಾರಿ ಇಲ್ಲದೆ ಮದುವೆಯಾಗಿದ್ದಾಳೆ. ಈತ ಬೇರೆ ದಾರಿಯಿಲ್ಲದೆ ಮದುವೆಯಾಗಲು ಸಾಧ್ಯವಾಗಿಲ್ಲ. 8 ವರ್ಷಗಳಿಂದ ಪ್ರೀತಿಸುತ್ತಿದ್ದರು. 8 ವರ್ಷದಲ್ಲಿ ಸಣ್ಣ ಪುಟ್ಟ ಜಗಳ ಎಲ್ಲವೂ ಆಗಿದೆ. ಆದರೆ ವರ್ಷದಿಂದ ವರ್ಷಕ್ಕೆ ಸಂಬಂಧ ಗಟ್ಟಿಯಾಗಿದೆ. ಕೋವಿಡ್ ಸಂದರ್ಭದಲ್ಲಿ ಕೆಲಸ ಕಳೆದುಕೊಂಡ ಈತ, ಮರಳಿ ಕಲಸ ಗಿಟ್ಟಿಸಿಕೊಳ್ಳಲು ಹೆಣಗಾಡಿದ್ದಾನೆ. ಆದರೆ ಆಕೆಯ ಮನೆಯಲ್ಲಿ ಮದುವೆ ಒತ್ತಡಗಳು ಹೆಚ್ಚಿದೆ. ಇತ್ತ ಗೆಳಯ ಮಾತ್ರ ಸಾಲದ ಸುಳಿಯಲ್ಲಿ ಮುಳುಗಿದ್ದ. ಇಬ್ಬರ ಮನೆಯಲ್ಲೂ ಪ್ರೀತಿ ವಿಚಾರ ಗೊತ್ತೆ ಇಲ್ಲ. ಕೆಲಸ ಇಲ್ಲದ ಪರಿಸ್ಥಿತಿಯಲ್ಲಿ ಈಕೆಯ ಮನೆಯಲ್ಲಿ ಪ್ರೀತಿ, ಮದುವೆ ವಿಚಾರ ಪ್ರಸ್ತಾಪಿಸವುದಾದರೂ ಹೇಗೆ? ಇದಕ್ಕಿಂತ ಹೆಚ್ಚಾಗಿ ಈತ ಮಾನಸಿಕವಾಗಿ ಕುಗ್ಗಿ ಹೋಗಿದ್ದ. ಬದುಕು ಕಟ್ಟಿಕೊಳ್ಳುತ್ತೇನೆ ಅನ್ನೋ ವಿಶ್ವಾಸವೂ ದೂರವಾಗಿತ್ತು. ಆಕೆಯ ಮನೆಯಲ್ಲಿ ಮದುವೆ ಪ್ರಪೋಸಲ್, ಒತ್ತಡ ಹೆಚ್ಚಾದಾಗ ಇಬ್ಬರು ಕುಳಿತು ಚರ್ಚಿಸಿ ತೆಗೆದುಕೊಂಡ ನಿರ್ಧಾರವೇ ಹೋದೆಯ ಗೆಳೆಯ ಒ ಜೊತೆಗಾರ ಸೇರಲು ಬಂದಾಗ. ಬ್ರೇಕ್ ಅಪ್ ಬಳಿಕ ಇಬ್ಬರು ಮನಸ್ಸು ಕದಡಿದೆ. ಬದುಕು ಕಣ್ಣೀರಾಗಿದೆ. ಕಣ್ಮೀರಿನಲ್ಲೇ ಮದುವೆ ನಡೆದು ಹೋಗಿದೆ. ಈತ ಭಾರವಾದ ಮನಸ್ಸಿನೊಂದಿಗೆ ಹೆಜ್ಜೆ ಹಾಕಿದ್ದಾನೆ.

ಮದುವೆಯಾದ ನವ ಜೋಡಿಯ ಸೋಶಿಯಲ್ ಮೀಡಿಯಾ ಕ್ರೇಜ್, ಚರ್ಚೆಗೆ ಗ್ರಾಸವಾದ ವಿಡಿಯೋ