ಪ್ರೀತಿ ತೋರ್ಪಡಿಸದ ಅಪ್ಪನ ಪ್ರೀತಿ ನೋಡಿ... ಕಣ್ಣಂಚು ತೇವಗೊಳಿಸಿದ ವಿಡಿಯೋ
ಅಪ್ಪನ ಪ್ರೀತಿ ಎಲೆಮರೆಯ ಕಾಯಂತೆ ಮಕ್ಕಳ ಪಾಲಿಗೆ ಕಾಣಿಸದೇ ಹೋಗಿ ಕಡಗಣನೆಯಾಗುತ್ತದೆ. ಅಪ್ಪನ ನಿಸ್ವಾರ್ಥ ಪ್ರೀತಿಯ ಬಗ್ಗೆ ಅನೇಕರು ಅನೇಕ ಬಾರಿ ಬರೆದುಕೊಂಡಿದ್ದಾರೆ.

ನವದೆಹಲಿ: ಪೋಷಕರು ಅದರಲ್ಲೂ ಅಪ್ಪ ಮಕ್ಕಳ ಮೇಲೆ ತೋರಿಸುವ ಪ್ರೀತಿಯ ರೀತಿಯೇ ಬೇರೆಯದ್ದು, ಎಂದೂ ಕೂಡ ಅಪ್ಪ ಮಕ್ಕಳಿಗೆ ನಾ ನಿಮ್ಮನ್ನು ಪ್ರೀತಿಸುತ್ತೇನೆ ಎಂದು ಹೇಳುವುದೇ ಇಲ್ಲ. ಆದರೆ ಅಪ್ಪಂದಿರು ತಮ್ಮ ಕಾರ್ಯದಲ್ಲಿ ಅದನ್ನು ತೋರಿಸುತ್ತಾರೆ. ಇದೇ ಕಾರಣಕ್ಕೆ ಅಪ್ಪನ ಪ್ರೀತಿ ಎಲೆಮರೆಯ ಕಾಯಂತೆ ಮಕ್ಕಳ ಪಾಲಿಗೆ ಕಾಣಿಸದೇ ಹೋಗಿ ಕಡಗಣನೆಯಾಗುತ್ತದೆ. ಅಪ್ಪನ ನಿಸ್ವಾರ್ಥ ಪ್ರೀತಿಯ ಬಗ್ಗೆ ಅನೇಕರು ಅನೇಕ ಬಾರಿ ಬರೆದುಕೊಂಡಿದ್ದಾರೆ. ಹಾಗೆಯೇ ಈಗ ಮತ್ತೊಬ್ಬರು ತಮ್ಮ ಅಪ್ಪನ ಕಾಳಜಿಯ ಜೊತೆಗೆ ಪ್ರೀತಿಯೇ ತುಂಬಿರುವ ಸಣ್ಣ ವಿಡಿಯೋವೊಂದನ್ನು ಸಾಮಾಜಿಕ ಜಾಲತಾಣ ಇನ್ಸ್ಟಾಗ್ರಾಮ್‌ನಲ್ಲಿ ಪೋಸ್ಟ್ ಮಾಡಿದ್ದು, ಈ ವಿಡಿಯೋ ನೋಡಿದ ನೆಟ್ಟಿಗರು ಕೂಡ ಭಾವುಕರಾಗಿದ್ದಾರೆ.
ಪವನ್ ಶರ್ಮಾ (Pawan Sharma) ಎಂಬುವವರು ಸಾಮಾಜಿಕ ಜಾಲತಾಣದಲ್ಲಿ (Social Media) ಈ ವಿಡಿಯೋವನ್ನು ಪೋಸ್ಟ್ ಮಾಡಿದ್ದಾರೆ. ಪ್ರತಿ ಬಾರಿಯೂ ಈ ಸಂದರ್ಭ ನನ್ನನ್ನು ಭಾವುಕನನ್ನಾಗಿಸುತ್ತದೆ ಎಂದು ಅವರು ಬರೆದುಕೊಂಡಿದ್ದಾರೆ. ಪ್ರತಿಬಾರಿಯೂ ನನ್ನನ್ನು ಬಿಡಲು ರೈಲು ನಿಲ್ದಾಣಕ್ಕೆ ಬರುವ ಅಪ್ಪ ರೈಲು ಮರೆಯಾಗುವವರೆಗೂ ನಾ ಕಾಣದಾಗುವವರೆಗೂ ಪ್ಲಾಟ್‌ಫಾರ್ಮ್‌ನಲ್ಲಿ ನಡೆದುಕೊಂಡು ಬರುತ್ತಾರೆ ಎಂದು ಪವನ್ ಶರ್ಮಾ ಬರೆದುಕೊಂಡಿದ್ದಾರೆ. ಅದರಂತೆ ಪ್ಲಾಟ್‌ಫಾರ್ಮ್‌ನಲ್ಲಿ ಅವರ ತಂದೆ ರೈಲಿನ ಜೊತೆ ಜೊತೆಯೇ ಭಾವುಕರಾಗಿ ಸಾಗುವುದನ್ನು ನೋಡಬಹುದಾಗಿದೆ.
ಮಗನ ತಲೆಗೆ ಚಮಚದಿಂದ ಬ್ಯೂಟಿಫುಲ್ ಶೇಪ್ ನೀಡಿದ ಪಪ್ಪಾ... ವೈರಲ್ ವಿಡಿಯೋ
ಸಾಮಾನ್ಯವಾಗಿ ಮಕ್ಕಳೆಷ್ಟೇ ದೊಡ್ಡವರಾಗಲಿ ಪೋಷಕರ ಪಾಲಿಗೆ ಅವರಿನ್ನೂ ಮಕ್ಕಳೇ ಆಗಿರುತ್ತಾರೆ. ಇದೇ ಕಾರಣಕ್ಕೆ ಉದ್ಯೋಗ ಶಿಕ್ಷಣ (Education) ಎಂದು ಮಕ್ಕಳನ್ನು ದೂರ ಕಳುಹಿಸುವ ಸಂದರ್ಭ ಬಂದಾಗಲೆಲ್ಲಾ ಪೋಷಕರು ಬಹಳ ಭಾವುಕರಾಗುತ್ತಾರೆ. ಅಮ್ಮ ಕಣ್ಣೀರಿಡುತ್ತಾ ಬೀಳ್ಕೊಟ್ಟರೆ, ಅಪ್ಪ ಎಂದಿಗೂ ಯಾರ ಮುಂದೆಯೂ ಅಳದೇ ನಿರ್ಭಾವುಕನಂತೆ ವರ್ತಿಸುತ್ತಾ ಮಕ್ಕಳನ್ನು ಬೀಳ್ಕೊಡುತ್ತಾನೆ. ನಿರ್ಭಾವುಕ ಮನದ ಹಿಂದಿರುವ ಭಾವುಕತೆ ಕಾಳಜಿಯನ್ನು ಮಕ್ಕಳು ಅರ್ಥ ಮಾಡಿಕೊಂಡರೆ ಅದೇ ಆತನಿಗೆ ನೂರಾನೆ ಬಲ ನೀಡುತ್ತದೆ. ಅದೇ ರೀತಿ ಇಲ್ಲಿ ಅಪ್ಪನೇನು ಅಳುತ್ತಿಲ್ಲ. ಆದರೆ ಮಗ ದೂರ ಹೋಗುತ್ತಿರುವಾಗ ಆಗುವ ಬೇಸರವನ್ನು ಆತನ ಮುಖವೇ ಹೇಳುತ್ತಿದೆ. ಹಾಗಾಗಿಯೇ ಈ ವಿಡಿಯೋ ಸಾಕಷ್ಟು ಜನರನ್ನು ಭಾವುಕರನ್ನಾಗಿಸಿ ಕಣ್ಣೀರಿಡುವಂತೆ ಮಾಡಿದೆ.
ಈ ವಿಡಿಯೋವನ್ನು 9.8 ಲಕ್ಷ ಜನ ವೀಕ್ಷಿಸಿದ್ದು, ಅನೇಕರು ಕಾಮೆಂಟ್ ಮಾಡಿದ್ದಾರೆ. ಅನೇಕರು ನಮ್ಮ ತಂದೆ ಕೂಡ ಇದೇ ರೀತಿ ಮಾಡುತ್ತಾರೆ. ನಾವು ಮರೆಯಾಗುವವರೆಗೂ ನೋಡುತ್ತಾ ಕೈ ಬೀಸುತ್ತಾ ನಿಂತಿರುತ್ತಾರೆ ಎಂದು ಮತ್ತೊಬ್ಬರು ತಮ್ಮ ಅಪ್ಪನ ಬಗ್ಗೆ ಹೇಳಿಕೊಂಡಿದ್ದಾರೆ. ಇದು ಪ್ರೀತಿಯನ್ನು ತೋರಿಸಲು ಅವರದೇ ಆತ ರೀತಿ ಎಂದು ಮತ್ತೊಬ್ಬರು ಕಾಮೆಂಟ್ ಮಾಡಿದ್ದಾರೆ. ಅವನಿಗೆಷ್ಟು ಬೇಸರವಾಗುತ್ತಿದೆ ಎಂಬುದು ಅವನಿಗೇ ಗೊತ್ತು. ಪುರುಷ ಎಂಬ ಕಾರಣಕ್ಕೆ ಆತ ಅಳುವಂತಿಲ್ಲ ಎಂದು ಮತ್ತೊಬ್ಬರು ಕಾಮೆಂಟ್ ಮಾಡಿದ್ದಾರೆ.
ಬದುಕಿಲ್ಲ ಎಂದು ಭಾವಿಸಿದ್ದ ಅಪ್ಪನನ್ನು ಹುಡುಕಿದ ಮಗಳು: ಬೇರೆ ದೇಶದಲ್ಲಿದ್ರೂ ಅಪ್ಪ ಮರಳಿ ಸಿಕ್ಕ ಕತೆ
ಎಂತಹಾ ಸುಂದರವಾದ ಪೋಸ್ಟ್ ಇದು. ಈಗ ಪ್ರತಿಯೊಬ್ಬರು ಉಬೆರ್ ಉಲಾ ಮುಂತಾದ ಗಾಡಿಗಳನ್ನು ಬುಕ್ ಮಾಡಿಕೊಂಡು ಬರುತ್ತಾರೆ. ಯಾರೂ ಕೂಡ ಡ್ರಾಪ್ ಮಾಡುವುದಕ್ಕಾಗಿ ಕರೆದುಕೊಂಡು ಹೋಗುವುದಕ್ಕಾಗಲಿ ಬರುವುದಿಲ್ಲ. ಹೊರಗೆ ನೋಡುತ್ತಾ ಕರೆದುಕೊಂಡು ಹೋಗಲು ಬರುವ ನಮ್ಮವರಿಗಾಗಿ ನೋಡುತ್ತಾ ನಿಲ್ಲುವ ಆ ಭಾವನೆಗಳಿಗೆ ಬೆಲೆ ಕಟ್ಟಲಾಗದು ಎಂದು ಮತ್ತೊಬ್ಬರು ಕಾಮೆಂಟ್ ಮಾಡಿದ್ದಾರೆ.