ಬದುಕಿಲ್ಲ ಎಂದು ಭಾವಿಸಿದ್ದ ಅಪ್ಪನನ್ನು ಹುಡುಕಿದ ಮಗಳು: ಬೇರೆ ದೇಶದಲ್ಲಿದ್ರೂ ಅಪ್ಪ ಮರಳಿ ಸಿಕ್ಕ ಕತೆ
ಕಳೆದುಹೋದ ವಸ್ತುವನ್ನು ಹುಡುಕುವಂತೆ ತಂದೆಯನ್ನು ಹುಡುಕಿ ಪತ್ತೆ ಮಾಡಿದ್ದಾಳೆ ನ್ಯೂಜಿಲ್ಯಾಂಡಿನ ಶಾರ್ನಿ, ಅದೂ ಸಾಮಾಜಿಕ ಜಾಲತಾಣದ ಮೂಲಕ. ಬ್ರಿಟನ್ ಪ್ರಜೆಯಾಗಿರುವ ತನ್ನ ತಂದೆಯನ್ನು ಆಕೆ ಪತ್ತೆ ಮಾಡಿರುವ ರೀತಿ ರೋಮಾಂಚಕ. ಬೇರೆ ಬೇರೆ ದೇಶದಲ್ಲಿರುವ ತಂದೆ- ಮಗಳು ಈಗ ಭೇಟಿಯಾಗುವ ಕ್ಷಣಕ್ಕೆ ಕಾಯುತ್ತಿದ್ದಾರೆ.
ಕಳೆದುಹೋದ ವಸ್ತು ಸಿಕ್ಕರೆ ಎಷ್ಟೆಲ್ಲ ಸಂತಸ ಪಡುತ್ತೇವೆ. ಎಂದೋ ಕಣ್ಮರೆಯಾದ ವಸ್ತು ಹಲವು ವರ್ಷಗಳ ಬಳಿಕ ಮರಳಿ ಸಿಕ್ಕಾಗ ಅದ್ಭುತವೊಂದು ಘಟಿಸಿದಂತೆ ಥ್ರಿಲ್ ಗೆ ಒಳಗಾಗುತ್ತೇವೆ. ಇನ್ನು, ಸತ್ತು ಹೋಗಿದ್ದಾನೆಂದು ನಂಬಿದ್ದ ಅಪ್ಪ ದೊರೆತುಬಿಟ್ಟರೆ ಮಕ್ಕಳಿಗೆ ಅದೆಷ್ಟು ಸಂತಸ ಆಗುವುದಿಲ್ಲ? ನ್ಯೂಜಿಲ್ಯಾಂಡಿನ ಶಾರ್ನಿ ಎಂಬಾಕೆಗೆ ಇಂಥದ್ದೊಂದು ಅನುಭವವಾಗಿದೆ. ಟಿಕ್ ಟಾಕ್ ನಲ್ಲಿ ಈ ಸಂಗತಿಯನ್ನು ಆಕೆ ಹಂಚಿಕೊಂಡಿದ್ದು, ಈ ವಿಡಿಯೋ ಈಗ ವೈರಲ್ ಆಗಿದೆ. ತನ್ನ ಅಪ್ಪನನ್ನು ಮರಳಿ ಗಳಿಸಿದ ಈ ಕಥೆ ಥೇಟ್ ಸಿನಿಮೀಯ ಶೈಲಿಯಲ್ಲೇ ಇದೆ. ಶಾರ್ನಿಗೆ ಹುಟ್ಟಿದಾಗಿನಿಂದ ಆಕೆಯ ಅಮ್ಮ ಹೇಳಿದ್ದುದು ಒಂದೇ ಕಥೆ. ಅದೆಂದರೆ, “ನಿನ್ನ ತಂದೆ ಬದುಕಿಲ್ಲ, ನೀನು ಹುಟ್ಟಿದಾಗಲೇ ಸಾವಿಗೆ ತುತ್ತಾಗಿದ್ದಾರೆʼ ಎನ್ನುವುದು. ಆದರೂ ಶಾರ್ನಿಗೆ ತನ್ನ ಅಪ್ಪ ಎಂದಾದರೂ ಮರಳಿ ಸಿಗುತ್ತಾರೆ ಎನ್ನುವ ಅದೇನೋ ನಂಬಿಕೆ ಇತ್ತು ಎಂದರೆ ಅಚ್ಚರಿ ಪಡಲೇಬೇಕು. ಅಪ್ಪ ಜೀವಂತವಾಗಿದ್ದಾರೆ ಎಂದೇ ಆಕೆಗೆ ಅನಿಸುತ್ತಿತ್ತು, ಹಾಗೂ ಈ ಕಾರಣದಿಂದ ಆಕೆ ತನ್ನ ಅಪ್ಪನನ್ನು ಹುಡುಕುತ್ತಲೇ ಇದ್ದಳು!
ಶಾರ್ನಿಗೆ (Sharnee) ಈಗ 31ರ ವಯೋಮಾನ. ಈಗ ಆಕೆಗೆ ತಂದೆ (Father) ದೊರೆತಿದ್ದಾರೆ. ಆಕೆಯ ಅಮ್ಮ (Mother) ತನ್ನ ಮಗಳಿಗೆ “ನಿನ್ನ ತಂದೆ ತೀರಿ ಹೋಗಿದ್ದಾರೆʼ ಎಂದೇ ಹೇಳಿಕೊಂಡು ಬಂದಿದ್ದಳು. ಎಲ್ಲರೂ ಆತ ತೀರಿ (Dead) ಹೋಗಿದ್ದಾನೆ ಎಂದೇ ಹೇಳುತ್ತಿದ್ದರು. ಆದರೆ, ಶಾರ್ನಿಗೆ ಮಾತ್ರ ಈ ಕತೆಯಲ್ಲಿ ನಂಬಿಕೆ ಇರಲಿಲ್ಲ. ಬಹಳ ಸಮಯದಿಂದ ಫೇಸ್ ಬುಕ್ (Facebook), ಇನ್ ಸ್ಟಾಗ್ರಾಮ್ ಸೇರಿದಂತೆ ಹಲವು ಸಾಮಾಜಿಕ ಜಾಲತಾಣಗಳಲ್ಲಿ (Social Media) ತಂದೆಯನ್ನು ಹುಡುಕುತ್ತಿದ್ದಳು. ಹೀಗೆಯೇ ಒಂದು ದಿನ ಅಚಾನಕ್ಕಾಗಿ ಆಕೆಗೆ ಅಪ್ಪ ಸಿಕ್ಕೇ ಬಿಟ್ಟ ಕತೆ ಅದ್ಭುತವೆನಿಸುತ್ತದೆ. ಶಾರ್ನಿ ನ್ಯೂಜಿಲ್ಯಾಂಡ್ (New Zealand) ನಲ್ಲಿ ನೆಲೆಸಿದ್ದಾಳೆ. ಆಕೆಯ ಅಪ್ಪ ಬ್ರಿಟನ್ (Britain) ವಾಸಿ.
ತಂದೆ-ತಾಯಿ ವಿಚ್ಛೇದನಕ್ಕೆ ಕಾರಣ ಈಗಲೂ ಸೀಕ್ರೆಟ್; ಕಹಿ ಘಟನೆ ಹಂಚಿಕೊಂಡ ಕತ್ರಿನಾ ಕೈಫ್
ಅಪ್ಪನ ಹುಡುಕಾಟದಲ್ಲಿ ಸಾಮಾಜಿಕ ಜಾಲತಾಣಗಳನ್ನು ಜಾಲಾಡುತ್ತಿದ್ದ ಶಾರ್ನಿಗೆ ಒಂದು ದಿನ ತನ್ನದೇ ಮುಖ ಹೋಲುವ ವ್ಯಕ್ತಿಯೊಬ್ಬರ ಪ್ರೊಫೈಲ್ ಕಂಡಿದೆ. ಫೋಟೊವನ್ನು ತಿರುತಿರುಗಿ ನೋಡಿದರೂ ತನ್ನಂತೆಯೇ ಇದ್ದಾರೆ ಎನ್ನುವ ಭಾವನೆ. ಆಗ ಅವಳಿಗೆ ಇವರೇ ತನ್ನ ತಂದೆ ಇರಬಹುದು ಎನ್ನುವ ಭಾವನೆ ಮೂಡಿತಂತೆ. ಆಗ ಆ ವ್ಯಕ್ತಿಗೆ ಚಾಟ್ (Chat) ಮಾಡಿದ್ದಾಳೆ. ಬಳಿಕ ಇಬ್ಬರ ನಡುವೆ ಮಾತುಕತೆ ನಡೆದಿದ್ದು, ಅವರೇ ತನ್ನ ತಂದೆ ಎನ್ನುವ ನಿರ್ಧಾರಕ್ಕೆ ಬಂದಿದ್ದಾಳೆ. ಸೋಷಿಯಲ್ ಮೀಡಿಯಾದಲ್ಲಿ ನಡೆಸಿದ ಮಾತುಕತೆಯ ಸ್ಟ್ರೀನ್ ಶಾಟ್ (Screen Shot) ಗಳನ್ನೂ ಆಕೆ ಟಿಕ್ ಟಾಕ್ ನಲ್ಲಿ ಹಂಚಿಕೊಂಡಿದ್ದಾಳೆ.
ಏನು ಮಾತುಕತೆ ನಡೆದ್ದದು?: ಇಬ್ಬರ ನಡುವೆ ನಡೆದಿರುವ ಮಾತುಕತೆ ಭಾರೀ ಕುತೂಹಲ ಕೆರಳಿಸುವಂತಿದೆ. ಆಕೆ, ಆ ವ್ಯಕ್ತಿಯನ್ನು “1990ರ ಸುಮಾರಿಗೆ ನೀವು ನ್ಯೂಜಿಲ್ಯಾಂಡ್ ಗೆ ಬಂದಿದ್ರಾ?ʼ ಎಂದು ಪ್ರಶ್ನಿಸಿದ್ದಾಳೆ. ಅದಕ್ಕೆ ಅವರು ಮೂರು ಬಾರಿ ಬಂದಿದ್ದೆ ಎಂದು ಹೇಳಿದ್ದಾರೆ. ಆಗ ಅವರು ನೀನ್ಯಾರು ಎಂದು ಶಾರ್ನಿಯನ್ನು ಪ್ರಶ್ನಿಸಿದ್ದಾರೆ. ಅದಕ್ಕೆ ಆಕೆ, “ನ್ಯೂಜಿಲ್ಯಾಂಡ್ ನ ಕ್ರೈಸ್ಟ್ ಚರ್ಚ್ (Christ Church) ಗೆ ಬಂದಿದ್ರಾ? ಅಲ್ಲಿ ಯಾವುದಾದರೂ ಮಹಿಳೆಯೊಂದಿಗೆ (Woman) ಸಂಬಂಧ ಬೆಳೆಸಿದ ನೆನಪಿದೆಯೇ?ʼ ಎಂದೆಲ್ಲ ಪ್ರಶ್ನಿಸಿದ್ದಾಳೆ. ಇದಕ್ಕೂ ಆ ವ್ಯಕ್ತಿ ಹೌದು ಎಂದು ಹೇಳಿದ್ದಾಳೆ. ಬಳಿಕ, ಶಾರ್ನಿಯ ಅಮ್ಮನಿಗೆ ಸಂಬಂಧಿಸಿದ ವಿವರಗಳನ್ನು ಇಬ್ಬರೂ ಹಂಚಿಕೊಂಡಿದ್ದಾರೆ. ಆಕೆಯ ಅಮ್ಮ ಆ ವ್ಯಕ್ತಿಯ ನೆನಪಿನಲ್ಲೇ ಶಾರ್ನಿ ಎನ್ನುವ ಹೆಸರನ್ನು ಮಗಳಿಗೆ ಇರಿಸಿರುವುದು ಆಗ ಗೊತ್ತಾಗಿದೆ.
ಇದ್ದರೆ ಇರಬೇಕು ನಿನ್ನಂಥ ಅಪ್ಪ..!ಕಿಡ್ನ್ಯಾಪ್ ಆದ ಮಗನನ್ನೂ 24 ವರ್ಷದ ಬಳಿಕ ಮರಳಿ ಪಡೆದ!
ಕಂಪಿಸುತ್ತಿದ್ದೇನೆ….: “ನಾನೀಗ ಕಂಪಿಸುತ್ತಿದ್ದೇನೆ, ಅಳುತ್ತಿದ್ದೇನೆ, ನನಗೆ ಅಪ್ಪ ದೊರೆತಿದ್ದಾರೆ…ʼ ಎಂದು ಶಾರ್ನಿ ಮಾಡಿರುವ ಪೋಸ್ಟ್ (Post) ಅನ್ನು ಒಂದು ಕೋಟಿಗೂ ಅಧಿಕ ಮಂದಿ ವೀಕ್ಷಿಸಿದ್ದಾರೆ. ಇನ್ನು ಶಾರ್ನಿ ಬ್ರಿಟನ್ ಗೆ ಭೇಟಿ ನೀಡಿ, ಅಪ್ಪ ಹಾಗೂ ತನ್ನ ಡಿಎನ್ ಎ ಟೆಸ್ಟ್ (DNA Test) ಮಾಡಿಸಲು ಉದ್ದೇಶಿಸಿದ್ದಾಳೆ.