Asianet Suvarna News Asianet Suvarna News

ಮಗನ ತಲೆಗೆ ಚಮಚದಿಂದ ಬ್ಯೂಟಿಫುಲ್ ಶೇಪ್ ನೀಡಿದ ಪಪ್ಪಾ... ವೈರಲ್ ವಿಡಿಯೋ

ಇಲ್ಲೊಬ್ಬರು ಅಪ್ಪ  ಚಮಚದಿಂದ ಮಗುವಿನ ತಲೆಕೂದಲನ್ನು ಕತ್ತರಿಸಿದ್ದಾರೆ. ಇದರ ವಿಡಿಯೋ ಈಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

US man doing haircut to his son by using kitchen spoon, watch viral video akb
Author
First Published Jan 24, 2023, 4:42 PM IST

ಪುಟ್ಟ ಮಕ್ಕಳ ತಲೆಕೂದಲು ಕತ್ತರಿಸುವುದು ಬಹಳ ಕಷ್ಟದ ಕೆಲಸ ಏಕೆಂದರೆ ಮಕ್ಕಳು ಅತ್ತಿತ್ತ ತಿರುಗಾಡುತ್ತಲೇ ಇರುತ್ತಾರೆ. ಇದರಿಂದ ಮಕ್ಕಳ ತಲೆಗೆ ಕತ್ತರಿ ಎಲ್ಲಿ ತಾಗುವುದೋ ಎಂಬ ಭಯ ಮೂಡುತ್ತದೆ. ಆದರೆ ಈಗ ತಂತ್ರಜ್ಞಾನ ಸಾಕಷ್ಟು ಮುಂದುವರೆದಿದ್ದು, ಟ್ರಿಮರ್‌ನಿಂದ ಸುಲಭವಾಗಿ ಮಕ್ಕಳ ತಲೆಕೂದಲನ್ನು ಕತ್ತರಿಸಬಹುದಾಗಿದೆ.  ಆದರೆ ಇದಕ್ಕೂ ಮಕ್ಕಳು ಗಲಾಟೆ ಮಾಡುತ್ತಾರೆ. ಆದರೆ ಇಲ್ಲೊಬ್ಬರು ಅಪ್ಪ ಇನ್ನು ಒಂದು ಹೆಜ್ಜೆ ಮುಂದೆ ಹೋಗಿ  ಚಮಚದಿಂದ ಮಗುವಿನ ತಲೆಕೂದಲನ್ನು ಕತ್ತರಿಸಿದ್ದಾರೆ. ಇದರ ವಿಡಿಯೋ ಈಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

ಅಮೆರಿಕಾದ (America) ಅಪ್ಪ ಮಗ ಇವರಾಗಿದ್ದು, ಮಗನನ್ನು ಚೇರ್ ಮೇಲೆ ಕೂರಿಸಿ ಅಪ್ಪ ಅಡುಗೆ ಮನೆಯಲ್ಲಿ ಬಳಸುವ ಸಣ್ಣದಾದ ಸ್ಪೂನ್‌ನಿಂದ (Spoon) ತಲೆಕೂದಲನ್ನು ಟ್ರಿಮ್ ಮಾಡುತ್ತಿರುವುದು ವಿಡಿಯೋದಲ್ಲಿ ಸೆರೆ ಆಗಿದೆ.  ari_rover ಎಂಬುವವರು ಈ ವಿಡಿಯೋವನ್ನು ಪೋಸ್ಟ್ ಮಾಡಿದ್ದು,  ನನ್ನ ಮಗನ ಕೂದಲನ್ನು ಚಮಚದಿಂದ ಕತ್ತರಿಸಿದೆ. ನಾವು ಈಗ ಹೇರ್ ಕಟ್‌ನಲ್ಲಿ ಮ್ಯಾಜಿಕ್ ಮಾಡುತ್ತಿದ್ದೇವೆ ಎಂದು ಬರೆದುಕೊಂಡಿದ್ದಾರೆ. ವಿಡಿಯೋದಲ್ಲಿ ಕಾಣಿಸುವಂತೆ ಬ್ಲೇಡ್‌ನಿಂದ ಕತ್ತರಿಸುವಂತೆ ಕಾಣಿಸುತ್ತಿದೆ.  

ಕೂದಲಿಲ್ಲದವರ ಹೊಟ್ಟೆ ಉರಿಸುತ್ತಿರುವ ಸಿಲ್ಕಿ ಹೇರ್ ಸಿಂಹ: ವಿಡಿಯೋ ಸಖತ್ ವೈರಲ್

ವಿಡಿಯೋದಲ್ಲಿ ಕಾಣಿಸುವಂತೆ ಪುಟ್ಟ ಬಾಲಕನೋರ್ವ,  ಚೇರ್ ಮೇಲೆ ಕುಳಿತಿದ್ದು, ಆತನ ತಂದೆ (Father) ಚಮಚದಿಂದ ತನ್ನ ಮಗನ ಕೂದಲನ್ನು ಕತ್ತರಿಸುತ್ತಿದ್ದಾರೆ.  ಚಮಚದಿಂದ ಈ ರೀತಿಯೂ ತಲೆಗೊಂದು ಶೇಪ್ ನೀಡಬಹುದು ಎಂಬುದನ್ನು ಈ ವಿಡಿಯೋ ತೋರಿಸಿದೆ. ಈ ವಿಡಿಯೋವನ್ನು ಮಿಲಿಯನ್‌ಗೂ ಅಧಿಕ ಜನ ವೀಕ್ಷಿಸಿದ್ದಾರೆ.  ಅಲ್ಲದೇ ತಂದೆಯ ಈ  ಸೃಜನಾತ್ಮಕತೆಯನ್ನು ಶ್ಲಾಘಿಸಿದ್ದಾರೆ. ಮತ್ತೆ ಕೆಲವರು ನಿಮ್ಮ ಬಳಿ ಇರುವ ಸ್ಪೂನ್ ಕೂದಲು ಕತ್ತರಿಸುವಷ್ಟು ಹರಿತವಾಗಿದೆಯೇ ಅಥವಾ ಅದರ ಹಿಂದೆ ಬೇರೇನಾದರೂ ಟ್ರಿಕ್ಸ್ ಇದೆಯೇ ಎಂದು ಕೇಳಿದ್ದಾರೆ.  ಮತ್ತೆ ಕೆಲವರು ಸ್ಪೂನ್‌ನಿಂದ ಇದು ಸಾಧ್ಯವಿಲ್ಲ. ಇದರ ಹಿಂದೆ ಬೇರೆನೋ ಕರಾಮತ್ತು ಇದೆ ಎಂದು ಉತ್ತರಿಸಿದ್ದಾರೆ. 

ಮತ್ತೊಬ್ಬರು ಇದು ನಿಜವಾಗಿಯೂ ಒಂದು ಪ್ರತಿಭೆ,  ನೀವು ಇದನ್ನು ಹೇಗೆ ಮಾಡಿದಿರಿ ಎಂದು ತಿಳಿಯುತ್ತಿಲ್ಲ. ಆದರೆ ಅದು ಮ್ಯಾಜಿಕಲ್ ಆಗಿದೆ. ಚೆನ್ನಾಗಿದೆ ಎಂದು ಮತ್ತೊಬ್ಬರು ಕಾಮೆಂಟ್ ಮಾಡಿದ್ದಾರೆ.  ಹಾಗಿದ್ರೆ ಇನ್ನು ಮುಂದೆ ಕೂದಲು ಕತ್ತರಿಸುವ ಮೆಷಿನ್ ಖರೀದಿಸಬೇಕಾಗಿಲ್ಲ. ಹಣ ಉಳಿಸಬಹುದು ಎಂದು ಮತ್ತೊಬ್ಬರು ಕಾಮೆಂಟ್ ಮಾಡಿದ್ದಾರೆ.   ಈ ವಿಡಿಯೋವನ್ನು 6 ಮಿಲಿಯನ್‌ಗೂ ಹೆಚ್ಚು ಜನ ವೀಕ್ಷಿಸಿದ್ದು, 90 ಸಾವಿರಕ್ಕೂ ಹೆಚ್ಚು ಜನ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. 

ಸಲೂನ್‌‌ನಲ್ಲಿ ಹೊಸ ಹೇರ್ ಸ್ಟೈಲ್ ಮಾಡಿಸಿ ಪೋಸ್ ನೀಡಿದ ಮಲೈಕಾ

ಸಿಲ್ಕಿ ಹೇರ್ ಸಿಂಹ ವಿಡಿಯೋ ಸಖತ್ ವೈರಲ್

ದಟ್ಟವಾದ ರೇಷಿಮೆಯಂತಹ ಕೂದಲನ್ನು ಹೊಂದಿರಬೇಕು, ಬೀಸುವ ಗಾಳಿಗೆ ಕೂದಲು ತೆಂಗಿನ ಗರಿಗಳಂತೆ ತೊನೆದಾಡುತ್ತಾ ಎಲ್ಲರ ಸೆಳೆಯಬೇಕು ಎಂಬುದು ಬಹುತೇಕರ ಆಸೆ. ಆದರೇನು ಶಿವಾ ಎಲ್ಲರಿಗೂ ಆ ಭಾಗ್ಯವಿಲ್ಲ. ರೇಷ್ಮೆ ಕೂದಲಿಲ್ಲದಿದ್ದರೂ ಪರವಾಗಿಲ್ಲ ತಲೆಯಲ್ಲಿ ಕನಿಷ್ಠ ಪಕ್ಷ ಯಾವುದೋ ಒಂದು ಕೂದಲಿದ್ದರೆ ಸಾಕು ಎಂಬುದು ಇಂಬುದು ಇಂದಿನ ಬಹುತೇಕ ಕೂದಲೂದುರುವ ಸಮಸ್ಯೆಯಿಂದ ಬಾಧಿಸುತ್ತಿರುವವರ ಮನದಾಳ. ಇತ್ತೀಚೆಗೆ ತುಂಬಾ ಜನ ಕೂದಲುದುರುವ ಸಮಸ್ಯೆಯಿಂದ ಬಳಲುತ್ತಿದ್ದಾರೆ. ಕೋವಿಡ್ ನಂತರ ಅನೇಕರು ತಲೆಕೂದಲನ್ನು ಕಳೆದುಕೊಂಡಿದ್ದಾರೆ. ಹೀಗಿರುವಾಗ ಸಿಂಹವೊಂದರ ರೇಷ್ಮೆಯಂತಹ ಕೇಸರಿ ಎಲ್ಲರ ಮನ ಸೆಳೆಯುತ್ತಿದೆ. ಈ ಸಿಂಹ ಇಂಟರ್‌ನೆಟ್‌ನಲ್ಲಿ ಸಖತ್ ವೈರಲ್ ಆಗಿದೆ.

@Gabriele_Corno ಎಂಬುವವರು ಟ್ವಿಟ್ಟರ್‌ನಲ್ಲಿ ಈ ವಿಡಿಯೋವನ್ನು ಅಪ್‌ಲೋಡ್ ಮಾಡಿದ್ದು, 7 ಮಿಲಿಯನ್‌ಗೂ ಹೆಚ್ಚು ಜನ ಈ ವಿಡಿಯೋ ವೀಕ್ಷಿಸಿದ್ದಾರೆ. ಕೀನ್ಯಾದ ಮಸಾಯ್ ಮಾರಾ ರಾಷ್ಟ್ರೀಯ ಸಂರಕ್ಷಿತ ಉದ್ಯಾನವನದ ವಿಡಿಯೋ ಇದು ಎಂದು ವಿಡಿಯೋ ಪೋಸ್ಟ್ ಮಾಡಿ ಬರೆದುಕೊಳ್ಳಲಾಗಿದೆ. 

 
 
 
 
 
 
 
 
 
 
 
 
 
 
 

A post shared by jSK Vibes (@ari_rover)

 

Follow Us:
Download App:
  • android
  • ios