ಮೃತ ಪತ್ನಿಗೆ ಭಾವನಾತ್ಮಕ ಗೌರವ ಸಲ್ಲಿಸಿದ ವ್ಯಕ್ತಿ ಪತ್ನಿ ಜೊತೆಗಿನ ಮೆಟರ್ನಿಟಿ ಶೂಟ್ ರಿಕ್ರಿಯೇಟ್ ಸೋಷಿಯಲ್ ಮೀಡಿಯಾದಲ್ಲಿ ಫೋಟೋಗಳು ವೈರಲ್

ಅಚಾನಕ್ ಭೇಟಿಯಾಗಿ, ಸ್ನೇಹ ಬೆಳೆದು, ಪ್ರೀತಿಯಾಗಿ, ಪ್ರಪೋಸ್ ಮಾಡಿ, ಮದುವೆಯೂ ಆಗಿ, ಮೊದಲ ಕಂದನ ಸ್ವಾಗತಿಸಿದಾದ ಪತ್ನಿ ಸಾವನ್ನಪ್ಪಿದರೆ ಏನಾಗಬಹುದು ? ಇದೊಂದು ದುರಂತ ಕಥೆ ಅಲ್ವಾ ? ಆದರೆ ಇದು ಕಥೆ ಅಲ್ಲ. ನಿಜವಾಗಿ ನಡೆದ ಘಟನೆ. ಕನಸು ಕಂಡ ಬದುಕು ನನಸಾಗಿ ಮತ್ತೊಂದು ಕ್ಷಣದಲ್ಲಿ ಎಲ್ಲವೂ ಶೂನ್ಯವಾದ ಪ್ರೇಮಕಥೆ.

ಮೆಟರ್ನಿಟಿ ಫೋಟೋಶೂಟ್‌ನ ಫೋಟೋಗಳು ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿವೆ. ಆದರೆ ಈ ಫೋಟೋಶೂಟ್‌ ಹಿಂದಿನ ಕಾರಣ ಕೇಳಿದರೆ ಅದು ನಿಮ್ಮನ್ನು ಭಾವುಕರಾಗಿಸಬಹುದು. ವಿಧುರನಾದ ಜೇಮ್ಸ್ ಅಲ್ವಾರೆಜ್ ಮತ್ತು ಅವರ ಒಂದು ವರ್ಷದ ಮಗಳು ಅಡಲಿನ್ ಜೊತೆ ಒಂದು ವರ್ಷದ ಹಿಂದೆ ತನ್ನ ದಿವಂಗತ ಹೆಂಡತಿಯೊಂದಿಗೆ ಮಾಡಿದ ಮೆಟರ್ನಿಟಿ ಫೋಟೋಶೂಟ್ ಅನ್ನು ಮರುಸೃಷ್ಟಿಸಿದ್ದಾರೆ.

ಹೆಣ್ಣು ಮಕ್ಕಳಿಗೆ ಎಂಥ ಅಪ್ಪ ಸಿಗಬೇಕು ಗೊತ್ತೇ?

ಜೇಮ್ಸ್ ಪತ್ನಿ ಯೆಸೇನಿಯಾ ಅಗಿಲಾರ್ ಅವರು ವಾಕ್ ಮಾಡಲು ಹೊರಟಿದ್ದಾಗ ಕಾರಿಗೆ ಡಿಕ್ಕಿ ಹೊಡೆದು ಸಾವನ್ನಪ್ಪಿದ್ದರು. ಒಂದು ವರ್ಷದ ಹಿಂದೆ ಸಾಯುವಾಗ ಆಕೆ 35 ವಾರಗಳ ಗರ್ಭಿಣಿಯಾಗಿದ್ದಳು. ವೈದ್ಯರು ಮಗುವನ್ನು ಉಳಿಸಲು ತುರ್ತು ಸಿ-ಸೆಕ್ಷನ್ ಮಾಡಬೇಕಾಯಿತು. ಆಕೆಗೆ ಯಾವುದೇ ಗಾಯವಾಗಿರಲಿಲ್ಲ.

View post on Instagram

ಅವರ ದಿವಂಗತ ಪತ್ನಿಗೆ ಭಾವಪೂರ್ಣ ಶ್ರದ್ಧಾಂಜಲಿ ಸಲ್ಲಿಸಿ, ಆಕೆಯೊಂದಿಗೆ ಮಾಡಿದ ಫೊಟೋ ಶೂಟ್ ಅನ್ನು ಮರುಸೃಷ್ಟಿಸಿದ್ದಾರೆ. ಈ ಬಾರಿ ಅವರ ಮೊದಲ ಹುಟ್ಟುಹಬ್ಬ ಆಚರಿಸುವ ಅವರಿಬ್ಬರ ಪ್ರಿತಿಯ ಹೂ ಅವರ ಮಗಳು ಆಡಲಿನ್ ಜೊತೆಗಿದ್ದರು. ಚಿತ್ರೀಕರಣದ ಸಮಯದಲ್ಲಿ ಆಕೆಯ ತಾಯಿ ಧರಿಸಿದಂತೆಯೇ ಮುದ್ದಾದ ಗುಲಾಬಿ ಬಣ್ಣದ ಉಡುಗೆಯನ್ನು ಧರಿಸಿದ್ದರು. ಮಗುವೂ ಕೂಡ ಅದೇ ರೀತಿಯಲ್ಲಿ ಪುಟ್ಟ ಟಾಟ್ ಹುಟ್ಟುಹಬ್ಬಕ್ಕೆ ಪೋಸ್ ನೀಡಿದೆ.

View post on Instagram

ಅಡೆಲಿನ್ನಿ ನಿನ್ನ ಮಮ್ಮಿ ಇಲ್ಲಿದ್ದರೆ, ಅವಳು ಬದುಕಿರುವ ಅತ್ಯಂತ ಸಂತೋಷದ ವ್ಯಕ್ತಿಯಾಗಿರುತ್ತಿದ್ದಳು. ನಿನ್ನ ಹುಟ್ಟುಹಬ್ಬವನ್ನು ಆಚರಿಸಲು ಅವಳು ತುಂಬಾ ಉತ್ಸುಕಳಾಗಿರುತ್ತಿದ್ದಳು ಎಂದು ಜೇಮ್ಸ್ ಪೋಸ್ಟ್‌ನಲ್ಲಿ ಬರೆದಿದ್ದಾರೆ.

ನಾನು ಒಳ್ಳೇ ಅಪ್ಪ ಅಲ್ಲ! ನನ್ನ ಥರಾ ನೀವೂ ಆಗಬೇಡಿ: ಅರ್ಜುನ ಹೇಗ್ಯಾಕ್ಹೇಳಿದ್ದು?

ಅಡೆಲಿನ್ ಹುಟ್ಟುಹಬ್ಬವು ಬರುತ್ತಿತ್ತು ಮತ್ತು ದುರದೃಷ್ಟವಶಾತ್ ಅವಳ ಜನ್ಮದಿನವು ನಾನು ನನ್ನ ಹೆಂಡತಿಯನ್ನು ಕಳೆದುಕೊಂಡ ದಿನವಾಗಿದೆ. ಅವಳ ಜನ್ಮದಿನವನ್ನು ಆಚರಿಸಲು ಮತ್ತು ನನ್ನ ಹೆಂಡತಿಯನ್ನು ಗೌರವಿಸಲು ನಾನು ಅರ್ಥಪೂರ್ಣವಾದ ಮತ್ತು ವಿಶೇಷವಾದದ್ದನ್ನು ಮಾಡಲು ಬಯಸುತ್ತೇನೆ "ಎಂದು ಜೇಮ್ಸ್ ಮೆಟ್ರೋಗೆ ಹೇಳಿದರು.

View post on Instagram

ನನ್ನ ಮಗಳಿಗೆ ಧರಿಸಲು ಗುಲಾಬಿ ಬಣ್ಣದ ಉಡುಪನ್ನು ತಯಾರಿಸಿದ್ದೆವು. ನಾವು ಅದೇ ಸ್ಥಳಕ್ಕೆ ಹೋದೆವು, ಅದೇ ಸಮಯದಲ್ಲಿ ನಾವು ಮೆಟರ್ನಿಟಿ ಶೂಟ್ ಮಾಡಿದ್ದೇವೆ. ಚಿತ್ರಗಳನ್ನು ಒಂದೇ ರೀತಿ ಮಾಡಲು ನಾವು ಅದನ್ನು ಮರುಸೃಷ್ಟಿಸಲು ಪ್ರಯತ್ನಿಸಿದೆವು. ಅದು ನಿಜವಾಗಿಯೂ ಅದ್ಭುತವಾಗಿದೆ ಎಂದಿದ್ದಾರೆ. ಭಾವನಾತ್ಮಕ ಫೋಟೋಶೂಟ್‌ನ ಚಿತ್ರಗಳು ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿವೆ. ಶ್ರದ್ಧಾಂಜಲಿಯಿಂದ ನೆಟ್ಟಿಗರು ಕಣ್ಣೀರಿಟ್ಟಿದ್ದಾರೆ. 

View post on Instagram