Asianet Suvarna News Asianet Suvarna News

ಮಗುವಿಗಾಗಿ ಮರದ ಎಲಿವೇಟರ್‌ ತಯಾರಿಸಿದ ತಂದೆ, ಚಪ್ಪಾಳೆ ತಟ್ಟಿ ಖುಷಿ ಪಟ್ಟ ಮಗು

ತಂದೆ ಹಾಗೂ ಮಗುವಿನ ನಡುವಿನ ಬಾಂಧವ್ಯ ತುಂಬಾ ಗಾಢವಾದುದು. ಇಬ್ಬರ ನಡುವಿನ ಅನ್ಯೋನ್ಯತೆಯನ್ನು ನೋಡಲು ತುಂಬಾ ಖುಷಿಯಾಗುತ್ತದೆ. ಹಾಗೆಯೇ ಸದ್ಯ ತಂದೆ ಹಾಗೂ ಪುಟ್ಟ ಕಂದನ ವೀಡಿಯೋವೊಂದು ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ. ಆ ಬಗ್ಗೆ ಹೆಚ್ಚಿನ ಮಾಹಿತಿ ಇಲ್ಲಿದೆ. 

Man Builds Wooden Playhouse For Son, Internet Loves Toddlers Reaction Vin
Author
First Published Sep 28, 2022, 1:04 PM IST

ತಂದೆ ತಮ್ಮ ಮಕ್ಕಳ ಖುಷಿಗಾಗಿ ಎಂಥಹದ್ದೇ ಕೆಲಸವನ್ನಾದರೂ ಮಾಡಲು ಇಷ್ಟಪಡುತ್ತಾರೆ. ಪುಟ್ಟ ಪುಟ್ಟ ಆಟಿಕೆಗಳನ್ನು ತಯಾರಿಸಿ ಮಕ್ಕಳ ಮುಖದಲ್ಲಿ ಖುಷಿ ತರುತ್ತಾರೆ. ಹಾಗೆಯೇ ಇಲ್ಲೊಬ್ಬ ಅಪ್ಪ ಮಗನಿಗಾಗಿ ಮರದ ಎಲಿವೇಟರ್‌ ನಿರ್ಮಿಸಿದ್ದು, ಮಗು ಸಿಕ್ಕಾಪಟ್ಟೆ ಖುಷಿಪಟ್ಟಿದೆ. ಮಾತ್ರವಲ್ಲ ನೆಟ್ಟಿಗರು ಸಹ ಈ ಮರದ ಆಟಿಕೆಯನ್ನು ನೋಡಿ ಖುಷಿ ವ್ಯಕ್ತಪಡಿಸಿದ್ದಾರೆ. ತಂದೆಯೊಬ್ಬರು ತನ್ನ ಕಂದನ ಆಟಕ್ಕೆ ಪ್ಲೇ ಹೌಸ್ ತಯಾರಿಸಿದ ವಿಡಿಯೋವೊಂದು ಈಗ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ. ಎಲ್ಲರೂ ಈ ಮುದ್ದಾದ ದೃಶ್ಯಕ್ಕೆ ಮನಸೋತಿದ್ದಾರೆ. ಹೀಗಾಗಿ, ಈ ವಿಡಿಯೋ ಈಗ ಸಾಕಷ್ಟು ವೀಕ್ಷಣೆಯನ್ನು ಗಳಿಸುವಲ್ಲಿ ಯಶಸ್ವಿಯಾಗಿದೆ.

ಕಂದನಿಗಾಗಿ ಎಲಿವೇಟರ್ ಆಟದ ಮನೆ ತಯಾರಿಸಿದ ತಂದೆ
ಮುದ್ದು ಮಕ್ಕಳ (Children) ಖುಷಿಯ ಕ್ಷಣಗಳನ್ನು ನೋಡುವುದೇ ಖುಷಿ (Happy). ನೋಡುತ್ತಿದ್ದರೆ ಮತ್ತೆ ಮತ್ತೆ ನೋಡಬೇಕೆನಿಸುತ್ತದೆ. ಇದು ಸಹ ಅಂಥಹದ್ದೇ ಒಂದು ದೃಶ್ಯ. ತಂದೆಯೊಬ್ಬರು ತನ್ನ ಕಂದನಿಗೆ ಪ್ಲೇಹೌಸ್ ತಯಾರಿಸಿ ಕೊಟ್ಟಿದ್ದಾರೆ. ಈ ಆಟದ ಮನೆಯ ಎಲಿವೇಟರ್‌ನಲ್ಲಿ ನಿಂತು ಸಾಗುವಾಗ ಮಗುವಿನ ಖುಷಿಗೆ ಪಾರವೇ ಇರಲಿಲ್ಲ. @DannyDeraney ಎಂಬ ಟ್ವಿಟ್ಟರ್ ಖಾತೆಯಲ್ಲಿ ಈ ವಿಡಿಯೋವನ್ನು ಹಂಚಿಕೊಳ್ಳಲಾಗಿದೆ. ಹಾಲುಗಲ್ಲದ ಮುದ್ದು ಪುಟಾಣಿ ತನ್ನ ತಂದೆ (Father) ತಯಾರಿಸಿದ ಪ್ಲೇಹೌಸ್ ಬಳಿ ಬರುವ ದೃಶ್ಯದ (Visuval) ಮೂಲಕ ಈ ಕ್ಲಿಪ್ ಶುರುವಾಗುತ್ತದೆ. 

ನಿನ್ನಂಥಾ ಅಪ್ಪ ಇಲ್ಲ... ಅಂಗವಿಕಲ ಪುತ್ರಿಗೆ ತಿನ್ನಿಸಲು ರೋಬೋಟ್‌ ನಿರ್ಮಿಸಿದ ಕಾರ್ಮಿಕ

ಚಪ್ಪಾಳೆ ತಟ್ಟಿ ಖುಷಿ ವ್ಯಕ್ತಪಡಿಸಿದ ಮಗು, ಸೋಷಿಯಲ್ ಮೀಡಿಯಾದಲ್ಲಿ ವೀಡಿಯೋ ವೈರಲ್
ಹೀಗೆ ಬಂದ ಪುಟಾಣಿ ಅತ್ಯಂತ ಪುಳಕದಿಂದ ಕುತೂಹಲದಿಂದ ಅಲ್ಲಿದ್ದ ಹಲಗೆಯೊಂದರಲ್ಲಿ ನಿಂತು ಖುಷಿಪಡುತ್ತಾನೆ. ಹೀಗೆ ತನ್ನ ಮಗು ಹಲಗೆಯ ಲಿಫ್ಟ್‌ ಮೇಲೆ ನಿಂತ ತಕ್ಷಣ ತಂದೆ ಅಲ್ಲಿದ್ದ ಸಂಕೋಲೆಯನ್ನು ಭದ್ರವಾಗಿ ಬಿಗಿದು ಅದನ್ನು ಹಿಡಿಯುವಂತೆ ಮಗುವಿಗೆ ಹೇಳುತ್ತಾರೆ. ಇದಾದ ಬಳಿಕ ಆ ವ್ಯಕ್ತಿ ರಾಟೆಯ ಸಹಾಯದಿಂದ ಕಟ್ಟಿದ ಹಗ್ಗವನ್ನು ಎಳೆಯುತ್ತಾರೆ. ಆಗ ಆ ವೇದಿಕೆ ಮೇಲಕ್ಕೆ ಹೋಗುತ್ತದೆ. ಲಿಫ್ಟಿನಲ್ಲಿ ಮೇಲೆ ಸಾಗುತ್ತಿದ್ದಂತೆಯೇ ಪುಟಾಣಿಯ ಮುಖದಲ್ಲಿ ನಗುವನ್ನು ಕಾಣಬಹುದು. ಚಪ್ಪಾಳೆ ತಟ್ಟಿ ಮಗು ಸಂತೋಷವನ್ನು ವ್ಯಕ್ತಪಡಿಸುತ್ತದೆ.

ಸಾಮಾಜಿಕ ಜಾಲತಾಣದಲ್ಲಿ (Social media0 ಹಂಚಿಕೊಂಡ ನಂತರ, ವೀಡಿಯೊ 3.4 ಮಿಲಿಯನ್ ವೀಕ್ಷಣೆಗಳನ್ನು ಮತ್ತು 1.9 ಲಕ್ಷಕ್ಕೂ ಹೆಚ್ಚು ಇಷ್ಟಗಳನ್ನು ಸಂಗ್ರಹಿಸಿದೆ. ವೈರಲ್ ಪೋಸ್ಟ್ 23,000 ಕ್ಕೂ ಹೆಚ್ಚು ರೀಟ್ವೀಟ್‌ಗಳು ಮತ್ತು ಹಲವಾರು ಕಾಮೆಂಟ್‌ಗಳನ್ನು ಹೊಂದಿದೆ. ಈ ಆಟದ ಮನೆಯ (Play hpuse) ವಿಡಿಯೋ ಈಗ ಎಲ್ಲರನ್ನೂ ಸೆಳೆದಿದೆ. ಸದ್ಯ ಈ ವಿಡಿಯೋ ಸಾಕಷ್ಟು ವೀಕ್ಷಣೆ (Views)ಯನ್ನೂ ಗಳಿಸಿದೆ. ಆದರೆ, ಹಲವರು ತಂದೆಯ ಆಟಿಕೆ ನಿರ್ಮಾಣದ ಈ ಪ್ರಯತ್ನವನ್ನು ಮೆಚ್ಚಿಕೊಂಡರೂ ಮಗುವಿನ ಸುರಕ್ಷತೆಯ (Safe) ಬಗ್ಗ ಕಳವಳ ವ್ಯಕ್ತಪಡಿಸಿದ್ದಾರೆ.

ಹದಿ ಹರೆಯದ ಮಗಳ ಜೊತೆ ಅಪ್ಪನ ಬಿಹೇವಿಯರ್ ಹೇಗಿರಬೇಕು?

'ಆ ಎಲಿವೇಟರ್ ಅನ್ನು ಸ್ವಯಂಚಾಲಿತಗೊಳಿಸಲು ಒಂದು ಮಾರ್ಗವನ್ನು ಕಂಡುಹಿಡಿಯುವವರೆಗೆ ತಂದೆ ನಿಜವಾಗಿಯೂ ದೇಹದ ತಾಲೀಮು ಪಡೆಯಲಿದ್ದಾರೆ' ಎಂದು ಬಳಕೆದಾರರು ಬರೆದಿದ್ದಾರೆ. ಇನ್ನೊಬ್ಬರು 'ಪ್ರತಿದಿನ ಅವರು ಎಷ್ಟು ಬಾರಿ ಆ ಲಿಫ್ಟ್ ಅನ್ನು ನಿರ್ವಹಿಸಬೇಕಾಗುತ್ತದೆ ಎಂಬುದರ ಕುರಿತು ನಾನು ಯೋಚಿಸಬಲ್ಲೆ' ಎಂದಿದ್ದಾರೆ. ಮೂರನೇ ಬಳಕೆದಾರರು ಪೋಸ್ಟ್ ಅನ್ನು ಹಂಚಿಕೊಂಡು ಸಂತಸ ವ್ಯಕ್ತಪಡಿಸಿದ್ದಾರೆ. ಅದೇನೆ ಇರ್ಲಿ, ಅಪ್ಪನ ಕ್ರಿಯೇಟಿವಿಟಿಯಿಂದ ಪುಟ್ಟ ಮಗು ಖುಷಿಯಾಗಿರೋದಂತೂ ನಿಜ.

Follow Us:
Download App:
  • android
  • ios