ನಿಮಗೆಲ್ಲಾ ರೋಲ್ ಇಲ್ಲ ಅಂತ ಕೆಜಿಎಫ್ ನಿರ್ದೇಶಕ ಮಾಳವಿಕಾಗೆ ವಾಪಸ್ ಕಳಿಸೇ ಬಿಡೋದಾ? ಗರಂ ಆಗಿದ್ದ ನಟಿ
ಕೆಜಿಎಫ್ 1ರ ಶೂಟಿಂಗ್ ಸಮಯದಲ್ಲಿ ತಮಗೆ ರೋಲ್ ಕೊಡಲು ಆಗಲ್ಲ ಎಂದು ನಿರ್ದೇಶಕ ಪ್ರಶಾಂತ್ ನೀಲ್ ಅವರು ಹೇಳಿದ್ದ ಘಟನೆಯನ್ನು ಮಾಳವಿಕಾ ಅವಿನಾಶ್ ನೆನಪಿಸಿಕೊಂಡಿದ್ದಾರೆ.

ಸ್ಯಾಂಡಲ್ವುಡ್ನಲ್ಲಿ ಬಹುದೊಡ್ಡ ಮಟ್ಟದಲ್ಲಿ ಖ್ಯಾತಿ ಗಳಿಸಿದ ಚಿತ್ರವೆಂದರೆ ಅದು ಕೆಜಿಎಫ್ ಮತ್ತು ಕೆಜಿಎಫ್-2. ಇದೀಗ ಯಶ್ ಅಭಿಮಾನಿಗಳು ಕೆಜಿಎಫ್-3 ನಿರೀಕ್ಷೆಯಲ್ಲಿದ್ದಾರೆ. 2018 ರಲ್ಲಿ ಬಿಡುಗಡೆಯಾಗಿದ್ದ ಕೆಜಿಎಫ್ ಚಾಪ್ಟರ್ 1 ವಿಶ್ವಾದ್ಯಂತ 250 ಕೋಟಿ ರೂಪಾಯಿಗಳನ್ನು ಗಳಿಸಿದ್ದರೆ, 2022ರಲ್ಲಿ ಬಿಡುಗಡೆಯಾದ ಚಾಪ್ಟರ್-2 1500 ಕೋಟಿ ರೂಪಾಯಿ ಗಳಿಸಿದೆ. ಎರಡು ವರ್ಷಗಳ ಅಂತರದಲ್ಲಿ ಚಾಪ್ಟರ್-2 ಬಂದಿದೆ. ಆದ್ದರಿಂದ ಇದಾಗಲೇ ಮತ್ತೆರಡು ವರ್ಷ ಆಗಿರುವ ಹಿನ್ನೆಲೆಯಲ್ಲಿ ಚಾಪ್ಟರ್-3 ಯಾವಾಗ ಎನ್ನುವುದು ಅಭಿಮಾನಿಗಳ ಪ್ರಶ್ನೆ. ಇದರ ಶೂಟಿಂಗ್ ನಡೆಯುತ್ತಿರುವುದಾಗಿ ಇದಾಗಲೇ ರಿವೀಲ್ ಕೂಡ ಆಗಿದ್ದು, ಇದರಲ್ಲಿ ಕೂಡ ನಟಿ ಮಾಳವಿಕಾ ಅವಿನಾಶ್ ನಟಿಸಲಿದ್ದಾರೆ.
ಇದೀಗ ನಟಿ, ಕೆಜಿಎಫ್-1ರ ಶೂಟಿಂಗ್ ಮೆಲುಕು ಹಾಕಿದ್ದಾರೆ. ಸಿನಿಮಾ ನಿರ್ದೇಶಕ ಪ್ರಶಾಂತ್ ನೀಲ್ ಅವರು ತಮ್ಮನ್ನು ಆ ಚಿತ್ರದಲ್ಲಿ ಹೇಗೆ ರಿಜೆಕ್ಟ್ ಮಾಡಿದ್ದರು ಎನ್ನುವ ಬಗ್ಗೆ ಮಾತನಾಡಿದ್ದಾರೆ. ಆರೋಹಣ ಎನ್ನುವ ಯೂಟ್ಯೂಬ್ ಚಾನೆಲ್ಗೆ ನೀಡಿರುವ ಸಂದರ್ಶನದಲ್ಲಿ ಮಾಳವಿಕಾ ಅವರು ಈ ವಿಷಯದ ಬಗ್ಗೆ ಹೇಳಿದ್ದಾರೆ. ಅದು 2015-16 ಸಮಯ. ಕೆಜಿಎಫ್-01 ಚಿತ್ರೀಕರಣ ನಡೆಯುತ್ತಿತ್ತು. ಆಗಿನ್ನೂ ನಿರ್ದೇಶಕ ಪ್ರಶಾಂತ್ ನೀಲ್ ಅವರು ನನಗೆ ಪರಿಚಯ ಇರಲಿಲ್ಲ. ಅವರ ಉಗ್ರಂ ಚಿತ್ರದಲ್ಲಿ ಅವಿನಾಶ್ ಪಾರ್ಟ್ ಮಾಡಿದ್ದರು ಅಷ್ಟೇ. ನನಗೆ ಅವರ ಪರಿಚಯವಿರಲಿಲ್ಲ. ಒಂದು ದಿನ ರಕ್ಷಾ ಬಂಧನದ ಸಮಯದಲ್ಲಿ, ಯಶ್ ಅವರನ್ನು ಹುಡುಕಿ ಹೋಗಿದ್ದೆ. ಶೂಟಿಂಗ್ ಸೆಟ್ನಲ್ಲಿ ಇದ್ದರು. ಆಗ ನಮ್ಮ ಸೆಟ್ ನೋಡಿ ಎಂದು ಕರೆದುಕೊಂಡು ಹೋದರು. ಗುಹೆ ರೀತಿ ಇತ್ತು. ಅದು ಗಣಿಯ ಕಥೆ ಎನ್ನುವುದು ಆಗ ಗೊತ್ತಾಯ್ತು.
ಕೆಜಿಎಫ್-3 ಬಿಗ್ ಅಪ್ಡೇಟ್! ಯಶ್ ಫ್ಯಾನ್ಸ್ ಕುಣಿದು ಕುಪ್ಪಳಿಸೋ ಸುದ್ದಿ ಕೊಟ್ಟ ಮಾಳವಿಕಾ ಅವಿನಾಶ್
ಒಂದು ಮೂಲೆಯಲ್ಲಿ ಪ್ರಶಾಂತ್ ನೀಲ್ ಕುಳಿದಿದ್ರು. ಇವರೇ ಡೈರೆಕ್ಟರು ಎಂದು ಯಶ್ ಪರಿಚಯ ಮಾಡಿಸಿದ್ರು. ನಮಗೇನಾದ್ರೂ ಈ ಚಿತ್ರದಲ್ಲಿ ಪಾರ್ಟ್ ಕೊಡ್ತೀರಾ ಎಂದು ಕೇಳಿದೆ. ನಮ್ಮಲ್ಲಿ ಹೆಣ್ಣುಮಕ್ಕಳ ಪಾತ್ರವೇ ಇಲ್ಲ, ನಿಮಗೆ ಹೇಗೆ ಕೊಡೋದು ಎಂದರು. ನನಗೆ ಸಿಟ್ಟುಬಂತು. ಹೆಣ್ಣುಮಕ್ಕಳಿಲ್ಲದೇ ಅದ್ಹೇಗೆ ಚಿತ್ರ ಮಾಡ್ತಿರಾ ಎಂದು ಬೈದುಕೊಂಡೆ ಮನಸ್ಸಿನಲ್ಲಿ. ಅದನ್ನು ಮರೆತು ಬಿಟ್ಟಿದ್ದೆ.
2018 ಚುನಾವಣೆ ನಡೀತಾ ಇದ್ದ ಸಂದರ್ಭದಲ್ಲಿ ನಾನು ತುಂಬಾ ಬಿಜಿ ಇದ್ದೆ. ಪ್ರಶಾಂತ್ ಅವರೇ ಕಾಲ್ ಮಾಡಿ ಕೆಜಿಎಫ್ಗೆ ಒಂದು ರೋಲ್ಗೆ ಬರಲು ಹೇಳಿದ್ರು. ಹೆಣ್ಣುಮಕ್ಕಳೇ ಬೇಡ ಅಂದಿದ್ರಲ್ಲಾ ಅಂದೆ. ಅದಕ್ಕೆ ಅವರು, ಇಲ್ಲ. ಒಂದು ಟಿವಿ ಆ್ಯಂಕರ್, ಜರ್ನಲಿಸ್ಟ್ ಆರೋಗೆಂಟ್ ಪಾರ್ಟ್ ಇದೆ. ನೀವೇ ಮಾಡಬೇಕು ಎಂದರು. ಚುನಾವಣೆ ತುಂಬಾ ಬಿಜಿ ಇದ್ದೇನೆ, ಕಷ್ಟ ಎಂದೆ. ಆದರೂ ಬಿಡಲಿಲ್ಲ. ಓಕೆ ಎಂದು ಆಮೇಲೆ ಚಿತ್ರ ಒಪ್ಪಿಕೊಂಡು ಮಾಡಿದೆ ಎಂದಿದ್ದಾರೆ ಮಾಳವಿಕಾ. ಇದೀಗ ಕೆಜಿಎಫ್-3 ನಲ್ಲಿಯೂ ನಟಿಸಿರುವ ನಟಿ ಮಾಳವಿಕಾ ಅವಿನಾಶ್ ಅವರು, ಕೆಜಿಎಫ್-3 ಬಗ್ಗೆ ಬಿಗ್ ಅಪ್ಡೇಟ್ ನೀಡಿದ್ದಾರೆ. ಅದೇನೆಂದರೆ, ಚಿತ್ರ ಶೀಘ್ರದಲ್ಲಿ ತೆರೆಯ ಮೇಲೆ ಕಾಣಲಿದೆ ಎನ್ನುವ ಹಿಂಟ್ ಅದು. ನಾನೂ ಶೂಟಿಂಗ್ನಲ್ಲಿ ಪಾಲ್ಗೊಂಡಿದ್ದೆ ಎನ್ನುವ ಮೂಲಕ, ಶೂಟಿಂಗ್ ಮುಗಿದಿರುವ ಬಗ್ಗೆ ಅವರು ತಿಳಿಸಿದ್ದಾರೆ.
ಕನ್ನಡದ ಸೂಪರ್ ಸ್ಟಾರ್ ಹೀಗೆಂದು ಅಂದುಕೊಂಡೇ ಇರಲಿಲ್ಲ: ನಟ ಯಶ್ ಕುರಿತು ಬಾಲಿವುಡ್ ನಟಿ ಹೇಳಿದ್ದೇನು?