ಕೆಜಿಎಫ್​-1 ಮತ್ತು 2 ಯಶಸ್ಸಿನ ಬಳಿಕ 3ನೇ ಚಾಪ್ಟರ್​ಗಾಗಿ ಅಭಿಮಾನಿಗಳು ಎದುರು ನೋಡುತ್ತಿರುವ  ಈ ಬಗ್ಗೆ ನಟಿ ಮಾಳವಿಕಾ ಅವಿನಾಶ್​ ಅಪ್​ಡೇಟ್​ ಕೊಟ್ಟಿದ್ದಾರೆ. ಅವರು ಹೇಳಿದ್ದೇನು?  

ಸ್ಯಾಂಡಲ್​ವುಡ್​ನಲ್ಲಿ ಬಹುದೊಡ್ಡ ಮಟ್ಟದಲ್ಲಿ ಖ್ಯಾತಿ ಗಳಿಸಿದ ಚಿತ್ರವೆಂದರೆ ಅದು ಕೆಜಿಎಫ್​ ಮತ್ತು ಕೆಜಿಎಫ್​-2. ಇದೀಗ ಯಶ್​ ಅಭಿಮಾನಿಗಳು ಕೆಜಿಎಫ್​-3 ನಿರೀಕ್ಷೆಯಲ್ಲಿದ್ದಾರೆ. 2018 ರಲ್ಲಿ ಬಿಡುಗಡೆಯಾಗಿದ್ದ ಕೆಜಿಎಫ್​ ಚಾಪ್ಟರ್​ 1 ವಿಶ್ವಾದ್ಯಂತ 250 ಕೋಟಿ ರೂಪಾಯಿಗಳನ್ನು ಗಳಿಸಿದ್ದರೆ, 2022ರಲ್ಲಿ ಬಿಡುಗಡೆಯಾದ ಚಾಪ್ಟರ್​-2 1500 ಕೋಟಿ ರೂಪಾಯಿ ಗಳಿಸಿದೆ. ಎರಡು ವರ್ಷಗಳ ಅಂತರದಲ್ಲಿ ಚಾಪ್ಟರ್​-2 ಬಂದಿದೆ. ಆದ್ದರಿಂದ ಇದಾಗಲೇ ಮತ್ತೆರಡು ವರ್ಷ ಆಗಿರುವ ಹಿನ್ನೆಲೆಯಲ್ಲಿ ಚಾಪ್ಟರ್​-3 ಯಾವಾಗ ಎನ್ನುವುದು ಅಭಿಮಾನಿಗಳ ಪ್ರಶ್ನೆ. ಅಷ್ಟಕ್ಕೂ ಕೆಜಿಎಫ್-3 ಸಿನಿಮಾದ ಘೋಷಣೆ ಬಹಳ ಹಿಂದೆಯೇ ನಡೆದಿದೆ. ಸಿಂಪಲ್ ಪೂಜೆಯೊಂದಿಗೆ ಸ್ಕ್ರಿಪ್ಟ್ ಕೆಲಸ ಕೂಡ ಶುರು ಆಗಿದೆ. 2025 ರಲ್ಲಿ ಇದರ ಬಿಡುಗಡೆಯಾಗುತ್ತದೆ ಎಂದು ನಿರೀಕ್ಷೆ ಇದ್ದರೂ, ದಿನಾಂಕವಿನ್ನೂ ಫಿಕ್ಸ್‌ ಆಗಲಿಲ್ಲ. 

ಇದೀಗ ಕೆಜಿಎಫ್​-3 ನಲ್ಲಿಯೂ ನಟಿಸಿರುವ ನಟಿ ಮಾಳವಿಕಾ ಅವಿನಾಶ್​ ಅವರು, ಕೆಜಿಎಫ್​-3 ಬಗ್ಗೆ ಬಿಗ್​ ಅಪ್​ಡೇಟ್​ ನೀಡಿದ್ದಾರೆ. ಅದೇನೆಂದರೆ, ಚಿತ್ರ ಶೀಘ್ರದಲ್ಲಿ ತೆರೆಯ ಮೇಲೆ ಕಾಣಲಿದೆ ಎನ್ನುವ ಹಿಂಟ್​ ಅದು. ನಾನೂ ಶೂಟಿಂಗ್​ನಲ್ಲಿ ಪಾಲ್ಗೊಂಡಿದ್ದೆ ಎನ್ನುವ ಮೂಲಕ, ಶೂಟಿಂಗ್ ಮುಗಿದಿರುವ ಬಗ್ಗೆ ಅವರು ತಿಳಿಸಿದ್ದಾರೆ. ಕಿರಿಕ್​ ಕೀರ್ತಿ ಯೂಟ್ಯೂಬ್​​ ಚಾನೆಲ್​ಗೆ ನೀಡಿರುವ ಸಂದರ್ಶನದಲ್ಲಿ ಮಾಳವಿಕಾ ಅವರು ಈ ಬಗ್ಗೆ ಮಾತನಾಡಿದ್ದಾರೆ. ಇದೇ ವೇಳೆ ಕೆಜಿಎಫ್​ ಸಿನಿಮಾ ಹೇಗೆ ಕನ್ನಡದ ಇಂಡಸ್ಟ್ರಿಯನ್ನೇ ಪ್ರಪಂಚ ಮಟ್ಟದಲ್ಲಿ ಕೊಂಡೊಯ್ಯಿತು ಎನ್ನುವ ಬಗ್ಗೆಯೂ ಮಾತನಾಡಿದ್ದಾರೆ ಮಾಳವಿಕಾ. ಈ ಹಿಂದೆ, ತಮಿಳು, ತೆಲುಗುವಿಗೆ ಹೋದಾಗ ಕನ್ನಡನಾ ಎಂದು ಒಂದು ರೀತಿಯಲ್ಲಿ ಹೇಳ್ತಿದ್ರು. ಆದ್ರೆ ಈಗ ಇಡೀ ಪ್ರಪಂಚ ರಾಕಿ ಭಾಯಿ ಎಂದ್ರೆ ತಿರುಗಿ ನೋಡುತ್ತೆ. ಕೆಜಿಎಫ್​-3 ನಾನು ಶೂಟಿಂಗ್​ ಮಾಡಿದ್ದೇನೆ. ಸೆಟ್​ ತುಂಬಾ ಸಕತ್​ ಆಗಿತ್ತು. ಮಮ್ಮಿ ಪಿಕ್ಚರ್​ ನೋಡಿದ್ದೆ. ಆ ರೀತಿ ಇದರ ಕಲ್ಪನೆ ಇದೆ ಎಂದಿದ್ದಾರೆ.

ಕನ್ನಡದ ಸೂಪರ್ ಸ್ಟಾರ್ ಹೀಗೆಂದು ಅಂದುಕೊಂಡೇ ಇರಲಿಲ್ಲ: ನಟ ಯಶ್‌ ಕುರಿತು ಬಾಲಿವುಡ್‌ ನಟಿ ಹೇಳಿದ್ದೇನು?

ಕೆಜಿಎಫ್​ನಲ್ಲಿ ಕಾಣಿಸಿಕೊಂಡಿರುವ ಬಾಲಿವುಡ್‌ ನಟಿ ರವಿನಾ ಟಂಡನ್‌ ಅವರು ನಟ ಯಶ್‌ ಅವರ ಬಗ್ಗೆ ಈ ಹಿಂದೆ ಮಾತನಾಡಿದ್ದರು. ಶೂಟಿಂಗ್‌ ಸೆಟ್‌ನಲ್ಲಿ ಯಶ್‌ ಅವರು ನಡೆದುಕೊಂಡಿರುವ ರೀತಿಯನ್ನು ಹಾಡಿ, ಹೊಗಳಿರುವ ನಟಿ ರವೀನಾ, ಕನ್ನಡದ ಸೂಪರ್ ಸ್ಟಾರ್ ಒಬ್ಬರು ಹೀಗೆ ಇಷ್ಟು ಸಿಂಪಲ್‌ ಇರುತ್ತಾರೆ ಎಂದು ಅಂದುಕೊಂಡಿರಲಿಲ್ಲ. ಅವರು down to earth ನಟ ಆಗಿದ್ದಾರೆ. ತುಂಬಾ ಚೆನ್ನಾಗಿ ಶೂಟಿಂಗ್‌ನಲ್ಲಿ ಸಹಕಾರ ನೀಡಿದ್ರು ಎಂದಿದ್ದರು. ನಾನು ಹಿಂದಿಯಳು, ಅವರು ಕನ್ನಡಿಗರು. ನಾನು ಕನ್ನಡದ ಸೂಪರ್ ಸ್ಟಾರ್ ಎಂಬೆಲ್ಲಾ ನಡವಳಿಕೆ ಅವರಲ್ಲಿ ಇರಲೇ ಇಲ್ಲ. ಅವರು ಹೇಳುವ ಡೈಲಾಗ್‌ ನನಗೆ ಅರ್ಥ ಆಗುತ್ತಿರಲಿಲ್ಲ. ಪ್ರತಿಯೊಂದು ಡೈಲಾಗ್‌ ಅನ್ನು ನನಗೆ ತಿಳಿಸಿ ನನ್ನ ಭಾಷೆಯಲ್ಲಿಯೇ ವಿವರಣೆ ನೀಡುತ್ತಿದ್ದರು. ಒಬ್ಬ ಸೂಪರ್ ಸ್ಟಾರ್ ಇಷ್ಟೊಂದು ಉತ್ತಮ ನಡವಳಿಕೆ ಹೊಂದಿರುವುದು ತುಂಬಾ ಖುಷಿಯ ವಿಚಾರ ಎಂದು ನಟಿ ರವೀನಾ ಹೇಳಿದ್ದರು. 

ಅಂದಹಾಗೆ ರವೀನಾ, ಕೆಜಿಎಫ್​-2ನಲ್ಲಿಯೂ ನಟಿಸಿದ್ದರು. ಅವರಿಗೆ ಕೆಜಿಎಫ್​-3 ಕುರಿತು ಈ ಹಿಂದೆ ಪ್ರಶ್ನೆ ಕೇಳಲಾಗಿತ್ತು. ಅಷ್ಟಕ್ಕೂ ಕೆಜಿಎಫ್​ ಚಿತ್ರ ಕನ್ನಡದಲ್ಲಿ ಮಾತ್ರವಲ್ಲದೇ ಬಾಲಿವುಡ್​ ಮಂದಿಗೂ ಹುಚ್ಚೆಬ್ಬಿಸಿದೆ. ಇದೇ ಕಾರಣಕ್ಕೆ ಈ ಚಿತ್ರಕ್ಕಾಗಿ ಅವರೂ ಕಾತರದಿಂದ ಕಾಯುತ್ತಿದ್ದಾರೆ. ರವೀನಾ ಅವರು ಕಾರ್ಯಕ್ರಮವೊಂದರಲ್ಲಿ ಪಾಲ್ಗೊಳ್ಳಲು ತೆರಳುತ್ತಿದ್ದ ಸಂದರ್ಭದಲ್ಲಿ ಅವರಿಗೆ ಈ ಪ್ರಶ್ನೆ ಎದುರಾಗಿತ್ತು. ಕೆಜಿಎಫ್​-3 ಯಾವಾಗ ಎಂದು ಹೇಳಬಹುದಾ ಎನ್ನುವ ಪ್ರಶ್ನೆಗೆ ನಟಿ, ಇಲ್ಲ, ಈಗಲೇ ಏನೂ ಹೇಳುವುದಿಲ್ಲ ಎನ್ನುತ್ತಲೇ ಅಲ್ಲಿಂದ ತೆರಳಿದ್ದರು. ಆದ್ದರಿಂದ ಸಿನಿಮಾದ ಬಗ್ಗೆ ಇನ್ನಷ್ಟು ನಿರೀಕ್ಷೆ ಹುಟ್ಟಿದೆ. 

ಮನೆಯವರನ್ನು ವಿರೋಧಿಸಿ ಮದ್ವೆಯಾದ್ವಿ: ಆದ್ರೆ ಕೊನೆಗೆ ಸಾಯುವ ಹಂತಕ್ಕೆ ಬಂದೆ... ಕಿರಿಕಿ ಕೀರ್ತಿ ಓಪನ್‌ ಮಾತು...

YouTube video player