ಶೋ ಮಸ್ಟ್ ಗೋ ಆನ್ ಅನ್ನುತ್ತಿದ್ದ ಅಮ್ಮ: ಸುಧಾ ಬೆಳವಾಡಿ

"I've got her spirit/
She's always got my back/
When I look at her/
I think, I want to be just like that."

- Lauren Alaina

Kannada actress Sudha Belawadi recalls her mother most said words vcs

- ಸುಧಾ ಬೆಳವಾಡಿ

ಅಮ್ಮ ಭಾರ್ಗವಿ ನಮ್ಮನ್ನು ಬಿಟ್ಟುಹೋಗಿ ಕೆಲವೇ ದಿನಗಳಾಗಿವೆ. ಅಮ್ಮನ ಬಗ್ಗೆ ಸಾವಿರಾರು ನೆನಪುಗಳಿವೆ. ಅದೊಂದು ಮಧ್ಯಾಹ್ನ ನನ್ನ ಅಣ್ಣ ಪ್ರಕಾಶ್‌ ಮತ್ತು ನನ್ನ ಗಂಡ ಬೈಕ್‌ನಲ್ಲಿ ಹೋಗ್ತಾ ಇದ್ರು. ಜಯನಗರ 4 ಬ್ಲಾಕ್‌ ಹತ್ರ ಎಡಕಲ್ಲು ಗುಡ್ಡದ ಮೇಲೆ ಸಿನಿಮಾದ ಚಂದ್ರು ಅವರ ಕಾರು ಇವರ ಬೈಕ್‌ಗೆ ಢಿಕ್ಕಿ ಆಗಿ ಆ್ಯಕ್ಸಿಡೆಂಟ್‌ ಆಗಿದೆ. ಅಣ್ಣನಿಗೆ ಬಿದ್ದ ಹೊಡೆತಕ್ಕೆ ಬೋನ್‌ ಫ್ರಾಕ್ಚರ್‌ ಆಗಿದೆ. ಕೂಡಲೇ ಆಸ್ಪತ್ರೆಗೆ ಸೇರಿಸಿದ್ದಾರೆ, ಸಂಜೆ ಆಪರೇಶನ್‌. ಅದೇ ಸಂಜೆ ಅಮ್ಮನಿಗೆ ‘ಮುಖ್ಯಮಂತ್ರಿ’ ನಾಟಕದ ಶೋ. ನಾಟಕದಲ್ಲಿ ಅವರದು ಮುಖ್ಯ ಪಾತ್ರ. ಇತ್ತ ಮಗನಿಗೆ ಆಕ್ಸಿಡೆಂಟ್‌ ಆಗಿ ಆತ ಮತ್ತೆ ನಡೆಯುತ್ತಾನೋ ಇಲ್ಲವೋ ಅನ್ನೋ ಸ್ಥಿತಿ. ಆ ಕಡೆ ನಾಟಕ. ಪಾತ್ರ ನಿರ್ವಹಿಸಿ, ನಾಟಕ ಮುಗಿದ ಮೇಲೆ ಅಳುತ್ತಲೇ, ಅಣ್ಣ ಇದ್ದ ನರ್ಸಿಂಗ್‌ ಹೋಂಗೆ ಬಂದರು. ಪುಣ್ಯಕ್ಕೆ ಅಣ್ಣನ ಕಾಲು ಸರಿಹೋಯ್ತು.

Kannada actress Sudha Belawadi recalls her mother most said words vcs

ನನ್ನ ವಿಚಾರದಲ್ಲೂ ಹಾಗೇ ಆಯ್ತು. ಆಗ ನಾನು 8ನೇ ಕ್ಲಾಸ್‌ ಓದ್ತಾ ಇದ್ದೆ. ಆಗ ಸಮುದಾಯದವರು ಮಾಡುತ್ತಿದ್ದ ‘ಗೆಲಿಲಿಯೋ’ ನಾಟಕದಲ್ಲಿ ಪುಟ್ಟಗೆಲಿಲಿಯೋ ಪಾತ್ರ ಮಾಡುತ್ತಿದ್ದೆ. ಆ ಸಲ ಮಾತ್ರ ನನ್ನ ಬದಲಿಗೆ ಇನ್ನೊಬ್ಬ ಹುಡುಗಿ ಆ ಪಾತ್ರ ಮಾಡುತ್ತಿದ್ದಳು. ನನಗೆ ಮರುದಿನ ಎಕ್ಸಾಂ, ಮನೆಯಲ್ಲಿ ಬೇರೆ ನಮ್ಮ ತಾತ ತೀರಿಹೋಗಿ ವೈಕುಂಠ ಸಮಾರಾಧನೆ ಇತ್ತು. ನಾಟಕ ಟೀಮ್‌ನವರು ಮನೆಗೆ ಬಂದರು. ಪುಟ್ಟಗೆಲಿಲಿಯೋ ಪಾತ್ರ ಮಾಡುವ ಹುಡುಗಿ ಬರ್ತಿಲ್ಲ, ಸುಧಾನ ಕಳಿಸಿಕೊಡಿ ಅಂದರು. ಅಮ್ಮ ಅವಳಿಗೆ ಎಕ್ಸಾಂ ಇದೆ ಅಂದರೂ, ‘ಹೋಗ್ತಿಯೇನೆ?’ ಎಂದು ಕೇಳಿದರು. ನಾನು ಹೋಗಲ್ಲ ಅಂತ ಹಠ ಮಾಡಿದೆ. ಟೀಮ್‌ನವರು ನಾನು ಅತ್ತರೂ ಕೇಳದೇ ಕನ್ವಿನ್ಸ್‌ ಮಾಡಿ ಕರ್ಕೊಂಡು ಹೋದರು. ಅವತ್ತು ಶೋಗೂ ಮೊದಲೂ ಜ್ವರ ಬಂದ ಹಾಗಾಗಿ ತಲೆ ಸುತ್ತು ಬರುತ್ತಿತ್ತು. ಅಲ್ಲಿ ಕೊಟ್ಟಮಾತ್ರೆ ತಿಂದು ಅದು ಸರಿಹೋಗದೇ ರಕ್ತವಾಂತಿಯಾಯ್ತು. ಆದರೆ ನನಗೆ ಇವತ್ತಿಗೂ ಅಚ್ಚರಿ ಆಗೋದು, ‘ಶೋ ಮಸ್ಟ್‌ ಗೋ ಆನ್‌’ ಅನ್ನುವ ಅಮ್ಮನ ಗಟ್ಟಿತನ.

ಬಾಗಿಲು ಹಾಕ್ಕೊಂದು ಕೂತಿರ್ತಿದ್ದೆ, ಅಮ್ಮ ಬಗ್ಗಿ ನೋಡುತ್ತಿದ್ದರು: ಸೀತಾರಾಮ್

....

ಎಕ್ಸಟ್ರಾ ಮಾಹಿತಿ:

ತಾಯಂದಿರ ದಿನಕ್ಕಾಗಿ ಮನಮುಟ್ಟುವ ಕೋಟ್ಸ್ ಗಳು, ಶುಭ ಸಂದೇಶಗಳು!

- ಆತ್ಮೀಯ ಅಮ್ಮ, ಒಮ್ಮೊಮ್ಮೆ ನಿಮ್ಮನ್ನು ಹುಚ್ಚರನ್ನಾಗಿ ಮಾಡಿದ್ದಕ್ಕೆ ದಯವಿಟ್ಟು ನನ್ನ ಕ್ಷಮೆ ಸ್ವೀಕಾರ ಮಾಡಿ. ನಿಮ್ಮನ್ನು ಪ್ರೀತಿಸಿದಷ್ಟು ಮತ್ಯಾರನ್ನೂ ಪ್ರೀತಿಸಿಲ್ಲ. ನಿಮ್ಮ ಪ್ರೀತಿ ಹಾಗೂ ಬೆಂಬಲವಿಲ್ಲದೆ ನನ್ನ ಜೀವನವೇ ಇಲ್ಲ. ನಿಮಗೆ ತಾನಂದಿರ ದಿನದ ಶುಭಾಶಯಗಳು!

‘ಸ್ಟಾರ್‌ ಸುವರ್ಣ’ದಲ್ಲಿ ಇಂದುvಸಂಜೆ 6ಕ್ಕೆ ಅಮ್ಮಂದಿರ ದಿನ ವಿಶೇಷ!

- ಅಮ್ಮ, ನಿನಗೆ ತಾಯಂದಿರ ದಿನದ ಶುಭಾಶಯಗಳು. ಈ ಜಗತ್ತಿನಲ್ಲಿ ನೀವು ಎಲ್ಲಾ ಪ್ರೀತಿ ಮತ್ತು ಗಮನಕ್ಕೆ ಅರ್ಹರು. ಅಮ್ಮಾ, ನಿನ್ನ ಉಪಸ್ಥಿತಿಯಿಂದ ನನ್ನನ್ನು ಆಶೀರ್ವದಿಸಿದ್ದಕ್ಕಾಗಿ ನಾನು ಭಗವಂತನಿಗೆ ಶಾಶ್ವತವಾಗಿ ಕೃತಜ್ಞನಾಗಿದ್ದೇನೆ.

- ಅಮ್ಮಾ ನಾನು ನಿಮ್ಮ ಪ್ರತಿರೂಪವಾಗಿ ಬೆಳೆಯಬೇಕೆಂದು ನಾನು ಬಯಸುತ್ತೇನೆ. ಯಾವಾಗಲೂ ನನಗೆ ಸ್ಫೂರ್ತಿಯ ಮೂಲವಾಗಿರುವುದಕ್ಕಾಗಿ ಧನ್ಯವಾದಗಳು. ನಾನು ನಿನ್ನನ್ನು ಪ್ರೀತಿಸುತ್ತೇನೆ. ತಾಯಂದಿರ ದಿನದ ಶುಭಾಶಯಗಳು.

Latest Videos
Follow Us:
Download App:
  • android
  • ios