ಬಾಗಿಲು ಹಾಕ್ಕೊಂದು ಕೂತಿರ್ತಿದ್ದೆ, ಅಮ್ಮ ಬಗ್ಗಿ ನೋಡುತ್ತಿದ್ದರು: ಸೀತಾರಾಮ್
"Mother is the name for God in the lips and hearts of little children." - William Makepeace Thackeray
ಟಿ ಎನ್ ಸೀತಾರಾಮ್
ತಾಯಿ ನಮ್ಮನ್ನೆಲ್ಲ ಬಿಟ್ಟು ಹೋಗಿ 10 ವರ್ಷ ಕಳೆದಿದೆ. 2012ರಿಂದ ಇಂದಿನವರೆಗೆ ದಿನದಲ್ಲಿ ಒಮ್ಮೆಯಾದರೂ ಅವರನ್ನು ನೆನೆಸಿಕೊಳ್ಳುತ್ತೇನೆ. ಒಮ್ಮೆ ಅಗಾಧ ಕಷ್ಟಕ್ಕೆ ಸಿಲುಕಿದ್ದೆ. ಸಂಕಟದಲ್ಲಿ ರೂಮಿನ ಬಾಗಿಲು ಹಾಕ್ಕೊಂಡು ಕೂತಿರುತ್ತಿದ್ದೆ. ಅಮ್ಮ ಹೊರಗಿಂದ ಬಗ್ಗಿ ನೋಡೋದು. ಪ್ರೀತಿ, ನೋವು, ಸಂಕೋಚ, ಭಯ ಸಮ್ಮಿಶ್ರಗೊಂಡಂತಿದ್ದ ಅವರ ಮುಖ. ಮಗನಿಗೆ ಏನು ಕಷ್ಟಬಂದಿದಿಯೋ ಅಂತ ನೋವು, ಪ್ರೀತಿ. ಈಗ ಕೇಳಿದರೆ ಮಗ ಎಲ್ಲಿ ಬೈದು ಬಿಡ್ತೀನೋ ಅಂತ ಭಯ. ಅವರು ಒಳಬಂದು, ‘ಏನಾಗಿದೆ ನಿನಗೆ, ನನ್ನತ್ರ ಹೇಳು. ನನ್ನತ್ರ ಏನಿದೆ ಅಷ್ಟೂಕೊಟ್ಟು ಬಿಡ್ತೀನಿ’ ಅಂತ ಹೇಳಿದ್ರು. ಅವರಿಗೆ ಬೇರೆ ಮಕ್ಕಳೂ ಇದ್ದರು. ಆದರೂ ಮಗನಿಗೆ ಕಷ್ಟಬಂದಿದೆ ಅಂದಾಗ ಏನು ಮಾಡಲೂ ಸಿದ್ಧರಿರುತ್ತಿದ್ದ ಅಮ್ಮನ ಮುಖ ಅದೇ ಭಯ ಮತ್ತು ಪ್ರೀತಿಯ ಭಾವದಲ್ಲಿ ನೆನಪಾಗುತ್ತೆ.
‘ಸ್ಟಾರ್ ಸುವರ್ಣ’ದಲ್ಲಿ ಇಂದುvಸಂಜೆ 6ಕ್ಕೆ ಅಮ್ಮಂದಿರ ದಿನ ವಿಶೇಷ!
ಚಿಕ್ಕ ವಯಸ್ಸಲ್ಲಿ ಎಳೆಯ ರಾಗಿ ತೆನೆ, ತೆಂಗಿನ ಕಾಯಿ, ಬೆಲ್ಲ ಹಾಕಿ ಕೊಡುತ್ತಿದ್ದ ತಿಂಡಿಗೆ ಅದೆಷ್ಟುರುಚಿಯಿತ್ತೋ. ಗೌರಿಬಿದನೂರು ಹತ್ರ ನಮಗೆ ಮಾವಿನ ತೋಪು ಇತ್ತು. ಅಲ್ಲಿಗೆ ನನ್ನ ಸ್ನೇಹಿತರು ಬಂದರೆ ಅವರಿಗೆ ಮಾವಿನ ಹಣ್ಣು ಬೇಡ ಅಂದರೂ ತಿನ್ನಿಸೋರು. ಮಗನ ಆತ್ಮೀಯರು ತನ್ನ ಆತ್ಮೀಯರೂ ಹೌದು ಅನ್ನುವ ಹಾಗೆ ಅವರ ನಡವಳಿಕೆ. ನಾನು ಕಾಯಿಲೆ ಬಂದು ಮಲಗಿದ್ದಾಗ ‘ನಿನ್ನ ಕಾಯಿಲೆ ನನಗೆ ದಾಟಿಸಲಾಗುತ್ತಾ?’ ಅಂತ ಹಳಹಳಿಸಿದವರು. ನನ್ನಮ್ಮ ಸುಂದರಮ್ಮ ಯಾರಿಗೂ ನೋವು ಮಾಡಿದವರಲ್ಲ, ನನ್ನಮ್ಮ ನನಗೆ ಯಾವತ್ತೂ ಬೆಸ್ಟ್. ಹಾಗೆ ಉಳಿದವರಿಗೆ ಅವರಮ್ಮ ಬೆಸ್ಟ್. ಆದರೆ ನನ್ನ ಸ್ನೇಹಿತರು ಹೇಳೋದು ಮಾತ್ರ, ನಿನ್ನಮ್ಮನೇ ಬೆಸ್ಟ್ ಅಂತ.
ಎಕ್ಸಟ್ರಾ ಮಾಹಿತಿ:
ತಾಯಂದಿರ ದಿನಕ್ಕಾಗಿ ಮನಮುಟ್ಟುವ ಕೋಟ್ಸ್ ಗಳು, ಶುಭ ಸಂದೇಶಗಳು!
- ಆತ್ಮೀಯ ಅಮ್ಮ, ಒಮ್ಮೊಮ್ಮೆ ನಿಮ್ಮನ್ನು ಹುಚ್ಚರನ್ನಾಗಿ ಮಾಡಿದ್ದಕ್ಕೆ ದಯವಿಟ್ಟು ನನ್ನ ಕ್ಷಮೆ ಸ್ವೀಕಾರ ಮಾಡಿ. ನಿಮ್ಮನ್ನು ಪ್ರೀತಿಸಿದಷ್ಟು ಮತ್ಯಾರನ್ನೂ ಪ್ರೀತಿಸಿಲ್ಲ. ನಿಮ್ಮ ಪ್ರೀತಿ ಹಾಗೂ ಬೆಂಬಲವಿಲ್ಲದೆ ನನ್ನ ಜೀವನವೇ ಇಲ್ಲ. ನಿಮಗೆ ತಾನಂದಿರ ದಿನದ ಶುಭಾಶಯಗಳು!
Mothers Day 2022: ಅವ್ವ- ತಾಯಿ ನಿಧನರಾದಾಗ, ಪಿ.ಲಂಕೇಶರು ಬರೆದ ಮನಮುಟ್ಟುವ ಕವನ
- ಅಮ್ಮ, ನಿನಗೆ ತಾಯಂದಿರ ದಿನದ ಶುಭಾಶಯಗಳು. ಈ ಜಗತ್ತಿನಲ್ಲಿ ನೀವು ಎಲ್ಲಾ ಪ್ರೀತಿ ಮತ್ತು ಗಮನಕ್ಕೆ ಅರ್ಹರು. ಅಮ್ಮಾ, ನಿನ್ನ ಉಪಸ್ಥಿತಿಯಿಂದ ನನ್ನನ್ನು ಆಶೀರ್ವದಿಸಿದ್ದಕ್ಕಾಗಿ ನಾನು ಭಗವಂತನಿಗೆ ಶಾಶ್ವತವಾಗಿ ಕೃತಜ್ಞನಾಗಿದ್ದೇನೆ.
- ಅಮ್ಮಾ ನಾನು ನಿಮ್ಮ ಪ್ರತಿರೂಪವಾಗಿ ಬೆಳೆಯಬೇಕೆಂದು ನಾನು ಬಯಸುತ್ತೇನೆ. ಯಾವಾಗಲೂ ನನಗೆ ಸ್ಫೂರ್ತಿಯ ಮೂಲವಾಗಿರುವುದಕ್ಕಾಗಿ ಧನ್ಯವಾದಗಳು. ನಾನು ನಿನ್ನನ್ನು ಪ್ರೀತಿಸುತ್ತೇನೆ. ತಾಯಂದಿರ ದಿನದ ಶುಭಾಶಯಗಳು.