ನನಗೆ ಮಗು ಬೇಕು..ಗಂಡನನ್ನು ಬಿಡುಗಡೆ ಮಾಡಿ, ಜೈಲು ಅಧಿಕಾರಿಗೆ ಕೈದಿಯ ಪತ್ನಿಯ ಪತ್ರ
ನಾನು ಮಗುವನ್ನು ಹೊಂದಲು ಬಯಸುತ್ತೇನೆ. ನನ್ನ ಪತಿಯನ್ನು ಜೈಲಿನಿಂದ ಬಿಡುಗಡೆ ಮಾಡಿ ಎಂದು ಮಹಿಳೆಯೊಬ್ಬಳು ಜೈಲು ಅಧಿಕಾರಿಗೆ ಪತ್ರ ಬರೆದಿರುವ ಘಟನೆ ಮಧ್ಯಪ್ರದೇಶದಲ್ಲಿ ನಡೆದಿದೆ. ಆ ಬಗ್ಗೆ ಹೆಚ್ಚಿನ ಮಾಹಿತಿ ಇಲ್ಲಿದೆ.
ಮಧ್ಯಪ್ರದೇಶ: ಜೈಲಿನಲ್ಲಿ ಶಿಕ್ಷೆ ಅನುಭವಿಸುತ್ತಿರುವ ತನ್ನ ಪತಿಯನ್ನು ಪೆರೋಲ್ ಮೇಲೆ ಬಿಡುಗಡೆ ಮಾಡುವಂತೆ ಮಧ್ಯಪ್ರದೇಶ ರಾಜ್ಯದ ಮಹಿಳೆಯೊಬ್ಬರು ಜೈಲು ಅಧಿಕಾರಿಗಳಿಗೆ ಮನವಿ ಮಾಡಿದ್ದಾರೆ. ಆಕೆ ಮಗುವನ್ನು ಹೊಂದಲು ಬಯಸಿದ್ದರಿಂದ, ತನ್ನ ಪತಿಯನ್ನು ಜೈಲಿನಿಂದ ಬಿಡುಗಡೆ ಮಾಡುವಂತೆ ಗ್ವಾಲಿಯರ್ ಜೈಲು ಅಧಿಕಾರಿಗಳಿಗೆ ಮನವಿ ಮಾಡಿದರು. ಗ್ವಾಲಿಯರ್‌ನ ಶಿವಪುರಿ ಪ್ರದೇಶದ ದಾರಾ ಸಿಂಗ್ ಜಾತವ್ ಏಳು ವರ್ಷಗಳ ಹಿಂದೆ ಮಹಿಳೆಯನ್ನು ವಿವಾಹವಾದರು. ಆದರೆ ಮದುವೆಯಾದ ಕೆಲವೇ ದಿನಗಳಲ್ಲಿ ಪೊಲೀಸರು ಆತನನ್ನು ಕೊಲೆ ಪ್ರಕರಣದಲ್ಲಿ ಬಂಧಿಸಿದ್ದರು. ಈ ಪ್ರಕರಣದಲ್ಲಿ ಅಪರಾಧಿ ಎಂದು ಸಾಬೀತಾದ ಹಿನ್ನೆಲೆಯಲ್ಲಿ ನ್ಯಾಯಾಲಯ ಜೀವಾವಧಿ ಶಿಕ್ಷೆ ವಿಧಿಸಿದೆ.
ಅಂದಿನಿಂದ ದಾರಾ ಸಿಂಗ್, ಗ್ವಾಲಿಯರ್ ಜೈಲಿನಲ್ಲಿ ಶಿಕ್ಷೆ (Punishment)ಯನ್ನು ಅನುಭವಿಸುತ್ತಿದ್ದಾರೆ. ಆದರೆ ಇತ್ತೀಚೆಗೆ ಆತನ ಪತ್ನಿ (Wife) ತನ್ನ ಪತಿಯನ್ನು ಪೆರೋಲ್ ಮೇಲೆ ಬಿಡುಗಡೆ ಮಾಡುವಂತೆ ಜೈಲು ಅಧಿಕಾರಿಗಳಿಗೆ (Jail officers) ಅರ್ಜಿ ಸಲ್ಲಿಸಿದ್ದಳು. ನಾನು ಮಕ್ಕಳನ್ನು ಪಡೆಯಲು ಬಯಸುತ್ತೇನೆ. ಹೀಗಾಗಿ ಅವನನ್ನು ಬಿಡುಗಡೆ (Release) ಮಾಡುವಂತೆ ಜೈಲು ಅಧಿಕಾರಿಗಳನ್ನು ಕೋರಿಕೊಂಡಿದ್ದಳು. ದಾರಾಸಿಂಗ್ ಕಳೆದ ಏಳು ವರ್ಷಗಳಿಂದ ಗ್ವಾಲಿಯರ್ ಜೈಲಿನಲ್ಲಿ ಶಿಕ್ಷೆ ಅನುಭವಿಸುತ್ತಿದ್ದಾನೆ. ಮದುವೆಯ (Marriage) ನಂತರ ತನ್ನ ಮಗನನ್ನು ಕೊಲೆ ಪ್ರಕರಣದಲ್ಲಿ ಬಂಧಿಸಲಾಯಿತು ಎಂದು ಕೈದಿಯ ತಂದೆ ಕರೀಮ್ ಸಿಂಗ್ ಜಾತವ್ ಹೇಳಿದ್ದಾರೆ.
ತಾಳಿ ಕಟ್ಟಲು ಪೆರೋಲ್: ಅಪರಾಧಿ ಮದ್ವೆಯಾಗಲು ಕೋರ್ಟ್ ಮೊರೆ ಹೋದ ಮಹಿಳೆ; ಹೈಕೋರ್ಟ್‌ನಿಂದ ಶಾದಿ ಭಾಗ್ಯ
ಮೊಮ್ಮಗ ಬೇಕೆಂದು ಕೈದಿಯ ತಂದೆ ಕರೀಂ ಸಿಂಗ್ ಜಾದವ್ ಮನವಿ
ಗಂಡ ಜೈಲಿನಲ್ಲಿ ಇರುವುದರಿಂದ ಮಹಿಳೆ, ಒಬ್ಬಂಟಿಯಾಗಿ ಜೀವನ ದೂಡಬೇಕಾದ ಸ್ಥಿತಿ ಬಂದೊದಗಿದೆ. ಇದೀಗ ಈತನ ಪತ್ನಿ, ಮದುವೆಯಾಗಿ ಏಳು ವರ್ಷಗಳು ಕಳೆದರೂ ನನಗೆ ಮಕ್ಕಳಿಲ್ಲ. ನಾನೀಗ ಗರ್ಭ ಧರಿಸಬೇಕು. ಇದಕ್ಕಾಗಿ ನನ್ನ ಗಂಡನನ್ನು ಪೆರೋಲ್ ಮೂಲಕ ಜೈಲಿನಿಂದ ಕಳುಹಿಸಿಕೊಡಿ ಎಂದು ಅರ್ಜಿ ಸಲ್ಲಿಸಿದ್ದಾಳೆ.
ಮಗನ ಬಂಧನದಿಂದ ನಮಗೆ ಮದುವೆಯ ಸಂತಸವನ್ನು ಸಂಭ್ರಮಿಸಲು ಸಾಧ್ಯವಾಗಿಲ್ಲ. ಇದೀಗ ನಮಗೆ ವಯಸ್ಸಾಗಿದೆ. ಪತ್ನಿ ಅನಾರೋಗ್ಯ ಪೀಡಿತಳಾಗಿದ್ದು, ಮೊಮ್ಮಗ ಬೇಕೆಂದು ಬಯಸಿದ್ದಾಳೆ. ಹೀಗಾಗಿ ಮಗನನ್ನು ಕೆಲ ದಿನಗಳ ಕಾಲ ಜೈಲಿನಿಂದು ಕಳುಹಿಸಿಕೊಡುವಂತೆ ಕೈದಿ ದಾರಾ ಸಿಂಗ್ ತಂದೆ ಕರೀಂ ಸಿಂಗ್ ಜಾದವ್ ಹೇಳಿಕೊಂಡಿದ್ದಾರೆ.
ಗಂಡ ಜೈಲಲ್ಲಿ.. ಹೆಂಡತಿ ಡ್ರಗ್ಸ್ ಡೀಲ್‌ನಲ್ಲಿ! ಗಾಂಜಾ ಲೇಡಿಯ ನೆಟ್ವರ್ಕ್ ಹೇಗಿದೆ ಗೊತ್ತಾ?
ಮಧ್ಯಪ್ರದೇಶದ ಜೈಲು ನಿಯಮಗಳ ಪ್ರಕಾರ, ಉತ್ತಮ ನಡವಳಿಕೆಗಾಗಿ ಜೀವಾವಧಿ ಕೈದಿಗೆ ಎರಡು ವರ್ಷಗಳ ನಂತರ ಪೆರೋಲ್ ನೀಡಬಹುದು. ಹೀಗಾಗಿ ಮಹಿಳೆಯ ಮನವಿಯನ್ನು ಜೈಲು ಸೂಪರಿಂಟೆಂಡೆಂಟ್ ಶಿವಪುರಿ ಎಸ್ಪಿಗೆ ಕಳುಹಿಸಲಾಗಿದೆ. ಆದರೆ, ಅಂತಿಮ ನಿರ್ಧಾರವನ್ನು ಜಿಲ್ಲಾಧಿಕಾರಿ ತೆಗೆದುಕೊಳ್ಳುತ್ತಾರೆ. ಆದರೆ ಈ ಹಿಂದೆ ರಾಜಸ್ಥಾನಿ ಮಹಿಳೆಯೊಬ್ಬರು ಇದೇ ರೀತಿ ಮನವಿ ಮಾಡಿದ್ದರು. ಅಲ್ಲಿನ ಹೈಕೋರ್ಟ್ ಮಹತ್ವದ ತೀರ್ಪು ಪ್ರಕಟಿಸಿತ್ತು. ಮಕ್ಕಳನ್ನು ಹೊಂದಲು ಗಂಡನನ್ನು ಬಿಡುಗಡೆ ಮಾಡುವಂತೆ ಮಹಿಳೆ ಕೋರಿದ್ದಳು. ಈ ಬಗ್ಗೆ ತನಿಖೆ ನಡೆಸಿದ ಜೋಧಪುರ ಪೀಠ, ಕೈದಿಗೆ 15 ದಿನಗಳ ಪೆರೋಲ್ ನೀಡಿತ್ತು.
ಎಣ್ಮೆ ಬಾಟಲಿಗೆ 10 ರೂ. ಅಧಿಕ ದರ ವಿಧಿಸಿದ್ದಕ್ಕೆ ಜೈಲು, ಮಾಲೀಕನಿಗೆ 75 ಸಾವಿರ ದಂಡ!
ಅದೇ ರೀತಿ ಮಧ್ಯಪ್ರದೇಶದ ಮಹಿಳೆಯೂ ಮಗುವನ್ನು ಬಯಸಿ, ಗಂಡನ ಬಿಡುಗಡೆಗೆ ಜೈಲಾಧಿಕಾರಿಗೆ ಮನವಿ ಸಲ್ಲಿಸಿದ್ದು, ಅಧಿಕಾರಿಗಳು ಯಾವ ರೀತಿ ನಿರ್ಧಾರ ತೆಗೆದುಕೊಳ್ಳುತ್ತಾರೆ ಕಾದು ನೋಡ್ಬೇಕಿದೆ.