ಎಣ್ಮೆ ಬಾಟಲಿಗೆ 10 ರೂ. ಅಧಿಕ ದರ ವಿಧಿಸಿದ್ದಕ್ಕೆ ಜೈಲು, ಮಾಲೀಕನಿಗೆ 75 ಸಾವಿರ ದಂಡ!
ಬಿಯರ್ ಬಾಟಲಿಗೆ ಗ್ರಾಹಕರಿಂದ 10 ರೂ.ಗಳನ್ನು ಅಧಿಕವಾಗಿ ತೆಗೆದುಕೊಂಡ ಮದ್ಯ ಮಾರಾಟಗಾರನನ್ನು ಬಂಧಿಸಲಾಗಿದೆ. ಮಾತ್ರವಲ್ಲ ಮಳಿಗೆಯ ಮಾಲೀಕರಿಗೆ 75,000 ರೂಪಾಯಿ ದಂಡವನ್ನೂ ವಿಧಿಸಲಾಗಿರುವ ಘಟನೆ ನೋಯ್ಡಾದಲ್ಲಿ ನಡೆದಿದೆ.
ಉತ್ತರ ಪ್ರದೇಶ (ಮಾ.23): ನೋಯ್ಡಾದಲ್ಲಿ ಬಿಯರ್ ಬಾಟಲಿಗೆ ಗ್ರಾಹಕರಿಂದ 10 ರೂ.ಗಳನ್ನು ಅಧಿಕವಾಗಿ ತೆಗೆದುಕೊಂಡ ಮದ್ಯ ಮಾರಾಟಗಾರನನ್ನು ಬುಧವಾರ ಬಂಧಿಸಲಾಗಿದೆ. ಮಾತ್ರವಲ್ಲ ಮಳಿಗೆಯ ಮಾಲೀಕರಿಗೆ 75,000 ರೂಪಾಯಿ ದಂಡವನ್ನೂ ವಿಧಿಸಲಾಗಿದೆ. ಅಬಕಾರಿ ಇಲಾಖೆಯ ಅಧಿಕಾರಿಗಳ ಪ್ರಕಾರ, ಬಿಸ್ರಾಖ್‌ನ ರೋಜಾ ಜಲಾಲ್‌ಪುರ್ ಪ್ರದೇಶದಲ್ಲಿರುವ ಮದ್ಯದ ಅಂಗಡಿಯಲ್ಲಿ ಈ ಘಟನೆ ನಡೆದಿದೆ.
500 ಎಂಎಲ್‌ನ ಕಿಂಗ್‌ಫಿಶರ್ ಸ್ಟ್ರಾಂಗ್ ಬಿಯರ್ ಗೆ 120 ರೂ. ಬೆಲೆ ಇದ್ದು ಅಅನ್ನು ಗ್ರಾಹಕರಿಗೆ 130 ರೂ.ಗೆ ಮಾರಾಟ ಮಾಡಲಾಗಿದೆ. ಹೀಗಾಗಿ ಮಾರಾಟಗಾರರು ಹೆಚ್ಚುವರಿಯಾಗಿ 10 ಅಥವಾ 20 ರೂ.ಗಳನ್ನು ವಸೂಲಿ ಮಾಡುತ್ತಿರುವ ಬಗ್ಗೆ ನಮಗೆ ಹಲವು ಜನರಿಂದ ದೂರುಗಳು ಬಂದಿದ್ದವು. ಖರ್ಚ ಪಾನಿ ಎಂದು ಅಬಕಾರಿ ನಿರೀಕ್ಷಕ ಅಭಿನವ್ ಶಾಹಿ ಮಾಧ್ಯಮಕ್ಕೆ ತಿಳಿಸಿದ್ದಾರೆ.
ದೂರುಗಳನ್ನು ಸ್ವೀಕರಿಸಿದ ಅಬಕಾರಿ ಇಲಾಖೆ ಮದ್ಯದಂಗಡಿಗೆ ಮಫ್ತಿಯಲ್ಲಿ ಬಂದು ಪರಿಶೀಲನೆ ನಡೆಸಿದೆ. ಸಾಕ್ಷ್ಯಾಧಾರಗಳ ಆಧಾರದ ಮೇಲೆ, ಮದ್ಯ ಮಾರಾಟಗಾರ ರವಿ ಸಿಂಗ್ ವಿರುದ್ಧ ಅಬಕಾರಿ ಕಾಯ್ದೆಯ ಸೆಕ್ಷನ್ 64 (ಅತಿಯಾದ ಮೌಲ್ಯ ವಿಧಿಸಿದ್ದಕ್ಕೆ ) ಮತ್ತು IPC 408 (ಗುಮಾಸ್ತ ಅಥವಾ ಸೇವಕನಿಂದ ನಂಬಿಕೆಯ ಉಲ್ಲಂಘನೆ) ಅಡಿಯಲ್ಲಿ ಎಫ್ಐಆರ್ ದಾಖಲಿಸಲಾಗಿದೆ, ನಂತರ ಆತನನ್ನು ಬಂಧಿಸಿ ಜೈಲಿಗೆ ಕಳುಹಿಸಲಾಗಿದೆ ಎಂದು ಶಾಹಿ ಮಾಹಿತಿ ನೀಡಿದ್ದಾರೆ.
ಕೊಡಗು: ನಕಲಿ ಮದ್ಯ ಸೇವಿಸಿ ಐವರ ಸಾವು
ನಿಯಮಗಳ ಉಲ್ಲಂಘನೆಗಾಗಿ ಮದ್ಯದಂಗಡಿಯ ಪರವಾನಗಿದಾರ ಸುರೇಂದರ್ ಸಿಂಗ್ ಎಂಬಾತನಿಗೆ 75,000 ರೂಪಾಯಿ ದಂಡವನ್ನು ವಿಧಿಸಲಾಗಿದೆ ಎಂದು ಜಿಲ್ಲಾ ಅಬಕಾರಿ ಅಧಿಕಾರಿ ರಾಕೇಶ್ ಬಹದ್ದೂರ್ ಸಿಂಗ್ ತಿಳಿಸಿದ್ದಾರೆ.
ಕಾರವಾರ: ಅರಣ್ಯದಲ್ಲಿ ಅಡಗಿಟಿಸಿದ್ದ ಅಕ್ರಮ ಗೋವಾ ಮದ್ಯ ಪತ್ತೆ, ಮೂವರ ಬಂಧನ
ಪರವಾನಗಿ ಹೊಂದಿರುವ ಮಳಿಗೆಗಳಲ್ಲಿ ಮದ್ಯದ ದರವನ್ನು ಹೆಚ್ಚಿಸಿದರೆ, ಮೊದಲ ಬಾರಿಗೆ ದಂಡ 75,000 ರೂ., ಎರಡನೇ ಬಾರಿ ದಂಡ 1.50 ಲಕ್ಷ ರೂ. ಮತ್ತು ಮೂರನೇ ಬಾರಿಗೆ ಸಂಭವಿಸಿದಲ್ಲಿ, ಅಬಕಾರಿ ಇಲಾಖೆಯು ಮದ್ಯ ಮಾರಾಟದ ಪರವಾನಗಿಯನ್ನು ರದ್ದುಗೊಳಿಸಬಹುದು, ಎಂದು ರಾಕೇಶ್ ಬಹದ್ದೂರ್ ಸಿಂಗ್ ಮಾಹಿತಿ ನೀಡಿದ್ದಾರೆ. ಗ್ರಾಹಕರಿಂದ ಹೆಚ್ಚು ಶುಲ್ಕ ವಿಧಿಸುವ ಮಾರಾಟಗಾರರ ವಿರುದ್ಧ ಕಠಿಣ ಕ್ರಮವನ್ನು ಖಚಿತಪಡಿಸಿಕೊಳ್ಳಲಾಗುವುದು ಎಂದು ಹೇಳಿದ್ದಾರೆ.
ಅಕ್ರಮ ಮದ್ಯ ಸೇವಿಸಿ ವ್ಯಕ್ತಿ ಸಾವು: ಮೃತದೇಹವಿಟ್ಟು ಸರ್ಕಾರದ ವಿರುದ್ಧ ಪ್ರತಿಭಟನೆ