Asianet Suvarna News Asianet Suvarna News

Sex Lubricant : ನೋವಿಲ್ಲದ ಸಂಭೋಗಕ್ಕೆ ಸಹಾಯ ಮಾಡುವ ಲೂಬ್ರಿಕಂಟ್, ಏನಿದು ?

ಇಂಟರ್ಕೋರ್ಸ್ ವೇಳೆ ಅನೇಕರು ನೋವನುಭವಿಸುತ್ತಾರೆ. ಇದಕ್ಕೆ ಪ್ರೀಕಮ್ ಬಿಡುಗಡೆಯಾಗದಿರುವುದು ಕಾರಣವಾಗುತ್ತದೆ. ನೋವಾಗದ ಸಂಭೋಗ ಸುಖ ಪಡೆಯಲು ಲೂಬ್ರಿಕಂಟ್ ಬಳಸಬಹುದು.ಲೂಬ್ರಿಕಂಟ್ ಬಳಕೆ ಹೇಗೆ? ಅದ್ರ ವಿಧಗಳು ಯಾವುವು? ಅದರಿಂದ ಆಗುವ ಲಾಭ-ನಷ್ಟವೇನು ಎಂಬ ಮಾಹಿತಿ ಇಲ್ಲಿದೆ.

Lubricants temper to sex life
Author
Bangalore, First Published Dec 7, 2021, 4:58 PM IST
  • Facebook
  • Twitter
  • Whatsapp

ಸಂಭೋಗದ (sex) ವೇಳೆ ನೋವು,ಯೋನಿ (vagina) ಶುಷ್ಕವಾಗುವ ಸಮಸ್ಯೆ ಅನೇಕ ಮಹಿಳೆಯರಿಗೆ ಕಾಡುತ್ತದೆ. ಯೋನಿ ತೇವವಾಗಿದ್ದಾಗ ಮಾತ್ರ ಸಂಭೋಗ ಸುಖ ಸಿಗಲು ಕಾರಣ.ನೋವಿಲ್ಲದೆ ಸಂಪೂರ್ಣ ಲೈಂಗಿಕ ಸುಖ ಅನುಭವಿಸಬೇಕೆನ್ನುವವರು ಲೂಬ್ರಿಕಂಟ್ (lubricant) ಬಳಕೆ ಮಾಡಬಹುದು.  

 ಲೂಬ್ರಿಕಂಟ್ ಅಂದರೇನು? (What is sex lubricant?)

ಇಂಟರ್ಕೋರ್ಸ್ ವೇಳೆ  ಪುರುಷ ಮತ್ತು ಮಹಿಳೆಯ ನಡುವೆ ಫೋರ್‌ಪ್ಲೇ (Foreplay) ಇದ್ದಾಗ, ಖಾಸಗಿ ಅಂಗದಿಂದ ಸ್ವಲ್ಪ ದ್ರವವು ಹೊರಬರುತ್ತದೆ. ಇದನ್ನು ಪ್ರಿಕಮ್ ಎಂದು ಕರೆಯಲಾಗುತ್ತದೆ. ಇದರ ಸಹಾಯದಿಂದ ಸಂಭೋಗ ಕ್ರಿಯೆ ಸುಲಭವಾಗುತ್ತದೆ. ಆದರೆ ಕೆಲವೊಮ್ಮೆ ಒತ್ತಡ, ಹಾರ್ಮೋನುಗಳ ಬದಲಾವಣೆಗಳು, ನಿದ್ರೆಯ ಕೊರತೆ ಇತ್ಯಾದಿಗಳಿಂದ ಪ್ರೀಕಮ್ (Precum ) ಸಂಭವಿಸುವುದಿಲ್ಲ. ಅಂತಹ ಪರಿಸ್ಥಿತಿಯಲ್ಲಿ ನೋವಾಗುತ್ತದೆ. ಇದನ್ನು ಹೋಗಲಾಡಿಸಲು ಖಾಸಗಿ ಅಂಗದ ಮೇಲೆ ದ್ರವವನ್ನು ಬಳಸಲಾಗುತ್ತದೆ. ಇದನ್ನು ಸೆಕ್ಸ್ ಲೂಬ್ರಿಕಂಟ್ ಎಂದು ಕರೆಯಲಾಗುತ್ತದೆ.ಇತ್ತೀಚಿನ ದಿನಗಳಲ್ಲಿ ಮಾರುಕಟ್ಟೆಯಲ್ಲಿ ಹಲವಾರು ರೀತಿಯ ಸೆಕ್ಸ್ ಲೂಬ್ರಿಕೆಂಟ್‌ಗಳು ಲಭ್ಯವಿವೆ.

 ವಿವಿಧ ರೀತಿಯ ಸೆಕ್ಸ್ ಲೂಬ್ರಿಕಂಟ್‌(Different types of sex lubricant)  : ಲೂಬ್ರಿಕಂಟ್ ಖರೀದಿ ವೇಳೆ ಕೆಲವೊಂದು ಸಂಗತಿಯನ್ನು ಗಮನದಲ್ಲಿಟ್ಟುಕೊಳ್ಳಬೇಕು. ಲೂಬ್ರಿಕಂಟ್ ನಲ್ಲಿ ಅನೇಕ ವಿಧಗಳಿವೆ. ತೈಲ,ಸಿಲಿಕೋನ್,ನೀರು ಹೈಬ್ರಿಡ್ (ನೀರು, ಸಿಲಿಕೋನ್ ಅಥವಾ ಎಣ್ಣೆಯ ಮಿಶ್ರಣದಿಂದ ತಯಾರಿಸಲಾಗುತ್ತದೆ)

ನೀರು ಆಧಾರಿತ ಲೂಬ್ರಿಕಂಟ್ (Water based lubricant): ನೀರು ಆಧಾರಿತ ಲೂಬ್ರಿಕಂಟ್ ಅನ್ನು ಬಹುಮುಖ ಲೂಬ್ರಿಕಂಟ್ ಎಂದು ಕರೆಯಲಾಗುತ್ತದೆ. ನೀರು ಆಧಾರಿತ ಲೂಬ್ರಿಕಂಟ್ ಪ್ರಯೋಜನಕಾರಿ. ಕಾಂಡೋಮ್‌ ಮತ್ತು ಸಿಲಿಕೋನ್ ಲೈಂಗಿಕ ಆಟಿಕೆಗಳ ಜೊತೆ ಇದನ್ನು ಬಳಸಬಹುದು. ಇದು ಸುರಕ್ಷಿತ ಲೂಬ್ರಿಕಂಟ್.  

ಸಿಲಿಕಾನ್ ಆಧಾರಿತ ಲೂಬ್ರಿಕಂಟ್(Silicon based lubricant) : ಬಹಳಷ್ಟು ಜನರು ಸಿಲಿಕೋನ್ ಆಧಾರಿತ ಲೂಬ್ರಿಕಂಟ್‌ಗಳನ್ನು ಖರೀದಿಸುತ್ತಾರೆ. ಇದು ಸೂಕ್ಷ್ಮ ಭಾಗಗಳಲ್ಲಿ ರೇಷ್ಮೆ ಹಾಳೆಯಂತೆ ಕಾರ್ಯನಿರ್ವಹಿಸುತ್ತದೆ. ಸಿಲಿಕೋನ್ ಆಧಾರಿತ ಲೂಬ್ರಿಕಂಟ್ ದೀರ್ಘಕಾಲೀನ ಲೂಬ್ರಿಕಂಟ್ ಆಗಿದೆ. ಶವರ್ ಸೆಕ್ಸ್ಗೆ  ಸಿಲಿಕೋನ್ ಆಧಾರಿತ ಲೂಬ್ರಿಕಂಟ್ ಪ್ರಯೋಜನಕಾರಿ. ಆದರೆ ಸಿಲಿಕೋನ್ ಆಧಾರಿತ ಲೂಬ್ರಿಕಂಟ್‌ಗಳು ಲೈಂಗಿಕ ಆಟಿಕೆಗಳಿಗೆ ಸೂಕ್ತವಲ್ಲ. ಏಕೆಂದರೆ ಲೈಂಗಿಕ ಆಟಿಕೆಗಳು ಸಿಲಿಕೋನ್‌ನಿಂದ ಮಾಡಲ್ಪಟ್ಟಿದೆ. ಈ ಸಮಯದಲ್ಲಿ, ಲೈಂಗಿಕ ಆಟಿಕೆಗೆ ಸಿಲಿಕೋನ್ ಆಧಾರಿತ ಲೂಬ್ರಿಕಂಟ್ ಅನ್ನು ಅನ್ವಯಿಸುವುದರಿಂದ ತುಕ್ಕು ಉಂಟಾಗುತ್ತದೆ.   

ಸೆಕ್ಸ್ ನಂತರ ಮೂತ್ರ ಮಾಡಿದರೆ ಗರ್ಭಧಾರಣೆ ತಡೆಯಬಹುದಾ?

ತೈಲ ಆಧಾರಿತ ಲೂಬ್ರಿಕಂಟ್ (Oil based lubricant) : ಲೈಂಗಿಕ ಸಮಯದಲ್ಲಿ ನೀವು ಲೂಬ್ರಿಕಂಟ್ ಅನ್ನು ಮತ್ತೆ ಮತ್ತೆ ಬಳಸಲು ಬಯಸದಿದ್ದರೆ, ತೈಲ ಆಧಾರಿತ ಲೂಬ್ರಿಕಂಟ್ ಉಪಯುಕ್ತ. ಸಿಲಿಕೋನ್ ಆಧಾರಿತ ಲೂಬ್ರಿಕಂಟ್‌ಗಳು ಮತ್ತು ನೀರು ಆಧಾರಿತ ಲೂಬ್ರಿಕಂಟ್‌ಗಳಿಗಿಂತ ಬೆಸ್ಟ್ ಆಯಿಲ್ ಲೂಬ್ರಿಕಂಟ್‌. ಉತ್ತಮ ಮತ್ತು ಹೆಚ್ಚು ಬಾಳಿಕೆ ಬರುತ್ತವೆ. 

ಲೈಂಗಿಕ ಸಮಯದಲ್ಲಿ ಲೂಬ್ರಿಕಂಟ್  ಬಳಕೆ : 
ಸಾಮಾನ್ಯವಾಗಿ ಔಷಧಿಗಳ ಬಳಕೆಯಿಂದಾಗಿ ಯೋನಿಯು ಶುಷ್ಕವಾದಾಗ ಲ್ಯೂಬ್ ಅನ್ನು ಬಳಸಲಾಗುತ್ತದೆ.
ಗರ್ಭಾವಸ್ಥೆಯಲ್ಲಿ ಅಥವಾ ಹೆರಿಗೆಯ ನಂತರ ಯೋನಿ ಶುಷ್ಕವಾದಾಗ ಬಳಸಲಾಗುತ್ತದೆ. ಋತುಬಂಧದಿಂದ ಯೋನಿ ಒಣಗಿದ್ದರೆ ಬಳಸಬಹುದು.  
ಫೋರ್‌ಪ್ಲೇ ಸಮಯದಿಂದ ಲೂಬ್ರಿಕಂಟ್ ಬಳಸಬೇಕು.

ಸೆಕ್ಸ್ ಲೂಬ್ರಿಕಂಟ್ ಖರೀದಿಸುವಾಗ, ಅದರ ಮೇಲೆ ಮುದ್ರಿತವಾಗಿರುವ ಪದಾರ್ಥಗಳ ಬಗ್ಗೆ ಗಮನ ನೀಡುವ ಅವಶ್ಯಕತೆಯಿದೆ. ಪೆಟ್ರೋಲಿಯಂ
ಗ್ಲಿಸರಿನ್, ನಾನೊಕ್ಸಿನಾಲ್-9, ಕ್ಲೋರ್ಹೆಕ್ಸಿಡೈನ್ ಗ್ಲುಕೋನೇಟ್, ಪ್ರೊಪಿಲೀನ್ ಗ್ಲೈಕಾಲ್ ಪದಾರ್ಥವಿರುವ ಲೂಬ್ರಿಕಂಟ್ ಖರೀದಿ ಮಾಡಬಾರದು.   

ಪುರುಷರ ಯೋಚನೆ ಹೇಗಿರುತ್ತೆ, ಹೆಂಗಸರು ಏನು ಚಿಂತಿಸುತ್ತಾರೆ?

ಲೂಬ್ರಿಕಂಟ್ ಅಡ್ಡ ಪರಿಣಾಮ : ಕೆಲವರಿಗೆ ಇದ್ರಿಂದ ಸಮಸ್ಯೆಯಾಗುತ್ತದೆ. ಚರ್ಮದ ದದ್ದು,ಅಲರ್ಜಿ,ಯೀಸ್ಟ್ ಸೋಂಕು,ಬಂಜೆತನ,ಯೋನಿ ಶುಷ್ಕತೆ ಕಾಡುವ ಸಾಧ್ಯತೆಯಿದೆ. ಯೋನಿ ಶುಷ್ಕತೆಯನ್ನು ತೆಗೆದುಹಾಕಲು ನೀವು ಲ್ಯೂಬ್ ಜೊತೆಗೆ ಈಸ್ಟ್ರೊಜೆನ್ ಕ್ರೀಮ್ ಬಳಸಬಹುದು. ಇದರಿಂದಾಗಿ ಯೋನಿಯಲ್ಲಿನ ತೇವಾಂಶ(moisture)ವು ಹಾಗೆಯೇ ಉಳಿಯುತ್ತದೆ.

Follow Us:
Download App:
  • android
  • ios