Sex and Life: ಪುರುಷರ ಯೋಚನೆ ಹೇಗಿರುತ್ತೆ, ಹೆಂಗಸರು ಏನು ಚಿಂತಿಸುತ್ತಾರೆ?
ಈ ಕುತೂಹಲ ನಿಮ್ಮನ್ನು ಕಾಡಿರಬಹುದು. ಸಾಮಾನ್ಯವಾಗಿ ಒಂದು ಒಳ್ಳೆಯ ಸೆಕ್ಸ್ ಸೆಷನ್ ನಂತರ ಹುಡುಗರ ಮನದಲ್ಲಿ ಮೂಡುವ ಯೋಚನೆಗಳೇ ಬೇರೆ, ಹುಡುಗಿಯರ ಯೋಚನೆಗಳೇ ಬೇರೆ ಆಗಿರುತ್ತವೆ.
ನಿಮ್ಮ ಸಂಗಾತಿ (Partner) ಯೊಂದಿಗೆ ಒಂದು ಅದ್ಭುತವಾದ ಸೆಕ್ಸ್ (Sex) ಸೆಷನ್ ನಂತರ ಅವರ ಜೊತೆಯಲ್ಲಿ ಹಾಯಾಗಿ ಮಲಗುವುದು ಒಂದು ಅದ್ಭುತ ಅನುಭವ. ಇಂಥ ಸೆಕ್ಸ್‌ನ ಬಳಿಕ ಹುಡುಗರ ಮನದಲ್ಲಿ ಅನೇಕ ಆಲೋಚನೆಗಳೊಂದಿಗೆ ಸುತ್ತುತ್ತದೆ. ಅನೇಕ ಪುರುಷರು ತಮ್ಮ ಸಂಗಾತಿ ಈ ಸಂಭೋಗವನ್ನು ಇಷ್ಟಪಟ್ಟಳೇ ಇಲ್ಲವೇ ಎಂಬ ಬಗ್ಗೆ ಕಾಳಜಿ ವಹಿಸುತ್ತಾರೆ. ಸಂಭೋಗಿಸಿದ ನಂತರ ಹುಡುಗರು ಸಾಮಾನ್ಯವಾಗಿ ಏನು ಯೋಚಿಸುತ್ತಾರೆ ಎಂಬುದನ್ನು ನಾವು ಈಗ ನೋಡೋಣ.
ಅವಳು ಅದನ್ನು ಆನಂದಿಸಿದಳೇ? (Enjoy)
ಹುಡುಗರು ಸೆಕ್ಸ್ ನಂತರ ತಮ್ಮ ಹುಡುಗಿಯ ಪ್ರೀತಿಯ ಪ್ರತಿಕ್ರಿಯೆಯನ್ನು ಕೇಳಲು ಬಯಸುತ್ತಾರೆ. ಅವರು ತಮ್ಮೊಂದಿಗೆ ಹೊಂದಿದ ಲೈಂಗಿಕ ಅನುಭವವನ್ನು ಇಷ್ಟಪಟ್ಟರೇ ಇಲ್ಲವೇ ಎಂಬುದರ ಕುರಿತು. ಪ್ರತಿಯೊಬ್ಬ ವ್ಯಕ್ತಿಯೂ ತಮ್ಮ ಸಂಗಾತಿಯೂ ತಮ್ಮಂತೆಯೇ ಸಂಭೋಗವನ್ನು ಸಂಪೂರ್ಣವಾಗಿ ಆನಂದಿಸಿದ್ದಾರೆಯೇ ಎಂದು ತಿಳಿಯಲು ಬಯಸುತ್ತಾರೆ. ತಮ್ಮ ಸಂಗಾತಿ 2ನೇ ಸುತ್ತಿಗೆ ಹೋಗಲು ಉತ್ಸುಕರಾಗಿದ್ದಾರೆಯೇ ಎಂದು ನೋಡಲೂ ಅವರು ಬಯಸುತ್ತಾರೆ!
ಅವಳು ಪರಾಕಾಷ್ಠೆ ಹೊಂದಿದ್ದಾಳೆಯೇ? (Orgasm)
ಹುಡುಗಿಯರು ಆ ಬಗ್ಗೆ ಹೆಚ್ಚು ತಲೆ ಕೆಡಿಸಿಕೊಳ್ಳುತ್ತಾರೋ ಇಲ್ಲವೋ, ಆದರೆ ಹೆಚ್ಚಿನ ಹುಡುಗರಂತೂ ಈಗ ತಮ್ಮ ಸಂಗಾತಿಯ ಆರ್ಗ್ಯಾಸಂ ಅಥವಾ ಕಾಮೋತ್ಕರ್ಷದ ಬಗ್ಗೆ ಕಾಳಜಿ ವಹಿಸುತ್ತಾರೆ. ಸಾಮಾನ್ಯವಾಗಿ, ಪುರುಷರು ಮಹಿಳೆಯರಿಗಿಂತ ವೇಗವಾಗಿ ಪರಾಕಾಷ್ಠೆಯನ್ನು ತಲುಪುತ್ತಾರೆ. ಬೇಗನೆ ಸ್ಖಲಿಸಿ ಸುಸ್ತಾಗಿ ಮಲಗಿಬಿಡುತ್ತಾರೆ. ಆದರೆ, ತನ್ನ ಜೊತೆಗೇ ಸಂಗಾತಿಯೂ ಆನಂದ ಹೊಂದಿದಳೇ ಇಲ್ಲವೇ ಎಂಬ ಚಿಂತೆ ಅವರನ್ನು ಕಾಡುತ್ತದೆ. ತಮ್ಮ ಸಂಗಾತಿ ಸಾಕಷ್ಟು ಸಂಭೋಗ ಪರಾಕಾಷ್ಠೆಯನ್ನು ತಲುಪಿಲ್ಲ ಎಂದು ತಿಳಿದರೆ ಪುರುಷನ ಇಗೋ ಹರ್ಟ್ ಆಗುತ್ತದೆ.
Feelfree: ಅವಳ ಹಿಂಭಾಗ ನೋಡಿದರೆ ಕಾಮೋದ್ರೇಕ! ಇದು ತಪ್ಪಾ?
ನಾನು ಉಳಿಯಬೇಕೇ?
ತಾತ್ಕಾಲಿಕ ಸಂಬಂಧ, ಮೂರನೇ ಸಂಬಂಧ ಅಥವಾ ವಿವಾಹೇತರ ಸಂಬಂಧದಲ್ಲಿ ತೊಡಗಿರುವ ಪುರುಷರು ಯೋಚಿಸುವುದೇನೆಂದರೆ, ಸೆಕ್ಸ್ ಮುಗಿಸಿದ ಬಳಿಕ ತಾನು ಇಲ್ಲಿ ಉಳಿಯಬೇಕೇ ಅಥವಾ ಬೇಡವೇ ಎಂಬುದು. ಪ್ರಾಸಂಗಿಕ ಸಂಬಂಧಗಳಲ್ಲಿ ಲೈಂಗಿಕತೆಯನ್ನು ಹೊಂದುವುದು ಮುಖ್ಯ ಆದ್ಯತೆಯಾಗಿರುವುದರಿಂದ, ಲೈಂಗಿಕತೆಯ ನಂತರ ಪುರುಷ ಅಲ್ಲಿಯೇ ಇರುವುದು ಅನೇಕ ಮಹಿಳೆಯರಿಗೆ ಇಷ್ಟವಾಗದಿರಬಹುದು ಅಥವಾ ಬಹುಶಃ ತುಂಬಾ ವಿಚಿತ್ರವಾಗಿರಬಹುದು.
ನಾನು ತುಂಬಾ ವೇಗವಾಗಿ ಮುಗಿಸಿದ್ದೇನೆಯೇ? (Ejaculation)
ಕೆಲವೇ ನಿಮಿಷಗಳಲ್ಲಿ ಅಥವಾ ಸೆಕೆಂಡುಗಳಲ್ಲಿ ಸ್ಖಲಿಸುವ ಪ್ರತಿಯೊಬ್ಬ ವ್ಯಕ್ತಿಯೂ ಇದನ್ನು ಯೋಚಿಸುತ್ತಾನೆ. ತಮ್ಮ ಸಂಗಾತಿಗೆ ಹೋಲಿಸಿದರೆ ತುಂಬಾ ಬೇಗನೆ ಸಂಭೋಗದ ಪರಾಕಾಷ್ಠೆ ತಲುಪುವ ಅವರು ಆ ಬಳಿಕ ಮುಜುಗರ ಅನುಭವಿಸುತ್ತ ಇರಬಹುದು.
ಅವಳನ್ನು ಖುಷಿಪಡಿಸಿದ ಬೆಸ್ಟ್ ಗಂಡಸು?
ಒಂದು ವೇಳೆ ನೀವು ಇನ್ನೂ ಇತರ ಗಂಡಸರೊಂದಿಗೆ ಈ ಹಿಂದೆ ಸಂಬಂಧ ಹೊಂದಿದ್ದಿರಿ ಎಂಬ ಅಂಶ ನಿಮ್ಮ ಸಂಗಾತಿಗೆ ಗೊತ್ತಿದ್ದರೆ, ಈಕೆ ಬೇರೆ ಗಂಡಸರಿಂದ ಪಡೆದದ್ದಕ್ಕಿಂತಲೂ ಹೆಚ್ಚಿನ ಸುಖ ನನ್ನಿಂದ ಪಡೆದಿರಬಹುದೇ ಇಲ್ಲವೇ ಎಂಬ ಪ್ರಶ್ನೆ ಆತನ ಮನಸ್ಸನ್ನು ಕೊರೆಯಬಹುದು. ಪುರುಷರು ತಮ್ಮ ಸಂಗಾತಿಯೊಂದಿಗೆ ಸಂಭೋಗಿಸಿದ ಇತರ ಎಲ್ಲ ಹುಡುಗರಿಗಿಂತ ತಾನು ಭಿನ್ನ ಹಾಗೂ ತಾನು ಬೆಸ್ಟ್ ಎಂದು ಸ್ಥಾಪಿಸಿಕೊಳ್ಳಲು ಬಯಸುತ್ತಾರೆ.
Feelfree: ರೂಮ್‌ಮೇಟ್ ಬಾಯ್‌ಫ್ರೆಂಡ್ ಮೇಲೆ ಅಟ್ರಾಕ್ಷನ್! ಏನು ಮಾಡಲಿ?
ಸಾಕಷ್ಟು ಉದ್ದವಿದೆಯೇ? (Penis)
ಕೆಲವು ಗಂಡಸರಿಗೆ ತಮ್ಮ ಶಿಶ್ನದ ಉದ್ದದ ಬಗ್ಗೆ ಕೀಳರಿಮೆ ಇರುತ್ತದೆ. ಸಣ್ಣ ಶಿಶ್ನ ಇದ್ದವರಿಗೆ ಇದು ಹೆಚ್ಚು. ತನ್ನ ಶಿಶ್ನದ ನಿಮಿರುವಿಕೆಯ ಉದ್ದ ಸಂಗಾತಿಯನ್ನು ತೃಪ್ತಿಪಡಿಸಲು ಸಾಕಾಗಿದೆಯೇ ಇಲ್ಲವೇ ಎಂದು ಇವರು ಕಾಳಜಿಪಡುತ್ತಾರೆ. ಅತಿ ಸಣ್ಣ ಶಿಶ್ನವೂ ಕಾಮತೃಪ್ತಿಗೆ ಸಾಕಾಗುತ್ತದೆ ಎಂಬುದನ್ನು ಮರೆಯುತ್ತಾರೆ.
ಮುಂದೇನು?
ಒಂದು ಸುತ್ತು ಮುಗಿಸಿದ ನಂತರ ಪುರುಷರು 2ನೇ ಸುತ್ತಿನ ಬಗ್ಗೆ ಯೋಚಿಸುತ್ತಾರೆ ಅಥವಾ ಮುಂದಿನ ಸಲ ಯಾವಾಗ ನಿಮ್ಮನ್ನು ಕೂಡಬೇಕು ಎಂದು ಯೋಚಿಸುತ್ತಿರಬಹುದು. ಸಂಭೋಗದ ನಂತರ, ಪುರುಷರು ತಾವು ಪ್ರೀತಿಸಿದ ಮಹಿಳೆಯರೊಂದಿಗೆ ಭವಿಷ್ಯದ ಕೂಡುವಿಕೆಗಳ ಬಗ್ಗೆ ಯೋಚಿಸುತ್ತಾರೆ ಹೊರತು ಆ ಕ್ಷಣದ ಮಿಲನದ ಬಗೆಗೆ ಅಲ್ಲ. ಒಂದು ವೇಳೆ ನಿಮ್ಮದು ಎರಡನೇ ಸಂಬಂಧವಾಗಿದ್ದರೆ, ನಿಮ್ಮ ಮನೆಯಿಂದ ಗುಟ್ಟಾಗಿ ನಿರ್ಗಮಿಸುವುದು ಹೇಗೆ ಎಂಬ ಬಗ್ಗೆ ಪುರುಷರು ಯೋಚಿಸುತ್ತಾರೆ!
Feelfree: ಮುಖಮೈಥುನ ಆನಂದದಾಯಕವೇ, ಅನಾರೋಗ್ಯಕಾರಿಯೇ?