Asianet Suvarna News Asianet Suvarna News

30 ವರ್ಷಕ್ಕೆ ಮಕ್ಳು ಮಾಡ್ಕೊಳ್ಳೋ ಪ್ಲ್ಯಾನ್​ ಹಾಕಿದ್ದ ನಟಿ ತಮನ್ನಾ ಮದ್ವೆ ಫಿಕ್ಸ್​? ವರನಾರು ಗೊತ್ತಾ?

30 ವರ್ಷಕ್ಕೆ ಮಕ್ಳು ಮಾಡ್ಕೊಳ್ಳೋ ಪ್ಲ್ಯಾನ್​ ಹಾಕಿದ್ದ ನಟಿ ತಮನ್ನಾ ಮದ್ವೆ ಫಿಕ್ಸ್​ ಆದ ಹಾಗೆ ಅಂತಿದೆ ಬಿ-ಟೌನ್​. ವರನಾರು ಗೊತ್ತಾ?
 

Tamannaah Bhatia and Vijay Varma to get married soon Reports says suc
Author
First Published Nov 15, 2023, 5:21 PM IST | Last Updated Nov 15, 2023, 5:21 PM IST

 ನಾನು 30 ನೇ ವಯಸ್ಸಿನೊಳಗೆ ಮದ್ವೆಯಾಗಿ ಮಕ್ಕಳನ್ನು ಮಾಡಿಕೊಳ್ತೇನೆ. ನಾನು ಸಿನಿಮಾ ಎಂಟ್ರಿ ಕೊಟ್ಟ ವೇಳೆ  ನನ್ನ ಸಿನಿ ಕರಿಯರ್​ ಎಂಟ್ಹತ್ತು ವರ್ಷ ಅಷ್ಟೇ.  30 ವರ್ಷದೊಳಗೆ  ಸಿನಿಮಾ ನಿಲ್ಲಿಸಿ ಮದ್ವೆ ಮಾಡಿಕೊಳ್ತೇನೆ. ಇದೇ ಸಮಯದಲ್ಲಿ ಇಬ್ಬರು ಮಕ್ಕಳನ್ನೂ ಮಾಡಿಕೊಳ್ತೇನೆ ಎಂದು ಕೆಲ ವರ್ಷಗಳ ಹಿಂದೆ ಕಾವಾಲಯಾ ಹಾಡಿನ ಮೂಲಕ ಹಲ್​ಚಲ್​ ಸೃಷ್ಟಿಸಿರೋ ನಟಿ ತಮನ್ನಾ ಭಾಟಿಯಾ ಮಾಧ್ಯಮಗಳಿಗೆ ನೀಡಿದ್ದ ಸಂದರ್ಶನದಲ್ಲಿ ತಿಳಿಸಿದ್ದರು. ಮದುವೆ ಒಂದು ದೊಡ್ಡ ಜವಾಬ್ದಾರಿಯಾಗಿದೆ. ನಾವು ಸಿದ್ಧ ಎಂದು ತಿಳಿದಾಗ ಮಾತ್ರ ವೈವಾಹಿಕ ಜೀವನಕ್ಕೆ ಕಾಲಿಡಬೇಕು ಎಂದಿದ್ದ ನಟಿ 30 ವರ್ಷ ವಯಸ್ಸಿನೊಳಗೆ ಇಬ್ಬರು ಮಕ್ಕಳನ್ನೂ ಮಾಡಿಕೊಳ್ಳೋ ಪ್ಲ್ಯಾನ್​ ಮಾಡಿದ್ರು. 

1989ರಲ್ಲಿ ಹುಟ್ಟಿರೋ ನಟಿಗೆ ಈಗ 33 ವರ್ಷ ವಯಸ್ಸು.  ನಟ ವಿಜಯ್ ವರ್ಮಾ ಜೊತೆ ಡೇಟಿಂಗ್​ ಮಾಡುತ್ತಿದ್ದರೂ ಮದುವೆಯ ಬಗ್ಗೆ ಏನೂಹೇಳಿರಲಿಲ್ಲ. ಇದೀಗ ನಟಿಯ ಮನೆಯಲ್ಲಿ ಸಕತ್​ ಒತ್ತಡ ಬರುತ್ತಿದೆ ಎಂದು ವರದಿಯಾಗಿದೆ. ವಯಸ್ಸಾಗುತ್ತಿರುವ ಕಾರಣ ಹಾಗೂ ಇದಾಗಲೇ ಹಲವಾರು ಬಾಲಿವುಡ್​ ನಟಿಯರು ಮದುವೆ, ಮಕ್ಕಳು ಎಂದೆಲ್ಲಾ ಬಿಜಿಯಾಗಿರುವ ತಮ್ಮ ಮಗಳಿನ್ನೂ ಮದುವೆಯಾಗಿಲ್ಲ ಎನ್ನುವ ಚಿಂತೆ ತಮನ್ನಾ ಪಾಲಕರಿಗೆ ಕಾಡುತ್ತಿದೆಯಂತೆ. ಇದಕ್ಕಾಗಿಯೇ ನಟಿ ಶೀಘ್ರದಲ್ಲಿ ಮದುವೆಯಾಗಲಿದ್ದಾರೆ ಎನ್ನುವ ಸುದ್ದಿ ಹರಡಿದೆ.

ಹೇಗಿದ್ದವಳು ಹೇಗಾದ್ಲು! ತಮನ್ನ ಭಾಟಿಯಾ ಸ್ತನಕ್ಕೂ ಬಿದ್ದಿದ್ಯಾ ಕತ್ತರಿ? ಏನಿದು ಗುಸುಗುಸು?

ಅಷ್ಟಕ್ಕೂ ವರನ್ಯಾರು ಎಂದು ವಿಶೇಷವಾಗಿ ಹೇಳುವುದು ಬೇಡ. ಇದಾಗಲೇ  ನಟಿ ತಮನ್ನಾ ಭಾಟಿಯಾ (Tamannaah Bhatia) ಹಾಗೂ ವಿಜಯ್ ವರ್ಮಾ ಅವರು  ಪ್ರೀತಿಸುತ್ತಿರುವ ವಿಚಾರ ಗುಟ್ಟಾಗಿ ಉಳಿದಿಲ್ಲ. ಡೇಟಿಂಗ್​ ಮಾಡಿದ ಮಾತ್ರಕ್ಕೆ ನಟ-ನಟಿಯರು ಅವರನ್ನೇ ಮದ್ವೆಯಾಗುತ್ತಾರೆಂದೇನೂ ಇಲ್ಲ. ಆದರೆ ಈ ಜೋಡಿ ಮಾತ್ರ ವಿವಾಹ ಬಂಧನಕ್ಕೆ ಶೀಘ್ರದಲ್ಲಿಯೇ ಒಳಗಾಗಲಿದೆ ಎನ್ನುವ ಸುದ್ದಿ ಹರಡಿದೆ.  ಇದಕ್ಕೆ ತಮನ್ನಾ ಕಡೆಯಿಂದಾಗಲೀ, ವಿಜಯ್ ಕಡೆಯಿಂದಾಗಲೀ ಮಾಹಿತಿ ಸಿಕ್ಕಿಲ್ಲ. ಆದರೆ ಗುಸುಗುಸು ಸುದ್ದಿ ಜೋರಾಗಿದೆ. ವಿಜಯ್​ ವರ್ಮಾ ಅವರಿಗೂ 37 ವರ್ಷ ವಯಸ್ಸಾಗಿದ್ದು, ಇಬ್ಬರಿಗೂಇದಾಗಲೇ ಮದುವೆಯ ವಯಸ್ಸು ಮೀರಿರುವ ಕಾರಣ, ಮದುವೆಯಾಗಲು ನಿರ್ಧರಿಸಿದ್ದಾರೆ ಎನ್ನಲಾಗಿದೆ. 

2023ರ ಹೊಸ ವರ್ಷಾಚರಣೆ ವೇಳೆ ಈ ಜೋಡಿ  'ಲಿಪ್ ಲಾಕ್' ಮಾಡಿಕೊಂಡು ಸುದ್ದಿಯಾಗಿತ್ತು.  'ಲಸ್ಟ್ ಸ್ಟೋರೀಸ್' ಚಿತ್ರದ ಬಳಿಕ ತಮನ್ನಾ-ವಿಜಯ್ ಇನ್ನಷ್ಟು ಹತ್ತಿರವಾಗಿದ್ದಾರೆ. ಅದಾದ ಮೇಲೆ ಇವರಿಗೆ ಹೋದಲ್ಲಿ ಬಂದಲ್ಲಿ ಮದ್ವೆ ಸುದ್ದಿಯನ್ನೇ ಕೇಳಲಾಗ್ತಿದೆ.   ಇತ್ತೀಚೆಗೆ, 'ಜಾನೇ ಜಾನ್' ಚಿತ್ರದಲ್ಲಿ ಕರೀನಾ-ವಿಜಯ್ ಒಟ್ಟಿಗೇ ಕೆಲಸ ಮಾಡಿದ್ದಾರೆ. ಆ ವೇಳೆ ಕರೀನಾ ಕಪೂರ್ ತಮ್ಮ ಇಡೀ ಫ್ಯಾಮಿಲಿ ಜತೆ ಬಂದಿದ್ದರು. ಆಗ ವಿಜಯ್​ ಅವರು,  ತಮಗೂ ಮಕ್ಕಳು ಬೇಕು, ಫ್ಯಾಮಿಲಿ ಮಾಡಿಕೊಳ್ಳಬೇಕು ಎಂದು ಮಾತನಾಡಿದ್ದರು. ಆಗ ಕರೀನಾ 'ನೀವು ಸರಿಯಾದ ರೂಟ್‌ನಲ್ಲಿ ಇದ್ದೀರಿ ಎನಿಸುತ್ತಿದೆ. ನೀವು ನನ್ನಿಂದ ಪ್ರೇರಣೆ ಪಡೆದಿರುವುದು ಒಳ್ಳೆಯದು. ಆದಷ್ಟು ಬೇಗ ನಿಮ್ಮ ಆಸೆ ಕೈಗೂಡಲಿ' ಎಂದಿದ್ದರು. ಒಟ್ಟಿನಲ್ಲಿ ಈ ಜೋಡಿ ಯಾವಾಗ ಹಸೆ ಮಣೆ ಏರುವುದು ಎಂದು ಫ್ಯಾನ್ಸ್​ ಕಾತರದಿಂದ ಕಾಯುತ್ತಿದ್ದಾರೆ. 

10ನೇ ಕ್ಲಾಸ್​​ ತಮನ್ನಾ ವಿಡಿಯೋ ವೈರಲ್​: ವಯಸ್ಸಿನ ಕುರಿತು ತಲೆ ಕೆಡಿಸಿಕೊಳ್ತಿದ್ದಾರೆ ಫ್ಯಾನ್ಸ್​!

Latest Videos
Follow Us:
Download App:
  • android
  • ios