ಬಪ್ಪನ ರೈನ್‌ಕೋಟ್ ಎಲ್ಲಿದೆ, ಪುಟ್ಟ ಮಗುವಿನ ಪೆದ್ದು ಮುದ್ದು ಪ್ರಶ್ನೆಗೆ ನೆಟ್ಟಿಗರು ಫಿದಾ
ಮಕ್ಕಳ ಮನಸ್ಸಿನಷ್ಟು ಮುಗ್ಧ ಈ ಪ್ರಪಂಚದಲ್ಲಿ ಇನ್ನೇನೂ ಇರೋಕೆ ಸಾಧ್ಯವಿಲ್ಲ. ಮಕ್ಕಳಿಗೆ ಮೋಸ, ವಂಚನೆ, ಅನ್ಯಾಯ, ಹೊಟ್ಟೆಕಿಚ್ಚು, ಕೇಡು ಇದ್ಯಾವುದರ ಬಗ್ಗೆಯೂ ತಿಳಿದಿರುವುದಿಲ್ಲ. ಹಾಗೆಯೇ ಮಗುವೊಂದು ಮುಗ್ಧತೆಯಿಂದ ಕೇಳಿರೋ ಪ್ರಶ್ನೆಗೆ ಎಲ್ಲರಿಗೂ ವಿಸ್ಮಯಗೊಂಡಿದ್ದಾರೆ. ಉತ್ತರ ಕೊಡಲಾಗದೆ ಮೂಕರಾಗಿದ್ದಾರೆ.
ಮಕ್ಕಳು ಪ್ರಪಂಚದ ಅದ್ಭುತ. ಅವರಿಗೆ ಪ್ರೀತಿಸಲಷ್ಟೇ ಗೊತ್ತು. ಅವರು ತಮ್ಮ ಹೃದಯದಲ್ಲಿ ತುಂಬಾ ಶುದ್ಧ ಮತ್ತು ಸರಳರು. ಮಕ್ಕಳು ತುಂಬಾ ಬುದ್ಧಿವಂತರು. ಆದರೆ ಎಲ್ಲಾ ಹೊಸ ವಿಚಾರದ ಬಗ್ಗೆಯೂ ಅವರಿ ಕುತೂಹಲವನ್ನು ಹೊಂದಿರುತ್ತಾರೆ ಒಂದು ಅಧ್ಯಯನದ ಪ್ರಕಾರ, ಮೊದಲ ಕೆಲವು ವರ್ಷಗಳಲ್ಲಿ, ಮಗುವು ತನ್ನ ಜೀವಿತಾವಧಿಯಲ್ಲಿ ತಾನು ಕಲಿಯುವ ಸಂಪೂರ್ಣ ವಿಷಯಗಳಲ್ಲಿ 90 ಪ್ರತಿಶತವನ್ನು ಕಲಿಯುತ್ತದೆ. ಮಕ್ಕಳು ಪೂರ್ವ-ನಿಯಂತ್ರಿತ ಮನಸ್ಸನ್ನು ಹೊಂದಿರುವುದಿಲ್ಲ. ಈ ಕಾರಣದಿಂದ ಅವರು ಆಗಾಗ ಅನೇಕ ಪ್ರಶ್ನೆಗಳನ್ನು ಕೇಳುತ್ತಾರೆ. ಅವರಲ್ಲಿ ಎಲ್ಲಾ ವಿಚಾರದ ಕುರಿತಾಗಿ ಕುತೂಹಲವಿರುತ್ತದೆ. ಆ ಕುರಿತಾಗಿ ಇರಿಟೇಟ್ ಮಾಡುವಷ್ಟು ಪ್ರಶ್ನೆಗಳನ್ನು ಕೇಳುತ್ತಲೇ ಇರುತ್ತಾರೆ.
ಅದೆಷ್ಟೋ ಸಾರಿ ಮಕ್ಕಳು ಪದೇ ಪದೇ ಕೇಳುವ ಪ್ರಶ್ನೆಗೆ ಹಿರಿಯರು ಉತ್ತರ ಕೊಡುವುದು ಕಷ್ಟವಾಗುತ್ತದೆ. ಯಾಕೆಂದರೆ ಮಕ್ಕಳ (Children) ಪ್ರಶ್ನೆಗಳೇ ಅಷ್ಟು ವಿಚಿತ್ರವಾಗಿರುತ್ತವೆ. ಆ ಪ್ರಶ್ನೆಗೆ ಉತ್ತರವೇ (Answer) ಇಲ್ಲವೇನೋ ಎಂಬಂತಿರುತ್ತದೆ. ಸದ್ಯ ಅಂಥಹದ್ದೇ ಒಂದು ವಿಡಿಯೋ ಟ್ವಿಟರ್‌ನಲ್ಲಿ ವೈರಲ್ ಆಗಿದೆ. ಇದರಲ್ಲಿ ಪುಟ್ಟ ಹುಡುಗಿಯೊಬ್ಬಳು ಗಣೇಶನ ಬಗ್ಗೆ ಪ್ರಶ್ನೆ (Question) ಕೇಳುತ್ತಿರುವುದು ಕಂಡುಬಂದಿದೆ.
ಆಟಿಕೆ ಜೊತೆ ಮಾತಲ್ಲಿ ಬ್ಯುಸಿಯಾದ ಪುಟಾಣಿ ಮತಿನ ಮಲ್ಲಿ: ವಿಡಿಯೋ ನೋಡಿ
ಬಪ್ಪನ ರೈನ್‌ಕೋಟ್ ಎಲ್ಲಿದೆ ಎಂದು ಪ್ರಶ್ನಿಸಿದ ಬಾಲಕಿ
ವೀಡಿಯೊ ಕ್ಲಿಪ್‌ನಲ್ಲಿ, ಪುಟ್ಟ ಹುಡುಗಿ ತನ್ನ ಕುಟುಂಬ ಸದಸ್ಯರೊಂದಿಗೆ ಉದ್ಯಾನವನದಲ್ಲಿ ಸ್ಥಾಪಿಸಲಾದ ದೊಡ್ಡ ಗಣೇಶನ ಮೂರ್ತಿಯ (Ganesha statue) ಎದುರು ನಿಂತುಕೊಂಡಿದ್ದಾಳೆ. ಮಳೆ ಬರುತ್ತಿರುವ ಕಾರಣ ಹುಡುಗಿ ರೈನ್‌ಕೋಟ್ ಧರಿಸಿದ್ದಾಳೆ. ನೀರಿನಲ್ಲಿ ಆಟವಾಡುತ್ತಿರುವ ಹುಡುಗಿ, ಇದ್ದಕ್ಕಿದಂತೆ ಗಣೇಶನನ್ನು ಗಮನಿಸುತ್ತಾಳೆ. ನಂತರ 'ಬಪ್ಪಾ ಯಾಕೆ ರೈನ್‌ಕೋಟ್ ಧರಿಸಿಲ್ಲ' ಎಂದು ಅಚ್ಚರಿಯಿಂದ ಕೇಳುತ್ತಾಳೆ.
ಮಗುವಿನ ಸರಳ ಮತ್ತು ಮನ ಕಲಕುವ ಪ್ರಶ್ನೆಗೆ ಮಗುವಿನ ಪೋಷಕರು (Parents) ವಿಸ್ಮಯಗೊಳ್ಳುತ್ತಾರೆ. ಉತ್ತರಿಸಲಾಗದೆ ತಬ್ಬಿಬ್ಬಾಗುತ್ತಾರೆ. ಅವರು ಉತ್ತರವನ್ನು ಹೇಳಲಾಗದೆ, ಇನ್ನೇನೋ ಹೇಳುವ ಮೂಲಕ ಚಿಕ್ಕ ಹುಡುಗಿಯ ಗಮನವನ್ನು ಬೇರೆಡೆಗೆ ತಿರುಗಿಸಲು ಪ್ರಯತ್ನಿಸುತ್ತಿರುವುದನ್ನು ನೋಡಬಹುದು. ಟ್ವಿಟ್ಟರ್ ನಲ್ಲಿ ವಿಡಿಯೋ ವೈರಲ್ ಆಗಿದೆ. ಇದು ಇಲ್ಲಿಯವರೆಗೆ 120k ವೀವ್ಸ್ ಮತ್ತು 2236 ಲೈಕ್ಸ್‌ಗಳನ್ನು ಗಳಿಸಿದೆ. ಈ ವಿಡಿಯೋ ನೋಡಿ ಖುಷಿ ಪಟ್ಟಿರೋ ನೆಟ್ಟುಗರು ನಾನಾ ರೀತಿಯಲ್ಲಿ ಕಾಮೆಂಟ್ ಮಾಡಿದ್ದಾರೆ.
ಟ್ರಾಫಿಕ್‌ನಲ್ಲಿ ಪುಟ್ಟ ಬಾಲಕಿಯ ಹೆಲ್ಮೆಟ್ ಸರಿಪಡಿಸಿದ ಪೊಲೀಸ್‌ಗೆ ಕ್ಯಾಂಡಿ ನೀಡಲು ಮುಂದಾದ ಪೋರಿ: ವಿಡಿಯೋ ವೈರಲ್
ಮಕ್ಕಳು ಮನಸ್ಸು ಎಷ್ಟೊಂದು ಮುಗ್ಧ ಎಂದು ಕೊಂಡಾಡಿದ ನೆಟ್ಟಿಗರು
ಒಬ್ಬ ಬಳಕೆದಾರರು, 'ಮಗುವಿನ ಮನಸ್ಸು ಅದೆಷ್ಟು ಶುದ್ಧವಾಗಿದೆ. ಮಕ್ಕಳನ್ನು ನಾವು ಧರ್ಮದ ಹೆಸರಿನಲ್ಲಿ ಹೆದರಿಸುತ್ತೇವೆ. ಆದರೆ ಮಕ್ಕಳು ಚಿಕ್ಕಂದಿನಲ್ಲೇ ಅದೆಷ್ಟು ಪ್ಯೂರ್ ಮನಸ್ಸನ್ನು ಹೊಂದಿದ್ದಾರೆ' ಎಂದು ಕಾಮೆಂಟ್ ಮಾಡಿದ್ದಾರೆ. ಇನ್ನೊಬ್ಬ ಬಳಕೆದಾರರು 'ಬಪ್ಪಾ ಮಗುವನ್ನು ಆರ್ಶೀವದಿಸಲಿ' ಎಂದು ಬರೆದುಕೊಂಡಿದ್ದಾರೆ. 'ಸಣ್ಣ ಮನಸ್ಸಿನ ದೊಡ್ಡ ಪ್ರಶ್ನೆ' ಮೂರನೇ ಬಳಕೆದಾರರು ಕಾಮೆಂಟ್ ಮಾಡಿದ್ದಾರೆ. ಇನ್ನೊಬ್ಬ ವ್ಯಕ್ತಿ, 'ಚಿಕ್ಕಂದಿನಲ್ಲಿ ನಮ್ಮ ಮನಸ್ಸು ಹಾಗೆಯೇ ಇತ್ತು, ದೊಡ್ಡವರಾಗುತ್ತಾ ಹೋದಂತೆ ಈ ಯಾಂತ್ರಿಕ ಬದುಕಿನಲ್ಲಿ ಎಲ್ಲವನ್ನೂ ಕಳೆದುಕೊಂಡೆವು' ಎಂದು ಕಾಮೆಂಟ್ ಮಾಡಿದ್ದಾರೆ.
ಈ ಹಿಂದೆ ಅಲೆಕ್ಸಾಗೆ ಸೂಚಿಸಲು ಅಂಬೆಗಾಲಿಡುವ ಮಗು ಕಷ್ಟ ಪಡುತ್ತಿರುವ ವೀಡಿಯೋ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿತ್ತು. ಸಾಮಾಜಿಕ ಮಾಧ್ಯಮದಲ್ಲಿ (Social media) ವೈರಲ್ ಆಗಿರುವ ವೀಡಿಯೊವು ತನ್ನ ನೆಚ್ಚಿನ ಹಾಡನ್ನು ಪ್ಲೇ ಮಾಡಲು ಅಲೆಕ್ಸಾಗೆ ಸೂಚಿಸಲು ಮಗು (Toddler) ಅಂಬೆಗಾಲಿಡುತ್ತಾ ಹೋಗುವುದನ್ನು ತೋರಿಸುತ್ತದೆ. ನಂತರ ಮಗು ತನ್ನಿಷ್ಟದ ಹಾಡನ್ನು ತೊದಲು ಮಾತಿನಲ್ಲಿ ಹೇಳುತ್ತದೆ. ಈ ವಿಡಿಯೋವನ್ನು 3 ಲಕ್ಷಕ್ಕೂ ಅಧಿಕ ಮಂದಿ ವೀಕ್ಷಿಸಿದ್ದರು.