ಕಂಡವ್ರ ಹೆಂಡ್ತಿ ಮೇಲೆ ಕಣ್ಣು ಹಾಕೋದ್ರಲ್ಲಿ ಈ ಸಿಂಹ ಏನು ಕಮ್ಮಿ ಇಲ್ಲ
ಹೆಣ್ಣಿಗಾಗಿ ಎರಡು ಸಿಂಹಗಳು ಕಾದಾಡುತ್ತಿರುವ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ಪ್ರಾಣಿಗಳ ಲೋಕವೇ ಒಂದು ವಿಚಿತ್ರ ಪ್ರಪಂಚ ಅವುಗಳ ಜೀವನಶೈಲಿಯೇ ವಿಭಿನ್ನ ಅದರಲ್ಲೂ ಕಾಡಿನ ರಾಜ ಎನಿಸಿರುವ ಸಿಂಹ ಭೂಮಿಯ ಮೇಲಿರುವ ಅತ್ಯಂತ ಧೈರ್ಯಶಾಲಿ ಪ್ರಾಣಿಯಾಗಿದ್ದು, ಹಸಿವಾದರೆ ಮಾತ್ರ ಬೇಟೆಯಾಡುವ ಇವುಗಳು ಸುಮ್ಮ ಸುಮ್ಮನೇ ಕಣ್ಣಿಗೆ ಕಂಡ ಪ್ರಾಣಿಗಳನ್ನೆಲ್ಲಾ ಬೇಟೆಯಾಡುವುದಿಲ್ಲ. ಪ್ರಾಣಿ ಪ್ರಪಂಚದ ಅಪರೂಪದ ಅನೇಕ ವಿಡಿಯೋಗಳನ್ನು ನಾವು ಈಗಾಲೇ ನೋಡಿದ್ದೇವೆ. ಅದೇ ರೀತಿ ಹೆಣ್ಣಿಗಾಗಿ ಸಿಂಹಗಳ ಕಾದಾಟದ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ಪ್ರೀತಿ, ದ್ವೇಷ, ಆತ್ಮೀಯತೆ ಎಂಬುದು ಪ್ರಾಣಿಗಳಲ್ಲೂ ಇದೆ. ಅದೇ ರೀತಿ ದೈಹಿಕ ಸಂಪರ್ಕಕ್ಕೂ ಪ್ರಾಣಿಗಳಲ್ಲೂ ನಿಯಮವಿದೆ. ಸಿಂಹಗಳಲ್ಲಿ ಬಹುಪತ್ನಿತ್ವ ರೂಢಿಯಲ್ಲಿದೆ. ಹಲವು ಸಿಂಹಿಣಿಗಳ ಜೊತೆ ಒಂದು ಸಿಂಹವಿರುತ್ತದೆ. ಆದಾಗ್ಯೂ ಸಿಂಹಗಳು ತಮ್ಮ ಸಿಂಹಿಣಿಗಳ ಮೇಲೆ ಭಾರಿ ಪೊಸೆಸಿವ್‌ನೆಸ್ ಹೊಂದಿರುತ್ತವೆ. ಇಲ್ಲೊಂದು ಸಿಂಹ ಮತ್ತೊಂದು ಸಿಂಹದ ಸಿಂಹಿಣಿಯ ಮೇಲೆ ಕಣ್ಣು ಹಾಕಿದೆ. ಅಲ್ಲದೇ ಅದಕ್ಕಾಗಿ ಅದು ಗಂಡು ಸಿಂಹದೊಂದಿಗೆ ಕಾದಾಡುತ್ತಿರುವ ವಿಡಿಯೋ ವೈರಲ್ ಆಗಿದೆ. ಹೆಣ್ಣಿಗಾಗಿ ಕೇವಲ ಮನುಷ್ಯರು ಮಾತ್ರವಲ್ಲ ಪ್ರಾಣಿಗಳ ನಡುವೆಯೂ ಭಾರಿ ಸಂಘರ್ಷವಾಗುವುದು. ಹೆಣ್ಣು ಸಂಗಾತಿಗಾಗಿ ಪ್ರಾಣಿಗಳು ಕಾದಾಡುವು ದೃಶ್ಯಗಳನ್ನು ನಾವು ಈಗಾಗಲೇ ನೋಡಿದ್ದೇವೆ. ಅದೇ ರೀತಿ ಇಲ್ಲಿ ಕಾಣಿಸುವ ವಿಡಿಯೋವೊಂದರಲ್ಲಿ ಒಂದು ಗಂಡು ಹೆಣ್ಣು ಸಿಂಹಗಳ ಜೋಡಿಯೊಂದು ಜೊತೆಯಾಗಿ ಬರುತ್ತಿದ್ದು, ಇದನ್ನು ನೋಡಿದ ಮತ್ತೊಂದು ಸಿಂಹ ಗಂಡು ಸಿಂಹದ ಮೇಲೆ ದಾಳಿ ಮಾಡಿ ಹೆಣ್ಣು ಸಿಂಹದತ್ತ ಬರುತ್ತಿದೆ.
ದ ಗ್ಲೋಬಲ್ ಅನಿಮಲ್ ವರ್ಡ್ ಎಂಬ ಇನ್ಸ್ಟಾಗ್ರಾಮ್ ಖಾತೆಯಿಂದ ಈ ವಿಡಿಯೋ ಅಪ್‌ಲೋಡ್ ಆಗಿದೆ. ಬೇರೊಂದು ಗಂಡು ಸಿಂಹ ತನ್ನ ಸಿಂಹಿಣಿ ಮೇಲೆ ಕಣ್ಣು ಹಾಕುತ್ತಿದ್ದಂತೆ ಅಲರ್ಟ್ ಆದ ಈ ಸಿಂಹ ಅದರ ಮೇಲೆ ದಾಳಿ ಮಾಡಿ ತನ್ನ ಸಿಂಹಿಣಿಯ ರಕ್ಷಣೆಗೆ ನೋಡುತ್ತದೆ. ಅಲ್ಲದೇ ಎರಡು ಗಂಡು ಸಿಂಹಗಳು ಹೆಣ್ಣಿಗಾಗಿ ಭಯಾನಕವಾಗಿ ಕಾದಾಡುತ್ತವೆ. ಈ ವಿಡಿಯೋವನ್ನು 40 ಲಕ್ಷಕ್ಕೂ ಅಧಿಕ ಜನ ವೀಕ್ಷಿಸಿದ್ದು, 716 ಜನ ಲೈಕ್ ಮಾಡಿದ್ದಾರೆ.
ಮೂರು ಸಿಂಹಗಳೊಂದಿಗೆ ಜೀವಕ್ಕಾಗಿ ಕಾದಾಡುತ್ತಿರುವ ಮೊಸಳೆ: ವಿಡಿಯೋ ವೈರಲ್
ಸಿಂಹಗಳ ಪ್ರಪಂಚ ತುಂಬಾ ವಿಚಿತ್ರವಾಗಿದೆ. ಕಾಡಿನ ರಾಜ ಎಂದು ಕರೆಸಿಕೊಳ್ಳುವ ಸಿಂಹಗಳು ಸಾಮಾನ್ಯವಾಗಿ ಗುಂಪು ಗುಂಪಾಗಿ ಜೀವಿಸುತ್ತವೆ. ಸಾಮಾಜಿಕ ಜೀವನದ ಕಾರಣದಿಂದ ಹೆಚ್ಚಾಗಿ ಜೊತೆಯಾಗಿ ಬದುಕಲು ಇಷ್ಟಪಡುತ್ತವೆ. ಸಿಂಹಗಳ ಗುಂಪನ್ನು ಪ್ರೈಡ್ ಎಂದು ಕರೆಯಲಾಗುತ್ತದೆ. ಒಂದು ಪ್ರೈಡ್ನಲ್ಲಿ ಸುಮಾರು 15 ಸಿಂಹಗಳಿರುತ್ತವಂತೆ. ನಮ್ಮಲ್ಲಿ ಹೇಗೆ ಕುಟುಂಬ ವ್ಯವಸ್ಥೆ ಇದೆಯೇ ಹಾಗೆಯೇ ಸಿಂಹಗಳಲ್ಲಿಯೂ ಕುಟುಂಬ ವ್ಯವಸ್ಥೆ ಇದೆ.
ಭಾರತದಲ್ಲಿ ಏಷ್ಯಾಟಿಕ್ ಸಿಂಹಗಳು ನಿರ್ಬಂಧಿತ ಗಿರ್ ಅರಣ್ಯದಲ್ಲಿ ಮತ್ತು ರಾಷ್ಟ್ರೀಯ ಉದ್ಯಾನವನದಲ್ಲಿ ಹೆಚ್ಚಾಗಿ ಕಂಡು ಬರುತ್ತವೆ. ಸಿಂಹಗಳು ನೋಡಲು ತುಂಬಾ ಮುದ್ದು ಮುದ್ದಾಗಿ ಕಾಣುತ್ತವೆ. ಆದರೆ ಒಂದೇ ಒಂದು ಘರ್ಜನೆ ಯಾರನ್ನೂ ಹತ್ತಿರ ಸುಳಿಯದಂತೆ ಮಡುತ್ತದೆ. ಪ್ರತಿ ಗುಂಪಿನಲ್ಲಿಯೂ ಗಂಡು ಹಾಗೂ ಹೆಣ್ಣು ಸಿಂಹಗಳಿರುತ್ತವೆ. ಗಂಡು ಸಿಂಹವು ಗುಂಪನ್ನು ಮುನ್ನಡೆಸಿದರೆ, ಹೆಣ್ಣು ಸಿಂಹಗಳು ತಮ್ಮ ಬಳಗಕ್ಕಾಗಿ ಬೇಟೆಯಾಡುತ್ತವಂತೆ. ಸಿಂಹ ಘರ್ಜನೆಯು ಸುಮಾರು 8 ಕಿ.ಮೀವರೆಗೂ ಕೇಳುತ್ತದೆ ಎಂದು ಹೇಳುತ್ತಾರೆ. ಸಿಂಹವು ಗಂಟೆಗೆ 50 ಮೈಲಿ ವೇಗದಲ್ಲಿ ಓಡಬಲ್ಲವು ಹಾಗೂ 36 ಅಡಿಗಳಷ್ಟು ಕೆಳಕ್ಕೆ ಹಾರಬಲ್ಲವು.
ಸಿಂಹದ ಜೊತೆ ಚೆಲ್ಲಾಟ ಆಡಲು ಹೋಗಿ ಕೈ ಬೆರಳು ಕಳೆದುಕೊಂಡ ಯುವಕ
ಒಂದು ಸಿಂಹಕ್ಕೆ ಎಷ್ಟು ವಯಸ್ಸಾಗಿದೆ ಎಂದು ಅದರ ಗಡ್ಡ ನೋಡಿಯೇ ಹೇಳಬಹುದಂತೆ. ಸಿಂಹದ ಗಡ್ಡ ಎಷ್ಟು ಗಾಢ ಬಣ್ಣ ಹೊಂದಿರುತ್ತದೋ ಅದಕ್ಕೆ ಅಷ್ಟು ವಯಸ್ಸಾಗಿದೆ ಎಂದು ಅಂದಾಜಿಸಲಾಗುತ್ತದೆ. ಸಿಂಹಗಳು ನಡೆಯುವಾಗ ಅವುಗಳ ಹಿಮ್ಮಡಿ ನೆಲಕ್ಕೆ ತಾಗುವುದಿಲ್ಲವಂತೆ. ಸಿಂಹಗಳು ದಿನದಲ್ಲಿ 20 ಗಂಟೆಗಳ ಕಾಲವೂ ನಿದ್ರಿಸಬಲ್ಲವು. ಹೀಗಾಗಿ ಸಿಂಹವನ್ನು ಆಲಸಿ ಪ್ರಾಣಿ ಎಂತಲೂ ಕರೆಯುತ್ತಾರೆ. ಅಲ್ಲದೇ ಸಿಂಹಗಳು ಬೇಟೆಯಾಡಲು ಉಗುರು ಹಾಗೂ ಹಲ್ಲುಗಳನ್ನು ಬಳಸುತ್ತವೆ.