ಮೂರು ಸಿಂಹಗಳೊಂದಿಗೆ ಜೀವಕ್ಕಾಗಿ ಕಾದಾಡುತ್ತಿರುವ ಮೊಸಳೆ: ವಿಡಿಯೋ ವೈರಲ್
ಮೂರು ಹಸಿದ ಸಿಂಹಗಳು ಮೊಸಳೆ ಮೇಲೆರಗಿ ಬೇಟೆಯಾಡುತ್ತಿರುವ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು ಭಯ ಹುಟ್ಟಿಸುವಂತಿದೆ.
ಪ್ರಾಣಿಗಳು ಭೇಟೆಯಾಡುವ ಅನೇಕ ವಿಡಿಯೋಗಳನ್ನು ನೀವು ಸಾಮಾಜಿಕ ಜಾಲತಾಣದಲ್ಲಿ ನೋಡಿರಬಹುದು. ಸಿಂಹದ ಗಾತ್ರಕ್ಕೆ ಹೋಲಿಸಿದರೆ ಮೊಸಳೆ ಅದರ ಎರಡು ಪಾಲು ಗಾತ್ರದಲ್ಲಿ ದೊಡ್ಡದಿರುವ ಪ್ರಾಣಿ. ಹೀಗಾಗಿ ಸಾಮಾನ್ಯವಾಗಿ ಸಿಂಹಗಳು ಮೊಸಳೆಗಳನ್ನು ಬೇಟೆಯಾಡಲು ಹೋಗುವುದು ವಿರಳ. ಒಂದು ವೇಳೆ ನದಿಯ ನೀರನ್ನು ಕುಡಿಯುತ್ತಿದ್ದ ಸಿಂಹವನ್ನು ಮೊಸಳೆ ಹೊಂಚು ಹಾಕಲು ಸಾಧ್ಯವಾದರೆ, ಆ ಹೋರಾಟವು ತಕ್ಷಣವೇ ಕೊನೆಗೊಳ್ಳುತ್ತದೆ. ಆದಾಗ್ಯೂ ಕಾಡಿನ ರಾಜ ಎನಿಸಿರುವ ಸಿಂಹಗಳ ಗುಂಪೊಂದು ಮೊಸಳೆಯನ್ನು ಬೇಟೆಯಾಡುತ್ತಿರುವ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ಸಿಂಹವು ಕಾಡಿನ ಪರಭಕ್ಷಕ ಪ್ರಾಣಿಯಾಗಿದೆ. ಅವುಗಳು ಸಾಮಾನ್ಯವಾಗಿ ಆಯ್ಕೆ ಮಾಡಿದ ಪ್ರಾಣಿಗಳನ್ನು ಬೇಟೆಯಾಡದೇ ಬಿಡುವುದಿಲ್ಲ. ಈ ಮಧ್ಯೆ ಮೂರು ಸಿಂಹಗಳು ನೀರಿನ ಮೇಲಿರುವ ಮೊಸಳೆಯನ್ನು ಭೇಟೆಯಾಡುತ್ತಿರುವ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಇನ್‌ಸ್ಟಾಗ್ರಾಮ್‌ನಲ್ಲಿ ಹಂಚಿಕೊಂಡಿರುವ ವೀಡಿಯೊವನ್ನು 62,000 ಕ್ಕೂ ಹೆಚ್ಚು ಜನ ವೀಕ್ಷಿಸಿದ್ದಾರೆ. ಇದು ಎರಡು ಸಿಂಹಿಣಿಗಳು ಮತ್ತು ಒಂದು ಸಿಂಹ ಸೇರಿ ಆಳವಿಲ್ಲದ ಉಪ್ಪು ನೀರಿನ ಸರೋವರದಲ್ಲಿ ಮೊಸಳೆಯ ಮೇಲೆ ದಬ್ಬಾಳಿಕೆ ನಡೆಸುತ್ತಿವೆ.
ಮೂರು ಹಸಿದ ಸಿಂಹಗಳು ಮೊಸಳೆಯನ್ನು ಬೇಟೆಯಾಡಲು ಅದರ ಮೇಲೆ ಹಾರಿದಾಗ ಮೊಸಳೆಯು ತನ್ನ ಪ್ರಾಣಕ್ಕಾಗಿ ತೀವ್ರವಾಗಿ ಹೋರಾಡುತ್ತಿರುವುದನ್ನು ಕಾಣಬಹುದು. ಮೊದಲಿಗೆ, ಒಂದು ಸಿಂಹವು ಮೊಸಳೆಯೊಂದಿಗೆ ಸ್ವತಃ ಹೋರಾಡುತ್ತಿತ್ತು. ಆದರೆ ಅವನ ಹೆಮ್ಮೆಯ ಸಿಂಹಿಣಿಗಳು ಅದನ್ನು ಆತನೋರ್ವನೆ ನಿಭಾಯಿಸಲು ಸಾಧ್ಯವಿಲ್ಲ ಎಂದು ತಿಳಿದಾಗ, ಅವುಗಳು ಕೂಡ ಆತನಿಗೆ ಸಹಾಯ ಮಾಡಲು ಹೋಗಿವೆ. ಮೂರು ಸಿಂಹಗಳು ಒಂದು ಮೊಸಳೆಯನ್ನು ಹಿಡಿದು ಎಳೆದಾಡುತ್ತಿವೆ.
ಸಿಂಹದ ಜೊತೆ ಚೆಲ್ಲಾಟ ಆಡಲು ಹೋಗಿ ಕೈ ಬೆರಳು ಕಳೆದುಕೊಂಡ ಯುವಕ
ಕೆಲದಿನಗಳ ಹಿಂದೆ ಜಿಂಕೆಗಾಗಿ ಮೊಸಳೆ ಹಾಗೂ ಸಿಂಹ ಎಳೆದಾಡುತ್ತಿರುವ ವಿಡಿಯೋವೊಂದು ವೈರಲ್ ಆಗಿತ್ತು. ಪ್ರಾಣಿಗಳ ಮುದ್ದಾಟ, ಕಿತ್ತಾಟ, ತುಂಟಾಟದ ಸಾಕಷ್ಟು ವಿಡಿಯೋಗಳನ್ನು ನೀವು ಈಗಾಗಲೇ ಸಾಮಾಜಿಕ ಜಾಲತಾಣದಲ್ಲಿ ನೋಡಿರುತ್ತೀರಿ. ಆದರೆ ಈಗ ನಾವು ನಿಮಗೆ ತೋರಿಸಲು ಹೊರಟಿರುವ ವಿಡಿಯೋ ಮಾತ್ರ ಭಯಾನಕವಾಗಿದೆ. ಸಸ್ಯವನ್ನು ತಿಂದು ಪ್ರಾಣಿ, ಸಸ್ಯಾಹಾರಿ ಪ್ರಾಣಿಯನ್ನು ತಿಂದು ಮಾಂಸಹಾರಿ ಪ್ರಾಣಿಗಳು ಬದುಕುತ್ತವೆ ಇದು ಆಹಾರ ಸರಪಳಿಯ ಭಾಗವಾಗಿದೆ. ಆದರೆ ಈ ವಿಡಿಯೋದಲ್ಲಿ ಒಂದು ಆಹಾರಕ್ಕಾಗಿ ಎರಡು ಪ್ರಾಣಿಗಳು ಕಿತ್ತಾಡುತ್ತಿರುವ ದೃಶ್ಯವಿದೆ.
ಜಿಂಕೆಗಾಗಿ (deer) ಹರಿಯುವ ನೀರಿನಲ್ಲಿ ಮೊಸಳೆ ಹಾಗೂ ಸಿಂಹವೊಂದು ಕಾದಾಡುವ ಭಯಾನಕ ದೃಶ್ಯ ಇದಾಗಿದೆ. ಜಿಂಕೆಯನ್ನು ಕಚ್ಚಿ ಮೊಸಳೆ ಹಾಗೂ ಸಿಂಹ ಅತ್ತಿಂದಿತ್ತ ಎಳೆದಾಡುತ್ತಿವೆ. ಆದರೆ ಈ ಜಿಂಕೆ ನೀರಿಗೆ ಹೇಗೆ ಹೋಯಿತೆಂಬುದು ತಿಳಿಯುತ್ತಿಲ್ಲ. ಬಹುಶಃ ಜಿಂಕೆಯೊಂದು ನೀರು ಕುಡಿಯಲು ಹೋದಂತಹ ಸಂದರ್ಭದಲ್ಲಿ ಈ ಘಟನೆ ನಡೆದಿರಬಹುದು. ನೀರು ಕುಡಿಯಲು ಹೋಗಿ ಈ ಕ್ರೂರ ಪ್ರಾಣಿಗಳ ಬಾಯಿಗೆ ಸಿಕ್ಕಿರಬಹುದು.
ಮೊಸಳೆಯ ಕುತ್ತಿಗೆಯಲ್ಲಿ ಸಿಲುಕಿದ್ದ ಟಯರ್‌ನ್ನು ಹೊರ ತೆಗೆದ ಪ್ರಾಣಿ ಪ್ರೇಮಿ
ನೀರಿನಲ್ಲೇ ಸಿಂಹ ಹಾಗೂ ಮೊಸಳೆ ಜಿಂಕೆಗಾಗಿ ಹೋರಾಡುತ್ತಿದ್ದು, ಸಿಂಹದ(Lion) ಬಾಯಿಯಿಂದ ಜಿಂಕೆಯನ್ನು ಕಿತ್ತುಕೊಂಡ ಮೊಸಳೆ ನಂತರ ಜಿಂಕೆಯನ್ನು ಕಚ್ಚಿಕೊಂಡೆ ನೀರಿನಿಂದ ಮೇಲೆ ಬರುತ್ತದೆ. ನಂತರ ನೆಲದ ಮೇಲೆ ಕೂಡ ಸಿಂಹ ಹಾಗೂ ಮೊಸಳೆ (crocodile)ತಮ್ಮ ಪಾಲಿನ ಆಹಾರ (Food) ಪಡೆಯಲು ಹೋರಾಡುತ್ತಿರುವುದು ಈ ವಿಡಿಯೋದಲ್ಲಿ ಕಾಣಿಸುತ್ತಿದೆ.
ವನ್ಯಜೀವಿ ಛಾಯಾಗ್ರಾಹಕರು (Wildlife photographers) ಈ ಅಪರೂಪದ ದೃಶ್ಯವನ್ನು ಸೆರೆ ಹಿಡಿದಿದ್ದಾರೆ. ಒಂದು ನಿಮಿಷ ಹನ್ನೊಂದು ಸೆಕೆಂಡ್‌ಗಳ ವಿಡಿಯೋ ಇದಾಗಿದ್ದು, ಇನ್ಸ್ಟಾಗ್ರಾಮ್‌ನಲ್ಲಿ nature27_12 ಎಂಬ ಇನ್ಸ್ಟಾ ಖಾತೆಯಿಂದ ಪೋಸ್ಟ್ ಆಗಿದ್ದು, ಸಾಕಷ್ಟು ಜನ ಈ ವಿಡಿಯೋವನ್ನು ವೀಕ್ಷಿಸಿದ್ದಾರೆ.