Asianet Suvarna News Asianet Suvarna News

Wedding Secrets: ನವವಿವಾಹಿತೆ ತಿಳಿದಿರಬೇಕಾದ ಸತ್ಯವಿದು!

ಹೆಂಡತಿ ಬಂದ್ಮೇಲೆ ಮಗ ಬದಲಾದ. ಮನೆ ಒಡೆಯಿತು,ಮದುವೆಯಾಗಿ ತಿಂಗಳಾಗಿಲ್ಲ ಆಗ್ಲೆ ಕಿತ್ತಾಟ ಶುರುವಾಗಿದೆ… ಹೀಗೆ ಬಾಯಿಯಿಂದ ಬಾಯಿಗೆ ಹರಿದಾಡುವ ಮಾತುಗಳನ್ನು ಕೇಳಿ ಕೆಲವರು ಮದುವೆ ಸಹವಾಸ ಬೇಡಪ್ಪ ಅಂತಾ ಕೈ ಮುಗಿತಾರೆ. ಅವಿವಾಹಿತರು ಮದುವೆ ಕನಸಿನ ಜೊತೆ ದುಸ್ವಪ್ನವನ್ನೂ ಕಾಣ್ತಾರೆ.ದಾಂಪತ್ಯ ಜೀವನ ಸರಳ,ಸುಂದರವಾಗಿರಬೇಕೆಂದರೆ ಕೆಲವೊಂದು ಬದಲಾವಣೆ ಅನಿವಾರ್ಯ.
 

Life Secrets of newly married women must know
Author
Bangalore, First Published Dec 14, 2021, 5:08 PM IST

ಜೀವನದ ಮಹತ್ವದ ಘಟ್ಟಗಳಲ್ಲಿ ಮದುವೆಯೂ (Marriage) ಒಂದು. ವಿವಾಹ  ತುಂಬಾ ಸುಂದರ(beautiful)ವಾದ ಬಂಧ. ಅದು ಪರಸ್ಪರರ ಜೀವನದಲ್ಲಿ ಪ್ರೀತಿಯ ನದಿ ಹರಿಸುತ್ತದೆ. ನೂರಾರು ವರ್ಷ ನಿನ್ನ ಜೊತೆಗಿರುತ್ತೇನೆಂದು ಕೈ ಹಿಡಿದು ಒಂದಾಗುವ ಜೋಡಿಯ ಆರಂಭ ಚೆನ್ನಾಗಿರುತ್ತದೆ. ಮದುವೆ ನಂತರ ಬಹಳ ವಿಷಯಗಳು ಬದಲಾಗುತ್ತವೆ. `ನಾನು’ ಎಂಬಲ್ಲಿ `ನಾವು’ ಎಂಬುದು ಸೇರುತ್ತದೆ. ಹೊಸ ಸಂಬಂಧ,ಹೊಸ ಜನ,ಹೊಸ ಮನೆ,ಹೊಸ ವಾತಾವರಣ ಮಹಿಳೆಯ ಜೀವನದಲ್ಲಿ ಮಹತ್ವದ ಬದಲಾವಣೆ ತರುತ್ತದೆ. ಇದೆಲ್ಲವೂ ಕೆಲವೊಮ್ಮೆ ಮಹಿಳೆಗೆ ಉಸಿರುಗಟ್ಟಿಸಿದ ಅನುಭವವನ್ನುಂಟು ಮಾಡುತ್ತದೆ. ಮದುವೆಯಾದ ಹೊಸದರಲ್ಲಿಯೇ ಕೆಲವೊಂದು ವಿಷಯಗಳ ಬಗ್ಗೆ ಕಾಳಜಿ ವಹಿಸಿದರೆ, ಖಂಡಿತವಾಗಿಯೂ  ಮುಂದೆ ಯಾವುದೇ ರೀತಿಯ ಸಮಸ್ಯೆ ಎದುರಾಗುವುದಿಲ್ಲ. ದಾಂಪತ್ಯ ಸುಖವನ್ನು ಯಾವುದೇ ಚಿಂತೆಯಿಲ್ಲದೆ,ಸಂತೋಷದಿಂದ ಕಳೆಯಬಹುದು.

ಪರಿಪೂರ್ಣವಾಗಬೇಕಾಗಿಲ್ಲ (perfect) : ಈ ಜಗತ್ತಿನಲ್ಲಿ ಯಾರೂ ಪರಿಪೂರ್ಣರಲ್ಲ. ಪರಿಪೂರ್ಣತೆ ಅಸಾಧ್ಯ. ಮದುವೆ ನಂತ್ರ ಪರಿಪೂರ್ಣತೆ ಎಂಬ ಮಾತನ್ನು ಮನಸ್ಸಿನಿಂದ ತೆಗೆಯುವುದು ಉಳಿತು. ನನ್ನ ಪತಿ ನನ್ನನ್ನು ಪ್ರೀತಿಸುತ್ತಾನೆ ಎಂಬ ಸತ್ಯವನ್ನು ನೀವು ಅರಿತಿರಿ. ನಿಮ್ಮ ಫರ್ಪೆಕ್ಟ್ ಅವರಿಗೆ ಬೇಕಾಗಿಲ್ಲ. ಸದಾ ಸಂತೋಷದಿಂದರಬೇಕೆಂದು ಪ್ರತಿಯೊಬ್ಬ ಪತಿ ಬಯಸುತ್ತಾನೆ. ಪತ್ನಿ ಸಂತೋಷದಲ್ಲಿ ತನ್ನ ಸಂತೋಷ ಕಾಣುವ ಪುರುಷರಿದ್ದಾರೆ. ಹಾಗಿರುವಾಗ ಪರಿಪೂರ್ಣತೆಯನ್ನು ಬದಿಗಿಟ್ಟು,ಸಂತೋಷಕ್ಕೆ ಮಹತ್ವ ನೀಡಿ. 
ಅನೇಕ ಸಂದರ್ಭದಲ್ಲಿ ನಿಮ್ಮ ದೃಷ್ಟಿಕೋನವನ್ನು ಬದಲಿಸಿಕೊಳ್ಳಬೇಕು. ಏನೂ ಕೆಲಸ ಬರದೆ ಹೋದರೂ,ನಿಮ್ಮ ಪತಿ ನಿಮ್ಮಲ್ಲಿ ಇಷ್ಟಪಡುವ ಒಂದಾದರೂ ಗುಣ ನಿಮ್ಮಲ್ಲಿರುತ್ತದೆ. ಅದಕ್ಕೆ ಮನಸ್ಸನ್ನು ಕೇಂದ್ರೀಕರಿಸಿ. ಯಾವುದೂ ಒಂದೇ ಬಾರಿ ಸಾಧ್ಯವಿಲ್ಲ. ದಾಂಪತ್ಯ ಚೆನ್ನಾಗಿರಲು ನಿರಂತರ ಪ್ರಯತ್ನ ಅಗತ್ಯ.  

ಪ್ರತಿ ಕ್ಷಣದಲ್ಲಿದೆ ಆನಂದ (Enjoy Every Second) : ಮದುವೆ ನಂತ್ರ ಎಲ್ಲವೂ ಬದಲಾಯ್ತು. ಹೆಗಲ ಮೇಲೆ ಬಿದ್ದ ಜವಾಬ್ದಾರಿಯಿಂದ ನನ್ನ ಸಂತೋಷ ಹಾಳಾಯ್ತು. ಮನಸ್ಸು ಬಿಚ್ಚಿ ನಕ್ಕು ತುಂಬಾ ದಿನವಾಯ್ತು ಎನ್ನುವವರಿದ್ದಾರೆ. ಹಿಂದೆ ಸಂತೋಷದಿಂದಿದ್ದ ಕ್ಷಣಗಳನ್ನು ನೆನೆದು ಈಗ ಮರುಗುವ ಬದಲು ಆ ಕ್ಷಣದ ಆನಂದಕ್ಕೆ ಮಹತ್ವ ಕೊಡಿ. ಹಿಂದೆ ನೀವು ಒಬ್ಬಂಟಿಯಾಗಿದ್ದಾಗಿನ ಜೀವನ ಬೇರೆ. ಈಗ ಜಂಟಿಯಾದಾಗಿನ ಜೀವನ ಬೇರೆ. ಮದುವೆಯಾದ ನಂತ್ರ ಸಂತೋಷ ಸತ್ತು ಹೋಯ್ತು ಎಂದರ್ಥವಲ್ಲ.  ಹೊಸ ಕಲಿಕೆಯನ್ನು,ಹೊಸ ಸಂಬಂಧದಲ್ಲಿ ಸಂತೋಷ ಹುಡುಕಿ. ಆಗಲೇ ನಮ್ಮವರಲ್ಲದವರು ನಮ್ಮವರಾಗುತ್ತಾರೆ. ಪತಿ,ಪತಿಯ ಕುಟುಂಬಸ್ಥರನ್ನು ದೂರದಲ್ಲಿಡುವ ಬದಲು ಅವರ ಆಗು-ಹೋಗುಗಳಲ್ಲಿ ನೀವು ಬೆರೆತಾಗ ಅವರು ನಿಮಗೆ ಅರಿವಿಲ್ಲದೆ ಆಪ್ತರಾಗುತ್ತಾರೆ. ಮಂಕಾಗಿದ್ದ ಮನೆಯಲ್ಲಿ ನಗು ಶುರುವಾಗುತ್ತದೆ.

ನಿಮ್ಮನ್ನು ಬದಲಾಯಿಸಿಕೊಳ್ಳಬೇಡಿ (don't change yourself): ಮದುವೆ ಜೀವನದ ಒಂದು ಭಾಗ ನಿಜ. ಹಾಗಂತ ನಿಮ್ಮನ್ನು ನೀವು ಬದಲಿಸಿಕೊಳ್ಳಿ ಎಂದು ಎಲ್ಲೂ ಹೇಳಿಲ್ಲ. ನೀವೊಂದು ಅದ್ಭುತ. ನಿಮ್ಮ ಸಾಮರ್ಥ್ಯದ ಮೇಲೆ ನಿಮಗೆ ನಂಬಿಕೆ ಇರಬೇಕು. ನಿಮ್ಮ ಮೇಲಿರುವ ಗೌರವ,ಪ್ರೀತಿಯನ್ನು ನೀವು ಎಂದೂ ಕಳೆದುಕೊಳ್ಳಬಾರದು. ಅಡುಗೆ ಮಾಡಲು ಬಂದಿಲ್ಲ ಎಂಬ ಕಾರಣಕ್ಕೆ ನೀವು ಕೀಳಾಗುವುದಿಲ್ಲ. ನಿಮ್ಮಲ್ಲಿ ಇನ್ನೊಂದು ಪ್ರತಿಭೆ ಅಡಗಿರುತ್ತದೆ.  ಅದನ್ನು ಹೊರತೆಗೆಯುವ ಪ್ರಯತ್ನ ನಡೆಸಿ.  ಕುಟುಂಬ ಸದಸ್ಯರ ಜೊತೆ ನಿಮ್ಮ ಭಾವನೆ,ನಿಮ್ಮ ಪ್ರಬುದ್ಧತೆ,ನಿಮ್ಮ ಸಾಮರ್ಥ್ಯದ ಬಗ್ಗೆ ಹೇಳಿಕೊಳ್ಳಿ. ಇದು ಪರಸ್ಪರ ಅರ್ಧ ಮಾಡಿಕೊಳ್ಳಲು ನೆರವಾಗುತ್ತದೆ.  

ಆಸೆಗೆ ತಣ್ಣೀರೆರಚುವ ಕೆಲಸ ಬೇಡ (Wishes) : ಮದುವೆಯ ನಂತರ ನಿಮ್ಮ ಆಸೆಗಳನ್ನು ಹತ್ತಿಕ್ಕಬೇಕೆಂದೇನಿಲ್ಲ. ಒಂಟಿ ಮಹಿಳೆಯಂತೆ ನಿಮ್ಮ ಎಲ್ಲಾ ಆಸೆಗಳನ್ನು ಪೂರೈಸಿಕೊಳ್ಳಬಹುದು. ಆಸೆ ಅತಿಯಾದ್ರೆ ಸಂಬಂಧ ಹಾಳಾಗುತ್ತದೆ ಎಂಬುದು ಗಮನದಲ್ಲಿರಲಿ. 

ಹೆಣ್ಣಲ್ಲಿರೋ ಈ ಗುಣ ಗಂಡಿಗೆ ಇಷ್ಟ

ಸರಿಯಾದ ಸ್ನೇಹ (Friends) : ನಿಜ,ಮದುವೆಗೆ ಮುನ್ನ ನಿಮಗೆ ಸಾಕಷ್ಟು ಸ್ನೇಹಿತರಿದ್ದರು. ಅವರ ಜೊತೆ ಹರಟೆ ಹೊಡೆಯುತ್ತ ಸಮಯ ಕಳೆಯುತ್ತಿದ್ದಿರಿ. ಈಗ ಹಾಗಲ್ಲ. ಮದುವೆ ನಂತರ ಸ್ನೇಹಿತರಲ್ಲೂ ಬದಲಾವಣೆ ಅನಿವಾರ್ಯ. ಅನೇಕ ಸ್ನೇಹಿತರ ಬದಲು ಒಂದಿಷ್ಟು ಒಳ್ಳೆ ಸ್ನೇಹಿತರಿಗೆ ಮಾತ್ರ ಜಾಗ ನೀಡಿ. ನಿಮ್ಮ ದುಃಖ,ಸಂತೋಷದಲ್ಲಿ ಭಾಗಿಯಾಗುವ,ನಿಮ್ಮನ್ನು ಸರಿ ದಾರಿಯಲ್ಲಿ ನಡೆಸಬಲ್ಲ ಸ್ನೇಹಿತರಿಗೆ ಆದ್ಯತೆ ನೀಡಿ. ಸ್ನೇಹದ ಆಯ್ಕೆ ಸರಿಯಾಗಿರದೆ ಹೋದಲ್ಲಿ  ಕುಟಂಬದಲ್ಲಿ ಬಿರುಕು ಮೂಡುವ ಸಾಧ್ಯತೆಯಿರುತ್ತದೆ. 
 

Follow Us:
Download App:
  • android
  • ios