Asianet Suvarna News Asianet Suvarna News

ಲಿಂಗ ಮರೆತು ಪ್ರೀತಿ ಮಾಡೋ ಸಲಿಂಗಿಗಳಿಗೆ ಸುಖಕ್ಕಿಂತ ಸಂಕಟಗಳೇ ಹೆಚ್ಚು!

ಸಲಿಂಗಕಾಮ ಈಗಿನ ದಿನಗಳಲ್ಲಿ ಸಾಮಾನ್ಯ ಎನ್ನುವಂತಾಗಿದೆ. ಅನೇಕ ಹೋರಾಟದ ಮಧ್ಯೆ ಜನರು ತಮ್ಮ ಲಿಂಗದ ಜನರ ಜೊತೆ ಮದುವೆ ಆಗ್ತಿದ್ದಾರೆ. ಆರಂಭದಲ್ಲಿ ಇದು ಆಕರ್ಷಣೆ ಎನ್ನಿಸಿದ್ರೂ ಭವಿಷ್ಯದಲ್ಲಿ ಹಾಗೂ ಸಮಾಜಕ್ಕೆ ಹಾನಿಕರ. 
 

Largest Losses Of Gay Relationship how they will be rejected by society roo
Author
First Published Nov 23, 2023, 3:35 PM IST

ವಿಷ್ಯ, ವಸ್ತು, ಆಹಾರ ಯಾವುದೇ ಇರಲಿ ಅದ್ರಲ್ಲಿ ಅನುಕೂಲ ಹಾಗೂ ಅನಾನುಕೂಲ ಎರಡೂ ಇದೆ. ಸಂಬಂಧದ ವಿಷ್ಯಕ್ಕೆ ಬಂದಾಗಲೂ ಇದು ಸತ್ಯ. ಮದುವೆ ಕೆಲವರಿಗೆ ಸುಖ ನೀಡಿದ್ರೆ ಮತ್ತೆ ಕೆಲವರಿಗೆ ಹಿಂಸೆ ನೀಡುತ್ತದೆ. ವಿರುದ್ಧ ಲಿಂಗದ ಜನರನ್ನು ಬಹುತೇಕರು ಮದುವೆಯಾಗಲು ಇಚ್ಛಿಸಿದ್ರೆ ಅಪರೂಪಕ್ಕೆ ಕೆಲ ಜನರು ತಮ್ಮದೇ ಲಿಂಗದ ಜನರನ್ನು ಪ್ರೀತಿಸಿ ಮದುವೆಯಾಗ್ತಾರೆ. ಅವರನ್ನು ಸಲಿಂಗಕಾಮಿ ಎಂದು ಕರೆಯಲಾಗುತ್ತದೆ. ಇತ್ತೀಚಿನ ದಿನಗಳಲ್ಲಿ ಈ ಸಲಿಂಗಕಾಮಿ ಮದುವೆ ಸಾಮಾನ್ಯವಾಗ್ತಿದೆ. ಮೊದಲು ವಿದೇಶಗಳಲ್ಲಿದ್ದ ಇದನ್ನು ಈಗ ಭಾರತದಲ್ಲೂ ನಾವು ಕಾಣ್ಬಹುದು.  ಸಲಿಂಗಕಾಮಿಗಳು ತಮ್ಮ ಪ್ರೀತಿಯನ್ನು ಉಳಿಸಿಕೊಳ್ಳಲು ಕುಟುಂಬದ ಜೊತೆ, ಸಮಾಜದ ಜೊತೆ ಹೋರಾಟ ನಡೆಸುತ್ತಾರೆ. ಅವರು ಇಚ್ಛಿಸಿ, ಸಂಗಾತಿಯ ಆಯ್ಕೆ ಮಾಡಿಕೊಂಡಿದ್ದರೂ ಸಲಿಂಗಕಾಮಿ ಮದುವೆಯಲ್ಲೂ ಅನೇಕ ಸಮಸ್ಯೆಗಳನ್ನು ನೀವು ಕಾಣ್ಬಹುದು.  ಈ ಮದುವೆಯು ಸಮಾಜದ ನಿಯಮಗಳನ್ನು ಮುರಿಯುವುದು ಮಾತ್ರವಲ್ಲದೆ ಪ್ರಕೃತಿಯ ನಿಯಮಗಳನ್ನು ಉಲ್ಲಂಘಿಸುತ್ತದೆ. ನಾವಿಂದು ಸಲಿಂಗಕಾಮ, ಏನೆಲ್ಲ ಸಮಸ್ಯೆಗೆ ಕಾರಣವಾಗುತ್ತದೆ ಎಂಬುದನ್ನು ಹೇಳ್ತೇವೆ. 

ಭಾವನೆಗಳಿಗೆ ಧಕ್ಕೆ : ನಮ್ಮ ಹಿಂದೂ (Hindu) ಧರ್ಮದಲ್ಲಿ ದೇವರ ಪೂಜೆ, ಆರಾಧನೆ ಸೇರಿದಂತೆ ದೇವರ ಸೃಷ್ಟಿಗೆ ಸಂಬಂಧಿಸಿದಂತೆ ಅನೇಕ ನಂಬಿಕೆ ಇದೆ. ಅಸ್ತಿತ್ವ ಇಲ್ಲಿ ಮೂಲ ಹಾಗೂ ಮೊದಲ ವಿಷಯವಾಗುತ್ತದೆ. ಪುರುಷ ಹಾಗೂ ಮಹಿಳೆ ಸಂಬಂಧ ದೇವರಿಂದ ಸೃಷ್ಟಿಯಾಗಿದ್ದು, ಅದರ ವಿರುದ್ಧ ನಡೆಯುವುದು ಎಷ್ಟು ಸರಿ ಎನ್ನುವ ಪ್ರಶ್ನೆ ಏಳುತ್ತದೆ. ಸಲಿಂಗಕಾಮಿ ಮದುವೆ ಹಿಂದೂ ಧರ್ಮಕ್ಕೆ ವಿರುದ್ಧವಾದದ್ದು. ದೇವರ ಸೃಷ್ಟಿಗೆ ವಿರುದ್ಧವಾಗಿ ನಡೆಯುವುದು ಸರಿಯಲ್ಲವೆಂಬ ಭಾವನೆಯನ್ನು ಜನರು ಹೊಂದಿದ್ದು, ಸಲಿಂಗಕಾಮಿ (Homosexual) ಗಳ ಮದುವೆಯನ್ನು ಧರ್ಮ ಒಪ್ಪುವುದಿಲ್ಲ. 

ಹೆಂಡ್ತಿನೇ ನೋಡ್ಕೊಳ್ಳದವ್ರು ಕಂಪನಿ ಹೇಗೆ ನೋಡ್ಕೋತಾರೆ: ವಿಚ್ಛೇದನದ ಬಳಿಕ 1,500 ಕೋಟಿ ಆಸ್ತಿ ಕಳ್ಕೊಂಡ ಖ್ಯಾತ ಉದ್ಯಮಿ!

ರೋಗ (Disease) ಕ್ಕೆ ಆಹ್ವಾನ : ಸಲಿಂಗಕಾಮಿಗಳ ಮಧ್ಯೆ ನಡೆಯುವ ಮದುವೆ ಆರೋಗ್ಯಕರವಾಗಿರುವುದಿಲ್ಲ. ಇದನ್ನು ನೀವು ರೋಗಗಳ ತವರು ಎನ್ನಬಹುದು. ಅಧ್ಯಯನದ ಪ್ರಕಾರ ಶೇಕಡಾ 95 ಪ್ರತಿಶತ ಸಲಿಂಗಕಾಮಿ ಜನರು ಯಾವುದಾದರೂ ಕಾಯಿಲೆಯಿಂದ ಬಳಲುತ್ತಿದ್ದಾರೆ ಅಂದ್ರೆ ನಿಮಗೆ ಅಚ್ಚರಿ ಆಗ್ಬಹುದು.

ದೈಹಿಕ ಸಂಬಂಧ (Physical Relationship) ಸಾಧ್ಯವಿಲ್ಲ : ದೈಹಿಕ ಸಂಬಂಧಗಳನ್ನು ನೈಸರ್ಗಿಕ ಕ್ರಿಯೆಯಾಗಿದೆ. ಮಾನವನ ಪ್ರಮುಖ ಅಗತ್ಯತೆಗಳಲ್ಲಿ ಇದು ಒಂದಾಗಿದೆ. ಪುರುಷ ಮತ್ತು ಮಹಿಳೆ ದೈಹಿಕ ಸಂಬಂಧವನ್ನು ಬೆಳೆಸಿದಾಗ ಮಾನಸಿಕ ಹಾಗೂ ದೈಹಿಕ ಆರೋಗ್ಯದಲ್ಲಿ ಸಾಕಷ್ಟು ಸುಧಾರಣೆ ಕಂಡುಬರುತ್ತದೆ. ಸಲಿಂಗಕಾಮಿ ದಂಪತಿಯಲ್ಲಿ ಇದು ಸಾಧ್ಯವಿಲ್ಲ.

ವಂಶಾಭಿವೃದ್ಧಿ ಸಾಧ್ಯವಿಲ್ಲ : ತಮ್ಮದೇ ವಂಶವನ್ನು ಮುಂದುವರೆಸಲು ಸಲಿಂಗಕಾಮಿಗಳಿಗೆ ಸಾಧ್ಯವಾಗೋದಿಲ್ಲ. ಸಮಾಜದಲ್ಲಿ ಮದುವೆಯ ಉದ್ದೇಶ ದೈಹಿಕ ಸಂಬಂಧಗಳನ್ನು ಸೃಷ್ಟಿಸುವ ಮೂಲಕ ಮಾನವ ಸರಪಳಿಯನ್ನು ಮುಂದುವರೆಸುವುದು. ಇದು ಪ್ರಕೃತಿಯ ನಿಯಮ. ಇದು ಶತಮಾನಗಳಿಂದ ನಡೆದುಕೊಂಡು ಬಂದಿದೆ. ಆದರೆ ಸಲಿಂಗಕಾಮಿ ವಿವಾಹಗಳು ಮಾನವ ಸರಪಳಿಯ ಈ ನಿಯಮವನ್ನು ಅಡ್ಡಿಪಡಿಸುತ್ತವೆ. ಅವರು ಮಗುವನ್ನು ದತ್ತು ಪಡೆಯಬೇಕಾಗುತ್ತದೆ. ತಂದೆ – ತಾಯಿಯ ರಕ್ತದಿಂದ ಬರುವ ಅನೇಕ ಸಂಗತಿಗಳನ್ನು ಮಗು ಪಡೆಯಲು ಸಾಧ್ಯವಾಗೋದಿಲ್ಲ.

ಮದ್ವೆಯಾದ್ರೂ ಎಕ್ಸ್​ ಬಾಯ್​ಫ್ರೆಂಡ್​ ಜತೆಗಿನ ಸವಿಸವಿ ನೆನಪು ಮೆಲುಕು ಹಾಕಿದ್ರು ಈ ಬಾಲಿವುಡ್​ ನಟಿಯರು!

ಸಮಾಜದಲ್ಲಿ ಸ್ಥಾನಮಾನ (Social Rejection) : ಮೊದಲೇ ಹೇಳಿದಂತೆ ಜನರು ಈ ಪದ್ಧತಿಯನ್ನು ಸುಲಭವಾಗಿ ಸ್ವೀಕರಿಸೋದಿಲ್ಲ. ಇದ್ರ ಬಗ್ಗೆ ಹೊಸ ಕಾನೂನು ಜಾರಿಗೆ ಬಂದಿದ್ದರೂ ಜನರು ಸಲಿಂಗಕಾಮಿ ದಂಪತಿಯನ್ನು ನೋಡುವ ದೃಷ್ಟಿ ಬೇರೆಯಿರುತ್ತದೆ. ಸಲಿಂಗಕಾಮಿಗಳು ಎಲ್ಲರಂತೆ ಆರಾಮವಾಗಿ, ಸ್ವಚ್ಛಂದವಾಗಿ ಬದುಕುವುದು ಕಷ್ಟ. 

ತಲೆಮಾರಿನ ಮೇಲೆ ಕೆಟ್ಟ ಪರಿಣಾಮ : ಸಲಿಂಗಕಾಮಿಗಳ ಸಂಖ್ಯೆ ದಿನ ದಿನಕ್ಕೂ ಹೆಚ್ಚಾಗ್ತಾ ಹೋದಲ್ಲಿ ಮುಂದಿನ ಭವಿಷ್ಯಕ್ಕೆ ಇದು ಕಂಟಕವಾಗಲಿದೆ. ಮಕ್ಕಳ ಮೇಲೂ ಇದು ನಕಾರಾತ್ಮಕ ಪರಿಣಾಮ ಬೀರುತ್ತದೆ. ಸಲಿಂಗಕಾಮಿ ವಿವಾಹದ ಸಂದರ್ಭದಲ್ಲಿ  ಮಕ್ಕಳ ಬೆಳವಣಿಗೆ ಸರಿಯಾಗಿ ಆಗುವುದಿಲ್ಲ. ಮಕ್ಕಳಿಗೆ ತಾಯಿ ಹಾಗೂ ತಂದೆ ಪ್ರೀತಿ ಸಿಗೋದಿಲ್ಲ. ಇದು ಅವರ ಬೆಳವಣಿಗೆಯ ಮೇಲೆ ಪರಿಣಾಮ ಬೀರುತ್ತದೆ. 
 

Latest Videos
Follow Us:
Download App:
  • android
  • ios