ಹೆಂಡ್ತಿನೇ ನೋಡ್ಕೊಳ್ಳದವ್ರು ಕಂಪನಿ ಹೇಗೆ ನೋಡ್ಕೋತಾರೆ: ವಿಚ್ಛೇದನದ ಬಳಿಕ 1,500 ಕೋಟಿ ಆಸ್ತಿ ಕಳ್ಕೊಂಡ ಖ್ಯಾತ ಉದ್ಯಮಿ!
ಉದ್ಯಮಿ ಗೌತಮ್ ಸಿಂಘಾನಿಯಾ ತನ್ನ 32 ವರ್ಷಗಳ ಪತ್ನಿ ಮತ್ತು ರೇಮಂಡ್ ಬೋರ್ಡ್ ಸದಸ್ಯರಾದ ನವಾಜ್ ಸಿಂಘಾನಿಯಾರಿಂದ ಬೇರ್ಪಡುವುದಾಗಿ ಘೋಷಿಸಿದಾಗಿನಿಂದ 1,500 ಕೋಟಿಗೂ ಹೆಚ್ಚು ಸಂಪತ್ತು ಕರಗಿಹೋಗಿದೆ.
ವಿಶ್ವದ ಅತಿ ದೊಡ್ಡ ಸೂಟ್ ಫ್ಯಾಬ್ರಿಕ್ ಉತ್ಪಾದಕರಲ್ಲಿ ಒಂದಾದ ರೇಮಂಡ್ ಲಿಮಿಟೆಡ್ ಷೇರುಗಳ ಮೌಲ್ಯ ತೀವ್ರ ಕುಸಿಯುತ್ತಿದೆ.
ಇದಕ್ಕೆ ಕಾರಣ ಸಂಸ್ಥೆಯ ಮುಖ್ಯಸ್ಥ ಹಾಗೂ ಬೋರ್ಡ್ ಸದಸ್ಯ ಗೌತಮ್ ಸಿಂಘಾನಿಯಾ ಮತ್ತು ಅವರ ಪತ್ನಿ ನಡುವಿನ ವಿಚ್ಚೇದನದ ಸುದ್ದಿ.
ವಿಶ್ವದ ಅತಿ ದೊಡ್ಡ ಸೂಟ್ ಫ್ಯಾಬ್ರಿಕ್ ಉತ್ಪಾದಕರಲ್ಲಿ ಒಂದಾದ ರೇಮಂಡ್ ಲಿಮಿಟೆಡ್ ಮುಂಬೈನ ಷೇರುಪೇಟೆಯಲ್ಲಿ ಸುಮಾರು 10 ದಿನಗಳಿಂದ ಕುಸಿಯುತ್ತಿದೆ.
ನವೆಂಬರ್ 13 ರಿಂದ ಬಿಲಿಯನೇರ್ ಗೌತಮ್ ಸಿಂಘಾನಿಯಾ ತನ್ನ 32 ವರ್ಷಗಳ ಪತ್ನಿ ಮತ್ತು ರೇಮಂಡ್ ಬೋರ್ಡ್ ಸದಸ್ಯರಾದ ನವಾಜ್ ಸಿಂಘಾನಿಯಾರಿಂದ ಬೇರ್ಪಡುವುದಾಗಿ ಘೋಷಿಸಿದಾಗಿನಿಂದ ಕಂಪನಿಯ ಷೇರು ಮೌಲ್ಯ 12% ನಷ್ಟು ಕುಸಿದಿದೆ. 180 ಮಿಲಿಯನ್ ಡಾಲರ್‌ಗಿಂತಲೂ ಅಂದರೆ ಸುಮಾರು 1,500 ಕೋಟಿಗೂ ಹೆಚ್ಚು ಸಂಪತ್ತು ಕರಗಿಹೋಗಿದೆ.
ಬುಧವಾರ ಸಹ 4.4% ನಷ್ಟು ಷೇರು ಕುಸಿತ ಕಂಡಿದೆ. ಅಕ್ಟೋಬರ್ 25 ರಿಂದ ಇದು ರೇಮಂಡ್ ಷೇರುಗಳ ದೊಡ್ಡ ಕುಸಿತಕ್ಕೆ ಕಾರಣವಾಗಿದೆ.
ಗೌತಮ್ ಸಿಂಘಾನಿಯಾ 1.4 ಬಿಲಿಯನ್ ಡಾಲರ್ ಅಂದ್ರೆ ಸುಮಾರು 11,680 ಕೋಟಿ ರೂ. ಆಸ್ತಿ ಹೊಂದಿದ್ದಾರೆ ಎಂದು ಮಾಧ್ಯಮಗಳು ವರದಿ ಮಾಡಿವೆ.
ಅವರ ಸಂಪತ್ತಿನ ಶೇ. 75 ರಷ್ಟು ಹಣವನ್ನು ವಿಚ್ಛೇದನದ ಬಳಿಕ ಜೀವನಾಂಶದ ಭಾಗವಾಗಿ ಮಾಜಿ ಪತ್ನಿ ಹಾಗೂ ಫಿಟ್ನೆಸ್ ಕೋಚ್ ನವಾಜ್ ಸಿಂಘಾನಿಯಾ ಕೇಳಿದ್ದಾರೆ ಎಂದು ವರದಿಯಾಗಿದೆ. ತಮ್ಮ ಹಾಗೂ ಇಬ್ಬರು ಮಕ್ಕಳಾದ ನಿಹಾರಿಕಾ ಮತ್ತು ನಿಸಾ ಅವರ ಜೀವನ ನಿರ್ವಹಣೆಗಾಗಿ ಈ ಮೊತ್ತ ಕೇಳಿದ್ದಾರೆ ಎನ್ನಲಾಗಿದೆ.
ವಿಚ್ಛೇದನದ ಸುತ್ತಲಿನ ಅನಿಶ್ಚಿತತೆಯು ಷೇರು ಮಾರುಕಟ್ಟೆಯ ಮೇಲೆ ಪರಿಣಾಮ ಬೀರುತ್ತಿದೆ. ಇದು ಕಂಪನಿಯ ಮೇಲೆ ಯಾವ ರೀತಿಯ ಪರಿಣಾಮ ಬೀರುತ್ತದೆ ಎಂದು ಯಾರಿಗೂ ತಿಳಿದಿಲ್ಲ. ಪತ್ನಿ ಮಂಡಳಿಯ ಸದಸ್ಯರಾಗಿರುವ ಕಾರಣ, ಇದು ಕಾರ್ಪೊರೇಟ್ ಆಡಳಿತದ ಸಮಸ್ಯೆಯಾಗಿದೆ ಎಂದೂ ವಿಶ್ಲೇಷಕರೊಬ್ಬರು ಹೇಳಿದ್ದಾರೆ.
ನವೆಂಬರ್ 13ರಂದು ಗೌತಮ್ ಸಿಂಘಾನಿಯಾ (58) ತನ್ನ ಪತ್ನಿ ನವಾಜ್‌ರಿಂದ ವಿವಾಹ ವಿಚ್ಛೇದನ ಪಡೆದುಕೊಂಡಿರುವುದಾಗಿ ತಿಳಿಸಿದ್ದರು. ಈ ಕುರಿತು ತಮ್ಮ ಎಕ್ಸ್ (ಈ ಹಿಂದಿನ ಟ್ವಿಟ್ಟರ್) ಖಾತೆಯಲ್ಲಿ ಟ್ವೀಟ್ ಮಾಡಿದ್ದರು.