ಅರಿಜಿತ್​ ಸಿಂಗ್​ ಹಾಡ್ತಿರುವಾಗ್ಲೇ ಯುವತಿ ಪ್ರಪೋಸ್! ವಿಡಿಯೋ ನೋಡಿ ಹೊಟ್ಟೆ ಉರ್ಕೊಳ್ತಿರೋ ಹೈಕ್ಳು

ಗಾಯಕ ಅರಿಜಿತ್ ಸಿಂಗ್ ಸಂಗೀತ ಕಾರ್ಯಕ್ರಮದ ನೇರ ಪ್ರಸಾರದಲ್ಲಿ ಯುವತಿಯೊಬ್ಬಳು ಯುವಕನನ್ನು ಪ್ರಪೋಸ್​ ಮಾಡಿದ್ದು, ಇದರ ವಿಡಿಯೋ ವೈರಲ್​ ಆಗಿದೆ. 
 

Lady proposes to lover during live show of singer Arijit Singh suc

ಗಾಯಕ ಅರಿಜಿತ್ ಸಿಂಗ್ ಬಗ್ಗೆ ಯಾರಿಗೆ ಗೊತ್ತಿಲ್ಲ ಹೇಳಿ? ಸಂಗೀತಗಾರ, ಗಾಯಕ, ಸಂಯೋಜಕ, ಸಂಗೀತ ನಿರ್ಮಾಪಕ, ಧ್ವನಿಮುದ್ರಣಕಾರ ಇತ್ಯಾದಿ ಕಲಾಪ್ರಕಾರಗಳಲ್ಲಿ ಫೇಮಸ್​ ಆಗಿರೋ ಕಲಾವಿದ ಅರಿಜಿತ್​ ಅವರ ಒಂದಲ್ಲ ಒಂದು ರೀತಿಯಲ್ಲಿ, ಒಂದಲ್ಲಾ ಒಂದು ಭಾಷೆಯಲ್ಲಿ ಇವರ ಹಾಡನ್ನು ಒಮ್ಮೆಯಾದರೂ ಕೇಳಿರುತ್ತೀರಿ. ಅವರ ಕಂಠ ಸಿರಿಗೆ ತಲೆದೂಗದವರೇ ಇಲ್ಲವೇನೋ. ಅವರ ಏ ದಿಲ್ ಹೈ ಮುಷ್ಕಿಲ್, ಕಬೀರಾ, ತೇರೆ ಪ್ಯಾರ್ ಮೇ, ಕೇಸರಿಯಾ, ಹವೇಯಿನ್, ಇತ್ಯಾದಿಗಳಂತಹ ಕೆಲವು ಜನಪ್ರಿಯ ಹಾಡುಗಳು ಪ್ರೇಕ್ಷಕರನ್ನು ಮಂತ್ರಮುಗ್ಧರನ್ನಾಗಿಸುತ್ತವೆ.  ಅದು ಎಷ್ಟರಮಟ್ಟಿಗೆ ಜನರನ್ನು ಮೋಡಿ ಮಾಡುತ್ತವೆ ಎಂದರೆ ಅರಿಜಿತ್​ ಸಿಂಗ್ ಅವರ ಹಾಡು ಕೇಳುತ್ತಿದ್ದರೆ ಜನರು ಹುಚ್ಚೆದ್ದು ಕುಣಿಯುತ್ತಾರೆ. ಆದರೆ ಇಲ್ಲೊಂದು ಅಪರೂಪದ ಘಟನೆಯಲ್ಲಿ, ಯುವತಿಯೊಬ್ಬಳು ತನ್ನ ಪ್ರಿಯಕರನಿಗೆ ಅರಿಜಿತ್​ ಅವರ ಸಂಗೀತ ಕಾರ್ಯಕ್ರಮದಲ್ಲಿ ಪ್ರಪೋಸ್​ ಮಾಡಿದ್ದು, ಅದರ ವಿಡಿಯೋ ವೈರಲ್​ ಆಗಿದೆ. 

ಈ ಘಟನೆ ನಡೆದಿರುವುದು ಎಲ್ಲಿ ಎಂಬ ಮಾಹಿತಿ ಇಲ್ಲ.  ಆದರೆ ಇನ್​ಸ್ಟಾಗ್ರಾಮ್​ನಲ್ಲಿ ಇದರ ವಿಡಿಯೋ ವೈರಲ್​ ಆಗಿದೆ. ಇದರಲ್ಲಿ ಅರಿಜಿತ್​ ಸಿಂಗ್​ (Arijith Singh) ಅವರು ಹಾಡುತ್ತಿದ್ದಾರೆ. ಸಹಜವಾಗಿ ಈ ಸಂಗೀತ ಕಛೇರಿಯಲ್ಲಿ ಅವರ ಅಭಿಮಾನಿಗಳು ಹುಚ್ಚೆದ್ದು ಕುಣಿಯುತ್ತಿದ್ದಾರೆ. ಇದರ ಮಧ್ಯೆಯೇ ಪ್ರೇಯಸಿಯೊಬ್ಬಳು ಪ್ರಿಯಕರನಿಗೆ ಪ್ರಪೋಸ್​ ಮಾಡಿದ್ದಾಳೆ. ಅರಿಜಿತ್​ ಅವರು ಹಾಡುತ್ತಿದ್ದಂತೆಯೇ ಯುವತಿ ತಾನು ತನ್ನ ಪ್ರಿಯಕರನಿಗೆ ಪ್ರಪೋಸ್​ ಮಾಡಬಹುದೆ ಎಂದು ಕೇಳಿದ್ದಾಳೆ. ಅದಕ್ಕೆ ಅರಿಜಿತ್​ ಅವರು ಓಕೆ ಎಂದಿದ್ದಾರೆ. ಕೂಡಲೇ ಐ ಲವ್​ ಯೂ ಎನ್ನುವ ಮೂಲಕ ಪ್ರಪೋಸ್​ ಮಾಡಿದ್ದಾಳೆ. ಯುವಕ ಆಕೆಯನ್ನು ತಬ್ಬಿ ಮುದ್ದಾಡಿದ್ದಾನೆ. ಅಲ್ಲಿರುವ ಜನರು ಇದಕ್ಕೆ ಸಾಕ್ಷಿಯಾಗಿದ್ದಾರೆ. ಇದರ ವಿಡಿಯೋ ಸಕತ್​ ವೈರಲ್​ ಆಗುತ್ತಿದೆ.

ಪೋರ್ನ್​ ವಿಡಿಯೋ ಹೆಚ್ಚು ನೋಡಿದ್ರೆ ಏನಾಗುತ್ತೆ? ಸದ್ಗುರು ಹೇಳ್ತಾರೆ ಕೇಳಿ

ಈ ವಿಡಿಯೋಗೆ ಥಹರೇವಾರಿ ಕಮೆಂಟ್​ಗಳು ಬರುತ್ತಿವೆ. ಇದು ನಿಜಕ್ಕೂ ಭಾರತನಾ (India)? ಇಂಥ ಕೆಟ್ಟ ಸಂಪ್ರದಾಯ ನಮ್ಮಲ್ಲಿ ಏಕೆ ಬಂತು ಎಂದು ಕೆಲವರು ಪ್ರಶ್ನಿಸಿದ್ದರೆ, ಇವೆಲ್ಲಾ ಪೂರ್ವ ನಿಯೋಜಿತ ಎನ್ನುವುದು ಸ್ಪಷ್ಟವಾಗಿ ಗೋಚರಿಸುತ್ತದೆ. ಇದರಲ್ಲಿ ಅಚ್ಚರಿ ಪಡುವಂಥದ್ದು ಏನೂ ಇಲ್ಲ ಎಂದಿದ್ದಾರೆ. ಆದರೆ ಹಲವು ಯುವಕರು ಮಾತ್ರ ಛೇ ನಮಗೆ ಇಂಥ ಛಾನ್ಸ್​ ಸಿಕ್ತಿಲ್ಲವಲ್ಲವಪ್ಪಾ ಎಂದು ಬೇಸರಿಸುತ್ತಿದ್ದಾರೆ. ಎಷ್ಟೊಂದು ಸಂಗೀತ ಕಛೇರಿಗಳಿಗೆ ಹೋದರೂ ಒಬ್ಬಳೇ ಒಬ್ಬಳು ಹುಡುಗಿ ನಮಗೆ ಪ್ರಪೋಸ್​ ಮಾಡಿಲ್ಲವಲ್ಲ ಎಂದು ಬೇಸರ ವ್ಯಕ್ತಪಡಿಸುತ್ತಿದ್ದಾರೆ.  ಕೆಲವರು ನಮಗೆ ಹೊಟ್ಟೆ ಉರಿಯುತ್ತಿದೆ ಎನ್ನುತ್ತಿದ್ದಾರೆ. ಇನ್ನು ಕೆಲವರು ಇಲ್ಲೇನೋ ಪ್ರಪೋಸ್​ ಮಾಡಿದಿ ತಾಯಿ,   ಅಪ್ಪ-ಅಮ್ಮಂಗೆ ಹೇಳಿದ್ಯೋ ಇಲ್ವೋ ಎಂದು ಕೇಳಿದ್ದಾರೆ. 

ಅಂದಹಾಗೆ, ಅರಿಜಿತ್​ ಸಿಂಗ್​  2010ರಲ್ಲಿ ಗೋಲ್‌ಮಾಲ್, ಕ್ರೂಕ್ ಮತ್ತು ಆಕ್ಷನ್ ರಿಪ್ಲೇಯಲ್ಲಿ ಪ್ರಥಮ್ ಚಕ್ರವರ್ತಿ (Pratham Chakraverthy) ಯೊಂದಿಗೆ ಕೆಲಸ ಮಾಡಲು ಪ್ರಾರಂಭಿಸಿದರು. ಸಂದೀಪ್ ಚೌಟಾ ಸಂಯೋಜಿಸಿದ 'ನೀವೇ ನಾ ನೀವ್ ನಾ' ಹಾಡಿನೊಂದಿಗೆ ತೆಲುಗಿನ 'ಕೇಡಿ' ಚಿತ್ರದೊಂದಿಗೆ ಸಿನಿ ರಂಗಕ್ಕೆ ಎಂಟ್ರಿಕೊಟ್ಟರು. ನಂತರ 'ಕಭಿ ಜೋ ಬಾದಲ್ ಭರ್ಸೆ' ಅನ್ನುವ ಹಾಡಿನ ಮೂಲಕ ಬಾಲಿವುಡ್‌ ಸಿನಿಮಾ ಸಂಗೀತ ಕ್ಷೇತ್ರಕ್ಕೆ ಎಂಟ್ರಿ ಕೊಟ್ಟರು. 2012ರಲ್ಲಿ ರಿಲೀಸ್ ಆದ ಆಶಿಕಿ-2 ಸಿನಿಮಾ ಅರಿಜೀತ್​ ಅವರಿಗೆ ದೊಡ್ಡ ಬ್ರೇಕ್ ನೀಡಿತು. ತುಮ್ ಹೀ ಹೋ ಹಾಡು ಅವರನ್ನು ಬಾಲಿವುಡ್ನ ಖ್ಯಾತ ಗಾಯಕರ ಸಾಲಿನಲ್ಲಿ ನಿಲ್ಲಿಸಿತು. ಜೊತೆಗೆ ಅರಿಜಿತ್​ ಸಿಂಗ್ ಅವರು 'ಫಿರ್ ಲೆ ಆಯಾ ದಿಲ್' ಮತ್ತು 'ದುವಾ' ಚಿತ್ರಗಳಿಗೆ ಸಂಬಂಧಿಸಿದಂತೆ ಮಿರ್ಚಿ ಮ್ಯೂಸಿಕ್ ಅವಾರ್ಡ್ ಉತ್ತಮ ಗಾಯಕ ಪ್ರಶಸ್ತಿಗೆ ನಾಮಿನೇಟ್ ಆಗುವ ಮೂಲಕ ಪ್ರಶಸ್ತಿಗಳ ಬೇಟೆ ಆರಂಭಿಸಿದರು. 

Women Health : ಮುಟ್ಟು ನಿಂತ್ಮೆಲೂ ಹೆಣ್ಣಿಗೆ ಲೈಂಗಿಕಾಸಕ್ತಿ ಇರೋದು ಮಾತ್ರವಲ್ಲ, ಹೆಚ್ಚಾಗುತ್ತೆ!

Latest Videos
Follow Us:
Download App:
  • android
  • ios