Asianet Suvarna News Asianet Suvarna News

ಸಿಕ್ಕಿದ್ದೆಲ್ಲ ಎಸೆದು, ಎದ್ದು, ಬಿದ್ದು ಮಕ್ಕಳು ಹಠ ಮಾಡಲೇನು ಕಾರಣ?

ಟೆಂಟ್ರಮ್ ಹಾಗೂ ಮಕ್ಕಳು ಒಂದೇ ನಾಣ್ಯದ ಎರಡು ಮುಖ ಎನ್ನಬಹುದು. ಬೇಕಾಗಿದ್ದನ್ನು ಪಡೆಯಲು, ಬೇಡವಾಗಿದ್ದನ್ನು ನಿರಾಕರಿಸಲು ಮಕ್ಕಳು ಹೊಸ ಹೊಸ ನಕ್ರಾ ಮಾಡ್ತಾವೆ. ಮಕ್ಕಳ ಈ ಸ್ವಭಾವ ಅರ್ಥ ಮಾಡಿಕೊಳ್ಳೋದು ಕಷ್ಟ.
 

Know What Are The Types Of Tantrums In Children
Author
First Published Oct 25, 2022, 3:03 PM IST

ನಾಲ್ಕೈದು ಜನರನ್ನು ಒಟ್ಟಿಗೆ ನೋಡ್ತಿದ್ದಂತೆ ಕೆಲ ಮಕ್ಕಳು ಕೂಗಾಡಲು ಶುರು ಮಾಡ್ತಾರೆ. ವಸ್ತುಗಳನ್ನು ಎಸೆಯುವುದು, ಒದೆಯುವುದು, ಕೂದಲು ಹಿಡಿದು ಎಳೆಯುವುದು, ಮನೆ, ಬೀದಿ ಎನ್ನೋದಿಲ್ಲದೆ ಇರೋ ಜಾಗದಲ್ಲಿಯೇ ಬಿದ್ದು ಹೊರಳಾಡೋದನ್ನು ನಾವು ನೋಡಿರ್ತೇವೆ. ಅನೇಕ ಬಾರಿ ಮಕ್ಕಳು ಹಿಂಸಾತ್ಮಕವಾಗಿ ವರ್ತಿಸುತ್ತಾರೆ. ಕೆಲ ಮಕ್ಕಳು ಪಾಲಕರನ್ನು ವಿಪರೀತ ಗೋಳಾಡಿಸ್ತಾರೆ. ಇದ್ರಿಂದ ಪಾಲಕರಿಗೆ ಸಾರ್ವಜನಿಕ ಪ್ರದೇಶದಲ್ಲಿ ಮುಜುಗರವಾಗೋದಿದೆ. ಮಕ್ಕಳ ಈ ಸ್ವಭಾವಕ್ಕೆ ಬೇಸತ್ತ ಕೆಲ ಪಾಲಕರು ಮನೆ ಬಿಟ್ಟು ಹೋಗೋದಿಲ್ಲ. ಮಕ್ಕಳ ಈ ಸ್ವಭಾವಕ್ಕೆ ಅನೇಕ ಕಾರಣವಿದೆ. ಮಕ್ಕಳು ತಮ್ಮ ಬಯಕೆ ಈಡೇರಿಸಿಕೊಳ್ಳಲು, ಬೇಡಿಕೆ ಪೂರೈಸಿಕೊಳ್ಳಲು ಇದೆಲ್ಲ ನಾಟಕ ಮಾಡುತ್ತಾರೆ. ಮಕ್ಕಳ ಈ ಸ್ವಭಾವಕ್ಕೆ ಟಾಂಟ್ರಮ್ಸ್ ಎಂದು ಕರೆಯಲಾಗುತ್ತದೆ. ನಾವಿಂದು ಮಕ್ಕಳು ಯಾಕೆ ಹೀಗೆ ಆಡ್ತವೆ ಎನ್ನುವ ಬಗ್ಗೆ ನಿಮಗೆ ಹೇಳ್ತೇವೆ.

ಪಾಲಕರ ಗಮನ ಸೆಳೆಯಲು ಹೀಗಾಡ್ತಾರೆ ಮಕ್ಕಳು (Children) : ಪಾಲಕರ ಗಮನವನ್ನು ತಮ್ಮೆಡೆ ಸೆಳೆಯಲು ಮಕ್ಕಳು ಹೀಗೆ ಮಾಡ್ತಾರೆ. ಮನೆಯಲ್ಲಿ ತುಂಬಾ ಜನರಿದ್ದಾಗ ಅಥವಾ ಪಾಲಕರು ಬೇರೆ ಮಕ್ಕಳ ಬಗ್ಗೆ ಹೆಚ್ಚು ಗಮನ ಹರಿಸಿದಾಗ ಮಕ್ಕಳು ಅಸುರಕ್ಷಿತ (Insecure) ಭಾವನೆ ಅನುಭವಿಸುತ್ತಾರೆ. ಪಾಲಕರ ಗಮನವನ್ನು ತಮ್ಮತ್ತ ಸೆಳೆಯಬೇಕು ಎನ್ನುವ ಕಾರಣಕ್ಕೆ ಗಲಾಟೆ ಮಾಡ್ತಾರೆ. ಕೋಪ (Anger) ವ್ಯಕ್ತಪಡಿಸ್ತಾರೆ.ಪಾಲಕರಾದವರು ಮಕ್ಕಳ ಈ ಸ್ಥಿತಿಯನ್ನು ಅರ್ಥ ಮಾಡಿಕೊಳ್ಳಬೇಕು. ಅವರ ಮೇಲೆ ಕೂಗಾಡಿ, ಕಿರುಚಾಡುವ ಬದಲು ಅವರ ಜೊತೆ ಸಮಯ ಕಳೆಯಲು ಪ್ರಯತ್ನಿಸಬೇಕು, ನಿಮ್ಮೊಂದಿಗೆ ನಾವಿದ್ದೇವೆ ಎನ್ನುವ ಭಾವನೆ ಮೂಡಿಸುವ ಪ್ರಯತ್ನ ನಡೆಸಬೇಕು. ಪಾಲಕರು ಮಕ್ಕಳ ಮಾತು ಕೇಳ್ತಿದ್ದರೆ, ಸುರಕ್ಷಿತ ಭಾವನೆ ಮೂಡಿಸಿದ್ರೆ ಮಕ್ಕಳ ವರ್ತನೆಯಲ್ಲಿ ಬದಲಾವಣೆಯಾಗುತ್ತದೆ.

ಬೇಕಾಗಿದ್ದನ್ನು ಪಡೆಯಲು ಕೂಗಾಡ್ತಾರೆ ಮಕ್ಕಳು : ಅನೇಕ ಮಕ್ಕಳು ಸಾರ್ವಜನಿಕ ಪ್ರದೇಶದಲ್ಲಿ ಅಳುವುದು, ಕೂಗಾಡುವುದು ಮಾಡ್ತಾರೆ. ಪಾಲಕರ ಮಾತುಗಳನ್ನು ಕೇಳುವ ತಾಳ್ಮೆ ಅವರಿಗೆ ಇರುವುದಿಲ್ಲ. ಹೇಳಿದ್ದನ್ನು ನೀಡದೆ ಹೋದಾಗ ಅಥವಾ ತಮಗಿಷ್ಟವಾದ ವಸ್ತು ಬೇಕು ಎಂದಾಗ ಮಕ್ಕಳ ಕೂಗಾಟ ಜೋರಾಗುತ್ತದೆ. ಈ ಸಂದರ್ಭದಲ್ಲಿ ಮಕ್ಕಳನ್ನು ಅವರ ಪಾಡಿಗೆ ಬಿಡಬೇಕು. ಅವರು ಶಾಂತವಾದ್ಮೇಲೆ ಅವರ ಸುದ್ದಿಗೆ ಹೋಗಬೇಕು. ಅತ್ತಲ್ಲಿ, ಕೂಗಾಡಿದಲ್ಲಿ ಯಾವುದೇ ವಸ್ತುವನ್ನು ನೀಡುವುದಿಲ್ಲ ಎಂಬುದನ್ನು ನೀವು ಮಕ್ಕಳಿಗೆ ಬಾಲ್ಯದಿಂದಲೇ ಮನವರಿಕೆ ಮಾಡಬೇಕು. 

Parenting Tips: ಮಕ್ಕಳ ಐಕ್ಯೂ ಮಟ್ಟ ಹೆಚ್ಚಿಸೋದು ಹೇಗೆ? ಇಲ್ಲಿವೆ ಸರಳ ಉಪಾಯಗಳು

ಸುಸ್ತು, ಬೇಸರವಾದಾಗ್ಲೂ ಮಕ್ಕಳು ನಾಟಕ ಶುರು ಮಾಡ್ತಾರೆ : ಮಕ್ಕಳಿಗೆ ಸುಸ್ತಾಗಿದ್ದಾಗ ಅಥವಾ ವಿಷ್ಯದಲ್ಲಿ ಆಸಕ್ತಿಯಿಲ್ಲ ಎಂದಾಗ ಮಕ್ಕಳು ಕೋಪ (Anger), ಅಳುವಿನ ನಾಟಕ ಶುರು ಮಾಡುವ ಸಾಧ್ಯತೆಯಿದೆ. ಕೆಲ ಮಕ್ಕಳು ಒಂದೇ ಸಮನೆ ಅಳ್ತಿದ್ದರೆ ಮತ್ತೆ ಕೆಲ ಮಕ್ಕಳು ಕೋಪ ವ್ಯಕ್ತಪಡಿಸಿ ಕೈಗೆ ಸಿಕ್ಕಿದ್ದೆಲ್ಲ ಎಸೆಯುತ್ತಾರೆ. ಈ ಸಂದರ್ಭದಲ್ಲಿ ಮಕ್ಕಳ ವರ್ತನೆ ನೋಡಿ ಪಾಲಕರು ಕೆರಳುತ್ತಾರೆ. ಪೋಷಕರ ಕೋಪ ಮಕ್ಕಳ ಹತಾಷೆ ಭಾವನೆಯನ್ನು ಹೆಚ್ಚಿಸುತ್ತದೆ. ಮಕ್ಕಳ ಮನಸ್ಥಿತಿಯನ್ನು ಪಾಲಕರು ಅರಿಯಬೇಕು. ಪಾಲಕರು ಶಾಂತವಾಗಿರಬೇಕು. ಮಕ್ಕಳಿಗೆ ದಣಿವಾಗಿದ್ರೆ ವಿಶ್ರಾಂತಿ ನೀಡಬೇಕು. ಅವರು ಹತಾಶೆಗೊಂಡಿದ್ದರೆ ಅದನ್ನು ಅರ್ಥ ಮಾಡಿಕೊಂಡು ಅದನ್ನು ಬಗೆಹರಿಸುವ ಪ್ರಯತ್ನ ನಡೆಸಬೇಕು. 

STRICT PARENTING STYLE: ಮಕ್ಕಳಲ್ಲಿ ಖಿನ್ನತೆಗೂ ಕಾರಣವಾಗ್ಬೋದು !

ಇಷ್ಟವಿಲ್ಲದ ಕೆಲಸ ಮಾಡಲ್ಲ ಮಕ್ಕಳು : ದೊಡ್ಡವರಂತೆ ಮಕ್ಕಳು ತಮಗೆ ಇಷ್ಟವಿಲ್ಲದ ಕೆಲಸಗಳನ್ನು ಮಾಡುವುದಿಲ್ಲ. ಇಷ್ಟವಿಲ್ಲದ ಕೆಲಸ ಮಾಡಲು ಬಲವಂತ ಮಾಡಬಾರದು. ಇದು ಮಕ್ಕಳ ಕೋಪ ಹೆಚ್ಚಿಸುತ್ತದೆ. ಇಷ್ಟವಿಲ್ಲದ ಕೆಲಸ ಮಾಡಲು ಮನಸ್ಸು ಮಾಡದ ಮಕ್ಕಳು ಕೂಗಾಟ, ಕಿರುಚಾಟ, ಅಳು ವ್ಯಕ್ತಪಡಿಸ್ತಾರೆ. ಆಗ ಪಾಲಕರು ಮಕ್ಕಳ ಭಾವನೆ ಅರ್ಥ ಮಾಡಿಕೊಳ್ಳಬೇಕು. ಯಾಕೆ ಆ ಕೆಲಸ ಮಾಡಬೇಕು ಎಂಬುದನ್ನು ಮಕ್ಕಳಿಗೆ ವಿವರಿಸಬೇಕು.
 

Follow Us:
Download App:
  • android
  • ios