Asianet Suvarna News Asianet Suvarna News

Parenting Tips: ಮಕ್ಕಳ ಐಕ್ಯೂ ಮಟ್ಟ ಹೆಚ್ಚಿಸೋದು ಹೇಗೆ? ಇಲ್ಲಿವೆ ಸರಳ ಉಪಾಯಗಳು

ಮಕ್ಕಳು ಬುದ್ಧಿವಂತರಾಗ್ಬೇಕು, ಎಲ್ಲರಿಗಿಂತ ಮೊದಲು ಮಕ್ಕಳು ಉತ್ತರ ನೀಡ್ಬೇಕು ಎಂದು ಪಾಲಕರು ಬಯಸ್ತಾರೆ. ಹಾಗಾಗಿ ಮಕ್ಕಳಿಗೆ ಅದು ಓದು, ಇದು ಓದು ಎನ್ನುತ್ತಾರೆಯೇ ಹೊರತು, ಐಕ್ಯೂ ಮಟ್ಟ ಹೆಚ್ಚಿಸಲು ಏನೆಲ್ಲ ಮಾಡ್ಬೇಕು ಎಂಬುದನ್ನು ತಿಳಿಯೋದಿಲ್ಲ. ಐಕ್ಯೂ ಮಟ್ಟ ಹೆಚ್ಚಾಗ್ಬೇಕೆಂದ್ರೆ ಬರೀ ಓದಿದ್ರೆ ಸಾಲೋದಿಲ್ಲ.
 

Tips For Increase IQ Level Of Child
Author
First Published Oct 22, 2022, 7:17 PM IST

ಇದು ಸ್ಪರ್ಧಾತ್ಮಕ ಯುಗ. ಇಲ್ಲಿ ಮಕ್ಕಳು ಎಷ್ಟು ಮುಂದಿದ್ರೂ ಸಾಲೋದಿಲ್ಲ. 100ಕ್ಕೆ ನೂರು ಅಂಕ ತೆಗೆದುಕೊಂಡ್ರೂ ಕಡಿಮೆ ಎನ್ನುವ ಸ್ಥಿತಿಯಿದೆ. ಮಕ್ಕಳು ಬರೀ ಓದಿನಲ್ಲಿ ಮಾತ್ರವಲ್ಲ ಎಲ್ಲ ಕ್ಷೇತ್ರಗಳಲ್ಲೂ ಮುಂದಿರಬೇಕಾಗುತ್ತದೆ. ಮಕ್ಕಳ ಐಕ್ಯೂ ಮಟ್ಟ ಕೂಡ ಬಹಳ ಇಂಪಾರ್ಟೆಂಟ್. ಕೆಲ ಮಕ್ಕಳು ಐಕ್ಯೂ ಮಟ್ಟ ತುಂಬಾ ಚೆನ್ನಾಗಿದ್ದರೆ ಮತ್ತೆ ಕೆಲ ಮಕ್ಕಳ ಐಕ್ಯೂ ಮಟ್ಟ ಕಡಿಮೆಯಿರುತ್ತದೆ. ಐಕ್ಯೂ ಮಕ್ಕಳಿಗೆ ಹುಟ್ಟಿದಾಗಿನಿಂದ ಬಂದಿದ್ದು, ಅದನ್ನು ಬದಲಿಸಲು ಸಾಧ್ಯವಿಲ್ಲವೆಂದು ಕೆಲವರು ಭಾವಿಸ್ತಾರೆ. ಆದ್ರೆ ಇದು ತಪ್ಪು. ಮಕ್ಕಳ ಐಕ್ಯೂ ಮಟ್ಟವನ್ನು ನೀವು ನಾನಾ ವಿಧಗಳಲ್ಲಿ ಸುಧಾರಿಸಬಹುದು. ಕೆಲವು ಸ್ಮಾರ್ಟ್ ಮಾರ್ಗಗಳನ್ನು ಅಳವಡಿಸಿಕೊಳ್ಳುವ ಮೂಲಕ ಪೋಷಕರು ಮಕ್ಕಳ ಐಕ್ಯೂ ಮಟ್ಟವನ್ನು ಹೆಚ್ಚಿಸಬಹುದು. ಐಕ್ಯೂ ಮಟ್ಟವನ್ನು ಚುರುಕುಗೊಳಿಸಲು ಮಕ್ಕಳಿಗೆ ಮಾನಸಿಕ ವ್ಯಾಯಾಮ ಅಗತ್ಯವಾಗುತ್ತದೆ. ಕೆಲವು ಸರಳ ವಿಧಾನಗಳನ್ನು ಅಳವಡಿಸಿಕೊಳ್ಳುವ ಮೂಲಕ ಪೋಷಕರು ತಮ್ಮ ಮಗುವಿನ ಐಕ್ಯೂ ಮಟ್ಟವನ್ನು ಹೇಗೆ ಸುಧಾರಿಸಬಹುದು ಎಂದು ನಾವು ಹೇಳ್ತೇವೆ.

ಮಕ್ಕಳ ಐಕ್ಯೂ (IQ)  ಮಟ್ಟವನ್ನು ಹೀಗೆ ಸುಧಾರಿಸಿ

ಮಕ್ಕಳಿಗೆ ಆಟ (Game) ಬಹಳ ಮುಖ್ಯ : ಇತ್ತೀಚಿನ ದಿನಗಳಲ್ಲಿ ಮಕ್ಕಳು ಮನೆಯಿಂದ ಹೊರಗೆ ಬರೋದಿಲ್ಲ. ನಾನಾ ಕಾರಣಕ್ಕೆ ಪಾಲಕರು ಕೂಡ ಮಕ್ಕಳನ್ನು ಮನೆಯಿಂದ ಹೊರಗೆ ಕಳುಹಿಸುವುದಿಲ್ಲ. ಇದ್ರಿಂದಾಗಿ ಮಕ್ಕಳಿಗೆ ದೈಹಿಕ ಚಟುವಟಿಕೆ (Physical Activity) ಇಲ್ಲದಂತಾಗಿದೆ. ದೈಹಿಕ ಕ್ರಿಯಾಶೀಲತೆ  ಮಕ್ಕಳನ್ನು ಮಾನಸಿಕವಾಗಿ ಸದೃಢಗೊಳಿಸುತ್ತದೆ. ಹಾಗಾಗಿ ಮಕ್ಕಳನ್ನು ಮನೆಯಿಂದ ಹೊರಗೆ ಬಿಡಲೇಬೇಕು. ಮೈದಾನ (Field) ಗಳಲ್ಲಿ. ಪಾರ್ಕ್ ನಲ್ಲಿ ಮಕ್ಕಳಿಗೆ ಆಡಲು ಹೇಳ್ಬೇಕು.  ಮಕ್ಕಳಿಗೆ ಕ್ರೀಡೆಗಳ ಬಗ್ಗೆ ಮಾಹಿತಿ ನೀಡಬೇಕು. ಕ್ರೀಡೆಯಿಂದಾಗುವ ಲಾಭಗಳು ಯಾವುವು ಎಂಬುದನ್ನು ಪಾಲಕರು ಹೇಳಬೇಕು. ಇದ್ರಿಂದ ಮಕ್ಕಳ ಮೆದುಳು ಚುರುಕಾಗುತ್ತದೆ ಎಂಬುದು ನೆನಪಿರಲಿ.  

ಗಣಿತದಲ್ಲಿ ಮಕ್ಕಳ ಆಸಕ್ತಿ ಹೆಚ್ಚಿಸುವುದು ಮುಖ್ಯ : ಮಕ್ಕಳ ಐಕ್ಯೂ ಮಟ್ಟವನ್ನು ಹೆಚ್ಚಿಸಲು ಬಯಸಿದರೆ ಗಣಿತದ ಸಹಾಯವನ್ನು ಪಡೆಯಬಹುದು. ಹತ್ತರಿಂದ ಹದಿನೈದು ನಿಮಿಷಗಳ ಕಾಲ ಗಣಿತದ ಸಮಸ್ಯೆಗಳನ್ನು ಬಿಡಿಸುವಂತೆ ಮಕ್ಕಳಿಗೆ ಹೇಳಬೇಕು. ಪ್ಲಸ್, ಮೈನಸ್, ಮಲ್ಟಿಪ್ಲೈ ಮತ್ತು ಡಿವೈಡ್ ಪ್ರಶ್ನೆಗಳನ್ನು ಮಕ್ಕಳಿಗೆ ನೀಡಬಹುದು. ಇದು ಅವರ ಐಕ್ಯೂ ಮಟ್ಟವನ್ನು ಹೆಚ್ಚಿಸುತ್ತದೆ.

Parenting Tips : ಪಾಲಕರು ಹೀಗ್ ಮಾತನಾಡಿದರೆ ಮಕ್ಕಳಿಗೆ ಇಷ್ಟ!

ಸಂಗೀತದ ವಾದ್ಯ ಕೂಡ ಐಕ್ಯೂ ಹೆಚ್ಚಿಸಲು ಸಹಕಾರಿ : ಸಂಗೀತ ವಾದ್ಯಗಳ ಸಹಾಯವನ್ನು ತೆಗೆದುಕೊಳ್ಳುವ ಮೂಲಕ ಮಗುವಿನ ಐಕ್ಯೂ ಮಟ್ಟವನ್ನು ಸುಧಾರಿಸಬಹುದು ಎನ್ನುತ್ತಾರೆ ತಜ್ಞರು, ಮಕ್ಕಳನ್ನು ಬರೀ ಓದುವಂತೆ ಒತ್ತಾಯಿಸಬಾರದು. ಅದ್ರ ಜೊತೆ ಇತರ  ಚಟುವಟಿಕೆಗಳಲ್ಲಿ ಸಕ್ರಿಯಗೊಳಿಸಬೇಕು. ಹೊಸ ಹೊಸ ವಿಷಯಗಳನ್ನು ಮಕ್ಕಳಿಗೆ ಕಲಿಸಬೇಕು. ಗಿಟಾರ್, ಸಿತಾರ್, ಹಾರ್ಮೋನಿಯಂ, ಸಂಗೀತ ಕೂಡ ಮಕ್ಕಳ ಐಕ್ಯೂ ಮಟ್ಟವನ್ನು ಹೆಚ್ಚಿಸುವ ಕೆಲಸ ಮಾಡುತ್ತದೆ. 

ಮೆದುಳು ಚುರುಕುಗೊಳಿಸುವ ಆಟಗಳು : ಮೈಂಡ್ ಗೇಮ್‌ ಗಳನ್ನು ಮಕ್ಕಳಿಗೆ ಆಡಿಸುವ ಮೂಲಕ ನೀವು ಮಗುವನ್ನು ಮಾನಸಿಕವಾಗಿ ಬಲಪಡಿಸಬಹುದು. ಒಗಟು, ಚೆಸ್ ಮತ್ತು ಸುಡೊಕೊದಂತಹ  ಆಟಗಳನ್ನು ಆಡಲು ನೀವು ಮಕ್ಕಳಿಗೆ ಹೇಳ್ಬೇಕು. ಮಕ್ಕಳ ಜೊತೆ ನೀವೂ ಆಡಿದ್ರೆ ಒಳ್ಳೆಯದು. ಇದ್ರಿಂದ ಮಕ್ಕಳು ಹೆಚ್ಚು ಖುಷಿಯಾಗ್ತಾರೆ. ಮಕ್ಕಳ ಜೊತೆ ಆಡ್ತಾನೆ ನೀವು ಅವರಿಗೆ ಹೊಸ ವಿಷ್ಯ ತಿಳಿಸಬಹುದು. ಮೈಂಡ್ ಗೇಮ್ ಮಕ್ಕಳ ಐಕ್ಯೂ ಮಟ್ಟವನ್ನು ಹೆಚ್ಚಿಸುತ್ತದೆ. ಅವರಲ್ಲಿ ಏಕಾಗ್ರತೆ ಬರುವಂತೆ ಮಾಡುತ್ತದೆ. 

Parenting Tips: ಮಕ್ಕಳ ಉಜ್ವಲ ಭವಿಷ್ಯಕ್ಕೆ ಮನೆಯಲ್ಲಿ ಹೀಗೆ ಟ್ರೇನ್‌ ಮಾಡಿ

ವ್ಯಾಯಾಮ ಕೂಡ ಬಹಳ ಮುಖ್ಯ : ನಿಯಮಿತ ವ್ಯಾಯಾಮ ಮಾಡುವುದರಿಂದ ಮಕ್ಕಳ ಐಕ್ಯೂ ಮಟ್ಟವನ್ನು ಹೆಚ್ಚಿಸಬಹುದು. ವ್ಯಾಯಾಮವು ಮಕ್ಕಳ ಗಮನ ಮತ್ತು ಏಕಾಗ್ರತೆಯನ್ನು ಬಲಪಡಿಸುತ್ತದೆ. ಮಕ್ಕಳಿಗೆ ಪ್ರತಿದಿನ ಉಸಿರಾಟದ ವ್ಯಾಯಾಮಗಳನ್ನು ಮಾಡಿಸಬೇಕು. ಧ್ಯಾನ, ದೇವರ ನಾಮಸ್ಮರಣೆಗಳು ಕೂಡ ಮಕ್ಕಳ ಏಕಾಗ್ರತೆ ಹೆಚ್ಚಿಸುವ ಮೂಲಕ ಐಕ್ಯೂ ಮೇಲೆ ಪರಿಣಾಮ ಬೀರುತ್ತವೆ. 

Follow Us:
Download App:
  • android
  • ios