Employee Appreciation Day: ಸಹೋದ್ಯೋಗಿಗಳನ್ನೇಕೆ ಹೊಗಳಬೇಕು?

ಮಾರ್ಚ್ ಮೊದಲ ಶುಕ್ರವಾರವನ್ನು 'ಎಂಪ್ಲಾಯಿ ಅಪ್ರಿಸಿಯೇಶನ್‌ ಡೇ' (ಉದ್ಯೋಗಿಗಳನ್ನು ಶ್ಲಾಘಿಸುವ ದಿನ) ಎಂದು ಆಚರಿಸಲಾಗುತ್ತೆ. ಇಂಥದೊಂದು ದಿನ ಅಗತ್ಯ ಇದೆಯಾ?

 

 

Know significance history of employee appreciation Day

ನಿಮ್ಮ ಉದ್ಯೋಗಿಗಳನ್ನು (Employee) ಅಥವಾ ಸಹೋದ್ಯೋಗಿ (Colleague) ಗಳನ್ನು ಅವರ ಉತ್ತಮ ಕೆಲಸಕ್ಕಾಗಿ ಮೆಚ್ಚುವುದು ಅಥವಾ ಹೊಗಳುವುದು ಹೊಸ ಪರಿಕಲ್ಪನೆ ಏನಲ್ಲ. ಆದರೆ ಇಂದಿನ ಆಧುನಿಕ ಜಮಾನಾದಲ್ಲಿ ಅದು ಹೆಚ್ಚು ಕಾರ್ಪೊರೇಟ್ ಆಗಿದೆ. ೧೯೯೫ರಲ್ಲೇ ಇದನ್ನು ಅಮೆರಿಕದಲ್ಲಿ ಡಾ.ಬಾಬ್ ನೆಲ್ಸನ್ ಎಂಬ ಉದ್ಯೋಗದಾತರು ಆರಂಭಿಸಿದರು. ಮುಂದೆ ಇದು ಎಲ್ಲ ಕಡೆಗೂ ಹಬ್ಬಿತು. ಮಾರ್ಚ್ ಮೊದಲ ಶುಕ್ರವಾರ ಇದನ್ನು ಆಚರಿಸಲಾಗುತ್ತೆ.

ನಿಮ್ಮ ಉದ್ಯೋಗಿಗಳಿಗೆ ನೀವು ಅವರ ಕೆಲಸಕ್ಕಾಗಿ ಮೆಚ್ಚುಗೆ ನೀಡುವುದು ಅಗತ್ಯ. ಯಾಕೆಂದರೆ,

- ನಾನು ಸರಿಯಾಗಿ ಕೆಲಸ (Work) ಮಾಡ್ತಿದೀನೋ ಇಲ್ಲವೋ ಅನ್ನುವ ಗೊಂದಲ ಪ್ರತಿಯೊಬ್ಬರಿಗೂ ಇರುತ್ತೆ.
- ನನ್ನ ಕೆಲಸ ಈ ಕಂಪನಿಗೆ (Company) ಅಗತ್ಯವಾ ಇಲ್ಲವಾ ಅನ್ನೋದು ಗೊತ್ತಾಗುತ್ತೆ.
- ನನ್ನ ಕೆಲಸ ಈ ಕಂಪನಿಗೆ ಎಷ್ಟು ಮುಖ್ಯ ಅಥವಾ ಅಮುಖ್ಯ ಅನ್ನುವುದು ತಿಳಿಯುತ್ತದೆ.

ಬದುಕಿಗೆ ಬೇರೊಂದು ಅರ್ಥ ನೀಡುವ ಮಕ್ಕಳ ಕಾಯಿಲೆಗಳು- Satya Nadella ಹೇಳಿದ್ದೇನು?

ಮೆಚ್ಚುಗೆಯಿಂದ ಏನಾಗುತ್ತದೆ?
- ನಿಮ್ಮ ಒಂದು ಮೆಚ್ಚುಗೆ, ನಿಮ್ಮ ಉದ್ಯೋಗಿಗಳ ಉತ್ಪಾದಕತೆಯನ್ನು (Productivity) ಸುಧಾರಿಸುತ್ತದೆ. ತಮ್ಮ ಶ್ರಮವನ್ನು ಯಾರೋ ಮೆಚ್ಚುತ್ತಾರೆ ಮತ್ತು ಗುರುತಿಸುತ್ತಾರೆ ಎಂದು ತಿಳಿದಾಗ, ಅವರ ಕೆಲಸವು ಮೌಲ್ಯಯುತವಾಗಿದೆ ಎಂದು ಉದ್ಯೋಗಿಗಳು ಭಾವಿಸುತ್ತಾರೆ. ಮತ್ತು ಇದು ಅವರ ಉತ್ತಮ ಕಾರ್ಯಕ್ಷಮತೆಯನ್ನು ನಿರ್ವಹಿಸಲು ಮತ್ತು ಸುಧಾರಿಸಲು ಅವರನ್ನು ಪ್ರೇರೇಪಿಸುತ್ತದೆ.

- ಮೆಚ್ಚುಗೆಯು ಕೆಲಸದ ಸ್ಥಳದ ನೈತಿಕತೆಯನ್ನು ಸುಧಾರಿಸುತ್ತದೆ. ಉದ್ಯೋಗಿಗೆ ಮೆಚ್ಚುಗೆಯನ್ನು ತೋರಿಸುವುದು ಕೆಲಸದ ಸ್ಥಳದಲ್ಲಿ ಹೆಚ್ಚಿನ ಉತ್ಸಾಹದ ಪರಿಣಾಮವನ್ನು ಉಂಟುಮಾಡುತ್ತದೆ. ಮೆಚ್ಚುಗೆಯನ್ನು ಅನುಭವಿಸುವ ಉದ್ಯೋಗಿ ತಮ್ಮ ಸಹೋದ್ಯೋಗಿಗಳು ಮತ್ತು ಇತರ ತಂಡದ ಸದಸ್ಯರಿಗೆ ಮೆಚ್ಚುಗೆಯನ್ನು ತೋರಿಸುವ ಸಾಧ್ಯತೆ ಹೆಚ್ಚು ಇದೆ.

- ಮೆಚ್ಚುಗೆಯು (Appreciation) ಉದ್ಯೋಗಿಗಳನ್ನು ತೊಡಗಿಸಿಕೊಳ್ಳುತ್ತದೆ. ಉತ್ಪಾದಕತೆಯನ್ನು ಸುಧಾರಿಸುವುದರ ಜೊತೆಗೆ, ಕೆಲಸದ ಸ್ಥಳದಲ್ಲಿ ಮೆಚ್ಚುಗೆಯನ್ನು ತೋರಿಸುವುದು ಉದ್ಯೋಗಿಯ ನಿಶ್ಚಿತತೆ ಮತ್ತು ಬದ್ಧತೆಯನ್ನು ಹೆಚ್ಚಿಸುತ್ತದೆ.

- ಮೆಚ್ಚುಗೆಯು ಸಿಬ್ಬಂದಿ ನಿಷ್ಠೆಯನ್ನು ನಿರ್ಮಿಸಲು ಸಹಾಯ ಮಾಡುತ್ತದೆ. ರಾಬರ್ಟ್ ಹಾಫ್ ಅಧ್ಯಯನದ ಪ್ರಕಾರ 66% ಉದ್ಯೋಗಿಗಳು ಕೆಲಸದ ಸ್ಥಳದಲ್ಲಿ ಮೆಚ್ಚುಗೆಯ ಕೊರತೆಯಿಂದಾಗಿ ತಮ್ಮ ಕೆಲಸವನ್ನು ತೊರೆಯುತ್ತಾರೆ ಎಂದು ತೋರಿಸಿದೆ.

- ಶ್ಲಾಘನೆಯು ಒಬ್ಬ ಉದ್ಯೋಗಿಯು ಹೆಚ್ಚಿನ ಹೊಣೆಯನ್ನು ಹೊತ್ತುಕೊಳ್ಳಲೂ ನೆರವಾಗಬಹುದು.

- ಸಹೋದ್ಯೋಗಿಯ (Colleague) ಕರ್ತವ್ಯ (Duty) ಪರಾಯಣತೆಯನ್ನು ಹೊಗಳುವುದರಿಂದ ನಿಮ್ಮ ಕೆಲಸದಲ್ಲಿ ಅವರು ನೆರವಾಗಬಹುದು. ನಿಮ್ಮ ಗೈರುಹಾಜರಿಯನ್ನು ನಿಭಾಯಿಸಬಹುದು. ಅವರ ಜೊತೆ ನಿಮ್ಮ ಸಾಂಗತ್ಯ ಚೆನ್ನಾಗಿದ್ದು, ಕೆಲಸದ ವಾತಾವರಣ ಉತ್ತಮವಾಗಿರುತ್ತದೆ ಹಾಗೂ ನಿಮ್ಮ ಉತ್ಪಾದಕತೆಯೂ ಹೆಚ್ಚಾಗುತ್ತದೆ.

Being Single Benefits: ಸಿಂಗಲ್ ಆಗಿರೋದು ಒಳ್ಳೇದು

ಹೇಗೆ ಶ್ಲಾಘಿಸಬೇಕು?
- ಒಬ್ಬನನ್ನು ಶ್ಲಾಘಿಸಿದರೆ ಇನ್ನೊಬ್ಬರಿಗೆ ಅಸೂಯೆ ಉಂಟಾಗದಂತೆ ನಿಭಾಯಿಸಬೇಕು.
- ಶ್ಲಾಘನೆ ಅತಿಯಾಯಿತು ಅಥವಾ ಅನಗತ್ಯವಾಗಿತ್ತು ಎಂದು ಹೊಗಳಿಸಿಕೊಂಡವನೂ ಇತರರೂ ಭಾವಿಸಬಾರದು.
- ಶ್ಲಾಘನೆ (Appreciation) ಅವರವರ ಕೆಲಸಕ್ಕೆ ಅನುಗುಣವಾಗಿ ಇರಬೇಕು.

ಹೇಗೆ ಆಚರಿಸಬಹುದು?
- ಎಲ್ಲ ಉದ್ಯೋಗಿಗಳನ್ನೂ ಒಂದೆಡೆ ಸೇರಿಸಿ, ಕೇಕ್‌ ಕಟ್ ಮಾಡಿ, ಸಣ್ಣ ಭಾಷಣ ಮಾಡಿ ಉತ್ತೇಜಿಸಬಹುದು.
- ಆಯಾ ತಿಂಗಳ ಉತ್ತಮ ಕೆಲಸ ಮಾಡಿದವರನ್ನು ಗುರುತಿಸಿ ಸಣ್ಣ ರಿವಾರ್ಡ್ (Reward) ಕೊಡಬಹುದು.
- ಪ್ರತಿ ವಾರ ಅಥವಾ ತಿಂಗಳು ಉತ್ತಮ ಎಂಪ್ಲಾಯಿಯನ್ನು (Best Employee) ನೋಟಿಸ್ ಬೋರ್ಡ್‌ನಲ್ಲಿ ಗುರುತಿಸುವ ಕೆಲಸ ಮಾಡಬಹುದು.

Cheating Partner: ಸಂಗಾತಿಯಿಂದ ಮೋಸ ಹೋದಿರಾ? ಒಂದು ಕ್ಷಣ ನಿಲ್ಲಿ
 

Latest Videos
Follow Us:
Download App:
  • android
  • ios