ಒತ್ತಡ ಒತ್ತಡ, ಸೆಕ್ಸ್ ಮಾಡಲೂ ಮನಸ್ಸಿಲ್ವಂತೆ ಜನರಿಗೆ? ರಿಲ್ಯಾಕ್ಸ್ ಆಗಲು ದಾರಿಯೇ ಇಲ್ವಾ?

ದಾಂಪತ್ಯದಲ್ಲಿ ಸಂಗಾತಿಯನ್ನು ಮತ್ತಷ್ಟು ಹತ್ತಿರಕ್ಕೆ ತರುವ ಕೆಲಸವನ್ನು ಸೆಕ್ಸ್ ಮಾಡುತ್ತದೆ. ಲೈಂಗಿಕ ಜೀವನ ದಾಂಪತ್ಯದ ಸಂತೋಷ ಹೆಚ್ಚಿಸದೆ ಅದು ನಿತ್ಯದ ಬೋರಿಂಗ್ ಕೆಲಸ ಎನ್ನಿಸುವುದಿದೆ. ಅದಕ್ಕೆ ಕಾರಣ ಏನು ಎಂಬ ಪ್ರಶ್ನೆಗೆ ಉತ್ತರ ಇಲ್ಲಿದೆ. 
 

Know How Mental Health Affects Sexual Health roo

ಒಬ್ಬ ವ್ಯಕ್ತಿ ದೈಹಿಕವಾಗಿ ದುರ್ಬಲನಾಗಿದ್ದರೂ ಆತ ಮಾನಸಿಕವಾಗಿ ಗಟ್ಟಿಯಾಗಿದ್ರೆ ಎಂಥ ಕಷ್ಟವನ್ನಾದ್ರೂ ಗೆಲ್ಲಬಲ್ಲ. ಮಾನಸಿಕ ಆರೋಗ್ಯ ಪ್ರತಿಯೊಬ್ಬರಿಗೂ ಬಹಳ ಅಗತ್ಯ. ಮಾನಸಿಕ ಅನಾರೋಗ್ಯ ಲೈಂಗಿಕ ಆರೋಗ್ಯದ ಮೇಲೆ ಪರಿಣಾಮ ಬೀರುತ್ತದೆ. ಸೆಕ್ಸ್, ದಂಪತಿ ಮಧ್ಯೆ ಪ್ರೀತಿ ಮತ್ತು ಬಾಂಧವ್ಯ ಹೆಚ್ಚಿಸುತ್ತದೆ. ಆದ್ರೆ ಮಾನಸಿಕ ಒತ್ತಡ ಹೆಚ್ಚಾದಾಗ ಜನರು ಲೈಂಗಿಕತೆಯಲ್ಲಿ ಆಸಕ್ತಿ ತೋರಿಸೋದಿಲ್ಲ. ಇಬ್ಬರ ಮಧ್ಯೆ ಆರೋಗ್ಯಕರ ಲೈಂಗಿಕ ಜೀವನವಿಲ್ಲ ಎಂದಾಗ ನಿಮ್ಮ ಹಾಗೂ ನಿಮ್ಮ ಸಂಗಾತಿ ಮಧ್ಯೆ ಇರುವ ಸಂಬಂಧ ಹಳಸಲು ಶುರುವಾಗುತ್ತದೆ. ನಾವಿಂದು ಮಾನಸಿಕ ಒತ್ತಡ ಹೇಗೆ ನಿಮ್ಮ ಮೇಲೆ ಪರಿಣಾಮ ಬೀರುತ್ತೆ ಎಂಬುದನ್ನು ಹೇಳ್ತೇವೆ. 

ಲೈಂಗಿಕ (Sexual)  ಜೀವನದ ಮೇಲೆ ಮಾನಸಿಕ ಒತ್ತಡ (Stress) ದ ಪರಿಣಾಮ  : 

ಸಂಗಾತಿ ಜೊತೆ ನಿಕಟತೆ (Intimacy) ಕೊರತೆ : ಬರೀ ದೇಹ ಒಂದಾದ್ರೆ ಸಾಲದು, ಮನಸ್ಸು ಕೂಡ ಒಂದಾಗಬೇಕು. ಇಬ್ಬರ ಮಧ್ಯೆ ಈ ಕನೆಕ್ಷನ್ ಇದ್ದಲ್ಲಿ ಮಾತ್ರ ಜನರು ದೈಹಿಕ ಸಂಪರ್ಕದ ಆನಂದ ಪಡೆಯಲು ಸಾಧ್ಯ. ಒಬ್ಬ ವ್ಯಕ್ತಿಯು ಮಾನಸಿಕವಾಗಿ ಅಸಮತೋಲನಗೊಂಡಾಗ ಅವನು ತನ್ನ ಸಂಗಾತಿಯೊಂದಿಗೆ ಸಂಪರ್ಕ ಸೃಷ್ಟಿಸಲು ಕಷ್ಟವಾಗುತ್ತದೆ. ಈ ಕಾರಣದಿಂದಾಗಿ ದೈಹಿಕ ಸಂಪರ್ಕ ಕಷ್ಟವಾಗುತ್ತದೆ.  

ಕೆಲ ಮಹಿಳೆಯರು ಸಂಗಾತಿಗೆ ಮೋಸ ಮಾಡೋದೇಕೆ? ಇಲ್ಲಿದೆ 8 ಕಾರಣಗಳು

ಲೈಂಗಿಕ ಬಯಕೆ ಕಡಿಮೆ : ಲೈಂಗಿಕ ಅಪಸಾಮಾನ್ಯ ಕ್ರಿಯೆ ಮತ್ತು ಕಡಿಮೆಯಾದ ಲೈಂಗಿಕ ಆಸಕ್ತಿಗೆ ಒತ್ತಡ, ಆತಂಕ ಮತ್ತು ಖಿನ್ನತೆ ಕಾರಣವಾಗಿರಬಹುದು. ಈ ಎಲ್ಲಾ ಮಾನಸಿಕ ಪರಿಸ್ಥಿತಿಗಳಲ್ಲಿ ಕಾರ್ಟಿಸೋಲ್ ಅಂದರೆ ಒತ್ತಡದ ಹಾರ್ಮೋನ್ ಮಟ್ಟವು ದೇಹದಲ್ಲಿ ಹೆಚ್ಚಾಗುತ್ತದೆ. ಇದರಿಂದಾಗಿ ಲೈಂಗಿಕ ಬಯಕೆ ಕಡಿಮೆಯಾಗುತ್ತದೆ. ಇದಲ್ಲದೆ ದೇಹದ ಇತರ ಅನೇಕ ಹಾರ್ಮೋನುಗಳು ಅಸಮತೋಲನಗೊಳ್ಳುತ್ತವೆ ಮತ್ತು ದೇಹವು ಸಾಮಾನ್ಯಕ್ಕಿಂತ ವಿಭಿನ್ನವಾಗಿ ಕಾರ್ಯನಿರ್ವಹಿಸಲು ಪ್ರಾರಂಭಿಸುತ್ತದೆ.

ಕಡಿಮೆಯಾಗುವ ಸೆಕ್ಸ್ ಕಾರ್ಯಕ್ಷಮತೆ : ಖಿನ್ನತೆ ಮತ್ತು ಆತಂಕವು ಲೈಂಗಿಕ ಸಮಯದಲ್ಲಿ ಅತಿಯಾದ ಚಿಂತೆಯನ್ನು ಉಂಟುಮಾಡಬಹುದು, ಇದು ವ್ಯಕ್ತಿಯ ಲೈಂಗಿಕ ಕಾರ್ಯಕ್ಷಮತೆಯನ್ನು ದುರ್ಬಲಗೊಳಿಸುತ್ತದೆ ಮತ್ತು ಲೈಂಗಿಕ ಬಯಕೆಯನ್ನು ಕಡಿಮೆ ಮಾಡುತ್ತದೆ. ಒಬ್ಬ ವ್ಯಕ್ತಿ ಚಿಂತೆ ಮಾಡ್ತಿರುವಾಗ ಅವನ ಮನಸ್ಸು ಶಾಂತವಾಗಿರುವುದಿಲ್ಲ. ಸೆಕ್ಸ್ ಬದಲು ಆತನ ಗಮನ ಬೇರೆಡೆ ಹೋಗುವ ಕಾರಣ ಕಾರ್ಯಕ್ಷಮತೆ ಕಡಿಮೆ ಆಗುತ್ತದೆ.

ಲೈಂಗಿಕತೆ ಒಂದು ಹೊರೆ : ಖಿನ್ನತೆ, ಲೈಂಗಿಕತೆಯಂತಹ ಆಹ್ಲಾದಕರ ಚಟುವಟಿಕೆಯಲ್ಲಿ ಆಸಕ್ತಿ ಕಡಿಮೆ ಮಾಡುತ್ತದೆ. ಲೈಂಗಿಕತೆಯು ಒಂದು ಹೊರೆಯಂತೆ ಭಾಸವಾಗುತ್ತದೆ. ಅನೇಕ ಜನರು ಒತ್ತಡದಲ್ಲಿ ಸೆಕ್ಸ್ ಗೆ ಮುಂದಾಗ್ತಾರೆ. ನಂತ್ರ ತಮ್ಮ ಸಂಗಾತಿಯನ್ನು ದೂಷಿಸಲು ಶುರು ಮಾಡ್ತಾರೆ. ಆಯಾಸ, ನಿದ್ರೆ ಭಂಗ ಕೂಡ ನಿಮ್ಮ ಒತ್ತಡ ಹೆಚ್ಚು ಮಾಡಿ, ಲೈಂಗಿಕ ಆಸಕ್ತಿ ಕಡಿಮೆ ಮಾಡುತ್ತದೆ.

ಒತ್ತಡದಿಂದ ಯೋನಿ ಶುಷ್ಕತೆ (Vaginal Dryness) : ಒತ್ತಡದಲ್ಲಿ ಲೈಂಗಿಕ ಚಟುವಟಿಕೆ ನಡೆಸಲು ಮುಂದಾದಾಗ ಮಹಿಳೆಯರು ಪ್ರಚೋದನೆಗೆ ಒಳಗಾಗುವುದಿಲ್ಲ. ನೈಸರ್ಗಿಕ ಲೂಬ್ರಿಕಂಟ್‌ಗಳ ಕೊರತೆಯಿಂದಾಗಿ ಯೋನಿ ಶುಷ್ಕತೆ ಪರಿಣಾಮ ಬೀರಬಹುದು. 

ಪರಾಕಾಷ್ಠೆಗೆ ಸಮಸ್ಯೆ : ಪರಾಕಾಷ್ಠೆಗೆ, ನೈಸರ್ಗಿಕ ಲೂಬ್ರಿಕಂಟ್‌ಗಳನ್ನು (Natural Libricants) ಬಳಸುವುದು ಮತ್ತು ಲೈಂಗಿಕ ಚಟುವಟಿಕೆಗಳ ಮೇಲೆ ಕೇಂದ್ರೀಕರಿಸುವುದು ಬಹಳ ಮುಖ್ಯ. ಆದರೆ ಒತ್ತಡದಿಂದಾಗಿ ಈ ಎರಡೂ ಅಂಶಗಳು ಪರಿಣಾಮ ಬೀರುತ್ತವೆ. ಆಗ ಪರಾಕಾಷ್ಠೆ ಸುಲಭವಾಗಿ ಪ್ರಾಪ್ತಿಯಾಗೋದಿಲ್ಲ. 

ಔಷಧಿ : ಮಾನಸಿಕ ಒತ್ತಡಕ್ಕೆ (Mental Stress) ಒಳಗಾಗುವ ಜನರು ಖಿನ್ನತೆ ನಿರೋಧಕ ಮಾತ್ರೆಗಳ ಸೇವನೆ ಮಾಡಿದ್ರೆ ಅದು ಕೂಡ ಕಾಮಾಸಕ್ತಿಯನ್ನು ಕಡಿಮೆ ಮಾಡುತ್ತದೆ. 

ಮಗಳು, ಮೊಮ್ಮಗಳಿಗೆ ಡಬಲ್ ಬೆಡ್ ರೂಮ್ ಆಯ್ತು ಗ್ಯಾರೇಜ್, ಅಮೆರಿಕದಲ್ಲೀಗ ಇದೇ ಸುದ್ದಿ

ಆರೋಗ್ಯಕರ ಲೈಂಗಿಕ ಜೀವನವನ್ನು (Happy Sexual Life) ಕಾಪಾಡಿಕೊಳ್ಳಲು ಭಾವನಾತ್ಮಕ ನಿಕಟತೆ (Emotional Bonding) ಅಷ್ಟೇ ಮುಖ್ಯ. ಮಾನಸಿಕ ಆರೋಗ್ಯ ಸಮಸ್ಯೆಗಳು (Mental Health Issues) ಭಾವನಾತ್ಮಕ ಪ್ರತ್ಯೇಕತೆ ಮತ್ತು ಸಂವಹನ ಸಮಸ್ಯೆಗಳನ್ನು ಉಂಟುಮಾಡುತ್ತದೆ.  
 

Latest Videos
Follow Us:
Download App:
  • android
  • ios