Asianet Suvarna News Asianet Suvarna News

ಈ ಬಾಡಿ ಲ್ಯಾಂಗ್ವೇಜ್ ಗಮನಿಸಿದರೆ ಮಕ್ಕಳು ಸುಳ್ಳು ಹೇಳೋದು ಗೊತ್ತಾಗುತ್ತೆ!

ಹದಿಹರೆಯದ ಮಕ್ಕಳನ್ನು ಅರ್ಥ ಮಾಡಿಕೊಳ್ಳೋದು ಸುಲಭವಲ್ಲ. ಈ ವಯಸ್ಸಿನಲ್ಲಿ ಮಕ್ಕಳು ಹಕ್ಕಿಯಂತೆ ಹಾರಲು ಬಯಸ್ತಾರೆ. ಅದಕ್ಕೆ ಅಡ್ಡಿಯಾದಾಗ ಸುಳ್ಳು ಹೇಳ್ತಾರೆ. ಮಕ್ಕಳು ಸುಳ್ಳು ಹೇಳ್ತಿದ್ದಾರೆ ಎಂಬುದನ್ನು ಪಾಲಕರು ಸುಲಭವಾಗಿ ಕಂಡು ಹಿಡಿಯಬಹುದು. 
 

Kids lie many times but parenting tips to detect it
Author
Bangalore, First Published Jul 19, 2022, 3:58 PM IST

ಚಿಕ್ಕ ಮಕ್ಕಳಿಗೆ ಸರಿ – ತಪ್ಪಿನ ಅರಿವಿರುವುದಿಲ್ಲ. ಇದೇ ಕಾರಣಕ್ಕೆ ಬಹುತೇಕ ಮಕ್ಕಳು ಸುಳ್ಳು ಹೇಳ್ತಾರೆ. ಮಕ್ಕಳು ಬಿಡು ಸುಳ್ಳು ಹೇಳ್ತಾರೆ ಅಂತಾ ಪಾಲಕರು ಅದನ್ನು ನಿರ್ಲಕ್ಷ್ಯ ಮಾಡ್ತಾರೆ. ಆದ್ರೆ ಇದೇ ಪ್ರವೃತ್ತಿ ಮಕ್ಕಳು ದೊಡ್ಡವರಾಗ್ತಿದ್ದಂತೆ ಮುಂದುವರೆಯುತ್ತದೆ. ಮಕ್ಕಳು ದೊಡ್ಡವರಾಗ್ತಿದ್ದಂತೆ ಅವರಿಗೆ ಸರಿ – ತಪ್ಪುಗಳ ಅರಿವಿರುತ್ತದೆ. ಉದ್ದೇಶಪೂರ್ವಕವಾಗಿಯೇ ಅವರು ಪಾಲಕರಿಗೆ ಸುಳ್ಳು ಹೇಳ್ತಾರೆ. ಗಿಡವಾಗಿ ಬಗ್ಗದ್ದು ಮರವಾಗಿ ಬಗ್ಗಿತೇ ಎಂಬ ಗಾದೆಯಂತೆ ಮಕ್ಕಳಿರುವಾಗ್ಲೇ ಸುಳ್ಳು ಹೇಳುವ ಅಭ್ಯಾಸ ಬಿಡಿಸಿದ್ರೆ ಒಳ್ಳೆಯದು. ಹದಿಹರೆಯದ ವಯಸ್ಸಿನಲ್ಲೂ ಮಕ್ಕಳು ಸುಳ್ಳು ಹೇಳುವ ಅಭ್ಯಾಸವನ್ನು ಬಿಡದಿದ್ದರೆ ಇದು ಭವಿಷ್ಯಕ್ಕೆ ಅಪಾಯಕಾರಿಯಾಗ್ಬಹುದು. ಹದಿಹರೆಯದಲ್ಲಿ ಮಕ್ಕಳು ಸ್ವಾತಂತ್ರ್ಯ ಮತ್ತು ಸ್ವಾವಲಂಬನೆ ಬಯಸ್ತಾರೆ. ಅದು ಸಿಗದೆ ಹೋದಾಗ ಅಥವಾ ತಮ್ಮ ಸಂತೋಷಕ್ಕೆ ಪಾಲಕರು ಅಡ್ಡಿಯಾಗ್ತಿದ್ದಾರೆ ಎಂಬುದು ತಿಳಿದಾಗ ಅವರು ಸುಳ್ಳನ್ನು ಆಶ್ರಯಿಸುತ್ತಾರೆ. ಹದಿಹರೆಯದ ಮಕ್ಕಳು ಮನೆಯಲ್ಲಿದ್ದಾರೆಂದ್ರೆ ಅವರ ಸುಳ್ಳನ್ನು ಕಂಡು ಹಿಡಿಯುವ ಶಕ್ತಿ ಪಾಲಕರಿಗಿರಬೇಕು. ಮಕ್ಕಳು ಸುಳ್ಳು ಹೇಳ್ತಿದ್ದಾರೆ ಎಂಬುದು ಗೊತ್ತಾದ್ಮೇಲೆ ಅದನ್ನು ಬುದ್ಧಿವಂತಿಕೆಯಿಂದ ಬಿಡಿಸ್ಬೇಕು. ಕಿರುಚಾಡಿ, ಕೂಗಾಡಿದ್ರೆ ಮಕ್ಕಳು ಸುಳ್ಳು ಹೇಳೋದನ್ನು ಬಿಡೋದಿಲ್ಲ. ಪಾಲಕರು ಮಕ್ಕಳ ಸುಳ್ಳು ಹೇಳುವ ಅಭ್ಯಾಸ ಹೇಗೆ ಬಿಡಿಸಬೇಕು ಎಂಬುದನ್ನು ನಾವು ಹೇಳ್ತೇವೆ.

ಕಣ್ಣ (Eye) ಲ್ಲಿ ಕಣ್ಣಿಟ್ಟು ಮಾತನಾಡುವ ಸಾಮರ್ಥ್ಯ : ವ್ಯಕ್ತಿ ಸುಳ್ಳು (Lie ) ಹೇಳ್ತಿದ್ದಾನೆ ಎಂಬುದನ್ನು ಆತನ ಕಣ್ಣುಗಳ ಮೂಲಕವೇ ಕಂಡು ಹಿಡಿಯಬಹುದು. ಸಾಮಾನ್ಯವಾಗಿ ಸುಳ್ಳು ಹೇಳುವ ವ್ಯಕ್ತಿ ಕಣ್ಣಲ್ಲಿ ಕಣ್ಣಿಟ್ಟು ನೋಡೋದಿಲ್ಲ.  ನಿಮ್ಮ ಮಕ್ಕಳು ನಿಮ್ಮ ಕಣ್ಣಲ್ಲಿ ಕಣ್ಣಿಟ್ಟು ಮಾತನಾಡ್ತಿಲ್ಲವೆಂದ್ರೆ, ನಿಮ್ಮ ಕಣ್ಣಿನಿಂದ ತಪ್ಪಿಸಿಕೊಳ್ಳುವ ಪ್ರಯತ್ನ ಮಾಡ್ತಿದ್ದಾರೆ ಅಂದ್ರೆ  ಅವರು ಸುಳ್ಳು ಹೇಳ್ತಿದ್ದಾರೆ ಎಂದು ಅರ್ಥ ಮಾಡಿಕೊಳ್ಳಿ. 

ಬಾಡಿ ಲಾಂಗ್ವೇಜ್ (Body Language) : ಮಕ್ಕಳು ತಮ್ಮ ಬಾಯಿಯನ್ನು ನಿಯಂತ್ರಿಸಬಹುದು ಆದರೆ ಅವರ ಸುಳ್ಳನ್ನು ಅವರ ಬಾಡಿ ಲಾಂಗ್ವೇಜ್ ನಿಂದಲೂ ಕಂಡು ಹಿಡಿಯಬಹುದು. ಕೆಲವೊಮ್ಮೆ ಮಕ್ಕಳು ಸುಳ್ಳು ಹೇಳುವಾಗ ಕೈಗಳನ್ನು ಹಿಸುಕಿಕೊಳ್ತಾರೆ. ಬೆರಳುಗಳನ್ನು ತಿಕ್ಕಿಕೊಳ್ತಾರೆ. ತಲೆಯನ್ನು ಆ ಕಡೆ ಈ ಕಡೆ ಆಡಿಸ್ತಾರೆ. ಅವರ ವರ್ತನೆ ಚಿತ್ರ ವಿಚಿತ್ರವಾಗಿರುತ್ತದೆ. ಪ್ರತಿ ದಿನದಂತೆ ಅವರ ನಡವಳಿಕೆ ಇರೋದಿಲ್ಲ. ಆಗ ನೀವು ಅವರ ಸುಳ್ಳನ್ನು ಆರಾಮವಾಗಿ ಪತ್ತೆ ಮಾಡ್ಬಹುದು. 

Parenting Tips: ಮಕ್ಕಳ ಆತ್ಮ ವಿಶ್ವಾಸ ಹೆಚ್ಚಾಗ್ಬೇಕೆಂದ್ರೆ ಪಾಲಕರು ಮಾಡ್ಬೇಕಾಗಿದ್ದಿಷ್ಟು!

ಮುಖದಲ್ಲಿ ಬದಲಾವಣೆ : ಸುಳ್ಳು ಹೇಳುವಾಗ ಮುಖದಲ್ಲಿ ಹಠಾತ್ ಭಯ ಅಥವಾ ಗಿಲ್ಟ್ ಕಾಣಿಸಿಕೊಳ್ಳುತ್ತದೆ. ಮಕ್ಕಳು ಸುಳ್ಳು ಹೇಳುವಾಗ ಅವರ ಮುಖದ ಭಾವನೆ ಬದಲಾಗಿರುತ್ತದೆ. ಅದನ್ನು ಅವರಿಂದ ನಿಯಂತ್ರಿಸಲು ಸಾಧ್ಯವಾಗುವುದಿಲ್ಲ. ಕೆಲ ಪೋಷಕರು ಮಕ್ಕಳ ಮುಖ ನೋಡಿಯೇ ಅವರ ಸುಳ್ಳು ಪತ್ತೆ ಮಾಡ್ತಾರೆ. 

ಕಣ್ಣು ಮಿಟುಕಿಸುವುದು : ಮಗು ಸುಳ್ಳು ಹೇಳ್ತಿದ್ದರೆ ಆಗಾಗ್ಗೆ ಅವರ ಕಣ್ಣು ರೆಪ್ಪೆಗಳು ಪದೇ ಪದೇ ಮಿಟುಕುತ್ತಿರುತ್ತವೆ. ಅವರ ಕಣ್ಣಿನಲ್ಲಿ ಭಯ ಇರುತ್ತದೆ. ಕಣ್ಣನ್ನು ಕ್ಷಿಪ್ರವಾಗಿ ಮಿಟುಕಿಸುವುದು ಕೂಡ ಸುಳ್ಳಿನ ಸಂಕೇತವಾಗಿರಬಹುದು. ಸಾಮಾನ್ಯವಾಗಿ ಜನರು ಸುಳ್ಳು ಹೇಳುವಾಗ ಒತ್ತಡಕ್ಕೆ ಒಳಗಾಗ್ತಾರೆ. ಅಪರಾಧಿ ಭಾವ ಅವರಲ್ಲಿರುತ್ತದೆ. ಇದು ಕಣ್ಣಿನಲ್ಲಿ ಸ್ಪಷ್ಟವಾಗಿ ಕಾಣುತ್ತದೆ.

ಮಕ್ಕಳಿಗೆ ಓದಿದ್ದು ನೆನಪಿರಬೇಕಂದ್ರೆ ಪೋಷಕರೂ ಹೀಗ್ ಮಾಡಬೇಕು!

ಧ್ವನಿ ಬದಲಾವಣೆ : ಹದಿಹರೆಯದಲ್ಲಿ ಮಕ್ಕಳು ಸುಳ್ಳು ಹೇಳ್ತಿದ್ದಾರೆ ಎಂಬುದನ್ನು ನೀವು ಅವರ ಧ್ವನಿಯಿಂದ ಕಂಡು ಹಿಡಿಯಬಹುದು.  ಸುಳ್ಳು ಹೇಳುವ ಮಕ್ಕಳು ಅದು ಗೊತ್ತಾಗದಿರಲಿ ಎನ್ನುವ ಕಾರಣಕ್ಕೆ ಧ್ವನಿ ಏರಿಸಿ ಮಾತನಾಡ್ತಾರೆ. ಪ್ರತಿ ದಿನದಂತೆ ಸಹಜ ಧ್ವನಿಯಲ್ಲಿ ಅವರು ಮಾತನಾಡುವುದಿಲ್ಲ. ಅವರ ಬದಲಾದ ಧ್ವನಿಯ ಮೂಲಕ ನೀವು ಸುಲಭವಾಗಿ ಅವರ ಸುಳ್ಳು ಪತ್ತೆ ಮಾಡ್ಬಹುದು. ಕೆಲವರ ಧ್ವನಿ ನಡುಗುತ್ತಿರುತ್ತದೆ. ಆಗ ಅವರು ಒತ್ತಡಕ್ಕೊಳಗಾಗಿದ್ದಾರೆ ಎಂಬುದನ್ನು ನೀವು ತಿಳಿಯಬಹುದು. 
 

Follow Us:
Download App:
  • android
  • ios