ಮಕ್ಕಳಿಗೆ ಓದಿದ್ದು ನೆನಪಿರಬೇಕಂದ್ರೆ ಪೋಷಕರೂ ಹೀಗ್ ಮಾಡಬೇಕು!
ಎಷ್ಟೇ ಓದಿದ್ರೂ ಪರೀಕ್ಷೆಯಲ್ಲಿ ನೆನಪಿರೋದಿಲ್ಲ. ಈಗ ಓದಿದ್ದು ಅರೆ ಕ್ಷಣ ಮರೆಯುತ್ತೆ. ಇವರಿಗೆ ವಿದ್ಯೆ ಹತ್ತೋದಿಲ್ಲ ಅಂತಾ ಪಾಲಕರು ಮಕ್ಕಳನ್ನು ಬೈಯ್ಯುತ್ತಿರುತ್ತಾರೆ. ಮಕ್ಕಳ ಮೇಲೆ ರೇಗಾಡುವ ಬದಲು ಕೆಲ ಟ್ರಿಕ್ಸ್ ಹೇಳಿಕೊಟ್ಟರೆ ನಿಮ್ಮ ಮಕ್ಕಳಿಗೂ ಎಲ್ಲ ನೆನಪಿರುತ್ತೆ.
ಎಲ್ಲ ಮಕ್ಕಳು ಬುದ್ಧಿಮಟ್ಟ ಒಂದೇ ರೀತಿ ಇರೋದಿಲ್ಲ. ಕೆಲ ಮಕ್ಕಳಿಗೆ ಒಮ್ಮೆ ಶಾಲೆಯಲ್ಲಿ ಟೀಚರ್ ಹೇಳಿದ ಪಾಠ ಸಾಕಾಗುತ್ತದೆ. ಮತ್ತೆ ಕೆಲ ಮಕ್ಕಳಿಗೆ ಒಂದೆರಡು ಬಾರಿ ಓದಿದ್ರೆ ಸಾಕು. ಇನ್ನು ಕೆಲ ಮಕ್ಕಳಿಗೆ ಎಷ್ಟು ಓದಿದ್ರೂ, ಓದಿದ್ದು ತಲೆಯಲ್ಲಿರೋದಿಲ್ಲ. ಪಠ್ಯದ ವಿಷ್ಯ ಬಿಟ್ಟರೆ ಮತ್ತೆಲ್ಲ ವಿಷ್ಯ ಅವರಿಗೆ ನೆನಪಿರುತ್ತದೆ. ಕಣ್ಣು ಮುಂದೆ ನಡೆದದ್ದನ್ನು ಚಾಚು ತಪ್ಪದೆ ಹೇಳ್ತಾರೆ. ಆದ್ರೆ ಪುಸ್ತಕದಲ್ಲಿರುವ ವಿಷ್ಯವನ್ನು ಸ್ವಲ್ಪ ದಿನದಲ್ಲೇ ಮರೆತು ಬಿಡ್ತಾರೆ. ಹಾಗಂತ ಈ ಮಕ್ಕಳು ದಡ್ಡರು ಎಂದಲ್ಲ. ಈ ಮಕ್ಕಳಿಗೆ ಪಾಲಕರು ಬೈದು ಪ್ರಯೋಜನವಿಲ್ಲ. ಮಕ್ಕಳಿಗೆ ವಿದ್ಯೆ ನೆನಪಿರುವಂತೆ ಮಾಡಲು ಪಾಲಕರು ಕೆಲ ಟ್ರಿಕ್ಸ್ ಬಳಸಬೇಕಾಗುತ್ತದೆ. ಮಕ್ಕಳು ವಿದ್ಯಾಭ್ಯಾಸದಲ್ಲಿ ಹಿಂದೆ ಬಿದ್ರೆ ಅವರ ಆತ್ಮವಿಶ್ವಾಸ ಕಡಿಮೆಯಾಗುತ್ತದೆ. ಅವರು ಓದಿನಲ್ಲಿ ಆಸಕ್ತಿ ಕಳೆದುಕೊಳ್ತಾರೆ. ಈಗಿನ ಸ್ಪರ್ಧಾತ್ಮಕ ಯುಗದಲ್ಲಿ ಮಕ್ಕಳಿಗೆ ಓದು ಬಹಳ ಮುಖ್ಯ. ಶಾಲೆಯಲ್ಲಿ ಒಳ್ಳೆಯ ಅಂಕ ಪಡೆಯುವುದು ಅನಿವಾರ್ಯ. ಹಾಗಾಗಿ ಮಕ್ಕಳ ಜ್ಞಾಪಕ ಶಕ್ತಿ ಹೆಚ್ಚಿಸಲು ಪಾಲಕರು ಕೆಲ ನಿಯಮಗಳನ್ನು ಪಾಲನೆ ಮಾಡ್ಬೇಕು. ಆಗ್ಲೇ ನಿಮ್ಮ ಮಕ್ಕಳು ಓದಿದ್ದನ್ನು ನೆನಪಿಟ್ಟುಕೊಳ್ಳಲು ಸಾಧ್ಯ.
ಮಕ್ಕಳ ಜ್ಞಾಪಕ ಶಕ್ತಿ (Memory Power) ಯನ್ನು ಹೀಗೆ ಹೆಚ್ಚಿಸಿ :
ಕಂಠಪಾಠದ ಮಾಡಿಸ್ಬೇಡಿ : ಅನೇಕ ಪಾಲಕರಿಗೆ ಪರೀಕ್ಷೆ (Test) ಯಲ್ಲಿ ಬರುವ ಫಲಿತಾಂಶವೇ ಮುಖ್ಯವಾಗಿರುತ್ತದೆ. ಹಾಗಾಗಿ ವಿಷ್ಯವನ್ನು ಕಂಠಪಾಠ ಮಾಡುವಂತೆ ಸಲಹೆ ನೀಡ್ತಾರೆ. ಇದು ತಪ್ಪು. ಮಕ್ಕಳು (Children ) ಕಂಠಪಾಠ ಮಾಡಿದ ವಿಷ್ಯ ತುಂಬಾ ಸಮಯ ನೆನಪಿರುವುದಿಲ್ಲ. ಮಕ್ಕಳಿಗೆ ವಿಷ್ಯವನ್ನು ಅರ್ಥ ಮಾಡಿಸಬೇಕು. ಯಾವುದೇ ವಿಷ್ಯ ಸರಿಯಾಗಿ ಅರ್ಥವಾದ್ರೆ ಮಕ್ಕಳು ಅದನ್ನು ಎಂದಿಗೂ ಮರೆಯುವುದಿಲ್ಲ ಎಂಬುದನ್ನು ಪಾಲಕರು ನೆನಪಿನಲ್ಲಿಟ್ಟುಕೊಳ್ಳಬೇಕು.
ಉದಾಹರಣೆ ಸಮೇತ ವಿವರಿಸಿ : ಮಕ್ಕಳಿಗೆ ಪುಸ್ತಕದಲ್ಲಿರುವ ವಿಷ್ಯವನ್ನು ಹಾಗೇ ಅರ್ಥಮಾಡಿಸಲು ಪ್ರಯತ್ನಿಸಿದ್ರೆ ಕಷ್ಟವಾಗುತ್ತದೆ. ನೀವು ವಿಷ್ಯವನ್ನು ನಮ್ಮ ದಿನನಿತ್ಯದ ಘಟನೆ ಜೊತೆ ಹೋಲಿಕೆ ಮಾಡ್ಬೇಕು. ಅದ್ರ ಉದಾಹರಣೆಯನ್ನು ಮಕ್ಕಳಿಗೆ ನೀಡ್ಬೇಕು. ಮಕ್ಕಳಿಗೆ ಇಷ್ಟವಾಗುವ ವಿಷ್ಯದ ಮೂಲಕವೇ ಅವರಿಗೆ ಕಠಿಣವಾಗುವ ಸಬ್ಜೆಕ್ಟ್ ಕಲಿಸ್ಬೇಕು.
Parenting Tips: ಖಾಸಗಿ ಅಂಗ ಸ್ಪರ್ಶಿಸುವ ಮಕ್ಕಳ ಹವ್ಯಾಸ ಹೀಗೆ ಓಡಿಸಿ
ಆಟದ ಮೂಲಕ ಪಾಠ : ಮಕ್ಕಳಿಗೆ ಆಟವೆಂದ್ರೆ ಇಷ್ಟ. ಹಾಗಾಗಿ ನೀವು ಆಟದ ಮೂಲಕ ಪಾಠ ಹೇಳುವ ವಿಧಾನ ಬಳಸಬಹುದು. ಯಾವುದೇ ಲೆಕ್ಕವನ್ನು ನೀವು ಹೇಳುವಾಗ ಅದನ್ನು ಆಟದ ರೀತಿಯಲ್ಲಿ ಬಳಸಿಕೊಳ್ಳಿ. ಕೂಡಿಸುವ ಗಣಿತ, ಕಳೆಯುವ ಗಣಿತ ಬಂದಾಗ ನೀವು ಅಂಗಡಿ – ಗ್ರಾಹಕನ ಆಟದ ಮೂಲಕ ಅವರಿಗೆ ಕೂಡಿ, ಕಳೆಯುವುದನ್ನು ಹೇಳಬಹುದು. ಇದ್ರಿಂದ ಮಗುವಿಗೆ ಬೇಗ ವಿಷ್ಯ ಮನದಟ್ಟಾಗುತ್ತದೆ. ಹಾಗೆ ಕಲಿಕೆಯಲ್ಲಿ ಸೋಮಾರಿತನ ಬರುವುದಿಲ್ಲ. ಆಟವಾಡ್ತಾ ಮಗು ಎಲ್ಲವನ್ನೂ ಕಲಿತಿರುತ್ತದೆ.
ಜ್ಞಾಪಕ ಶಕ್ತಿ ಹೆಚ್ಚಿಸಲು ನೆರವಾಗುತ್ತೆ ಸಂಗೀತ : ಸಾಮಾನ್ಯವಾಗಿ ಮಕ್ಕಳು ಸಿನಿಮಾ ಹಾಡುಗಳನ್ನು ಬೇಗ ಹೇಳ್ತಾರೆ. ಒಂದು ಅಕ್ಷರ ತಪ್ಪಿಲ್ಲದೆ ನಿಮಗೆ ಒಪ್ಪಿಸ್ತಾರೆ. ಹಾಗಾಗಿ ನೀವು ಮಕ್ಕಳ ಜ್ಞಾಪಕ ಶಕ್ತಿ ಹೆಚ್ಚಿಸಲು ಸಂಗೀತದ ಸಹಾಯ ಪಡೆಯಬಹುದು. ಕನ್ನಡ, ಇಂಗ್ಲೀಷ್, ಹಿಂದಿ, ವಿಜ್ಞಾನದ ವಿಷ್ಯವನ್ನು ಸಂಗೀತದ ರೀತಿಯಲ್ಲಿ ನೆನಪಿಟ್ಟುಕೊಳ್ಳುವಂತೆ ಅವರಿಗೆ ಸಹಾಯ ಮಾಡಬೇಕು. ಮಕ್ಕಳು ಆ ಹಾಡನ್ನು ಮತ್ತೆ ಮತ್ತೆ ಗುನುಗುತ್ತಾರೆ. ಆಗ ವಿಷ್ಯ ನೆನಪಿರುತ್ತದೆ.
ಮಕ್ಕಳಿಗೆ ಇಂಥಾ ಆಹಾರ ಕೊಟ್ರೆ ಸಿಕ್ಕಾಪಟ್ಟೆ ಬ್ರಿಲಿಯೆಂಟ್ ಆಗ್ತಾರೆ
ರಿವಿಜನ್ : ಪರೀಕ್ಷೆ ಹತ್ತಿರ ಬರ್ತಿದ್ದಂತೆ ಮಕ್ಕಳಿಗೆ ಓದು ಅಂದ್ರೆ ಅದು ಪ್ರಯೋಜನವಿಲ್ಲ. ಆಯಾ ದಿನದ ಪಾಠವನ್ನು ಆಯಾ ದಿನ ಓದಲು ಹೇಳ್ಬೇಕು. ಹಾಗೆಯೇ ಆಯಾ ದಿನದ ಹೋಮ್ ವರ್ಕ್ ಮುಗಿಸಬೇಕು. ನಂತ್ರ ಪಾಲಕರಾದವರು ಆಯಾ ದಿನದ ಪಾಠವನ್ನು ರಿವಿಜನ್ ಮಾಡಿಸ್ಬೇಕು. ಹಾಗೆ ಆಗಾಗ ಮಕ್ಕಳಿಗೆ ಕಠಿಣವೆನಿಸುವ ವಿಷ್ಯವನ್ನು ಕೇಳ್ತಿರಬೇಕು. ರಸ್ತೆಯಲ್ಲಿ ಹೋಗುವಾಗ, ಊಟ ಮಾಡುವಾಗ ಅವರಿಗೆ ವಿಷ್ಯವನ್ನು ನೆನಪಿಸುತ್ತಿರಬೇಕು.