ಇಂದಿನ ದಿನಗಳಲ್ಲಿ ನಮ್ಮ ಆತ್ಮೀಯರು ಯಾರಾದರೂ ದೂರದಲ್ಲಿದ್ದರೆ ಜಾಸ್ತಿ ಚಿಂತೆ ಮಾಡಲ್ಲ. ಅಂಗೈಯಲ್ಲಿ ಫೋನ್ ಇಂಟರ್‌ನೆಟ್ ಎಲ್ಲವೂ ಇರುವುದರಿಂದ ಕ್ಷಣದಲ್ಲಿ ಅವರಿಗೆ ಕರೆ ಮಾಡಿ ಮಾತನಾಡಿ ಕ್ಷೇಮ ಸಮಾಚಾರ ವಿಚಾರಿಸಿಕೊಳ್ಳುತ್ತೇವೆ. ಆದರೆ ಈ ಅಕ್ಕ ತಮ್ಮನ ಬಾಂಧವ್ಯ ಇನ್ನೊಂದು ಹಂತ ತಲುಪಿದೆ.
ಕೇರಳ: ಇಂದಿನ ದಿನಗಳಲ್ಲಿ ನಮ್ಮ ಆತ್ಮೀಯರು ಯಾರಾದರೂ ದೂರದಲ್ಲಿದ್ದರೆ ಜಾಸ್ತಿ ಚಿಂತೆ ಮಾಡಲ್ಲ. ಅಂಗೈಯಲ್ಲಿ ಫೋನ್ ಇಂಟರ್‌ನೆಟ್ ಎಲ್ಲವೂ ಇರುವುದರಿಂದ ಕ್ಷಣದಲ್ಲಿ ಅವರಿಗೆ ಕರೆ ಮಾಡಿ ಮಾತನಾಡಿ ಕ್ಷೇಮ ಸಮಾಚಾರ ವಿಚಾರಿಸಿಕೊಳ್ಳುತ್ತೇವೆ. ಆದರೆ ಈ ಅಕ್ಕ ತಮ್ಮನ ಬಾಂಧವ್ಯ ಇನ್ನೊಂದು ಹಂತ ತಲುಪಿದೆ.
ಇತ್ತೀಚೆಗೆ ನಡೆದ ‘ಸೋದರರ ದಿನಾಚರಣೆ’ ಶುಭಾಶಯಗಳನ್ನು ಹೇಳಲು, ದೂರದ ಊರಿನಲ್ಲಿ ಇದ್ದ ಸೋದರಿ ಮರೆತಳು. ಇದರಿಂದ ಸೋದರ ಸಿಟ್ಟಿಗೆದ್ದು ಆಕೆಯನ್ನು ವಾಟ್ಸಾಪ್‌ನಲ್ಲಿ ಬ್ಲಾಕ್ ಮಾಡಿದ. ಆಗ ತಪ್ಪಿನ ಪ್ರಾಯಶ್ಚಿತ್ತಕ್ಕಾಗಿ ಸೋದರಿ ಕೃಷ್ಣಪ್ರಿಯಾ ಮಾಡಿದ್ದೇನು ಗೊತ್ತೇ? ಸುಮಾರು ಪೇಪರ್ ರೋಲ್ ತಂದು ಅದರ ತುಂಬೆಲ್ಲ ಸೋದರ ಕೃಷ್ಣಪ್ರಸಾದನಿಗೆ ಸೋದರರ ದಿನಾಚರಣೆ ಶುಭಾಶಯಗಳು’ ಎಂದು ಬರೆದು ಪೋಸ್ಟ್ ಮಾಡಿದ್ದಾಳೆ. ಅಂದಹಾಗೆ ಪೇಪರ್ ರೋಲ್ ಉದ್ದ 434 ಮೀ. ಹಾಗೂ ಅದನ್ನು ಡಬ್ಬದಲ್ಲಿಟ್ಟು ತುಂಬಿದ ಲಕೋಟೆಯ ಭಾರವೇ 5 ಕೇಜಿ ಆಗಿತ್ತಂತೆ ಪತ್ರದ ಬಳಿಕ ಅಕ್ಕ-ತಮ್ಮ ಮತ್ತೆ ಒಂದಾಗಿದ್ದಾರಂತೆ ಈ ಪತ್ರ ಇದೀಗ ವಿಶ್ವ ದಾಖಲೆಯಾಗುವ ಹಂತದಲ್ಲಿದೆ.
ಅನೂಪ್ ನನಗೂ 7 ಗಂಟೆ ಬಳಿಕ ಸಂಬಂಧವಿಲ್ಲ; ಅವ್ರ ಹೆಂಡ್ತಿ ನನ್ನ ದತ್ತು ಸಹೋದರಿ: ಸುದೀಪ್
ಎಂತಹ ವಿಚಿತ್ರ ಅಲ್ವಾ. ಅಂದಹಾಗೆ ಈ ರೀತಿ ಇಷ್ಟುದ ಪತ್ರ ಬರೆದಿದ್ದು, ಕೇರಳ ಮೂಲದ ಮಹಿಳೆ ಕೃಷ್ಣಪ್ರಿಯ. ಅಕ್ಕಂದಿರಿಗೆ ಅಥವಾ ತಂಗಿಯರಿಗೆ ತಮ್ಮ ಸಹೋದರನ ಮೇಲಿನ ಪ್ರೀತಿ ಅಗಾಧವಾದುದು. ತಾವು ಎಷ್ಟೇ ಕಿತ್ತಾಡಿಕೊಂಡರೂ, ತಮ್ಮ ಮಧ್ಯೆ ಇನ್ನೊಬ್ಬರು ಬಂದರೆಂದರೆ ಕ್ಷಣದಲ್ಲೇ ಅಕ್ಕ ತಮ್ಮ ಅಥವಾ ಅಣ್ಣ ತಂಗಿ ಒಂದಾಗಿ ಬಿಡುತ್ತಾರೆ. ಪ್ರೀತಿ ಹೇಗೆ ಆಗಾಧವಾಗಿರುವುದೋ ಹಾಗೆಯೇ ಕಿತ್ತಾಟವೂ ಅಷ್ಟೇ ಖಾರ ಖಾರ. ಹೀಗಾಗಿಯೇ ಸಹೋದರಿಯನ್ನು ಸಹೋದರ ವಾಟ್ಸಾಪ್‌ನಲ್ಲಿ ಬ್ಲಾಕ್ ಮಾಡಿ ಬಿಟ್ಟಿದ್ದ. ಸಿಟ್ಟುಗೊಂಡ ಸಹೋದರನನ್ನು ಸಂತೈಸುವ ಸರದಿ ಈಗ ಅಕ್ಕನದ್ದು.
Sushant Singh Death Anniversary; ಸುಶಾಂತ್ ಇಲ್ಲದೇ 2 ವರ್ಷ, ಸಹೋದರಿಯ ಭಾವುಕ ಪತ್ರ
ಇಂಜಿನಿಯರ್ ಆಗಿರುವ ಕೇರಳದ (Kerala) ಇಡುಕಿ (Iduki) ಜಿಲ್ಲೆಯ ಪೀರ್ಮಡೆಯ (Pirmude) ಕೃಷ್ಣಪ್ರಿಯಾ (Krishna Priya), ಈ ವರ್ಷದ ವಿಶ್ವ ಸಹೋದರರ ದಿನಾಚರಣೆಗೆ (Brothers day) ವಿದ್ಯಾರ್ಥಿಯಾಗಿರುವ ತನ್ನ ಕಿರಿಯ ಸಹೋದರನೊಂದಿಗೆ ಇರಲು ಸಾಧ್ಯವಾಗಲಿಲ್ಲ. ಮತ್ತು ಅವಳ ಬಿಡುವಿಲ್ಲದ ಕೆಲಸದ ವೇಳಾಪಟ್ಟಿಯಿಂದಾಗಿ, ಅವಳು ಅವನಿಗೆ ಶುಭ ಹಾರೈಸುವುದನ್ನು ಸಹ ಮರೆತಿದ್ದಳು. ಆದರೆ 21 ವರ್ಷದ ಸಹೋದರ ಕೃಷ್ಣಪ್ರಸಾದ್ ತನ್ನ ಸಹೋದರಿಗೆ ಸಂದೇಶಗಳನ್ನು ಕಳುಹಿಸಿದನು, ಅದು ಗಂಟೆಗಳವರೆಗೆ ಕೃಷ್ಣಪ್ರಿಯಾಳ ಗಮನಕ್ಕೆ ಬಂದಿಲ್ಲ. ನಂತರ ಇತರರು ತನಗೆ ಸಹೋದರರ ದಿನದ ಶುಭಾಶಯಗಳನ್ನು ಕೋರಿದ್ದಾರೆ ಎಂದು ತಿಳಿಸಲು ಕೃಷ್ಣಪ್ರಸಾದ್ ಕೆಲವು ಸ್ಕ್ರೀನ್‌ಶಾಟ್‌ಗಳನ್ನು ಸಹ ಅಕ್ಕ ಕೃಷ್ಣಪ್ರಿಯಾಳಿಗೆ ಕಳುಹಿಸಿದರು. ಆದರೆ ಇದಕ್ಕೂ ಸಹೋದರಿಯ ಉತ್ತರವಿಲ್ಲ.
ಕೃಷ್ಣಪ್ರಿಯಾ ಸಹೋದರರ ದಿನದಂದು ತನಗೆ ಶುಭ ಹಾರೈಸಲಿಲ್ಲ ಮತ್ತು ಅವನ ಸಂದೇಶಗಳಿಗೆ ಉತ್ತರಿಸಲಿಲ್ಲ ಎಂದು ಬೇಸರಗೊಂಡ ತಮ್ಮ ಕೃಷ್ಣ ಪ್ರಸಾದ್ ಅಕ್ಕನನ್ನು ವಾಟ್ಸಾಪ್‌ನಲ್ಲಿ ಬ್ಲಾಕ್ ಮಾಡಿದ್ದಾನೆ.
ನಾನು ಅವನಿಗೆ ಸಹೋದರ ದಿನದಂದು ಶುಭಾ ಹಾರೈಸುವುದನ್ನು ಮರೆತಿದ್ದೆ. ನಾನು ಸಾಮಾನ್ಯವಾಗಿ ಸಹೋದರರ ದಿನದಂದು ಆತನಿಗೆ ಕರೆ ಮಾಡುತ್ತೇನೆ ಅಥವಾ ಸಂದೇಶ ಕಳುಹಿಸುತ್ತೇನೆ ಆದರೆ ನನ್ನ ಬಿಡುವಿಲ್ಲದ ಕೆಲಸದ ವೇಳಾಪಟ್ಟಿಯಿಂದಾಗಿ ನಾನು ಈ ವರ್ಷ ಅದನ್ನು ಮರೆತಿದ್ದೆ. ಆದರೆ ಆತ ಇತರರು ಅವನಿಗೆ ಕಳುಹಿಸಿದ ಶುಭಾಶಯಗಳ ಸ್ಕ್ರೀನ್‌ಶಾಟ್‌ಗಳನ್ನು ನನಗೆ ಕಳುಹಿಸಿದನ್ನು ನಾನು ನೋಡಿದೆ. ನಾವು ಅಕ್ಕ ತಮ್ಮ ಆಗಿದ್ದರೂ ತಾಯಿ ಮಗನ ಸಂಬಂಧವನ್ನು ಹಂಚಿಕೊಳ್ಳುತ್ತೇವೆ. ಆದರೆ ಅವನು ನನ್ನೊಂದಿಗೆ ಮಾತನಾಡುವುದನ್ನು ನಿಲ್ಲಿಸಿದ್ದರಿಂದ ಮತ್ತು ನನ್ನನ್ನು ವಾಟ್ಸಾಪ್‌ನಲ್ಲಿ ನಿರ್ಬಂಧಿಸಿದ್ದರಿಂದ ನಾನು ಬೇಸರಗೊಂಡಿದ್ದೆ ಇದಕ್ಕಾಗಿ ಆತನನ್ನು ಸಮಾಧಾನಪಡಿಸಲು ನಾನು ಈ ಸಾಹಸ ಮಾಡಿದೆ ಎಂದು ಕೃಷ್ಣಪ್ರಿಯಾ ತಿಳಿಸಿದ್ದಾರೆ.